ಸರ್​ ರೀ ನನ್​ ಲವ್​ ನಿಮ್​ ಕೈಯಲ್ಲಿ ಐತ್ರಿ , ಒಂದ್​ ಸಲ ಪಾಸ್​ ಮಾಡ್ರಿ, ನಿಮ್​ ಕಾಲ್​ ಬೀಳ್ತಿನ್ರಿ, 500 ತಗೊಂಡು ಚಾ ಕುಡೀರಿ

Published : Apr 13, 2026, 11:25 PM IST
Student's request

ಸಾರಾಂಶ

ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವುದಾಗಿ ಗೆಳತಿ ಹೇಳಿದ್ದಾಳೆಂಬ ಕಾರಣಕ್ಕೆ, ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ತನ್ನನ್ನು ಪಾಸ್ ಮಾಡುವಂತೆ ಮನವಿ ಮಾಡಿದ್ದಾನೆ. 500 ರೂಪಾಯಿ ನೋಟು ಇಟ್ಟು ಬರೆದ ಈ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪರೀಕ್ಷೆ ಮತ್ತು ದೇವರ ಮುಂದೆ ಬರುವ ಬೇಡಿಕೆಗಳು ಕೆಲವೊಮ್ಮೆ ಸಕತ್​ ಮಜಾಕೊಡುವಂತಿರುತ್ತದೆ. ತಮ್ಮ ಮನದ ಆಸೆಗಳನ್ನು ದೇವರ ಮುಂದೆ ಭಕ್ತಾದಿಗಳು ಇಡುವುದು ಮಾಮೂಲು. ಆದರೆ ಅತ್ತೆಗೆ ಹುಷಾರಿಲ್ಲದಂತೆ ಮಾಡು, ಮನೆಯವರಿಗೆ ಬುದ್ಧಿ ಬರುವಂತೆ ಮಾಡು, ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡು, ನನ್ನ ಲವರ್​ ನನ್ನನ್ನು ಒಪ್ಪಿಕೊಳ್ಳುವಂತೆ ಮಾಡು... ಹೀಗೆ ಏನೇನೋ ಕೋರಿಕೆಗಳನ್ನು ಬರೆದು ದೇವರ ಹುಂಡಿಯಲ್ಲಿ ಹಾಕುವುದು ಒಂದೆಡೆಯಾದರೆ ಪರೀಕ್ಷೆಯ ಪತ್ರಿಕೆಗಳಲ್ಲಿ, ತಮ್ಮನ್ನು ಪಾಸ್​ ಮಾಡುವಂತೆ ವಿಧವಿಧವಾಗಿ ವಿದ್ಯಾರ್ಥಿಗಳು ಬೇಡಿಕೊಳ್ಳುವುದು ಇದೆ.

ಲೆಟರ್​ ವೈರಲ್​

ಅದೇ ರೀತಿಯ ಉತ್ತರ ಪತ್ರಿಕೆಯೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇದರಲ್ಲಿ ಪ್ರೇಮಿಯೊಬ್ಬ ಉತ್ತರ ಪತ್ರಿಕೆಯನ್ನು ಕರೆಕ್ಷನ್​ ಮಾಡುವ ಶಿಕ್ಷಕರಿಗೆ ಬರೆದಿದ್ದಾನೆ. ಇದರಲ್ಲಿ ಆತ ತನ್ನನ್ನು ಪಾಸ್​​ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಆತ ಕೊಟ್ಟಿರುವ ಕಾರಣ ಮಾತ್ರ ಸಕತ್​ ತಮಾಷೆಯಾಗಿದ್ದು, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರಿಗೆ ನಗು ತರಿಸುವಂತಿದೆ.

