ಆಕೆಯ ನಗುವಿಗೆ ಮನಸೋತ ಯುವಕ: ಅಮ್ಮಾ, ಮದುವೆ ಪ್ರಪೋಸಲ್ ರಿಜೆಕ್ಟ್ ಮಾಡೋ ಮುನ್ನ ಒಮ್ಮೆ ಕೇಳಬಾರದಿತ್ತಾ?

Published : Jul 16, 2026, 08:26 PM ISTUpdated : Jul 16, 2026, 08:31 PM IST
You Should've Asked Me First!' Student Regrets Mom's Marriage Proposal Decision After Seeing Girl's Photo

ಸಾರಾಂಶ

ಕಾಲೇಜಿನ ಅಂತಿಮ ವರ್ಷದಲ್ಲಿದ್ದ 21 ವರ್ಷದ ನಿರುದ್ಯೋಗಿ ಯುವಕನಿಗೆ ಬಂದ ಮದುವೆ ಪ್ರಸ್ತಾಪವನ್ನು ಆತನ ತಾಯಿ ತಕ್ಷಣವೇ ನಿರಾಕರಿಸಿದ್ದರು. ಆದರೆ ನಂತರ ಆ ಹುಡುಗಿಯ ಫೋಟೋ ನೋಡಿದ ಯುವಕ ಆಕೆಯ ನಗುವಿಗೆ ಸಂಪೂರ್ಣ ಮನಸೋತಿದ್ದಾನೆ. "ಅಮ್ಮಾ, ಬೇಡ ಅನ್ನುವ ಮುನ್ನ ನನ್ನನ್ನು ಒಮ್ಮೆಯಾದರೂ ಕೇಳಬೇಕಿತ್ತು" ಎಂದು ಆತ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದು, ಈ ಸುದ್ದಿ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಬೆಂಗಳೂರು: ಕಾಲೇಜಿನ ಕೊನೆಯ ವರ್ಷ, ಕೇವಲ 21 ವರ್ಷದ ಪ್ರಾಯ, ಜೇಬಿನಲ್ಲಿ ಬಿಡಿಗಾಸೂ ಇಲ್ಲದ ನಿರುದ್ಯೋಗಿ ಸ್ಥಿತಿ... ಇಂತಹ ಸಂದರ್ಭದಲ್ಲಿ ಹಠಾತ್ ಆಗಿ ಮದುವೆ ಪ್ರಸ್ತಾಪ ಬಂದರೆ ಏನಾಗಬಹುದು? ಹೆತ್ತವರು ಸಹಜವಾಗಿಯೇ "ಮಗ ಇನ್ನು ಓದುತ್ತಿದ್ದಾನೆ, ಅವನಿಗಿನ್ನು ಕೆಲಸವೇ ಸಿಕ್ಕಿಲ್ಲ" ಎಂದು ಪ್ರಸ್ತಾಪವನ್ನು ತಳ್ಳಿಹಾಕುತ್ತಾರೆ. ಆದರೆ, ತಾಯಿ ನಿರಾಕರಿಸಿದ ನಂತರ ಹುಡುಗಿಯ ಫೋಟೋ ನೋಡಿದ ಮಗನಿಗೆ ತಾನೇನು ಕಳೆದುಕೊಂಡೆ ಎಂಬ ಸತ್ಯ ಅರಿವಾಗಿ ಚಡಪಡಿಸಿದ ಸ್ವಾರಸ್ಯಕರ ಘಟನೆಯೊಂದು ರೆಡ್ಡಿಟ್‌ನ ‘r/TwentiesIndia’ ಪೇಜ್ ನಲ್ಲಿ ಭಾರಿ ವೈರಲ್ ಆಗಿದೆ.

ಅಜ್ಜಿಯ ಗೆಳತಿಯಿಂದ ಬಂದ ಆಫರ್:

ಪೋಸ್ಟ್ ಹಂಚಿಕೊಂಡಿರುವ ಯುವಕ, "ನನಗೆ 21 ವರ್ಷ, ಇನ್ನು ಕಾಲೇಜು ಮುಗಿದಿಲ್ಲ. ನನ್ನ ಅಜ್ಜಿಯ ಸ್ನೇಹಿತೆಯೊಬ್ಬರು ತಮ್ಮ 20 ವರ್ಷದ ಮೊಮ್ಮಗಳಿಗಾಗಿ ನನ್ನನ್ನು ಕೇಳಿಕೊಂಡು ಮದುವೆ ಪ್ರಸ್ತಾಪ ತಂದಿದ್ದರು. ಅಜ್ಜಿ ಮುಜುಗರದಿಂದ ನೇರವಾಗಿ ನಿರಾಕರಿಸಲಾಗದೆ ವಿಷಯವನ್ನು ನನ್ನ ತಾಯಿಗೆ ಮುಟ್ಟಿಸಿದರು. ನನ್ನ ತಾಯಿ ತಕ್ಷಣವೇ 'ಮಗ ಇನ್ನು ಚಿಕ್ಕವನು, ಕೆಲಸವಿಲ್ಲ' ಎಂದು ಪ್ರಸ್ತಾಪವನ್ನು ನಿರಾಕರಿಸಿದರು" ಎಂದು ಬರೆದುಕೊಂಡಿದ್ದಾನೆ.

