Viral Video: ಈ ಪ್ರೀತಿಯ ನೋಡಿ ಯಾರಿಗಾದ್ರೂ ಮುತ್ತಿಕ್ಕಬೇಕು ಅನ್ಸುತ್ತೆ

Published : Jul 05, 2025, 01:59 PM IST
Dog and cow friendship

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋ ಎಷ್ಟು ಮುದ್ದಾಗಿದೆ ಅಂದ್ರೆ ನೋಡಿದ ತಕ್ಷಣ ಮುಖದ ಮೇಲೊಂದು ನಗು ಬರುತ್ತೆ. ನಮ್ಗೂ ಪ್ರೀತಿ ಮಾಡೋಣ ಅನ್ನಿಸುತ್ತೆ. 

ಮೂಕ ಪ್ರಾಣಿಗಳ (animals) ಪ್ರೀತಿ ನಿಶ್ಕಲ್ಮಶ. ಯಾವುದೇ ಸ್ವಾರ್ಥವಿಲ್ಲದೆ ಅವು ಪ್ರೀತಿ ಮಾಡುತ್ವೆ. ನೀವು ಸ್ವಲ್ಪ ಪ್ರೀತಿ ತೋರಿಸಿದ್ರೆ ಅವು ಅದರ ಡಬಲ್ ಪ್ರೀತಿಯನ್ನು ನಿಮಗೆ ನೀಡುತ್ವೆ. ಬಹುತೇಕ ಎಲ್ಲರ ಅಚ್ಚುಮೆಚ್ಚಿನ ಪ್ರಾಣಿ ನಾಯಿ. ಪ್ರಾಮಾಣಿಕತೆಗೆ ಹೆಸರಾಗಿರುವ ನಾಯಿಯನ್ನು ಸ್ಟ್ರೆಸ್ ಕಡಿಮೆ ಮಾಡುವ ಪ್ರಾಣಿ ಎಂದೇ ಪರಿಗಣಿಸಲಾಗುತ್ತೆ. ನಗರ, ಪಟ್ಟಣಗಳಲ್ಲಿ ಮಕ್ಕಳಂತೆ ನಾಯಿಯನ್ನು ಜನರು ಸಾಕ್ತಾರೆ. ಅದೆಷ್ಟೇ ನೋವು, ಕೋಪವಿರಲಿ ಅವು ಬಂದು ನಮ್ಮ ಬಳಿ ಕುಳಿತಾಗ, ನಮ್ಮನ್ನು ಸ್ಪರ್ಶಿಸಿ ಪ್ರೀತಿ ತೋರಿಸಿದಾಗ ಮನಸ್ಸು ನಿರಾಳವಾಗುತ್ತದೆ. ಒಂಟಿಯಾಗಿ ಬದುಕುತ್ತಿರುವ ಅನೇಕರಿಗೆ ನಾಯಿ ಈಗ ಒಳ್ಳೆಯ ಫ್ರೆಂಡ್. ನಾಯಿಯಂತೆ ಮನೆಯಲ್ಲಿ ಮುದ್ದಿನಿಂದ ಬೆಳೆಯುವ ಇನ್ನೊಂದು ಪ್ರಾಣಿ ಆಕಳು. ನಾಯಿ ಹಾಗೆ ಮನೆ ತುಂಬಾ ಓಡಾಡಲು ಇದಕ್ಕೆ ಅವಕಾಶ ಸಿಗೋದು ಅಪರೂಪ. ಆದ್ರೆ ಮನೆಯವರಲ್ಲಿ ಒಬ್ಬರಂತೆ ಇದನ್ನು ಸಾಕುವ ಜನರಿದ್ದಾರೆ. ಹಳ್ಳಿಗಳಲ್ಲಿ ನಾಯಿಗಿಂತ ಪ್ರೀತಿ, ಭಕ್ತಿಯನ್ನು ಜನ ಆಕಳಿಗೆ ತೋರಿಸ್ತಾರೆ. ನಾಯಿ ಪಟ್ಟಣದ ಪ್ರಾಣಿಯಾದ್ರೆ ಆಕಳು ಹಳ್ಳಿಯ ಪ್ರಾಣಿ ಅಂದ್ರೆ ತಪ್ಪಾಗೋದಿಲ್ಲ. ಇವೆರಡೂ ಒಂದೇ ಸಮ ಪ್ರೀತಿಯನ್ನು ಮನುಷ್ಯನಿಗೆ ತೋರಿಸುತ್ವೆ.

