ಗೋಲ್ಗಪ್ಪ ತಿನ್ನಲು ಹೋಗಿದ್ದ ಮಹಿಳೆ ಬಾಯಿ ಮುಚ್ತಿಲ್ಲ,ಆಸ್ಪತ್ರೆಗೆ ಓಡಿದ ಸಂಬಂಧಿಕರು

Published : Dec 01, 2025, 07:37 PM IST
Golgappa

ಸಾರಾಂಶ

ಗೋಲ್ಗಪ್ಪ ತಿನ್ನುವ ಮುನ್ನ ಎಚ್ಚರ. ದೊಡ್ಡ ಗೋಲ್ಗಪ್ಪ ಬಾಯಿಗೆ ಹಾಕ್ಬೇಕು ಎನ್ನುವ ಆತುರದಲ್ಲಿ ದೊಡ್ಡದಾಗಿ ಬಾಯಿ ತೆರೆದ್ರೆ ಮತ್ತೆ ಬಾಯಿ ಮುಚ್ಚೋಕೆ ಬರದೆ ಇರ್ಬಹುದು. ಉತ್ತರ ಪ್ರದೇಶದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ.

ಗೋಲ್ಗಪ್ಪ (golgappa) ತಿನ್ನುವ ಆಸೆಯಲ್ಲಿ ಮಹಿಳೆಯೊಬ್ಬಳು ಬಾಯಿ ತೆರೆದಿದ್ದಾಳೆ. ಆದ್ರೆ ಗೋಲ್ಗಪ್ಪ ಬಾಯಿ ಒಳಗೆ ಹೋದ್ರೂ ಬಾಯಿ ಮುಚ್ಚೋಕೆ ಆಗ್ಲಿಲ್ಲ. ಇದ್ರಿಂದ ಭಯಭೀತಿಗೊಂಡ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನಂತ್ರವೂ ಮಹಿಳೆ ಬಾಯಿ ಸರಿ ಹೋಗಿಲ್ಲ. ಬಾಯಿ ಮುಚ್ಚುವಾಗ ವಿಪರೀತ ನೋವು ಆಕೆಯನ್ನು ಕಾಡ್ತಿದೆ.

ಗೋಲ್ಗಪ್ಪ ತಿನ್ನುವಾಗ ನಡೀತು ವಿಚಿತ್ರ ಘಟನೆ :

ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಕಾಕೋರ್ ಬಳಿಯ ಗೌರಿ ಕಿಶನ್ಪುರದ ನಿವಾಸಿ ವೀರೇಂದ್ರ ಅವರ ಪತ್ನಿ ಇಂಕಲಾ ದೇವಿ, ಸೊಸೆಗೆ ಹೆರಿಗೆ ನೋವು ಕಾಣಿಸಿಕೊಳ್ತಿದ್ದಂತೆ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿಯೇ ಅವರು ಉಳಿದುಕೊಂಡಿದ್ರು. ನಿನ್ನೆ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಗೋಲ್ಗಪ್ಪ ತಿನ್ನಲು ಮುಂದಾಗಿದ್ದಾರೆ. ಎಲ್ಲರ ಜೊತೆ ಗೋಲ್ಗಪ್ಪ ತಿನ್ನುತ್ತಿದ್ದ ಇಂಕಲಾ ದೇವಿಗೆ ಬಾಯಿ ತೆರೆಯುತ್ತಿದ್ದಂತೆ ಶಾಕ್ ಆಗಿದೆ. ತೆರೆದ ಬಾಯಿಯನ್ನು ಮುಚ್ಚಲು ಸಾಧ್ಯವೇ ಆಗ್ಲಿಲ್ಲ. ಇದ್ರಿಂದ ಅಕ್ಕಪಕ್ಕದವರು ಆಘಾತಕ್ಕೊಳಗಾಗಿದ್ದಾರೆ. ಇಂಕಲಾ ದೇವಿ ಸ್ಥಿತಿ ನೋಡಿದ ಸಂಬಂಧಿಕರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ರೂ ಪ್ರಯೋಜನ ಆಗ್ಲಿಲ್ಲ. ನಂತ್ರ ಇಂಕಲಾ ದೇವಿಯವರನ್ನು ಹತ್ತಿರದ ದೊಡ್ಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಚಳಿಗಾಲದಲ್ಲಿ ರಮ್ ಕುಡಿದರೆ ದೇಹ ಬಿಸಿಯಾಗುತ್ತಾ? ಇದರಲ್ಲಿ ಸತ್ಯವೆಷ್ಟು?

