Viral Content: ಮೆಟ್ರೋದಲ್ಲಿ ಅದೊಂದು 'ನಿಗೂಢ' ಕೆಲಸ, ಜಸ್ಟ್ 20 ಗಂಟೆಯಲ್ಲಿ 6.5 ಕೋಟಿ ವಿವ್ಯೂಸ್ ಪಡೆದ ಯುವಕ!

Published : Sep 03, 2026, 04:40 PM IST
Delhi Metro

ಸಾರಾಂಶ

ದೆಹಲಿ ಮೆಟ್ರೋದಲ್ಲಿ ಯುವಕನೋರ್ವ ತನ್ನ ಮೊಬೈಲ್ ಅನ್ನು ಕಿಟಕಿಗೆ ಅಂಟಿಸಿ ವಿಡಿಯೋ ಮಾಡಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾನೆ. ಸಿನಿಮಾ ಶೈಲಿಯ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ವೀಕ್ಷಣೆ ಪಡೆದು ವೈರಲ್ ಆಗಿದ್ದು, ಫೋನ್ ವಾಪಸ್ ಪಡೆದಿದ್ದು ಹೇಗೆ ಎಂಬುದು ನಿಗೂಢವಾಗಿದೆ.

ದೆಹಲಿ ಮೆಟ್ರೋ ಸದಾ ಒಂದಲ್ಲ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ನಲ್ಲಿರುತ್ತದೆ. ಸದ್ಯ ದೆಹಲಿ ಮೆಟ್ರೋದ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದು ಹೊಸ ಟ್ರೆಂಡ್‌ಗೆ ಕಾರಣವಾಗಿದೆ. ಇಂತಹ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಯುವಕನೋರ್ವ ಜಸ್ಟ್ 20 ಗಂಟೆಯಲ್ಲಿ 6.5 ಕೋಟಿ ವಿವ್ಯೂಸ್ ಪಡೆದುಕೊಂಡಿದ್ದಾನೆ.

ದೆಹಲಿ ಮೆಟ್ರೋ, ವೈರಲ್ ವಿಡಿಯೋದ ನಿಗೂಢತೆ ಏನು?

ಹೌದು, ಯುವಕನೋರ್ವ ತನ್ನ ಮೊಬೈಲ್ ಫೋನ್ ಅನ್ನು ಮೆಟ್ರೋದ ಕಿಟಕಿಗೆ ಅಂಟಿಸಿ ವಿಡಿಯೋ ಮಾಡಲು ಶುರು ಮಾಡಿದ್ದಾನೆ. ವಿಡಿಯೋ ಆರಂಭವಾಗುತ್ತಿದ್ದಂತೆ, ಟ್ರೈನ್ ಚಲಿಸಲು ಶುರುವಾಗಿದೆ. ಈ ಸಂದರ್ಭದಲ್ಲಿ ಸೆರೆಯಾದ ವಿಡಿಯೋ ಸಿನಿಮಾ ಶೂಟಿಂಗ್ ಶೈಲಿಯಲ್ಲಿದ್ದು, ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ.

ದೆಹಲಿ ಮೂಲದ ಮಾಡೆಲ್ ನಿಖಿಲ್ ಕೊಚಾರ್ ಎಂಬಾತ ಈ ಪ್ರಯತ್ನವನ್ನು ಮಾಡಿದ್ದು, ಈತ ತನ್ನ ಸ್ಟೈಲ್ ಮತ್ತು ಡ್ರೆಸ್ಸಿಂಗ್ ಸೆನ್ಸ್ಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಈತ ಮಾಡಿದ ಒಂದು ಸ್ಟಂಟ್‌ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲು ಸಲಿಸಲು ಪ್ರಾರಂಭಿಸಿದ ಕ್ಷಣಕ್ಕೆ ಬ್ಯಾಗ್ರೌಂಡ್ ಸಾಂಗ್ ಸಾಹಿತ್ಯ ಸಂಪೂರ್ಣವಾಗಿ ಮ್ಯಾಚ್ ಆಗಿದೆ.

ವಿಡಿಯೋದಲ್ಲಿ ಏನಿದೆ?

ತನ್ನ ಮೊಬೈಲ್ ಆನ್ ಮಾಡುವ ನಿಖಿಲ್, ಯೆಲ್ಲೋ ಟ್ರೈನ್ ಮಾರ್ಗದ ಮೆಟ್ರೋ ಮೇಲೆ ಫೋನ್ ಇರಿಸಿದ್ದಾರೆ. ಆತನ ಸ್ನೇಹಿತ ಇದನ್ನು ಇನ್ನೊಂದು ಫೋನ್‌ನಿಂದ ಶೂಟ್ ಮಾಡಿದ್ದಾನೆ. ಈ ವಿಡಿಯೋಗೆ ಡಿಡಿ2 ಸಿನಿಮಾದ ಹಾಡು ಸೆಟ್ ಮಾಡಿದ್ದು, ಆತನ ಕುಣಿಯಲು ಶುರು ಮಾಡುತ್ತಾನೆ. ರೈಲು ಚಲಿಸಲು ಆರಂಭವಾಗುತ್ತಿದ್ದಂತೆ, ಹಾಡು ಮುಂದುವರಿಯುತ್ತದೆ.

ಮೊಬೈಲ್ ವಾಪಸ್ ಹೇಗೆ ಸಿಕ್ತು?

