ಕ್ರೇನ್ ಬಳಸಿ ಮನೆ ಮೇಲೆ ಸ್ಕಾರ್ಪಿಯೋ ಕಾರು ಪಾರ್ಕ್ ಮಾಡೋ ಮಾಲೀಕ, ಕಾರಣ ಕೇಳಿ ಸ್ಥಳೀಯರು ದಂಗು

Published : Sep 03, 2026, 03:22 PM IST
Owner Uses Crane to Park Scorpio

ಸಾರಾಂಶ

ಮಾಲೀಕ ತನ್ನ ಮಹೀಂದ್ರ ಸ್ಕಾರ್ಪಿಯೋ ಕಾರನ್ನು ಕ್ರೇನ್ ಬಳಸಿ ಮನೆಯ ಮೇಲಿನ ಮಹಡಿಯಲ್ಲಿ ಪಾರ್ಕ್ ಮಾಡಿದ್ದಾನೆ. ಎಲ್ಲರಿಗೂ ಅಚ್ಚರಿಯಾಗಿದೆ. ಏನಿದು ಎಂದು ಕಾರಣ ಕೇಳಿ ಸ್ಥಳೀಯರು ದಂಗಾಗಿದ್ದಾರೆ.

ಪಾಟ್ನಾ (ಸೆ.03) ಕಾರು ಮಾಲೀಕರು ಸಾಮಾನ್ಯವಾಗಿ ತಮ್ಮ ಪಾರ್ಕಿಂಗ್ ಸ್ಥಳದಲ್ಲಿ ಕಾರು ಪಾರ್ಕ್ ಮಾಡುತ್ತಾರೆ. ಇನ್ನು ಸೂಕ್ತ ಪಾರ್ಕಿಂಗ್ ಇಲ್ಲದವರು, ಮನೆ ಮುಂದೆ, ರಸ್ತೆ, ಪಕ್ಕದ ಪಸ್ತೆ, ಮೈದಾನ ಸೇರಿದಂತೆ ಹಲವೆಡೆ ಪಾರ್ಕ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ ತನ್ನ ಕಾರನ್ನು ಮನೆಯ ಮಹಡಿ ಮೇಲೆ ಪಾರ್ಕ್ ಮಾಡಿದ್ದಾನೆ. ಇದಕ್ಕಾಗಿ ದೊಡ್ಡ ಕ್ರೇನ್ ತಂದು ಮಹೀಂದ್ರ ಸ್ಕಾರ್ಪಿಯೋ ಕಾರನ್ನು ಮೇಲಕ್ಕೆತ್ತಿ ಪಾರ್ಕ್ ಮಾಡಿಸಿದ್ದಾನೆ. ಸ್ಕಾರ್ಪಿಯೋ ಕಾರು ಪಾರ್ಕಿಂಗ್ ಮಾಡುವುದು ನೋಡಿದ ಸ್ಥಳೀಯರು ಅಚ್ಚರಿಕೊಂಡಿದ್ದಾರೆ.

ಬಿಹಾರದಲ್ಲಿ ನಡೆದ ವಿಚಿತ್ರ ಪಾರ್ಕಿಂಗ್

ಬಿಹಾರದಲ್ಲಿ ನಡೆದ ಈ ವಿಚಿತ್ರ ಪಾರ್ಕಿಂಗ್ ಇದೀಗ ಇಂಟರ್ನೆಟ್ ಮೂಲಕ ಕೋಲಾಹಲ ಸೃಷ್ಟಿಸಿದೆ. ಮಹೀಂದ್ರ ಸ್ಕಾರ್ಪಿಯೋ ಮಾಲೀಕ ತನ್ನ ಕಾರನ್ನು ಮನೆಯ ಮೇಲ್ಗಡೆ ಪಾರ್ಕಿಂಗ್ ಮಾಡಿದ್ದಾನೆ. ದುಬಾರಿ ವೆಚ್ಚ ನೀಡಿ ಕ್ರೇನ್ ತರಿಸಿ ಕಾರನ್ನು ಎತ್ತಿ ಮನೆಯ ಮೇಲ್ಗಡೆ ಪಾರ್ಕ್ ಮಾಡಿಸಿದ್ದಾನೆ.

ಅತೀಸಾಹಸದಿಂದ ಮನೆ ಮೇಲೆ ಕಾರು ಪಾರ್ಕ್ ಮಾಡಿದ್ದೇಕೆ?

