
ರೌಂಡ್ ಆಗಿ ರೊಟ್ಟಿ (roti) ತಟ್ಬೇಕು, ತಟ್ಟಿದ ರೊಟ್ಟಿ ತವಾ ಮೇಲೆ ಉಬ್ಬಿ ಬರ್ಬೇಕು. ಆಗ್ಲೇ ರೊಟ್ಟಿ ಮಾಡಿದ್ದು ಸಾರ್ಥಕ. ಹಿರಿಯರು, ಅಡುಗೆ ಬಲ್ಲವರು, ರೊಟ್ಟಿ ಉಬ್ಬಿಸೋದು ಹೇಗೆ ಅಂತ ಪಾಠ ಮಾಡ್ತಿರುತ್ತಾರೆ. ದೇಸಿ ಟ್ರಿಕ್ಸ್ ಆಗಾಗ ಟ್ರೆಂಡ್ ನಲ್ಲಿರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಟ್ರಿಕ್ಸ್ ವೈರಲ್ ಆಗ್ತಾನೆ ಇರುತ್ತೆ. ಈಗ ರೊಟ್ಟಿಯನ್ನು ಉಬ್ಬಿಸೋದು ಹೇಗೆ ಎಂಬ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಇಬ್ಬರು ಹುಡುಗ್ರು ಹೇಗೆ ರೊಟ್ಟಿ ಉಬ್ಬಿಸಬೇಕು ಎಂಬುದನ್ನು ಹೇಳ್ಕೊಟ್ಟಿದ್ದಾರೆ. ಮನೆಯಲ್ಲಿ ರೊಟ್ಟಿ ಉಬ್ಬೋದಿಲ್ಲ, ಸಾಫ್ಟ್ ಆಗೋದಿಲ್ಲ ಎನ್ನುವ ಆರೋಪ ಇದ್ರೆ ಈ ಟ್ರಿಕ್ಸ್ ಟ್ರೈ ಮಾಡಿ.
ವಿಡಿಯೋ ಪ್ರಕಾರ, ನಿಮ್ಮ ಬಳಿ ರೊಟ್ಟಿ ಹಿಟ್ಟು, ಒಲೆ, ತವಾ ಇದ್ರೆ ಸಾಲೋದಿಲ್ಲ. ಇನ್ನೊಂದು ವಸ್ತು ಅಗತ್ಯವಾಗಿ ಬೇಕು. ಈ ವಿಡಿಯೋವನ್ನು @Mr_arbaz_77 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಟೆಕ್ನಾಲಜಿ ಭಾರತದಿಂದ ಹೊರಗೆ ಹೋಗ್ಬಾರದು. ರೊಟ್ಟಿ ಉಬ್ಬಿಸುವ ಟೆಕ್ನಿಕ್ ಹೇಗನ್ನಿಸ್ತು ನಿಮಗೆ ಎನ್ನುವ ಶೀರ್ಷಿಕೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಮಣ್ಣಿನ ಒಲೆ ಮುಂದೆ ಕುಳಿತಿರುವ ಇಬ್ಬರು ಹುಡುಗ್ರು ತವಾ ಮೇಲಿರುವ ರೊಟ್ಟಿಯನ್ನು ಉಬ್ಬಿಸಲು ಪ್ರಯತ್ನ ಮಾಡ್ತಾರೆ. ಒಂದೆರಡು ಬಾರಿ ರೊಟ್ಟಿಯನ್ನು ತಿರುಗಿ ಮುರುಗಿ ಹಾಕ್ತಾರೆ. ಆದ್ರೆ ರೊಟ್ಟಿ ಉಬ್ಬೋದಿಲ್ಲ. ಆಗ ಸೈಕಲ್ ಪಂಪ್ ಹೊರಗೆ ಬರುತ್ತೆ.
