
ಕೈತುಂಬ ಸಂಬಳ (salary) ಬರುವ ಕೆಲ್ಸ ಬಿಟ್ಟು, ಹೊಸ ಪ್ರಯೋಗಕ್ಕೆ ಇಳಿಯುವಂತ ನಿರ್ಧಾರ ತೆಗೆದುಕೊಳ್ಳೋದು ಸುಲಭವಲ್ಲ. ಇಲ್ಲಿ ಸವಾಲುಗಳು ಸಾಕಷ್ಟಿರುತ್ತವೆ. ಮನೆಯವರು ಹಾಗೂ ಸ್ನೇಹಿತರ ಬೆಂಬಲ ಸಿಗೋದು ಬಹಳ ಕಷ್ಟ. ಅದ್ರಲ್ಲೂ 25 ಲಕ್ಷ ರೂಪಾಯಿ ಸಂಬಳ ಬರುವ ಕೆಲ್ಸ ಬಿಟ್ಟು ಡೆಲಿವರಿ ಬಾಯ್ ಆದ್ರೆ ಯಾರು ಸಹಿಸ್ತಾರೆ. ಮನೆಯವರು ಅತ್ತು, ಕೂಗಾಡಿ ರಾದ್ಧಾಂತ ಮಾಡಿದ್ರೆ ಸ್ನೇಹಿತರು – ಅಕ್ಕಪಕ್ಕದವರು ತಮಾಷೆ ಮಾಡಿ ನಗ್ತಾರೆ. ಅಷ್ಟೊಳ್ಳೆ ಸಂಬಳ ಬಿಟ್ಟು ಯಾರು ತಾನೇ ಡಿಲೆವರಿ ಕೆಲ್ಸಕ್ಕೆ ಬರ್ತಾರೆ ಅಂತ ನೀವು ಕೇಳಬಹುದು. ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾ ಎಕ್ಸ್ ಹಾಗೂ ರೆಡ್ಡಿಟ್ ನಲ್ಲಿ ಪೋಸ್ಟ್ ವೈರಲ್ ಆಗಿದೆ. @original_ngv ಹೆಸರಿನ ಬಳಕೆದಾರರು ತಮ್ಮ ಸ್ನೇಹಿತನ ಬಗ್ಗೆ ಬರೆದುಕೊಂಡಿದ್ದಾರೆ. ಅವರ ಸ್ನೇಹಿತನಿಗೆ 25 ಲಕ್ಷ ರೂಪಾಯಿ ಸಂಬಳ ಬರುವ ಕೆಲ್ಸ ಇತ್ತು. ಮುಂದಿನ ವರ್ಷ ಮದುವೆ ಫಿಕ್ಸ್ ಆಗಿದೆ. ಕೆಲ ತಿಂಗಳ ಹಿಂದೆ ಅವರು ಕಾರ್ ಖರೀದಿ ಮಾಡಿದ್ದಾರೆ. ಈ ಟೈಂನಲ್ಲಿ ಪುಣ್ಯಾತ್ಮ ಕೆಲ್ಸ ಬಿಟ್ಟಿದ್ದಾರೆ. ಇಷ್ಟೊಂದು ಸಂಬಳ ಬರುವ ಕೆಲ್ಸ ಬಿಟ್ಟು ಸದ್ಯ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲ್ಸ ಮಾಡ್ತಿದ್ದಾರೆ. ಮಗನ ಈ ಹುಚ್ಚಾಟ ನೋಡಿ ಪಾಲಕರು ಶಾಕ್ ಆಗಿದ್ದಾರೆ. ಕೆಲ್ಸಕ್ಕೆ ಹೋಗುವಂತೆ ಒತ್ತಾಯ ಮಾಡ್ತಿದ್ದಾರೆ. ಇನ್ನು ಸ್ನೇಹಿತರೆಲ್ಲ ಇವರ ನಿರ್ಧಾರವನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ.