ಮನೆಯ ಮುಂಭಾಗದಲ್ಲಿ ಕಾರು ಪಾರ್ಕಿಂಗ್ ಸ್ಥಳ ಲಭ್ಯವಿದ್ದರೂ ಈತ ಕ್ರೇನ್ ಬಳಸಿ ಕಾರನ್ನು ಮನೆಯ ಮೇಲೆ ಪಾರ್ಕ್ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆ ಹಲವರಲ್ಲಿ ಕಾಡಿದೆ. ಇದಕ್ಕೆ ಉತ್ತರವೂ ಸಿಕ್ಕಿದೆ. ಈ ಕಾರಿನ ಮಾಲೀಕನಿಗೆ ವಿದೇಶದಲ್ಲಿ ಉದ್ಯೋಗ ಸಿಕ್ಕಿದೆ. ಹೀಗಾಗಿ ಈತ ಯುಎಐಗೆ ತೆರಳಲು ಸಜ್ಜಾಗಿದ್ದ. ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾನೆ. ಆದರೆ ಯುಎಐಗೆ ತೆರಳುವ ದಿನಾಂಕ ಹತ್ತಿರಬರುತ್ತಿದ್ದಂತೆ ಈತನಿಗೆ ಚಿಂತೆ ಶುರುವಾಗಿದೆ. ತನ್ನ ಕಾರನ್ನು ಸುರಕ್ಷಿತವಾಗಿ ಹೇಗೆ ಇಡಲಿ ಎಂಬ ಚಿಂತೆ ಜೋರಾಗಿದೆ.

ಇಡೀ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚು. ರಸ್ತೆ ಬದಿ ಕಾರು ಸೇರಿದಂತೆ ವಾಹನ ಪಾರ್ಕಿಂಗ್ ಮಾಡಿದರೆ ಬೆಳಗ್ಗೆ ಆಗುವಷ್ಟರಲ್ಲಿ ಚಕ್ರ ಇರಲ್ಲ, ಹೆಡ್‌ಲೈಟ್ ಸೇರಿದಂತೆ ಹಲವು ಬಿಡಿಭಾಗ ಇರಲಿಲ್ಲ. ಎರಡು ದಿನ ಪಾರ್ಕ್ ಮಾಡಿದರೆ ಕಾರೇ ಇರಲ್ಲ. ಹೀಗಿರುವಾಗ ಕೆಲ ತಿಂಗಳ ಕಾಲ ಯುಎಐಗೆ ಕೆಲಸಕ್ಕಾಗಿ ತೆರಳಿದರೆ ಮರಳಲು ಸಾಧ್ಯವಿಲ್ಲ. ಅಷ್ಟು ದಿನ ಕಾರು ಮನೆ ಮುಂದೆ ಪಾರ್ಕ್ ಮಾಡಿದರೆ ಕಳ್ಳತನವಾಗಬಹುದು ಎಂದು ಕ್ರೇನ್ ಬಳಸಿ ಮನೆಯ ಮೇಲ್ಬಾಗದಲ್ಲಿ ಕಾರು ಪಾರ್ಕಿಂಗ್ ಮಾಡಿದ್ದಾನೆ.

ಭದ್ರತೆಯ ಪಾರ್ಕಿಂಗ್ ಸ್ಥಳ ಇರಲಿಲ್ಲ. ಹಳ್ಳಿಯಾಗಿದ್ದ ಕಾರಣ ಪೇಯ್ಡ್ ಪಾರ್ಕಿಂಗ್ ಕೂಡ ಇರಲಿಲ್ಲ. ಹೀಗಾಗಿ ಕಳ್ಳರಿಂದ ತನ್ನ ಕಾರು ಕಳುವಾಗದಂತೆ ನೋಡಿಕೊಳ್ಳಲು ಕ್ರೇನ್ ಬಳಸಿ ಮನೆಯ ಮೇಲೆ ಪಾರ್ಕ್ ಮಾಡಿಸಿದ್ದಾನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಹೇಳುತ್ತಿವೆ. ಈ ವಿಡಿಯೋದ ಸತ್ಯಾಸತ್ಯತೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.

PREV
Read more Articles on
click me!

Recommended Stories

ಎಲ್ಲವೂ ಮುಗಿಯಿತು, ನಾನೇಕೆ ಬದುಕಿರಲಿ? 4 ಮಕ್ಕಳನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ತಂದೆಯ ಚಿಂತಾಜನಕ ಸ್ಥಿತಿ
18 ತಿಂಗಳಲ್ಲಿ ₹7.2 ಲಕ್ಷ 'ಫ್ರೀಡಂ ಫಂಡ್' ಸಂಗ್ರಹಿಸಿ, ಕಾರ್ಪೊರೇಟ್ ಜಗತ್ತಿಗೆ ವಿದಾಯ ಹೇಳಿದ ಯುವತಿ!