ಮಾಲೀಕ ಎನ್ನುವ ಮಮತೆ ಪ್ರಾಣಿಗಳಿ ಇರೋದು ಸಹಜ. ಆದ್ರೆ ತಮ್ಮ ಜೊತೆ ಬೆಳೆದ ಬೇರೆ ಪ್ರಾಣಿಗಳನ್ನು ಕೂಡ ಇವು ಅಷ್ಟೇ ಪ್ರೀತಿಯಿಂದ ಕಾಣೋದು ವಿಶೇಷ. ನಾಯಿ ಹಾಗೂ ಬೆಕ್ಕು ಬದ್ದ ವೈರಿ. ಆದ್ರೆ ಅದೆಷ್ಟೋ ಮನೆಯಲ್ಲಿ ಇವೆರಡು ಒಟ್ಟಿಗೆ ಬೆಳೆಯುತ್ತವೆ. ಇಬ್ಬರ ಮಧ್ಯೆ ವಿಶೇಷ ಬಾಂಧವ್ಯವಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ನಾಯಿ – ಬೆಕ್ಕು ಒಟ್ಟಿಗೆ ಇರುವ ಅನೇಕ ವಿಡಿಯೋಗಳಿವೆ. ಈಗ ನಾಯಿ ಹಾಗೂ ಆಕಳಿನ ಪ್ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Buitengebieden ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕೊಟ್ಟಿಗೆಯಲ್ಲಿ ನಾಯಿ ಹಾಗೂ ಆಕಳನ್ನು ನೀವು ಕಾಣ್ಬಹುದು. ನಾಯಿ ತನ್ನ ಮುಖ, ಕೈಗಳಿಂದ ಆಕಳ ಮುಖವನ್ನು ಸವರುತ್ತಿದೆ. ಅದೇ ರೀತಿ ಆಕಳು ಕೂಡ ತನ್ನ ಪ್ರೀತಿಯನ್ನು ತೋರಿಸ್ತಿದೆ. ಈ ವಿಡಿಯೋ ಈಗ ವೈರಲ್ ಆಗಿದೆ. ನಲವತ್ತಾರು ಸಾವಿರಕ್ಕಿಂತ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. ನೂರಾರು ಮಂದಿ ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಪ್ರಾಣಿಗಳು ಬೇರೆ ಪ್ರಾಣಿಗಳು ಪ್ರೀತಿ ಮಾಡುತ್ತವೆ. ನಮ್ಮ ಮನೆಯಲ್ಲಿ ಒಂದು ನಾಯಿ ಹಾಗೂ ಎರಡು ಬೆಕ್ಕು ಬೆಸ್ಟ್ ಫ್ರೆಂಡ್ಸ್ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಜಾತಿ ಒಂದೇ ಅಲ್ಲ ಅನ್ನೋ ಕಾರಣಕ್ಕೆ ಸ್ನೇಹಿತರಾಗ್ಬಾರದು ಎಂದೇನಿಲ್ಲ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಆಮೆ ಹಾಗೂ ನಾಯಿ, ನಾಯಿ ಮತ್ತು ಕೋಳಿ ಹೀಗೆ ಬೇರೆ ಬೇರೆ ಪ್ರಾಣಿಗಳ ಜೊತೆಗಿರುವ ನಾಯಿಯ ವಿಡಿಯೋಗಳನ್ನು ಅನೇಕರು ಹಂಚಿಕೊಂಡಿದ್ದಾರೆ.

ಬೇರೆ ಜಾತಿಯ ಪ್ರಾಣಿಗಳ ಪ್ರೀತಿಯ ವಿಡಿಯೋ ಪೋಸ್ಟ್ ಆಗ್ತಿರೋದು ಇದೇ ಮೊದಲಲ್ಲ. ಇಂಥಹ ಅನೇಕ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಾವು ಕಾಣ್ಬಹುದು. ವಿಡಿಯೋ ನೋಡಿ ವಾವ್ ಅಂದ್ರೆ ಸಾಲದು. ಪ್ರಾಣಿಗಳಂತೆ ಹೊಂದಿ ಬದುಕುವ ಕಲೆಯನ್ನು ನಾವು ಕಲಿಯಬೇಕಿದೆ. ಚಿಕ್ಕ ಪುಟ್ಟ ವಿಚಾರಕ್ಕೆ ಹೊಡೆದಾಟ, ಕೊಲೆ ಈಗಿನ ದಿನಗಳಲ್ಲಿ ಹೆಚ್ಚಾಗ್ತಿದ್ದು, ಪ್ರಕೃತಿ, ಮೂಕ ಪ್ರಾಣಿಗಳನ್ನು ನೋಡಿ ಮನುಷ್ಯ ಪಾಠ ಕಲಿಯುವ ಸ್ಥಿತಿ ಈಗ ಬಂದಿದೆ. ಯಾವುದೇ ಸ್ವಾರ್ಥ, ಜಾತಿ ಗಲಾಟೆ ಇಲ್ದೆ ಬದುಕೋದನ್ನು ಕಲಿತಾಗ ಮಾತ್ರ ಇಂಥ ಸುಂದರ ವಿಡಿಯೋಕ್ಕೆ ಒಂದು ಅರ್ಥ ಸಿಗೋದು.

 

 

 

PREV
Read more Articles on
click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!