ಇಂದಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮದ ಬಳಕೆ ತುಂಬಾ ಸಾಮಾನ್ಯವಾಗಿದೆ. ನೀವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಹುತೇಕ ಪ್ರತಿಯೊಬ್ಬ ವ್ಯಕ್ತಿಯನ್ನು ಕಾಣಬಹುದು. ಒಂದು ಗುಂಪಿನಲ್ಲಿ ಹತ್ತು ಜನರಿದ್ದಾರೆಂದರೆ ಅದರಲ್ಲಿ ಕನಿಷ್ಟ 4-5 ಜನರು ಮೊಬೈಲ್ ಸ್ಕ್ರೋಲ್ ಮಾಡುವುದನ್ನು ನೀವು ನೋಡುತ್ತೀರಿ. ಅಷ್ಟೇ ಏಕೆ ಇದನ್ನು ಓದುತ್ತಿರುವ ನೀವು ಸಹ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದೀರಿ ಅಲ್ಲವೇ, ಆದರೀಗ ವಿಷಯಕ್ಕೆ ಬರೋಣ. ಸೋಶಿಯಲ್ ಮೀಡಿಯಾದಲ್ಲಿ ಜನರು ತಮಾಷೆಯ ವಿಡಿಯೋಗಳನ್ನು ಹೇಗೆ ಪೋಸ್ಟ್ ಮಾಡುತ್ತಾರೆ ಎಂಬುದನ್ನು ನೀವು ನೋಡಿರಬೇಕು. ಕೆಲವು ವಿಡಿಯೋಗಳಂತೂ ತುಂಬಾ ತಮಾಷೆಯಾಗಿರುತ್ತವೆ. ಅಷ್ಟೇ ಅಲ್ಲ, ವಿಶಿಷ್ಟವಾಗಿರುತ್ತವೆ ಮತ್ತು ಅಂತಹ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಬೇಗ ವೈರಲ್ ಆಗುತ್ತವೆ. ಸದ್ಯ ಈಗಲೂ ಒಂದು ವಿಡಿಯೋ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಳೆ ಬಂದು ಹೋದ ನಂತರ ರಸ್ತೆಯಲ್ಲಿ ಬಹಳಷ್ಟು ನೀರು ಸಂಗ್ರಹವಾಗಿರುವುದು ಕಂಡುಬರುತ್ತದೆ. ಇಂತಹ ಸಮಯದಲ್ಲಿ ಕಾರುಗಳು ಮತ್ತು ಬಸ್‌ಗಳಂತಹ ದೊಡ್ಡ ದೊಡ್ಡ ವಾಹನಗಳು ವೇಗವಾಗಿ ಚಲಿಸಿದಾಗ ನೀರು ದ್ವಿಚಕ್ರ ವಾಹನ ಸವಾರರ ಮೇಲೆ ಅಥವಾ ಪಾದಚಾರಿಗಳ ಮೇಲೆ ಚಿಮ್ಮುವುದರಿಂದ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದೇ ಕಾರಣಕ್ಕೆ ಒಬ್ಬ ವ್ಯಕ್ತಿ ಪರಿಹಾರವನ್ನು ಕಂಡುಕೊಂಡಿದ್ದಾನೆ. ಅದೇನೆಂದರೆ ಸ್ಕೂಟರ್ ಚಾಲನೆ ಮಾಡುವಾಗ ಅವನು ಒಂದು ಕೈಯಲ್ಲಿ ಹ್ಯಾಂಡಲ್ ಮತ್ತು ಇನ್ನೊಂದು ಕೈಯಲ್ಲಿ ಇಟ್ಟಿಗೆಯನ್ನು ಹಿಡಿದುಕೊಂಡಿದ್ದಾನೆ. "ಯಾರಾದರೂ ಒಂದು ವೇಳೆ ಸರಿಯಾಗಿ ವಾಹನ ಚಾಲನೆ ಮಾಡದಿದ್ದರೆ ಅಥವಾ ಯಾರೂ ಆತನ ಮೇಲೆ ನೀರು ಚಿಮ್ಮಿಸುತ್ತಾರೋ ಅವರ ವಾಹನದ ಗಾಜನ್ನು ಇಟ್ಟಿಗೆಯಿಂದ ಒಡೆಯಬಹುದು ಎಂದು ಅವನು ಸನ್ನೆಗಳಲ್ಲಿ ಜನರಿಗೆ ಹೇಳುತ್ತಿದ್ದಾನೆ". ಅದಕ್ಕಾಗಿಯೇ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ
ಬಳಕೆದಾರರು ಹೇಳಿದ್ದೇನು?