ಇಂಕಲಾ ದೇವಿ ಸ್ಥಿತಿ ನಿಧಾನವಾಗಿ ಸುಧಾರಿಸ್ತಿದೆ. ತೆರೆದ ಬಾಯಿಯನ್ನು ಮುಚ್ಚಲಾಗಿದೆ. ಆದ್ರೆ ಆಹಾರ ಸೇವನೆ ಮಾಡಲು, ಮಾತನಾಡಲು ಇಂಕಲಾ ತೊಂದರೆ ಅನುಭವಿಸ್ತಿದ್ದಾರೆ. ಅವರಿಗೆ ಬಾಯಿ ಮುಚ್ಚಲಾಗ್ತಿಲ್ಲ. ನೋವಾಗ್ತಿದೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ಇನ್ನೊಂದೆರಡು ದಿನಗಳಲ್ಲಿ ಇಂಕಲಾ ಆರೋಗ್ಯ ಸುಧಾರಿಸುವ ಭರವಸೆ ನೀಡಲಾಗಿದೆ. ರೋಗಿಯ ದವಡೆ ಸಂಪೂರ್ಣವಾಗಿ ಸ್ಥಳಾಂತರಗೊಂಡಿತ್ತು. ನಾವು ಹಲವಾರು ಬಾರಿ ಪ್ರಯತ್ನಿಸಿದೆವು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯಲ್ಲಿ ಸೈಫೈ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದೇವೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ಹೇಳಿದ್ದಾರೆ. ನಾನು ಅಂತಹ ಪ್ರಕರಣವನ್ನು ಹಿಂದೆಂದೂ ನೋಡಿಲ್ಲ ಎಂದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇಂಕಲಾ ದೇವಿ ಗೋಲ್ಗಪ್ಪ ತಿನ್ನುವಾಗ ಅಲ್ಲಿದ್ದ ಸಂಬಂಧಿಕರ ಪ್ರಕಾರ, ಇಂಕಲಾ ದೊಡ್ಡದಾಗಿ ಬಾಯಿ ತೆರೆದಿದ್ದಾರೆ. ಆದ್ರೆ ಮುಚ್ಚಲಾಗ್ಲಿಲ್ಲ. ಅವರಿಗೆ ಏನಾಗ್ತಿದೆ ಅನ್ನೋದು ಸಂಬಂಧಿಕರಿಗೆ ಮೊದಲು ಗೊತ್ತಾಗ್ಲಿಲ್ಲ. ನಂತ್ರ ಪರಿಸ್ಥಿತಿ ಅರಿತು ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ ಎಂದು ಸಂಬಂಧಿ ಸಾವಿತ್ರಿ ಹೇಳಿದ್ದಾರೆ. ಇಂಕಲಾ ದೇವಿ ಸ್ಥಿತಿ ನೋಡಿ ಜನರು ಕಂಗಾಲಾಗಿದ್ದಾರೆ. ಗೋಲ್ಗಪ್ಪ ಮಾಲೀಕ ಕೂಡ ದಂಗಾಗಿದ್ದಾನೆ. ಆದ್ರೆ ಇಂಥ ಘಟನೆ ಈವರೆಗೂ ನಡೆದಿರಲಿಲ್ಲ, ಇದೇ ಮೊದಲ ಬಾರಿ ಅಂತ ಸ್ಥಳೀಯರು ಹೇಳ್ತಿದ್ದಾರೆ. ಬೇಗ ಬೇಗ ಆಹಾರ ತಿನ್ನಲು ಪದೇ ಪದೇ ದೊಡ್ಡದಾಗಿ ಬಾಯಿ ಕಳೆದಾಗ ಅಥವಾ ದೊಡ್ಡ ಆಹಾರ ಸೇವನೆಗೆ ದೊಡ್ಡದಾಗಿ ಬಾಯಿ ತೆರೆದಾಗ ದವಡೆ ಸ್ಥಳಾಂತರಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಮೆದುಳಿನ ಆರೋಗ್ಯಕ್ಕೆ ನೀವು ತಿನ್ನಬೇಕಾದ 6 ಸೂಪರ್ ಫುಡ್ಸ್ ಇಲ್ಲಿವೆ ನೋಡಿ!

ಈ ವಿಷ್ಯದ ಬಗ್ಗೆ ಇರಲಿ ಕಾಳಜಿ :

ಕೆಲವರಿಗೆ ದವಡೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ದವಡೆಯಲ್ಲಿ ನೋವಿದೆ, ಬಾಯನ್ನು ದೊಡ್ಡದಾಗಿ ತೆರೆಯಲು ಸಾಧ್ಯವಿಲ್ಲ ಎನ್ನುವವರು ಅದಕ್ಕೆ ಬಲವಂತದ ಪ್ರಯತ್ನ ಮಾಡಬಾರದು. ಬಾಯಿಯನ್ನು ನಿಧಾನವಾಗಿ ತೆರೆಯಬೇಕು. ಯಾವುದೇ ಆಹಾರ ತಿನ್ನುವಾಗ ಅಥವಾ ಕುಡಿಯುವಾಗ ಬಾಯಿಯನ್ನು ನಿಧಾನವಾಗಿ ತೆರೆಯಬೇಕು. ಆತುರದಲ್ಲಿ ದೊಡ್ಡದಾಗಿ ಬಾಯಿ ತೆರೆಯೋದ್ರಿಂದ ದವಡೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇರುತ್ತದೆ.

PREV
Read more Articles on
click me!

Recommended Stories

ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್
ಸಮಂತಾ ಮದುವೆ ದಿನವೇ 'ಆ' ಪೋಸ್ಟ್ ಹಾಕಿ ನರಕಯಾತನೆಗೆ ತುತ್ತಾದ ಮಾಜಿ ಪ್ರಾಣಸ್ನೇಹಿತೆ ಸಾಧನಾ ಸಿಂಗ್!