ಆಟೋ ಹತ್ತಿದ್ರೆ 60 ರೂಪಾಯಿ ಖರ್ಚು; ಬೆಂಗಳೂರಿನ CA ಮಾಡಿದ್ರು ಈ ಕೆಲಸ, ತಿಂಗಳಿಗೆ 1,560 ಉಳಿತಾಯ

Published : Aug 07, 2026, 02:22 PM IST
salary 20000 rs 3000 savings bengaluru ca walked 4 km daily instead of taking an auto

ಸಾರಾಂಶ

ಕಡಿಮೆ ಸಂಬಳವಿದ್ದಾಗಲೂ ಪ್ರತಿಯೊಂದು ಸಣ್ಣ ಖರ್ಚಿನ ಲೆಕ್ಕ ಇಟ್ಟುಕೊಂಡು, ಸ್ವಂತ ಕಾಲ ಮೇಲೆ ನಿಲ್ಲಲು ಪ್ರಯತ್ನಿಸಿದ ಮೀನಲ್ ಅವರ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

22ನೇ ವಯಸ್ಸಿನಲ್ಲಿ ಮೊದಲ ಉದ್ಯೋಗ ಆರಂಭಿಸಿದ ಮೀನಲ್ ಗೋಯೆಲ್‌ಗೆ ತಿಂಗಳಿಗೆ 20,000 ಸಂಬಳ ಬರುತ್ತಿತ್ತು. ಬಾಡಿಗೆ, ಊಟ ಮತ್ತು ಇತರ ಬಿಲ್‌ಗಳನ್ನು ಪಾವತಿಸಿದ ಬಳಿಕ ಕೈಯಲ್ಲಿ ಉಳಿಯುತ್ತಿದ್ದದ್ದು ಕೇವಲ 3,000. ಇಂತಹ ಸಂದರ್ಭದಲ್ಲಿ ಪ್ರತಿದಿನ ಆಟೋಗೆ 60 ರೂಪಾಯಿ ಖರ್ಚು ಮಾಡುವ ಬದಲು, ಅವರು ಮೂರು ತಿಂಗಳ ಕಾಲ ಪ್ರತಿದಿನ 4 ಕಿ.ಮೀ ನಡೆದು ಕಚೇರಿಗೆ ತೆರಳಿದ್ದರು. ಹಣ ಉಳಿಸಲು ಆರಂಭಿಸಿದ ಈ ಸಣ್ಣ ನಿರ್ಧಾರವೇ ಮುಂದೆ ಅವರಿಗೆ ಸ್ವಾವಲಂಬನೆ, ತಾಳ್ಮೆ ಮತ್ತು ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯ ಕಲಿಸಿದ ದೊಡ್ಡ ಜೀವನಪಾಠವಾಯಿತು.

ದಿನಕ್ಕೆ 60 ತಿಂಗಳಿಗೆ 1,560

ಮೀನಲ್ ಅವರ ಸುತ್ತಮುತ್ತಲಿನವರು ಪ್ರತಿದಿನ 60 ರೂಪಾಯಿ ಆಟೋಗೆ ಖರ್ಚು ಮಾಡುವುದು ದೊಡ್ಡ ವಿಷಯವಲ್ಲ, ಆಟೋದಲ್ಲೇ ಹೋಗಿ ಎಂದು ಹೇಳುತ್ತಿದ್ದರು. ಆದರೆ ಅವರು ಲೆಕ್ಕ ಹಾಕಿದಾಗ ಪರಿಸ್ಥಿತಿ ಬೇರೆಯೇ ಕಾಣಿಸಿತು.

26 ಕೆಲಸದ ದಿನ × 60 = ತಿಂಗಳಿಗೆ 1,560.

ಅಂದರೆ 3,000 ಮಾಸಿಕ ಉಳಿತಾಯದಲ್ಲಿ ಬರೋಬ್ಬರಿ 52% ಹಣ ಆಟೋ ಪ್ರಯಾಣಕ್ಕೇ ಖರ್ಚಾಗುತ್ತಿತ್ತು. ಹೀಗಾಗಿ ಆಟೋ ಬಿಟ್ಟು ನಡೆಯಲು ನಿರ್ಧರಿಸಿದರು.

ಮೂರು ತಿಂಗಳು ಪ್ರತಿದಿನ 4 ಕಿ.ಮೀ ನಡಿಗೆ

ಆಟೋ ದರ ಉಳಿಸಲು ಮೀನಲ್ ಸತತ ಮೂರು ತಿಂಗಳು ಪ್ರತಿದಿನ 4 ಕಿ.ಮೀ ನಡೆದು ಕೆಲಸಕ್ಕೆ ಹೋಗುತ್ತಿದ್ದರು. ಈ ವಿಚಾರವನ್ನು ತಮ್ಮ ಪೋಷಕರಿಗೂ ಅವರು ತಿಳಿಸಿರಲಿಲ್ಲ. ತಮ್ಮ ಪೋಷಕರಿಗೆ ವಿಷಯ ಗೊತ್ತಾಗಿದ್ದರೆ, ಅವರು ತಕ್ಷಣ ಹಣ ಕಳುಹಿಸಿ ಸಹಾಯ ಮಾಡುತ್ತಿದ್ದರು ಎಂದು ಮೀನಲ್ ಹೇಳಿದ್ದಾರೆ. ಆದರೆ ಅವರಿಗೆ ಅದು ಬೇಕಿರಲಿಲ್ಲ.