ನೀವು ಈಗಷ್ಟೇ ನೋಡಿದ ವಿಡಿಯೋವನ್ನು @VishalMalvi_ ಎಂಬ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಮಾಡುವಾಗ, 'ಸಹೋದರ ತನ್ನ ಮೆದುಳನ್ನು 200% ಬಳಸುತ್ತಿದ್ದಾನೆ' ಎಂದು ಶೀರ್ಷಿಕೆ ಕೊಡಲಾಗಿದೆ. ಈ ಸುದ್ದಿ ಬರೆಯುವವರೆಗೂ, ವಿಡಿಯೋವನ್ನು 25 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೋಡಿದ ನಂತರ ಬಳಕೆದಾರರು "ಮೆದುಳಿನ ಸಂಪೂರ್ಣ ಬಳಕೆ", "ಅವರು ಬಹುಶಃ ಎಂಜಿನಿಯರ್ ಆಗಿರಬಹುದು", "ಎಲ್ಲರೂ ಭಯಪಡುತ್ತಾರೆ", "ಇತ್ತೀಚಿನ ದಿನಗಳಲ್ಲಿ ಇದರ ಅವಶ್ಯಕತೆಯಿದೆ", "ಚಾಲಕರಲ್ಲಿ ಭಯದ ವಾತಾವರಣವಿದೆ ಸಹೋದರ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ನೀವು ನೋಡಿರಬಹುದು. ಜೊತೆಗೆ ನೀವು ನಕ್ಕಿ ನಕ್ಕಿ ಸುಸ್ತಾಗಿ ಇಂತಹ ಐಡಿಯಾ ಮಾಡಿದರೂ ಆಶ್ಚರ್ಯವೇನಿಲ್ಲ ಬಿಡಿ.
ರಸ್ತೆಯಲ್ಲಿ ಹೀಗೆಲ್ಲಾ ಅಗೋಯ್ತು!
ಇದು ರಸ್ತೆಗೆ ಸಂಬಂಧಿಸಿದ ಮತ್ತೊಂದು ವಿಡಿಯೋ. ಇದು ಕೂಡ ಭಾರೀ ವೈರಲ್ ಆಗಿತ್ತು. ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಏನೆಲ್ಲಾ ನೋಡ್ತೇವೆ..ಕೆಲವೊಮ್ಮೆ ನಾವು ನಿರ್ಲಕ್ಷ್ಯ ಮಾಡಲು ಆಗಲ್ಲ ಅಂತಹ ಘಟನೆಗಳೂ ನಡೆಯುತ್ತವೆ. ಇದನ್ನೆಲ್ಲಾ ನೋಡಿದ ನಮ್ಮ ಜನ ಸುಮ್ನೆ ಇರ್ತಾರಾ?, ಅದನ್ನೇ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಅಂತಹ ವಿಡಿಯೋಗಳು ತಕ್ಷಣ ಸಾರ್ವಜನಿಕರ ಗಮನ ಸೆಳೆಯುತ್ತವೆ. ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತವೆ. ನೀವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ ವೈರಲ್ ಆಗುವ ಇಂತಹ ವಿಡಿಯೋಗಳನ್ನ ಖಂಡಿತ ನೋಡಿರುತ್ತೀರಿ. ಸದ್ಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವಿಡಿಯೋದಲ್ಲಿ ಏನಿದೆ ನೋಡೋಣ ಬನ್ನಿ…
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ದಂಪತಿ ಬೈಕ್‌ನಲ್ಲಿ ಹೋಗುತ್ತಿರುವುದು ಕಂಡುಬರುತ್ತದೆ. ಹಿಂದೆ ಕುಳಿತಿದ್ದ ಮಹಿಳೆ ಇದ್ದಕ್ಕಿದ್ದಂತೆ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸುತ್ತಾಳೆ. ಮೊದಲು ಅವಳು ಎರಡೂ ಕೈಗಳಿಂದ ಅವನ ಎರಡೂ ಕೆನ್ನೆಗಳ ಮೇಲೆ ಹೊಡೆದು ನಂತರ ತನ್ನ ಕೈಗಳನ್ನು ಮುಂದಕ್ಕೆ ಸರಿಸಿ ಅವನ ಹೊಟ್ಟೆ ಅಥವಾ ಎದೆಯ ಮೇಲೆ ಹೊಡೆಯುತ್ತಾಳೆ. ಇದಾದ ಕೆಲವು ಸೆಕೆಂಡುಗಳ ಕಾಲ ಶಾಂತವಾಗುತ್ತಾಳೆ. ನಂತರ ಮತ್ತೆ ಅವನಿಗೆ ಕಪಾಳಮೋಕ್ಷ ಮಾಡುತ್ತಾಳೆ. ನಂತರ ಅವಳು ಸ್ವಲ್ಪ ಹೊತ್ತು ಸುಮ್ಮನಿದ್ದು ಮತ್ತೆ ಅವನಿಗೆ ಹೊಡೆಯುತ್ತಾಳೆ. ಅಂದರೆ ಪ್ರತಿ ಕೆಲವು ಸೆಕೆಂಡುಗಳ ನಂತರ ಅವನಿಗೆ ಹೊಡೆಯುವುದನ್ನು ಕಾಣಬಹುದು. ಹಿಂದೆ ಕಾರಿನಲ್ಲಿ ರೈಡ್ ಮಾಡುತ್ತಿದ್ದ ವ್ಯಕ್ತಿ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.