ಅಯ್ಯೋ ಕರ್ಮವೇ! ಕಾಲು ಮುರಿದುಕೊಂಡ ಉದ್ಯೋಗಿಗೆ "ಚೇರ್ ತರಿಸುತ್ತೇನೆ, ಕಚೇರಿಗೆ ಬನ್ನಿ" ಎಂದ ಮ್ಯಾನೇಜರ್

Published : Jun 06, 2025, 06:09 PM IST
wheel chair

ಸಾರಾಂಶ

ಮ್ಯಾನೇಜರ್ ಸಭ್ಯವಾಗಿ ಮೆಸೇಜ್ ಮಾಡಿ, ತಮ್ಮ ಪ್ಲೇಸ್ ಬಗ್ಗೆ ಕೇಳುವ ಮೂಲಕ ಸಂಭಾಷಣೆಯನ್ನು ಪ್ರಾರಂಭಿಸುತ್ತಾನೆ. ಆದರೆ ಉದ್ಯೋಗಿ ಮ್ಯಾನೇಜರ್‌ಗೆ ತನ್ನ ಕಾಲು ಮುರಿದುಕೊಂಡಿರುವುದಾಗಿ ಪ್ರಸ್ತುತ ಆಸ್ಪತ್ರೆಯಲ್ಲಿದ್ದೇನೆ ಎಂದು ಹೇಳುತ್ತಾನೆ. ಮುಂದೇನಾಯ್ತು ಇಲ್ಲಿದೆ ನೋಡಿ ಸ್ಟೋರಿ...

ಮ್ಯಾನೇಜರ್ ಸಭ್ಯವಾಗಿ ಮೆಸೇಜ್ ಮಾಡಿ, ತಮ್ಮ ಪ್ಲೇಸ್ ಬಗ್ಗೆ ಕೇಳುವ ಮೂಲಕ ಸಂಭಾಷಣೆಯನ್ನು ಪ್ರಾರಂಭಿಸುತ್ತಾನೆ. ಆದರೆ ಉದ್ಯೋಗಿ ಮ್ಯಾನೇಜರ್‌ಗೆ ತನ್ನ ಕಾಲು ಮುರಿದುಕೊಂಡಿರುವುದಾಗಿ ಪ್ರಸ್ತುತ ಆಸ್ಪತ್ರೆಯಲ್ಲಿದ್ದೇನೆ ಎಂದು ಹೇಳುತ್ತಾನೆ. ಮುಂದೇನಾಯ್ತು ಇಲ್ಲಿದೆ ನೋಡಿ ಸ್ಟೋರಿ...

ಹೊಸ ಉದ್ಯೋಗಿ ಮತ್ತು ಅವರ ಬಾಸ್ ನಡುವಿನ ವಾಟ್ಸಾಪ್ ಚಾಟ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವೈರಲ್ ಚಾಟ್ ಟಾಕ್ಸಿಕ್ ವರ್ಕ್ ಸಂಸ್ಕೃತಿಯ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ಬೆನ್ ಎಸ್ಕಿನ್ಸ್ (ಟಾಕ್ಸಿಕ್ ವರ್ಕ್ ಪ್ಲೇಸ್ ಮತ್ತು ಶೋಷಣಾ ವ್ಯವಸ್ಥಾಪಕರ ಬಗ್ಗೆ ನಿಯಮಿತವಾಗಿ ಟಾಪಿಕ್ ಹಂಚಿಕೊಳ್ಳುತ್ತಾರೆ)ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ವಾಟ್ಸಾಪ್ ಚಾಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತೋರಿಸಿರುವ ಸಂಭಾಷಣೆಯ ಪ್ರಕಾರ, ಬೈಕ್ ಅಪಘಾತದಲ್ಲಿ ಉದ್ಯೋಗಿ ಕಾಲು ಮುರಿದಿದ್ದರೂ ಸಹ, ಮ್ಯಾನೇಜರ್ ಪದೇ ಪದೇ ಉದ್ಯೋಗಿಯನ್ನು ಕೆಲಸಕ್ಕೆ ಮರಳಲು ಕೇಳಿಕೊಳ್ಳುತ್ತಾನೆ.

