'ನಾನೂ ಒಬ್ಬ ಅಪ್ಪ, ಅಣ್ಣ... ಹೆದರಬೇಡಿ, ನೀವು ಸೇಫ್' ಆಟೋ ಡ್ರೈವರ್ ಹಿಂದೆ ಬರೆದಿದ್ದ ಸಂದೇಶ ವೈರಲ್

Published : Apr 16, 2026, 01:13 PM IST
Mumbai Auto Driver s Safety Note for Women Goes Viral Winning Hearts Online

ಸಾರಾಂಶ

ಮುಂಬೈ ಆಟೋವೊಂದರಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಚಾಲಕನ ಸೀಟಿನ ಹಿಂಭಾಗದಲ್ಲಿದ್ದ ಒಂದು ಸಂದೇಶ ಕಣ್ಣಿಗೆ ಬಿದ್ದಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಭರವಸೆ ನೀಡುವ ಆ ಸಂದೇಶವನ್ನು ಯುವತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಪಬ್ಲಿಕ್ ನಲ್ಲಿ ಪ್ರಯಾಣ ಮಾಡೋಕೆ, ಅದರಲ್ಲೂ ರಾತ್ರಿ ಹೊತ್ತು ಒಂಟಿಯಾಗಿ ಪ್ರಯಾಣಿಸುವುದು ಅಂದ್ರೆ ಮಹಿಳೆಯರಿಗೆ ಈಗಲೂ ಒಂದು ರೀತಿಯ ಆತಂಕ ಭಯ ಇದ್ದೇ ಇರುತ್ತದೆ. ಅನಗತ್ಯ ಕಿರುಕುಳದ ಭಯದಿಂದ ಪ್ರಯಾಣದುದ್ದಕ್ಕೂ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಇದೆ. ಆದರೆ, ಮುಂಬೈನ ಆಟೋವೊಂದರಲ್ಲಿ ನಡೆದ ಘಟನೆ ಈ ಎಲ್ಲಾ ಆತಂಕಗಳನ್ನು ದೂರ ಮಾಡುವಂತಿದೆ. ಉನ್ನತಿ ದೇವಲಿಯಾ ಎಂಬ ಯುವತಿ ತಾನು ಪ್ರಯಾಣಿಸುತ್ತಿದ್ದ ಆಟೋದಲ್ಲಿ ಕಂಡ ಒಂದು ಮನಮುಟ್ಟುವ ಸಂದೇಶವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ಈಗ ಸಖತ್ ವೈರಲ್ ಆಗಿದೆ. ಸಣ್ಣ ಕಾಳಜಿಯೊಂದು ಸಮಾಜದ ಮನಸ್ಥಿತಿಯನ್ನು ಹೇಗೆ ಬದಲಿಸಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ.

'ನಾನೂ ಒಬ್ಬ ಅಪ್ಪ, ಅಣ್ಣ, ನೀವು ಸೇಫ್

ಆಟೋ ಡ್ರೈವರ್ ತಮ್ಮ ಸೀಟಿನ ಹಿಂಭಾಗದಲ್ಲಿ ಒಂದು ನೋಟಿಸ್ ಅಂಟಿಸಿದ್ದರು. ಅದರಲ್ಲಿ, 'ನಾನೂ ಒಬ್ಬ ತಂದೆ ಮತ್ತು ಸಹೋದರ. ನಿಮ್ಮ ಸುರಕ್ಷತೆ ನನಗೆ ಮುಖ್ಯ. ಯಾವುದೇ ಭಯವಿಲ್ಲದೆ ಆರಾಮವಾಗಿ ಕುಳಿತುಕೊಳ್ಳಿ' ಎಂದು ಬರೆಯಲಾಗಿತ್ತು. ರಾತ್ರಿ ವೇಳೆ ಪ್ರಯಾಣಿಸುವ ಮಹಿಳೆಯರಿಗೆ ಧೈರ್ಯ ತುಂಬುವ ಈ ಸಾಲುಗಳನ್ನು ನೋಡಿ ಉನ್ನತಿ ದೇವಲಿಯಾ ಅವರಿಗೆ ಅಚ್ಚರಿಯಾಗಿದೆ. ಈ ಬಗ್ಗೆ ಬರೆದುಕೊಂಡ ಅವರು, 'ಎಲ್ಲಾ ಪುರುಷರೂ ಅಪಾಯಕಾರಿಗಳಲ್ಲ, ಕೆಲವರು ಸುರಕ್ಷಿತ ಜಾಗವನ್ನು ಸೃಷ್ಟಿಸುತ್ತಾರೆ ಎಂಬುದನ್ನು ಅರಿತುಕೊಂಡ ಕ್ಷಣವದು' ಎಂದಿದ್ದಾರೆ. ಇಂತಹ ಸಣ್ಣ ಕಾಳಜಿಯೂ ಇಂದಿನ ಕಾಲದಲ್ಲಿ ದೊಡ್ಡ ಐಷಾರಾಮಿ ಎನಿಸುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

 

 

ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಈ ವಿಡಿಯೋವನ್ನು ಈಗಾಗಲೇ 27 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಆಟೋ ಚಾಲಕರ ಒಳ್ಳೆಯ ನಡೆ ಶ್ಲಾಘಿಸಿ ಅನೇಕರು ಕಾಮೆಂಟ್ ಮಾಡಿದ್ದಾರೆ. 'ಇದನ್ನು ನೋಡಿ ನನಗೆ ನಿಜವಾಗಿಯೂ ಖುಷಿಯಾಯಿತು. ಎಲ್ಲರೂ ಇವರ ಹಾಗೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು' ಎಂದು ಒಬ್ಬರು ಬರೆದಿದ್ದಾರೆ. 'ನನಗೆ ಈ ಅಂಕಲ್ ಆಟೋದಲ್ಲಿ ಪರ್ಮನೆಂಟ್ ಪ್ಯಾಸೆಂಜರ್ ಆಗಬೇಕು. ಮೆಂಬರ್‌ಶಿಪ್ ಕೊಡಿ. ದೊಡ್ಡ ಸಲಾಮ್' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ತುಂಬಾ ಅರ್ಥಪೂರ್ಣವಾದ ಮಾತುಗಳು. ಎಲ್ಲಾ ಪುರುಷರೂ ಇವರ ಹಾಗೆ ಉದಾರ ಮನಸ್ಸಿನವರಾಗಿದ್ದರೆ ಚೆನ್ನಾಗಿತ್ತು. ಇವರಿಗೆ ಒಂದು ದೊಡ್ಡ ಸಲಾಂ ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

PREV
Read more Articles on
click me!

Recommended Stories

'ಹಿರಿಯ ನಟ ನನ್ನ ಗಂಡ ಎಂದು ಹೇಳಿರಲಿಲ್ಲ'.., ಭಾರೀ ವಿವಾದ ಹುಟ್ಟುಹಾಕಿದ ಮೃಣಾಲ್ ಠಾಕೂರ್; ಅಷ್ಟಕ್ಕೂ ಆಗಿದ್ದೇನು?
Thermometer: 20 ವರ್ಷಗಳ ಹಿಂದೆ ನುಂಗಿದ್ದ ಥರ್ಮಾಮೀಟರ್! ಹೊಟ್ಟೆನೋವು ಬಂದಾಗ ಬಯಲಾಯ್ತು ಸತ್ಯ