ಇನ್ನು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಉಂಟು ಮಾಡಿದ್ದು, ಜಸ್ಟ್ 20 ಗಂಟೆಯಲ್ಲಿ 65 ಮಿಲಿಯನ್ ಅಂದರೆ 6.5 ಕೋಟಿ ವಿವ್ಯೂಸ್ ಪಡೆದುಕೊಂಡಿದೆ. ಸುಮಾರು 22 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನಿಖಿಲ್ ಈ ಮೂಲಕ ಹೊಸ ಟ್ರೆಂಡ್ ಹೊಂದನ್ನು ಸೃಷ್ಟಿಸಲು ಯಶಸ್ವಿಯಾಗಿದ್ದಾನೆ. ನೋಡುಗರಿಗೆ ವಿಡಿಯೋ ಕೊನೆಯಲ್ಲಿ ಏನಾಗುತ್ತದೆ ಎಂಬ ಕುತೂಹಲವನನ್ನು ಉಳಿಸಿಕೊಂಡಿರುವುದೇ ಇದಕ್ಕೆ ಕಾರಣ ಎನ್ನಬಹುದು.

ಮೆಟ್ರೋಗೆ ಅಂಟಿಸಿದ್ದ ಮೊಬೈಲ್ ಮಾರ್ಗದ ಕ್ಷಣಗಳ ಸೆರೆಹಿಡಿದಿದ್ದು, ಇದು ಒಂದು ಸಿನಿಮ್ಯಾಟಿಕ್ ಅನುಭವವನ್ನು ನೀಡುತ್ತದೆ. ಈ ವಿಡಿಯೋ ಅಪ್‌ ಲೋಡ್ ಮಾಡಲು ಯುವಕ ಫೋನ್ ಹೇಗೆ ವಾಪಸ್ ಪಡೆದುಕೊಂಡ ಎಂಬ ಸಂಗತಿ ಇನ್ನು ನಿಗೂಢವಾಗಿಯೇ ಉಳಿದಿದೆ. ಆದರೆ ಇದಕ್ಕೆ ಯಾವುದೇ ಉತ್ತರ ಆತನ ಪೋಸ್ಟ್ ಅಥವಾ ವಿಡಿಯೋದಲ್ಲಿ ಸಿಕ್ಕಿಲ್ಲ. ಸದ್ಯ ವಿಡಿಯೋಗೆ 4.4 ಮಿಲಿಯನ್ ವಿವ್ಯೂಸ್ ಸಿಕ್ಕಿದ್ದ, 22,800 ಸಾವಿರ ಮಂದಿ ಲೈಕ್ ಮಾಡಿದ್ದಾರೆ. 36,200 ಸಾವಿರ ಮಂದಿ ರೀ ಪೋಸ್ಟ್ ಮಾಡಿದ್ದಾರೆ.

ನೀವು ಏನ್ ಹೇಳ್ತೀರಾ?

ವಿಡಿಯೋ ಪೋಸ್ಟ್‌ಗೆ ಹಲವರು ಪ್ರತಿಕ್ರಿಯೆ ನೀಡಿ ಕಾಮೆಂಟ್ ಮಾಡಿದ್ದು, ನಿಮಗೆ ಫೋನ್ ಹೇಗೆ ವಾಪಸ್ ಸಿಕ್ತು ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ತಮ್ಮದೇ ಊಹೆಗಳನ್ನು ಸೇರಿಸಿದ್ದು, ಮುಂದಿನ ಮೆಟ್ರೋ ನಿಲ್ದಾಣದಲ್ಲಿ ಆತನ ಸ್ನೇಹಿತ ಮೊಬೈಲ್ ವಾಪಸ್ ತೆಗೆದುಕೊಂಡಿರಬಹುದು ಎಂದು ಕಾಮೆಂಟ್ ಮಾಡದ್ದಾರೆ. ಇನ್ನು, ಒಂದು ಸಣ್ಣ ವಿಡಿಯೋ ಮಾಡಲು ಆತ ತೆಗೆದುಕೊಂಡ ರಿಸ್ಕ್ ಬಗ್ಗೆ ಹಲವರು ಟೀಕೆ ಮಾಡಿದರೆ, ಇಂತಹ ಐಡಿಯಾ ಹೇಗೆ ಬಂತು ಅಂತ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಅಂದಹಾಗೇ, ಈ ರೀತಿ ವಿಡಿಯೋ ಮಾಡಲು ಯುವಕ ಮಾಡಿದ್ದು ಸರಿಯಾ? ನಿಮಗೆ ಏನು ಅನಿಸಿತು ಎಂದು ಕಾಮೆಂಟ್‌ ಬಾಕ್ಸ್‌ನಲ್ಲಿ ಹಂಚಿಕೊಳ್ಳಿ.

PREV
Read more Articles on
click me!

Recommended Stories

ಅಡುಗೆ, ಮನೆಗೆಲಸ ಮಾಡುವ ಹೆಂಡತಿಗೆ ತಿಂಗಳ ಸಂಬಳ ಕೊಡುವ ಗಂಡ; ಅಸಲಿ ಕಾರಣ ಕೇಳಿದ್ರೆ ಸಲಾಂ ಅಂತೀರಾ!
ಆಟೋ ಮೀಟರ್ ಜೊತೆಗೆ ಇವರ ಪ್ಯಾಷನ್ ಕೂಡ ಓಡುತ್ತೆ, ಹಗಲಿನಲ್ಲಿ ಚಾಲಕ, ಸಂಜೆಯಾದರೆ ಟೇಬಲ್ ಟೆನ್ನಿಸ್ ಕೋಚ್