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಪೋಸ್ಟ್ ನಲ್ಲಿ ವ್ಯಕ್ತಿ, ತಮ್ಮ ಸ್ನೇಹಿತ ಕೆಲ್ಸ ಬಿಡಲು ಕಾರಣ ಏನು ಅನ್ನೋದನ್ನು ವಿವರಿಸಿದ್ದಾರೆ. ಸ್ನೇಹಿತನ ಮನೆ ಬಳಿ ಅನೇಕ ವಿದ್ಯಾರ್ಥಿಗಳು, ಕೆಲ್ಸಕ್ಕೆ ಹೋಗುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಇನ್ನಾರು ತಿಂಗಳಲ್ಲಿ ಸ್ನೇಹಿತ ಕ್ಲೌಡ್ ಕಿಚನ್ ಶುರು ಮಾಡುವ ಪ್ಲಾನ್ ನಲ್ಲಿದ್ದಾರೆ. ಕ್ಲೌಡ್ ಕಿಚನ್ ಶುರು ಮಾಡುವ ಮುನ್ನ ಅಲ್ಲಿನ ಜನರ ಆಸಕ್ತಿ ತಿಳಿದುಕೊಳ್ಳೋದು ಅವರ ಉದ್ದೇಶ. ಆ ಪ್ರದೇಶದಲ್ಲಿ ಜನರು ಯಾವೆಲ್ಲ ಆಹಾರದ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹೆಚ್ಚು ಆರ್ಡರ್ ಯಾವ ಆಹಾರಕ್ಕೆ ಬರ್ತಿದೆ ಎಂಬುದನ್ನು ತಿಳಿಯುವ ಉದ್ದೇಶ ಅವರದ್ದು. ಹಾಗಾಗಿಯೇ ಫುಡ್ ಡೆಲಿವರಿ ಬಾಯ್ ಆಗಿ ಸದ್ಯ ಕೆಲ್ಸ ಮಾಡ್ತಿದ್ದಾರೆ.
ಕ್ಲೌಡ್ ಕಿಚನ್ ಶುರು ಮಾಡುವ ಮೊದಲು ಮೆನು ಅಗತ್ಯ. ಸ್ಟಾಪ್ ಕೀಪಿಂಗ್ ಯೂನಿಟ್ ತಲೆಯಲ್ಲಿದ್ದು, ಕೈಗೆಟಕುವ ಬೆಲೆಯಲ್ಲಿ ಆಹಾರ ನೀಡೋದು ಅವರ ಉದ್ದೇಶ. ಕ್ಲೌಡ್ ಕಿಚನ್ ಶುರು ಮಾಡಿ ಮೂರ್ನಾಲ್ಕು ತಿಂಗಳಲ್ಲಿ ಲಾಭ ಸಿಗುವಂತೆ ಅವರು ಪ್ಲಾನ್ ಮಾಡ್ತಿದ್ದಾರೆ. ಆದ್ರೆ ಇದಕ್ಕೆ ಈ ಸ್ನೇಹಿತನನ್ನು ಬಿಟ್ಟು ಬೇರೆ ಯಾರ ಬೆಂಬಲವೂ ಇಲ್ಲ. ಕೆಲ್ಸ ಇಲ್ಲದಿರೋದ್ರಿಂದ ಸೆಕ್ಯೂರಿಟಿ ಕೂಡ ಲಿಫ್ಟ್ ಬಳಸಿದ್ರೆ ಕೂಗಾಡ್ತಾರಂತೆ. ಇಂಥ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಅಂತ ಸ್ನೇಹಿತ ಪೋಸ್ಟ್ ಹಾಕಿದ್ದಾರೆ.
Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್ ಬ್ಯೂಟಿ ಮಹಿಮಾ
ಸೋಶಿಯಲ್ ಮೀಡಿಯಾ ಬಳಕೆದಾರರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದು ದಿಟ್ಟತನ ಅಂದ್ರೆ ಮತ್ತೆ ಕೆಲವರು ಮೂರ್ಖತನ ಎಂದಿದ್ದಾರೆ. ಸ್ವಿಗ್ಗಿ – ಜೊಮೊಟೊ ಡೇಟಾ ನೀಡುವ ಕಾರಣ ಕೆಲ್ಸ ಬಿಟ್ಟು ಪ್ರಯೋಗ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ಇದು ಬುದ್ಧಿವಂತಿಕೆಯ ಇಲ್ಲ ಅಪಾಯಕಾರಿ ನಿರ್ಧಾರವ ಅಂತ ಕೆಲವರು ಪ್ರಶ್ನೆ ಮಾಡಿದ್ದಾರೆ.