ಶೋರೂಂನಲ್ಲೇ ಸ್ನಾನ, ಕಾಫಿ, ಲುಂಗಿ ಡ್ಯಾನ್ಸ್… ಕೊನೆಗೆ ₹4.71 ಲಕ್ಷದ ಬೈಕ್ ಜೊತೆ ಎಸ್ಕೇಪ್ ಆದ ಕಿಲಾಡಿ ಕಳ್ಳ!

Published : Aug 12, 2026, 04:27 PM IST
Bike Theft in Varanasi

ಸಾರಾಂಶ

Viral News: ಶೋ ರೂಮಿಗೆ ಬಂದ ಕಳ್ಳನೊಬ್ಬ, ಕಳ್ಳತನ ಮಾಡುವ ಮುನ್ನ ಶೋರೂಮಿನಲ್ಲಿ ಭರ್ಜರಿಯಾಗಿ ಎಂಜಾಯ್ ಮಾಡಿ, ಸ್ನಾನ ಮಾಡಿ, ಕಾಫಿ ಕುಡಿದು, ಡ್ಯಾನ್ಸ್ ಮಾಡಿ. ಕೊನೆಗೆ ₹4.71 ಲಕ್ಷದ ಬೈಕ್ ಎಗರಿಸಿದ್ದಾರೆ. ಕಳ್ಳನ ಸಿಸಿ ಟಿವಿ ಫೂಟೇಜ್ ಸದ್ಯ ವೈರಲ್ ಆಗುತ್ತಿದೆ.

ಮೊದಲಿಗೆ ಶೋರೂಮಿನಲ್ಲಿ ಮಸ್ತಿ, ಬಳಿಕ 5 ಲಕ್ಷದ ಬೈಕ್ ಕದ್ದ ಕಳ್ಳ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಒಂದು ಶೋರೂಂಗೆ ನುಗ್ಗಿದ ಕಳ್ಳನೊಬ್ಬ, ಕಳ್ಳತನ ಮಾಡುವುದನ್ನೇ ಮರೆತು ಮೊದಲು ಶೋರೂಂನಲ್ಲಿ ಭರ್ಜರಿ ಮಸ್ತಿ ಮಾಡಿದ್ದಾನೆ. ಮೊದಲು ಶೋರೂಂನ ಗಾಜಿನ ಬಾಗಿಲನ್ನು ಕತ್ತರಿಸಿ ಒಳಗೆ ನುಗ್ಗಿದ ಬಳಿಕ ತಣ್ಣನೆಯ ನೀರು ಕುಡಿದು, ಬಿಸಿ ಕಾಫಿ ಮಾಡಿ ಕುಡಿದಿದ್ದಾನೆ. ನಂತರ ಆರಾಮವಾಗಿ ಸ್ನಾನಕ್ಕೂ ಹೋಗಿದ್ದಾನೆ. ಧರಿಸಲು ಬಟ್ಟೆಗಳು ಸಿಗದಿದ್ದಾಗ ಬೈಕ್ ಮೇಲಿದ್ದ ಕವರ್‌ನ್ನು ಲುಂಗಿಯಂತೆ ಮಾಡಿಕೊಂಡು ಡ್ಯಾನ್ಸ್ ಮಾಡಿದ್ದಾನೆ. ಸುಮಾರು ನಾಲ್ಕೂವರೆ ಗಂಟೆ ಮಸ್ತಿ ಮಾಡಿದ ಬಳಿಕ ಸುಮಾರು ₹5 ಲಕ್ಷ ಮೌಲ್ಯದ ಬೈಕ್‌ ಕದ್ದು ಪರಾರಿಯಾಗಿದ್ದಾನೆ.

ಪ್ರಕರಣದ ಸಂಪೂರ್ಣ ವಿವರ

ಈ ಘಟನೆ ವಾರಾಣಸಿಯ ಮಂಡುವಾಡಿಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಟೋಮೊಬೈಲ್ ಶೋರೂಂನಲ್ಲಿ ನಡೆದಿದೆ. ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಸಿಬ್ಬಂದಿ ಶೋರೂಂ ಮುಚ್ಚಿ ತೆರಳಿದ್ದರು. ಶೋರೂಂ ಮಾಲೀಕರ ಸುಮಾರು ಮೂರು ತಿಂಗಳ ಹಳೆಯ KTM ಬೈಕ್ ಕೀ ಸಮೇತ ಒಳಗೆ ನಿಲ್ಲಿಸಲಾಗಿತ್ತು. ರಾತ್ರಿ ಸುಮಾರು 11:30ಕ್ಕೆ ಬಿಳಿ ಶರ್ಟ್ ಮತ್ತು ಜೀನ್ಸ್ ಧರಿಸಿದ್ದ ಯುವಕನೊಬ್ಬ ಶೋರೂಂ ಹೊರಗೆ ಬಂದಿದ್ದಾನೆ. ಆತನ ಕೈಯಲ್ಲಿ ದೇವಿ ಮಾತೆಯ ಚಿತ್ರವಿತ್ತು. ಮಳೆ ಬಂದ ಕಾರಣ ಹೊರಗೆ ಹಾಕಲಾಗಿದ್ದ ಬ್ಯಾನರ್‌ ಹರಿದು ಹೊದ್ದುಕೊಂಡಿದ್ದಾನೆ.