ಎದುರಾಳಿಯನ್ನೇ ದಿಟ್ಟಿಸಿ ನೀರಿಗಿಳಿದ ಕಾಡಿನ ರಾಜ..ಘರ್ಜನೆ ನೋಡಿ ತಬ್ಬಿಬಾದ ನೆಟ್ಟಿಗರು
ತವಾ ಮೇಲಿರುವ ರೊಟ್ಟಿಗೆ ಸಣ್ಣ ಹೋಲ್ ಮಾಡುವ ಹುಡುಗ್ರು ಅದ್ರೊಳಗೆ ಸೈಕಲ್ ಪಂಪ್ ಪೈಪ್ ಹಾಕಿ ಪಂಪ್ ಮಾಡ್ತಾರೆ. ಆಗ ರೊಟ್ಟಿ ಊದಿಕೊಳ್ಳುತ್ತೆ. ನಂತ್ರ ಅದನ್ನು ತೆಗೆದು ಪ್ಲೇಟ್ ಗೆ ಹಾಕ್ತಾರೆ. ತವಾ ಮೇಲೆ ರೊಟ್ಟಿ ಉಬ್ಬಬೇಕು. ಇದು ರೂಲ್ಸ್. ಹಾಗಾಗಿ ರೊಟ್ಟಿಗೆ ಹೋಲ್ ಮಾಡಿ ರೊಟ್ಟಿ ಉಬ್ಬಿಸ್ತಾರೆ. 132K ವೀವ್ಸ್ ಪಡೆದಿರುವ ವಿಡಿಯೋವನ್ನು ನೂರಾರು ಮಂದಿ ಲೈಕ್ ಮಾಡಿದ್ದಾರೆ. ಅನೇಕರಿಂದ ಕಮೆಂಟ್ಸ್ ಬಂದಿದೆ.
ರೊಟ್ಟಿ ಉಬ್ಬೋದಿಲ್ಲ ಅಂತ ಇನ್ಮುಂದೆ ಯಾರೂ ಹೇಳಲು ಸಾಧ್ಯವಿಲ್ಲ. ಹೊಸ ದೇಸಿ ಜುಗಾಡ್ ಇದು ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಬ್ಯಾಚ್ಯುಲರ್ ಹುಡುಗ್ರಿಗೆ ಇದು ಹೆಲ್ಪ್ ಆಗುತ್ತೆ, ಹುಡುಗಿಯರ ಕೆಲ್ಸವನ್ನು ಹುಡುಗ್ರು ಮಾಡಿದ್ರೆ ದೇಸಿ ಜುಗಾಡ್ ಹೊರಗೆ ಬರುತ್ತೆ ಎನ್ನುವ ಕಮೆಂಟ್ ಬಂದಿದೆ. ಈ ಟೆಕ್ನಾಲಜಿ ಭಿನ್ನವಾಗಿದೆ, ಇದನ್ನು ಗಂಭೀರವಾಗಿ ತೆಗೆದ್ಕೊಂಡು ಹೊಸ ಆವಿಷ್ಕಾರ ಮಾಡ್ಬೇಕು ಇದೇ ಕಾರಣಕ್ಕೆ ನಾವೆಲ್ಲ ಜಪಾನ್ ಗಿಂತ ಮುಂದೆ ಹೋಗ್ತಿದ್ದೇವೆ ಅಂತ ಕಮೆಂಟ್ ಮಾಡಿದ್ದಾರೆ.
ಡಿಮಾರ್ಟ್ ಶಾಪಿಂಗ್‌ಗೆ ಹೋದ ಗಂಡನಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ ಹೆಂಡತಿ!
ರೊಟ್ಟಿ, ಚಪಾತಿ ತಟ್ಟುವಾಗ ಹಾಗೆ ಬೇಯಿಸುವಾಗ ಮಹಿಳೆಯರಿಗೆ ಇದು ಸವಾಲಿನ ಕೆಲ್ಸ. ಹಿಂದೆ ಅನೇಕರು ವಧು ಪರೀಕ್ಷೆ ವೇಳೆ ಇದನ್ನೂ ಪರೀಕ್ಷೆ ಮಾಡ್ತಿದ್ದರು. ಈಗ್ಲೂ ಕೆಲ ಪ್ರದೇಶದಲ್ಲಿ ರೊಟ್ಟಿ, ತವಾ ಮೇಲೆ ಉಬ್ಬಿದ್ರೆ ಆಕೆ ಚೆನ್ನಾಗಿ ಅಡುಗೆ ಬಲ್ಲವಳು ಎನ್ನುವ ಪಟ್ಟ ಗಿಟ್ಟಿಸಿಕೊಳ್ತಾಳೆ. ಹಿಟ್ಟನ್ನು ಸರಿಯಾಗಿ ನಾದಿ, ತಟ್ಟಿದಾಗ ರೊಟ್ಟಿ ಉಬ್ಬುತ್ತೆ. ಬೇಗ ರೊಟ್ಟಿ ಉಬ್ಬಬೇಕು ಅಂದ್ರೆ ಈ ಹುಡುಗ್ರು ಹೇಳಿದ ಟಿಪ್ಸ್ ಫಾಲೋ ಮಾಡಿ.