Police Misconduct: ಆಸ್ಪತ್ರೆಯಲ್ಲೇ ಕುಡಿದು, ರೋಗಿಯ ಬೆಡ್ ಮೇಲೆ ಮಲಗಿ, ಡಸ್ಟ್‌ಬಿನ್‌ನಲ್ಲಿ ಉಚ್ಚೆ ಮಾಡಿದ ಪೊಲೀಸರು! ವಿಡಿಯೋ ವೈರಲ್

Published : Apr 15, 2026, 01:22 PM IST
Drunk MP Cops Suspended After Viral Video Shows Them Sleeping on Patient Bed

ಸಾರಾಂಶ

ಮಧ್ಯಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಆಸ್ಪತ್ರೆಯಲ್ಲೇ ಕುಡಿದು ತೂರಾಡಿದ್ದಾರೆ. ರೋಗಿಯ ಬೆಡ್ ಮೇಲೆ ಮಲಗಿ, ಕಸದ ಬುಟ್ಟಿಯಲ್ಲೇ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಧ್ಯಪ್ರದೇಶದ ಸಿಧಿ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸರು ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ. ಏಪ್ರಿಲ್ 13 ರಂದು ವೈರಲ್ ಆದ ಒಂದು ಆಘಾತಕಾರಿ ವಿಡಿಯೋದಲ್ಲಿ, ಈ ಪೊಲೀಸರು ಕುಡಿದ ಮತ್ತಿನಲ್ಲಿ ರೋಗಿಯ ಬೆಡ್ ಮೇಲೆ ಮಲಗಿದ್ದರು. ಅಷ್ಟೇ ಅಲ್ಲ, ಒಬ್ಬಾತ ಆಸ್ಪತ್ರೆಯ ಕಸದ ಬುಟ್ಟಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಪೊಲೀಸರು ಡಸ್ಟ್‌ಬಿನ್ ಒಳಗೆ ಮೂತ್ರ ವಿಸರ್ಜನೆ ದೃಶ್ಯ ವೈರಲ್

ಈ ಪೊಲೀಸರನ್ನು ಮಾರ್ಚ್ 28 ರಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬನಿಗೆ ಕಾವಲು ಕಾಯಲು ನೇಮಿಸಲಾಗಿತ್ತು. ಈ ತಂಡದಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ ನರ್ಮದಾ ಪ್ರಸಾದ್ ಪ್ರಜಾಪತಿ, ಕಾನ್ಸ್‌ಟೇಬಲ್‌ಗಳಾದ ಉದಯರಾಜ್ ಸಿಂಗ್, ಜಿತೇಂದ್ರ ಸಿಂಗ್ ಮತ್ತು ಮನೀಶ್ ತಿವಾರಿ ಇದ್ದರು. ವಿಡಿಯೋದಲ್ಲಿ ಅವರ ಯೂನಿಫಾರ್ಮ್‌ಗಳನ್ನು ಪಕ್ಕದಲ್ಲೇ ನೇತುಹಾಕಿದ್ದ ದೃಶ್ಯ ಕೂಡ ಸೆರೆಯಾಗಿದೆ.

 

 

ಅಶಿಸ್ತು ಕರ್ತವ್ಯಲೋಪ: ನಾಲ್ವರು ಅಮಾನತ್ತು

ಈ ಘಟನೆ ಬಗ್ಗೆ ಆಂತರಿಕ ತನಿಖೆ ನಡೆಸಿದಾಗ, ಪೊಲೀಸರು ಕುಡಿದ ಮತ್ತಿನಲ್ಲಿ ಈ ರೀತಿ ಅಶಿಸ್ತಿನಿಂದ ವರ್ತಿಸಿದ್ದು ದೃಢಪಟ್ಟಿದೆ. ಮೇಲಾಧಿಕಾರಿಯ ಮೇಲ್ವಿಚಾರಣೆಯ ಕೊರತೆಯೂ ಸ್ಪಷ್ಟವಾಗಿತ್ತು. ಹೀಗಾಗಿ, ಸಿಧಿ ಪೊಲೀಸ್ ಇಲಾಖೆಯು ತೀವ್ರ ಅಶಿಸ್ತು, ಕರ್ತವ್ಯ ಲೋಪ ಮತ್ತು ಇಲಾಖೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರನ್ನೂ ತಕ್ಷಣವೇ ಅಮಾನತು ಮಾಡಿದೆ.

ಅಮಾನತುಗೊಂಡಿರುವ ಈ ನಾಲ್ವರು ಸಿಬ್ಬಂದಿಯನ್ನು ಸದ್ಯ ಸಿಧಿಯ ರಿಸರ್ವ್ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಇಲಾಖಾ ನಿಯಮಗಳ ಪ್ರಕಾರ ಅವರ ವಿರುದ್ಧದ ತನಿಖೆ ಮುಂದುವರಿಯಲಿದೆ.

PREV
Read more Articles on
click me!

Recommended Stories

ನಿಮ್ಮ ಅಪ್ಪ ಅಮ್ಮಂದ?.. ಬೀಪ್ ಕಾಮೆಂಟ್ ಮಾಡಿದ ನೆಟ್ಟಿಗನನ್ನು 'ಈ ಮಟ್ಟಿಗೆ' ತರಾಟೆಗೆ ತೆಗೆದುಕೊಂಡ ವರ್ಷ ಕಾವೇರಿ!
Baby Monkey: ಅಮ್ಮನ ಪ್ರೀತಿ ಸಿಗಲಿಲ್ಲ, ಟೆಡ್ಡಿ ಬೇರ್ ಅಪ್ಪಿಕೊಂಡ ಮರಿ ಮಂಗ! ಮುದ್ದಾದ ವಿಡಿಯೋ ನೋಡೋಕೆ ಎರಡು ಕಣ್ಣೂ ಸಾಲದು