ಮ್ಯಾನೇಜರ್-ಉದ್ಯೋಗಿಯ ಚಾಟ್
ಮ್ಯಾನೇಜರ್ ಸಭ್ಯವಾಗಿ ಮೆಸೇಜ್ ಮಾಡಿ ಸಂಭಾಷಣೆಯನ್ನು ಪ್ರಾರಂಭಿಸುತ್ತಾನೆ. ಆಗ ಉದ್ಯೋಗಿ ತನ್ನ ಕಾಲು ಮುರಿದುಕೊಂಡಿರುವುದಾಗಿ ಮ್ಯಾನೇಜರ್‌ಗೆ ಹೇಳುತ್ತಾನೆ ಮತ್ತು ಪ್ರಸ್ತುತ ಆಸ್ಪತ್ರೆಯಲ್ಲಿ ಇದ್ದೇನೆ ಎಂದು ಹೇಳುತ್ತಾನೆ. ಆ ಬಗ್ಗೆ ಚಿಂತಿಸುವ ಬದಲು, ಬಾಸ್ ಶುಕ್ರವಾರದೊಳಗೆ ಕೆಲಸಕ್ಕೆ ಮರಳುವಂತೆ ಮನವೊಲಿಸಲು ಪ್ರಯತ್ನಿಸುತ್ತಾನೆ. ಗಾಯಗೊಂಡ ಉದ್ಯೋಗಿ "ವೈದ್ಯರು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆಂದು" ಹೇಳುತ್ತಾನೆ. ಆದರೆ ಬಾಸ್ ಒತ್ತಾಯಿಸುತ್ತಲೇ ಇರುತ್ತಾನೆ. "ವೈದ್ಯರು ಅನುಮತಿಸಿದರೆ ಖಂಡಿತವಾಗಿಯೂ ಹಿಂತಿರುಗುತ್ತೇನೆ" ಎಂದು ಉದ್ಯೋಗಿ ನಯವಾಗಿ ಉತ್ತರಿಸುತ್ತಾನೆ. ನಂತರ ಬಾಸ್, "ಶುಕ್ರವಾರದ ಶಿಫ್ಟ್‌ಗೆ ನನಗೆ ನೀವು ಬೇಕು, ನೀವು ಬರಲು ಸಾಧ್ಯವಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನಾನು ನಿಮಗೆ ಕುರ್ಚಿಯನ್ನು ತರಬಲ್ಲೆ" ಎಂದು ಹೇಳುತ್ತಾನೆ. ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಬಾಸ್ ಉದ್ಯೋಗಿಯನ್ನು ದೂಷಿಸಲು ಪ್ರಯತ್ನಿಸುತ್ತಾನೆ ಮತ್ತು ಎರಡು ವಾರಗಳ ಹಿಂದೆ ಕಂಪನಿಗೆ ಸೇರಿದ ನಂತರ ರಜೆ ತೆಗೆದುಕೊಂಡಿದ್ದಕ್ಕಾಗಿ ಅವನು ಆರೋಪಿಸುತ್ತಾನೆ. ಇದಕ್ಕೆ ಉದ್ಯೋಗಿ "ಆದ್ದರಿಂದ ನಾನು ನಿಮಗೆ ಅದನ್ನು ಇನ್ನಷ್ಟು ಸುಲಭಗೊಳಿಸುತ್ತೇನೆ. ನಾನು ಕೆಲಸ ಬಿಡುತ್ತಿದ್ದೇನೆ" ಎಂದು ಹೇಳುತ್ತಾನೆ.

