
ವೀರ ಮದಕರಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ಟೆನ್ನಿಸ್ ಕೃಷ್ಣ ಜೋಡಿ ಮಹಿಳೆಯರಿಗೆ ಹಣ ಸಿಗುತ್ತದೆಂದು ಅರ್ಧ ತಲೆ ಬೋಳಿಸಿ ವಂಚನೆ ಮಾಡಿದಂತೆಯೇ ಮಹಿಳೆಯರ ತಲೆ ಬೋಳಿಸಿ ವಂಚನೆ ಮಾಡಿರುವ ಘಟನೆ ಕಂಡುಬಂದಿದೆ.
ಜನರ ಆಸೆ ಮತ್ತು ಭಯವನ್ನು ಬಂಡವಾಳ ಮಾಡಿಕೊಳ್ಳುವ ಸೈಬರ್ ಅಪರಾಧಿಗಳು (Cyber Criminals) ದಿನಕ್ಕೊಂದು ಹೊಸ ಮಾದರಿಯ ವಂಚನೆ ಜಾಲ ಬೀಸುತ್ತಿದ್ದಾರೆ. ತಮಿಳುನಾಡಿನ ಸೇಲಂ (Salem, Tamil Nadu) ಜಿಲ್ಲೆಯಲ್ಲಿ ಇಂತಹುದೇ ಒಂದು ಅಚ್ಚರಿಯ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 'ಹೊಸ ಸಾಂಕ್ರಾಮಿಕ ರೋಗ' (New Infectious Disease) ಹರಡುತ್ತಿದೆ, ಅದರಿಂದ ಬಚಾವಾಗಲು ತಲೆ ಬೋಳಿಸಿಕೊಂಡರೆ (Tonsure) ಸರ್ಕಾರದಿಂದ 15,000 ರೂಪಾಯಿ ಸಿಗುತ್ತದೆ ಎಂಬ ನಕಲಿ ಯೋಜನೆಯನ್ನು (Fake Scheme) ನಂಬಿ ಮೂವರು ಮಹಿಳೆಯರು ತಮ್ಮ ತಲೆಯನ್ನು ಸಂಪೂರ್ಣವಾಗಿ ಬೋಳಿಸಿಕೊಂಡು (Shaved Head) ವಂಚನೆಗೊಳಗಾಗಿದ್ದಾರೆ!
ಈ ವಿಚಿತ್ರ ವಂಚನೆಯ ಜಾಲ ಸೇಲಂ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ನಡೆದಿದೆ. ಗ್ರಾಮದ ಮಹಿಳೆಯೊಬ್ಬಳಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ (Phone Call) ಮಾಡಿದ್ದಾನೆ. ತಾನು ಉನ್ನತ ಸರ್ಕಾರಿ ಅಧಿಕಾರಿ (Government Official) ಎಂದು ಪರಿಚಯಿಸಿಕೊಂಡ ಆ ವ್ಯಕ್ತಿ, ಮಹಿಳೆಯ ಹೆಸರು, ಆಕೆಯ ಕುಟುಂಬದ ಸಂಪೂರ್ಣ ವಿವರಗಳನ್ನು ಹೇಳಿ ನಂಬಿಕೆ ಗಿಟ್ಟಿಸಿಕೊಂಡಿದ್ದಾನೆ.
ನಂತರ ಮಾತು ಮುಂದುವರಿಸಿದ ಆತ, "ಕೋವಿಡ್-19 (COVID-19) ಮಾದರಿಯಲ್ಲೇ ಮತ್ತೊಂದು ಹೊಸ ಅಪಾಯಕಾರಿ ವೈರಸ್ ಬಂದಿದೆ. ಈ ವೈರಸ್ ಮಾನವನ ತಲೆಕೂದಲಿನ ಮೂಲಕವೇ ವೇಗವಾಗಿ ಹರಡುತ್ತಿದೆ. ಹೀಗಾಗಿ ವಿದೇಶಗಳಲ್ಲೂ ಜನರು ತಲೆ ಬೋಳಿಸಿಕೊಳ್ಳುತ್ತಿದ್ದಾರೆ" ಎಂದು ಸುಳ್ಳು ಕಥೆ ಹೇಳಿ ಹೆದರಿಸಿದ್ದಾನೆ.
ಸರ್ಕಾರಿ ಅಧಿಕಾರಿಯ ಮಾತುಗಳನ್ನು ಸತ್ಯವೆಂದು ನಂಬಿದ ಗ್ರಾಮದ ಸುಮಾರು 20 ಜನರು ತಲೆ ಬೋಳಿಸಿಕೊಳ್ಳಲು ಸಿದ್ಧರಾಗಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಮೂವರು ಮಹಿಳೆಯರು ಕ್ಷೌರಿಕನನ್ನು ಕರೆಸಿ ತಲೆ ಬೋಳಿಸಿಕೊಂಡಿದ್ದಾರೆ. ಆದರೆ, ಮಾರನೇ ದಿನ ಹಣ ಪಡೆಯಲು ಆ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅದು 'ಸ್ವಿಚ್ ಆಫ್' (Switched Off) ಆಗಿತ್ತು.
ತಾವು ನಕಲಿ ಕರೆಯನ್ನು ನಂಬಿ ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆಯೇ ಆ ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ತಲೆ ಬೋಳಿಸಿಕೊಳ್ಳಲು ಸಾಲಿನಲ್ಲಿ ನಿಂತಿದ್ದ ಉಳಿದ 17 ಗ್ರಾಮಸ್ಥರು ತಮ್ಮ ನಿರ್ಧಾರವನ್ನು ಕೈಬಿಟ್ಟು ಪಾರಾಗಿದ್ದಾರೆ.
ಸರ್ಕಾರ ಯಾವುದೇ ರೀತಿಯ ಯೋಜನೆಗಳನ್ನು ಫೋನ್ ಕರೆಗಳ ಮೂಲಕ ಜಾರಿಗೆ ತರುವುದಿಲ್ಲ. ಅನಾಮಧೇಯ ಕರೆಗಳನ್ನು ನಂಬಿ ಹಣ ಪಾವತಿಸುವುದು ಅಥವಾ ಇಂತಹ ವಿಚಿತ್ರ ಶರತ್ತುಗಳಿಗೆ ಒಪ್ಪಿಕೊಳ್ಳುವುದು ಮಾಡಬಾರದು. ಯಾವುದೇ ಅನುಮಾನಾಸ್ಪದ ಕರೆಗಳು ಬಂದಲ್ಲಿ ತಕ್ಷಣವೇ '1930' ಸೈಬರ್ ಕ್ರೈಮ್ ಹೆಲ್ಪ್‌ಲೈನ್ (Cyber Crime Helpline) ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
🚨 గుండు చేయిస్తే డబ్బులంటూ మోసం.. ముగ్గురు మహిళలు బలి
🔸 తమిళనాడులోని సేలం జిల్లా పుదుకొత్తంబాడిలో దుండగుడి మోసం బయటపడింది. తహసీల్దార్ కార్యాలయం నుంచి ఫోన్ చేస్తున్నామని చెప్పి మహిళలను నమ్మించాడు.
🔸 కొత్త రకం వ్యాధి వస్తుందని భయపెట్టి గుండు చేయించుకుంటే రూ.15 వేలు ఇస్తామని… pic.twitter.com/W2ghddYvxU— ముచ్చట్లు | Stories • Voices • Views (@muchatlu_) July 29, 2026