ಫೋಟೋ ನೋಡಿ ಮಂತ್ರಮುಗ್ಧನಾದ ಯುವಕ:

ಮೊದಲಿಗೆ ಇದೆಲ್ಲವೂ ತಮಾಷೆಯಾಗಿ ಕಂಡರೂ, ನಂತರ ಯುವಕ ಆ ಹುಡುಗಿಯ ಫೋಟೋ ನೋಡಿದಾಗ ಆತನ ಪ್ರಪಂಚವೇ ಬದಲಾಯಿತು. "ಅವಳು ತುಂಬಾ ಸುಂದರವಾಗಿದ್ದಳು. ಅವಳ ಆ ಮುದ್ದಾದ ನಗುವಿಗಾಗಿ ಜೀವವನ್ನೇ ಕೊಡಬಹುದು ಎನಿಸುವಂತಹ ಸೌಂದರ್ಯ ಅವಳದಾಗಿತ್ತು. ಅಮ್ಮಾ, ನೀನು ನಿರಾಕರಿಸುವ ಮುನ್ನ ಒಮ್ಮೆಯಾದರೂ ನನ್ನ ಅಭಿಪ್ರಾಯ ಕೇಳಬೇಕಿತ್ತು ಅನಿಸಿತು. ಇಡೀ ದಿನ ಆ ಫೋಟೋ ನನ್ನನ್ನು ಕಾಡುತ್ತಿದೆ" ಎಂದು ಆತ ತನ್ನ ಅಳಲು ತೋಡಿಕೊಂಡಿದ್ದಾನೆ.

ನೆಟ್ಟಿಗರ ತಮಾಷೆಯ ಕಾಮೆಂಟ್‌ಗಳು:

ಈ ಪೋಸ್ಟ್ ನೋಡಿದ ನೆಟ್ಟಿಗರು ಯುವಕನ ಕಾಲೆಳೆದಿದ್ದಾರೆ. ಒಬ್ಬರು, "ಹೋಗಿ ತಾಯಿಗೆ ಹುಡುಗಿಯ ಮನೆಯವರೊಂದಿಗೆ ಮತ್ತೆ ಮಾತನಾಡಲು ಹೇಳಿ" ಎಂದು ಸಲಹೆ ನೀಡಿದರೆ, ಮತ್ತೊಬ್ಬರು "ಹಾಗೇನಾದರೂ ಮಾಡಿದರೆ ಅಮ್ಮ ಚಪ್ಪಲಿಯಿಂದ ಹೊಡೆದು ಓದಲು ಕೂರಿಸುತ್ತಾರೆ" ಎಂದು ಎಚ್ಚರಿಸಿದ್ದಾರೆ. "ಇದು ದೇಶದ ಪ್ರತಿಯೊಬ್ಬ ಮಧ್ಯಮ ವರ್ಗದ ಹುಡುಗನ ಕಥೆ; ನಮಗೆ ಹುಡುಗಿ ಇಷ್ಟವಾದರೂ ಹೆತ್ತವರು ನಮ್ಮ ಖಾಲಿ ಜೇಬನ್ನು ನೋಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

'ಶೌಚಾಲಯ ಬಳಸಬಹುದಾ' ಕೇಳಿದ್ದೇ ತಪ್ಪಾಯ್ತು: ಗಿಗ್​ ವರ್ಕ್​ರ್​ಗೆ 5 ದಿನ ಕೆಲಸ ಸಿಗದಂತೆ ಮಾಡಿದ ಆ 'ಶ್ರೀಮಂತ'
"ಅವತ್ತು ಕೆಲಸ ಕಳೆದುಕೊಂಡಿದ್ದೇ ನನಗೆ ವರವಾಯ್ತು!" - ಮಹಿಳಾ ಉದ್ಯಮಿಯ ರೋಚಕ ಸಕ್ಸಸ್ ಸ್ಟೋರಿ