ಈ ಪೋಸ್ಟ್ ಹಂಚಿಕೊಂಡಾಗಿನಿಂದ ವೈರಲ್ ಆಗಿದೆ. ಕಾಮೆಂಟ್‌ಗಳ ವಿಭಾಗದಲ್ಲಿ, ಅನೇಕ ಬಳಕೆದಾರರು ಉದ್ಯೋಗಿಗೆ ಕೆಲಸ ಬಿಟ್ಟಿದ್ದಕ್ಕಾಗಿ ಹೊಗಳಿದರೆ, ಇತರರು ತಮ್ಮ ಕೆಲಸದ ಸ್ಥಳದಲ್ಲಿಯಾದ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡರು. ಓರ್ವ ಬಳಕೆದಾರರು 'ಇದು ನಿಜ. ನನಗಿದು ಮನವರಿಕೆಯಾಗಿದೆ. ನಾನು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಒಬ್ಬ ಮಹಿಳೆ ಪಾದದ ಮೂಳೆ ಮುರಿದುಕೊಂಡು ಬಂದಳು ಮತ್ತು ಕೆಲವು ಗಂಟೆಗಳ ನಂತರ ಹೊರಟುಹೋದಳು, ನೋವು ತುಂಬಾ ಇತ್ತು. ಆದರೂ ಆಕೆಗೆ ಕೆಲಸಕ್ಕೆ ಬರುವಂತೆ ಒತ್ತಾಯಿಸಿದರು' ಎಂದರೆ ಮತ್ತೊಬ್ಬ ಬಳಕೆದಾರರು, 'ಈ ಸನ್ನಿವೇಶಗಳು ನಿಜವೆಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಪ್ರಾಮಾಣಿಕವಾಗಿ, ಇಷ್ಟು ಸಮಯದ ನಂತರ ಬೆನ್ ಈ ಸಂದೇಶಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರೂ, ನಾನು ಇನ್ನೂ ಇಂತಹ ಪರಿಸ್ಥಿತಿ ಇಲ್ಲ' ಎಂದು ಯೋಚಿಸುತ್ತಿದ್ದೇನೆ. ಇದು ನಿಜವಾಗಲು ಸಾಧ್ಯವಿಲ್ಲ! ನಂಬಲಾಗದದು!' ಎಂದಿದ್ದಾರೆ. ಏತನ್ಮಧ್ಯೆ 'ನನ್ನ ಪಾದದಲ್ಲಿ ಸ್ನಾಯುರಜ್ಜು ಉರಿಯೂತದಿಂದಾಗಿ ನಾನು ಕೆಲಸಕ್ಕೆ ಮರಳಲು ನನಗೆ ಕುರ್ಚಿಯನ್ನು ನೀಡಲಾಯಿತು. ನಾನು ಕೆಲಸಕ್ಕೆ ಹಿಂತಿರುಗಿದಾಗ, ನನಗೆ ನೀಡಲಾದ ಕುರ್ಚಿಯನ್ನು ಕೇಳಿದೆ. ಆ ನಂತರ ಅವರು ಹೇಳಿದರು- ನಾವು ನಿಜವಾಗಿಯೂ ಹಾಗೆ ಮಾಡುವುದಿಲ್ಲ, ನೀವು ಒಂದು ಕಾಲಿನ ಮೇಲೆ ನಿಲ್ಲಲು ಸಾಧ್ಯವಿಲ್ಲವೇ?' ಎಂದು ಕೇಳಿದ್ದರು ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರರು, 'ಕಾರು ಅಪಘಾತದ ನಂತರ ನನಗೂ ಇದೇ ರೀತಿ ಅನುಭವವಾಗಿತ್ತು' ಎಂದು ತಿಳಿಸಿದ್ದಾರೆ. ಜೊತೆಗೆ ಕುಳಿತುಕೊಳ್ಳಲು 'ನಾನು ನಿನಗಾಗಿ ಒಂದು ಕುರ್ಚಿಯನ್ನು ತರುತ್ತೇನೆ' ಎಂದು ಹೇಳಿದ್ದನ್ನೂ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್