Viral Wedding: ವರನೊಬ್ಬ – ವಧು ಮೂರು ! ಕ್ಯಾಮರಾಮೆನ್‌ ಕೈ ಹಿಡಿದ ಮೂವರು ಸಹೋದರಿಯರು

Published : Jul 24, 2026, 11:49 AM IST
Viral marriage

ಸಾರಾಂಶ

Viral marriage : ಸೊಶಿಯಲ್‌ ಮೀಡಿಯಾದಲ್ಲಿ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ. ಗಂಡ – ಹೆಂಡತಿ ಒಟ್ಟಿಗಿರೋದೇ ಕಷ್ಟ ಆಗಿರೋ ಈ ಟೈಂನಲ್ಲಿ ಒಬ್ಬ ಹುಡುಗ ಮೂವರು ಹುಡುಗಿಯರನ್ನು ಮದುವೆ ಆಗಿದ್ದಾನೆ.

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದ ಘಟನೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಮೂವರು ಸಹೋದರಿಯರು ಒಬ್ಬನನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಸೋಶಿಯಲ್‌ ಮೀಡಿಯಾದ ರೀಲ್ಸ್ ಮೂಲಕ ಪ್ರಸಿದ್ಧಿಯಾಗಿರುವ ಮೂವರು ಸಹೋದರಿಯರಾದ ಸರೋಜ್, ಸಾವಿತ್ರಿ ಮತ್ತು ಸಂತೋಷ್, ವಿಕಾಸ್ ಅಲಿಯಾಸ್ ವಿಕ್ಕಿಯನ್ನು ಮದುವೆ ಆಗಿರುವ ವಿಡಿಯೋ ವೈರಲ್‌ ಆಗಿದೆ.

ಒಬ್ಬ ವರ- ಮೂರು ವಧು

 ಹಸನ್ಪುರ ವಿಧಾನಸಭಾ ಕ್ಷೇತ್ರದ ಧೋರಿಯಾ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಅಗ್ನಿಸಾಕ್ಷಿಯಾಗಿ ಈ ಮೂವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿಂಧೂರ ಇಟ್ಕೊಳ್ತಿರೋದು, ಆಶೀರ್ವಾದ ಪಡೆಯುತ್ತಿರುವ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅನೇಕರು ಇದು ಕೇವಲ ವ್ಯೂಸ್ ಮತ್ತು ವೈರಲ್ ಆಗಲು ಮಾಡ್ತಿರುವ ನಾಟಕ ಎನ್ನುತ್ತಿದ್ದಾರೆ.

ಇದ್ದರೆ ಇಂತ ಮಗನಿರಬೇಕಪ್ಪ! '₹5 ಉಳಿಸಲು ನಡೆದುಕೊಂಡೆ ಕಚೇರಿಗೆ ಹೋಗುತ್ತಿದ್ದ ತಂದೆಯ ಕನಸನ್ನು ನನಸು ಮಾಡಿದ ಮಗ..!

ಸಹೋದರಿಯರು ಹೇಳಿದ್ದೇನು?

 ಈ ಮದುವೆ ಸುಳ್ಳು ಎನ್ನುತ್ತಿರುವ ಬಳಕೆದಾರರಿಗೆ ಸಹೋದರಿಯರು ಸ್ಪಷ್ಟನೆ ನೀಡಿದ್ದಾರೆ. ಮೊದಲು ಮದುವೆ ವಿಡಿಯೋ ಹಂಚಿಕೊಂಡಿದ್ದ ಅವರು, ಈಗ ಮತ್ತೊಂದು ವಿಡಿಯೋ ಪೋಸ್ಟ್‌ ಮಾಡಿ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮದುವೆ ನಿಜವಾಗಿ ನಡೆದಿದೆ. ಯಾವುದೇ ವ್ಯೂವ್ಸ್‌ ಪಡೆಯಲು ನಾವು ನಾಟಕ ಆಡ್ತಿಲ್ಲ ಎಂದು ಸಹೋದರಿಯರು ಹೇಳಿದ್ದಾರೆ.