ಇನ್ನು ಮುಂದೆ ಪೋಷಕರನ್ನು ಅವಲಂಬಿಸುವುದಿಲ್ಲ

20ನೇ ವಯಸ್ಸಿನಲ್ಲೇ ಮೀನಲ್ ತಮ್ಮೊಳಗೆ ಒಂದು ನಿರ್ಧಾರ ಮಾಡಿಕೊಂಡಿದ್ದರಂತೆ—ಇನ್ನು ಮುಂದೆ ತಮ್ಮ ಖರ್ಚುಗಳಿಗೆ ಪೋಷಕರನ್ನು ಅವಲಂಬಿಸಬಾರದು. ಹೀಗಾಗಿ ದಿನಕ್ಕೆ 60 ರೂಪಾಯಿ ಉಳಿಸುವುದಕ್ಕಿಂತ, ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂಬ ಉದ್ದೇಶ ಅವರಿಗೆ ಮುಖ್ಯವಾಗಿತ್ತು.

ನಾನು ಉಳಿತಾಯಕ್ಕಿಂತ ದೊಡ್ಡದನ್ನು ನಿರ್ಮಿಸುತ್ತಿದ್ದೆ

ತಾವು ಪ್ರತಿದಿನ 4 ಕಿ.ಮೀ ನಡೆದುಕೊಂಡು ಹೋಗುತ್ತಿದ್ದುದನ್ನು ನೋಡಿದ ಕೆಲವರು ಮೀನಲ್ ಅವರನ್ನು ಅಸಮಂಜಸವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಭಾವಿಸಿದ್ದರು. ಪೋಷಕರು ಸಹಾಯ ಮಾಡಲು ಸಿದ್ಧರಾಗಿದ್ದರೂ, ಇಷ್ಟೊಂದು ಕಷ್ಟಪಟ್ಟು ನಡೆಯುವ ಅಗತ್ಯವೇನು ಎಂದು ಕೆಲವರು ಪ್ರಶ್ನಿಸುತ್ತಿದ್ದರು.

ಆದರೆ ಮೀನಲ್‌ಗೆ ಆ ನಡಿಗೆ ಕೇವಲ ಹಣ ಉಳಿಸುವ ಮಾರ್ಗವಾಗಿರಲಿಲ್ಲ

ಪ್ರತಿದಿನ ಆ 4 ಕಿ.ಮೀ ನಡೆಯುವಾಗ ನಾನು ಉಳಿತಾಯಕ್ಕಿಂತ ದೊಡ್ಡದನ್ನು ನಿರ್ಮಿಸುತ್ತಿದ್ದೆ ಎಂಬುದು ಅವರ ನಿಲುವು. ಅದು ಅವರ ಪಾಲಿಗೆ ಸ್ವಾವಲಂಬನೆಯ ನಿರ್ಮಾಣವಾಗಿತ್ತು.

ಸಣ್ಣ ನಿರ್ಧಾರ, ದೊಡ್ಡ ಜೀವನಪಾಠ

ರೂಪಾಯಿ 60 ಉಳಿಸುವುದರಿಂದ ಆರಂಭವಾದ ಈ ಪ್ರಯಾಣ, ಮೀನಲ್‌ಗೆ ಹಣದ ಮೌಲ್ಯ ಮಾತ್ರವಲ್ಲದೆ ಸ್ವಾತಂತ್ರ್ಯ, ಸ್ಥಿತಿಸ್ಥಾಪಕತೆ ಮತ್ತು ಕಷ್ಟಕರ ಕೆಲಸಗಳನ್ನು ಎದುರಿಸುವ ಧೈರ್ಯ ಕಲಿಸಿತು. ಕಡಿಮೆ ಸಂಬಳವಿದ್ದಾಗಲೂ ಪ್ರತಿಯೊಂದು ಸಣ್ಣ ಖರ್ಚಿನ ಲೆಕ್ಕ ಇಟ್ಟುಕೊಂಡು, ಸ್ವಂತ ಕಾಲ ಮೇಲೆ ನಿಲ್ಲಲು ಪ್ರಯತ್ನಿಸಿದ ಮೀನಲ್ ಅವರ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

PREV
Read more Articles on
click me!

Recommended Stories

8 ವರ್ಷಗಳಿಂದ ಆಲ್ಕೋಹಾಲ್‌ ಮುಟ್ಟಿಲ್ಲ ಮದ್ಯದ ದೊರೆಯ ಮಗ ಸಿದ್ಧಾರ್ಥ್‌ ಮಲ್ಯ !
ಕೆಲಸ ಕಳೆದುಕೊಳ್ಳವು ಭೀತಿಯಲ್ಲಿ ಮಗು ಕನಸು ಮುಂದೂಡಿಕೆ, ನೋವಿನ ಘಟನೆ ಬಿಚ್ಚಿಟ್ಟ ಮಹಿಳಾ ಟೆಕ್ಕಿ