ಕಾಲ ಬೀಳ್ತೀನಿ ಸರ

ಅದರಲ್ಲಿ ಈ ಪ್ರೇಮಿ, ಸರ್​ ರೀ, ಮೇಡಂ ರೀ. ನಿಮ್ಮ ಕಾಲ ಬೀಳ್ತೀನಿ. ನನ್ನ ಲವ್​ ನಿಮ್ಮ ಕೈಯಾಗ ಅಯಿತಿ ರೀ. ನಾ ಪೇಪರ್​ದಾಗ ಪಾಸ ಆದ್ರ ಅಕಿ ಲವ್ ಮಾಡ್ತೇನೆ ಅಂದಾಳ ರೀ. ನನ್ನ ಹುಡುಗಿ, ಈ 500 ರೂಪಾಯಿ ಇಟ್ಕೊಂಡ್​ ಚಾ ಕುಡೀರಿ ಸರ್​ ರೀ ನನ್ನ ಪಾಸ್​ ಮಾಡಿರಿ ಎಂದು ಇದರಲ್ಲಿ ಆ ವಿದ್ಯಾರ್ಥಿ ಬರೆದಿದ್ದಾನೆ. ಅವನ ಹುಡುಗಿ ಪರೀಕ್ಷೆಯಲ್ಲಿ ಪಾಸ್​ ಆದ್ರೆ ಮಾತ್ರ ಲವ್​ ಮಾಡುತ್ತೇನೆ ಎಂದಿದ್ದಾಳಂತೆ. ಅದಕ್ಕಾಗಿ ಉತ್ತರ ಪತ್ರಿಕೆಯಲ್ಲಿ 500 ರೂಪಾಯಿ ಇಟ್ಟಿರೋ ಈ ಆಸಾಮಿ, ಇದನ್ನು ತೆಗೆದುಕೊಂಡು ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡೋರಿಗೆ ಚಹ ಕುಡಿಯಲು ಹೇಳಿದ್ದು, ಪರೀಕ್ಷೆ ಪಾಸ್​ ಮಾಡುವಂತೆ ಕೋರಿಕೊಂಡಿದ್ದಾನೆ.

ಕಮೆಂಟ್ಸ್​ ಸುರಿಮಳೆ

ಇದರ ಫೋಟೋ ವೈರಲ್​ ಆಗುತ್ತದೆ, ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ವಿದ್ಯಾರ್ಥಿಯ ಮನವಿಯನ್ನು ಪುರಸ್ಕರಿಸಿ ಎಂದು ಹಲವರು ಹೇಳುತ್ತಿದ್ದಾರೆ. ಅವನನ್ನು ಪಾಸ್​ ಮಾಡಿದ್ರೆ ಒಂದು ಜೀವ ಉಳಿಸಿದ ಪುಣ್ಯ ಬರುತ್ತದೆ, ಒಂದು ಪ್ರೇಮಿಗಳನ್ನು ಒಟ್ಟುಗೂಡಿಸಿದ ಪುಣ್ಯ ಬರುತ್ತದೆ ಎಂದೆಲ್ಲಾ ಕಮೆಂಟ್ಸ್​ ಹಾಕುತ್ತಿದ್ದಾರೆ. ​ vijayapur_le_dosta ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.

 

PREV
Read more Articles on
click me!

Recommended Stories

ಪೊಲೀಸ್​ ಸ್ಟೇಷನ್​ ಮೆಟ್ಟಿಲೇರಿತು ಬೆಂಗಳೂರು ಬೆಕ್ಕುಗಳ ಲವ್​ ಸ್ಟೋರಿ! ಪೊಲೀಸರು ಸುಸ್ತು- ಆಗಿದ್ದೇನು
ಜೀ ಕನ್ನಡಕ್ಕೆ ರಕ್ಷಿತಾ ಪ್ರೇಮ್ ಬೈ ಬೈ ಹೇಳಿದ್ದೇಕೆ? ಕಡ್ಡಿ ಮುರಿದಂತೆ 'ಒಳಗಿನ ಗುಟ್ಟು' ಬಿಚ್ಚಿಟ್ಟ ಸ್ಟಾರ್ ನಟಿ!