ನಮ್ಮ ಮನೆಯವರು ನಮ್ಮ ಮೂವರಿಗೂ ಬೇರೆ ಬೇರೆ ಕಡೆ ಮದುವೆ ನಿಶ್ಚಯ ಮಾಡುತ್ತಿದ್ದರು. ಆದರೆ ನಾವು ಬಾಲ್ಯದಿಂದಲೂ ಒಂದೇ ಮನೆಯಲ್ಲಿ, ಒಂದೇ ಜೀವ ಎನ್ನುವಂತೆ ಬೆಳೆದಿದ್ದೇವೆ. ಒಬ್ಬರನ್ನೊಬ್ಬರು ಬಿಟ್ಟು ದೂರವಾಗುವುದನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಮೂರು ಸಹೋದರರು ಇರುವ ಕುಟುಂಬ ಸಿಗದ ಕಾರಣ ನಮ್ಮ ಮುಂದೆ ಎರಡು ಆಯ್ಕೆಗಳಷ್ಟೇ ಇವೆ ಎಂದು ಭಾವಿಸಿದ್ದೆವು. ಒಂದೇ ಸಮಯದಲ್ಲಿ ಜೀವತ್ಯಾಗ ಮಾಡುವುದು ಅಥವಾ ಒಬ್ಬ ವ್ಯಕ್ತಿಯನ್ನು ಮದುವೆಯಾಗಿ ಜೀವನಪೂರ್ತಿ ಜೊತೆಯಾಗಿ ಇರುವುದು. ನಾವು ಎರಡನೇ ದಾರಿಯನ್ನು ಆರಿಸಿಕೊಂಡೆವು ಎಂದು ಸಹೋದರಿಯರು ಹೇಳಿದ್ದಾರೆ. 

Chanakya Niti: ಪತಿ-ಪತ್ನಿಯರ ಯಶಸ್ವಿ ದಾಂಪತ್ಯಕ್ಕೆ ಆಚಾರ್ಯ ಚಾಣಕ್ಯ ತಿಳಿಸಿದ 3 ಗೋಲ್ಡನ್ ರೂಲ್ಸ್

ಗಂಡನ ಪ್ರೀತಿ ಹಂಚಿಕೊಳ್ಳೋದು ಹೇಗೆ?

ಗಂಡನ ಪ್ರೀತಿ ಹೇಗೆ ಹಂಚಿಕೊಳ್ಳುತ್ತೀರಿ ಎಂದು ಹಲವರು ಇವರನ್ನು ಪ್ರಶ್ನಿಸಿದ್ದಾರೆ. ಇದಕ್ಕೂ ಸಹೋದರಿಯರು ಉತ್ತರ ನೀಡಿದ್ದಾರೆ. ನಮ್ಮ ಬದುಕಿನಲ್ಲಿ ಮುಖ್ಯವಾದದ್ದು ನಮ್ಮ ಮೂವರು ಸಹೋದರಿಯರ ನಡುವಿನ ಬಾಂಧವ್ಯ. ಭವಿಷ್ಯದಲ್ಲಿ ನಮ್ಮ ಪತಿ ನಮ್ಮನ್ನು ಬಿಟ್ಟು ಹೋದರೂ ನಾವು ಮೂವರು ಜೊತೆಯೇ ಬದುಕುತ್ತೇವೆ. ಇದು ಯಾವುದೇ ನಾಟಕವಲ್ಲ, ನಮ್ಮ ಸ್ವಂತ ಇಚ್ಛೆ ಹಾಗೂ ಕುಟುಂಬದ ಒಪ್ಪಿಗೆಯೊಂದಿಗೆ ನಡೆದ ವಿವಾಹ ಎಂದಿದ್ದಾರೆ. ಈ ಘಟನೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ವೈಯಕ್ತಿಕ ಆಯ್ಕೆಯನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಇಂತಹ ವಿವಾಹಗಳು ಕಾನೂನು ಮತ್ತು ಸಾಮಾಜಿಕ ದೃಷ್ಟಿಯಿಂದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

 

 

PREV
Read more Articles on
click me!

Recommended Stories

ಸೀತೆ 'ಬಾದಾಮಿ ಕಣ್ಣುಗಳ ಸುಂದರಿ' ಆಗಿರಬೇಕು.. ಸಾಯಿ ಪಲ್ಲವಿ ಹೊಗಳಿ, ಹೀಗೆ ಅಂದಿದ್ಯಾಕೆ ಹಳೆಯ ರಾಮಾಯಣದ ಸೀತೆ..!?
ಬಂಧಿಸಿದ್ದ ವಿದ್ಯಾರ್ಥಿಗಳ ಬಿಡುಗಡೆಗೆ ಪೊಲೀಸ್ ವ್ಯಾನ್‌ಗೆ ಅಡ್ಡ ನಿಂತ ಯುವತಿ, ವೈರಲ್ ವಿಡಿಯೋದ ಆ ಚೆಲುವೆ ಯಾರು?