ಬಳಿಕ ಕಟರ್ ಬಳಸಿ ಶೋರೂಂನ ಗಾಜಿನ ಬಾಗಿಲನ್ನು ಕತ್ತರಿಸಲು ಆರಂಭಿಸಿದ್ದಾನೆ. ಸುಮಾರು 36 ನಿಮಿಷಗಳ ಪ್ರಯತ್ನದ ಬಳಿಕ ರಾತ್ರಿ 12:06ಕ್ಕೆ ಆತ ಒಳಗೆ ಪ್ರವೇಶಿಸಿದ್ದಾನೆ. ಒಳಗೆ ಬಂದ ಕೂಡಲೇ ಕಳ್ಳ ಕಂಪ್ಯೂಟರ್ ಆನ್ ಮಾಡಿ, ನಂತರ ಮಿನಿ ಫ್ರಿಜ್‌ನಿಂದ ನೀರು ತೆಗೆದುಕೊಂಡು ಕುಡಿದಿದ್ದಾನೆ. ಬಳಿಕ ಕಾಫಿ ಮಷೀನ್ ನಲ್ಲಿ ಬಿಸಿ ಕಾಫಿ ತಯಾರಿಸಿ ಕುಡಿದಿದ್ದಾನೆ. ನಂತರ ಯಾವುದೇ ಆತಂಕವಿಲ್ಲದಂತೆ ಶೋರೂಂನ ವಾಶ್‌ರೂಮ್‌ಗೆ ತೆರಳಿ ಅಲ್ಲಿ ಸ್ನಾನ ಮಾಡಿ, ಬಳಿಕ ತನ್ನ ಒದ್ದೆ ಬಟ್ಟೆಗಳನ್ನು ಬೈಕ್ ಮೇಲೆ ಒಣಗಲು ಹಾಕಿದ್ದಾನೆ.

ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಕದ್ದು ಪರಾರಿ

ನಂತರ ಆತ ಹೊಸ ಬೈಕ್‌ನ ಕವರ್‌ನ್ನು ಹರಿದು ಅದನ್ನು ಲುಂಗಿಯಂತೆ ಧರಿಸಿಕೊಂಡುಮ್ ಕಂಪ್ಯೂಟರ್‌ನಲ್ಲಿ ಹಾಡುಗಳನ್ನು ಹಾಕಿ‘ಲುಂಗಿ ಡ್ಯಾನ್ಸ್’ ಮಾಡಿದ್ದಾನೆ. ಇನ್ನು ಶೋರೂಂನಿಂದ ಹೊರಡುವ ಮುನ್ನ ಅಲ್ಲಿದ್ದ ಬ್ರಾಂಡೆಡ್ ಟಿ-ಶರ್ಟ್ ಮತ್ತು ಕ್ಯಾಪ್ ಧರಿಸಿದ್ದಾನೆ. ಜೊತೆಗೆ ಬೈಕ್‌ನ ಹೊಸ ಕವರ್‌ವೊಂದನ್ನೂ ತೆಗೆದುಕೊಂಡಿದ್ದಾನೆ. ಬಳಿಕ ಬೆಳಗಿನ ಸುಮಾರು 4 ಗಂಟೆಗೆ ಮ್ಯಾನೇಜರ್‌ನ ₹4.71 ಲಕ್ಷ ಮೌಲ್ಯದ KTM ಬೈಕ್‌ನ್ನು ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಬೆಳಗ್ಗೆ ಸೆಕ್ಯುರಿಟಿ ಗಾರ್ಡ್ ಶೋರೂಂನ ಒಡೆದ ಗಾಜನ್ನು ಗಮನಿಸಿ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾನೆ. ಬಳಿಕ ಸಂಪೂರ್ಣ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಮಾಹಿತಿ ಸಿಕ್ಕ ಕೂಡಲೇ ಮಂಡುವಾಡಿಹ್ ಪೊಲೀಸ್ ಠಾಣೆಯ ಪೊಲೀಸರು ಮತ್ತು ಫೊರೆನ್ಸಿಕ್ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ.

PREV
Read more Articles on
click me!

Recommended Stories

​‘ಕೆನಡಾ ಡ್ರೀಮ್’ ತಂದಿಟ್ಟ ದುರಂತ: ಹೆತ್ತವರ 15 ವರ್ಷಗಳ ಶ್ರಮ ನೀರಪಾಲು... ಕಾರಣವೇನು?
60ನೇ ವಯಸ್ಸಿನಲ್ಲಿ ಕೃಷಿಗಿಳಿದ ಎಂಜಿನಿಯರ್, ₹10 ಸಾವಿರದಿಂದ ಆರಂಭಿಸಿ ಕೆಜಿಗೆ ₹1,000 ಉತ್ಪನ್ನ ಮಾರಾಟ