
ಕಳ್ಳರು ಬುದ್ಧಿವಂತರು ಅನ್ನೋ ಮಾತಿದೆ. ಸಾಮಾನ್ಯ ಜನರಿಗಿಂತ ಹೆಚ್ಚು ಟೆಕ್ನಿಕ್ ತಿಳಿದುಕೊಂಡಿರೋ ಕಳ್ಳರೂ ಭಿನ್ನವಾಗಿ ಕಳ್ಳತನ ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕಳ್ಳತನದ ಅನೇಕ ವಿಡಿಯೋಗಳು ವೈರಲ್ ಆಗ್ತಿರುತ್ವೆ. ಕಳ್ಳರು ತಮ್ಮ ಬಟ್ಟೆಯಲ್ಲಿ ವಸ್ತುಗಳನ್ನು ಬಚ್ಚಿಟ್ಟು ಕದ್ದೊಯ್ಯೋದನ್ನು ನಾವು ನೋಡಿದ್ದೇವೆ. ಆದ್ರೆ ಈ ವ್ಯಕ್ತಿ, ಡ್ರೆಸ್ – ಪ್ಯಾಂಟ್ ಎಲ್ಲ ಬಿಚ್ಚಿಟ್ಟು ಬರೀ ಅಂಡರ್ವೇರ್ (Underwear) ನಲ್ಲಿ ಬಂದಿದ್ದಾರೆ. ನಂತ್ರ ಕಳ್ಳ ಮಾಡಿದ ಕೆಲ್ಸ ದಿಗ್ಬ್ರಮೆಗೊಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಕಳ್ಳತನದ ವಿಡಿಯೋ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ.
ಮಿರ್ಜಾಪುರದ ದಿನಸಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಪದ್ರಿ ಪೊಲೀಸ್ ಠಾಣೆ ಪ್ರದೇಶದ, ರಾಜೇಂದ್ರ ಅಗ್ರಹರಿಯ ದಿನಸಿ ಅಂಗಡಿಯಲ್ಲಿ ಘಟನೆ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ಅಂಗಡಿ ಮುಚ್ಚಲಾಗಿದೆ. ರಾತ್ರಿ ಸುಮಾರು 11:42 ಗಂಟೆ ಸಮಯದಲ್ಲಿ ಒಳ ಉಡುಪು ಧರಿಸಿ ಕಳ್ಳ ಅಂಗಡಿಗೆ ಪ್ರವೇಶ ಮಾಡಿದ್ದಾನೆ. ರಾತ್ರಿ ಅಂಗಡಿ ಒಳಗೆ ಬಂದ ಕಳ್ಳ ಮಾಸ್ಕ್ ಧರಿಸಿದ್ದ. ಹಾಗಾಗಿ ಕಳ್ಳ ಯಾರು ಅನ್ನೋದು ಪತ್ತೆಯಾಗಿಲ್ಲ. ಬಟ್ಟೆ ಹಾಗೂ ಪ್ಯಾಂಟ್ ಧರಿಸದೆ ಬಂದ ಕಳ್ಳ, ಕದ್ದ ವಸ್ತುಗಳನ್ನು ಹೇಗೆ ತೆಗೆದುಕೊಂಡು ಹೋಗ್ತಾನೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಆರಾಮಾಗಿ ಅಂಗಡಿ ಒಳಗೆ ಬಂದ ಕಳ್ಳ, ವಸ್ತುಗಳನ್ನು ತೆಗೆದಿಟ್ಟು, ಹಣವಿಟ್ಟ ಜಾಗ ಪತ್ತೆ ಮಾಡಿದ್ದಾನೆ. ನಂತ್ರ ತನ್ನ ಅಂಡರ್ವೇರ್ ಒಳಗೆ ಕೈ ಹಾಕಿದ್ದಾನೆ. ಅಂಡರ್ವೇರ್ ಒಳಗೆ ಬಚ್ಚಿಟ್ಟುಕೊಂಡು ಬಂದಿದ್ದ ಕವರ್ ತೆಗೆದಿದ್ದಾನೆ. ಎಲ್ಲ ನೋಟು, ನಾಣ್ಯಗಳನ್ನು ಒಟ್ಟಾಕಿ ಅದನ್ನು ಕವರ್ ಗೆ ತುಂಬಿದ್ದಾನೆ.
ಬೆಂಗಳೂರು: ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಯುವಕನ ಕೊ*ಲೆ!
ಬೆಳಿಗ್ಗೆ ಅಂಗಡಿ ಬಾಗಿಲು ತೆಗೆಯಲು ಬರದಿದ್ದಾಗ ಅನುಮಾನ ಬಂದಿದೆ. ಅಂಗಡಿ ಮಾಲೀಕ ತನ್ನ ಮಗನನ್ನು ಕರೆಸಿದ್ದಾನೆ. ಎಲ್ಲರೂ ಸೇರಿ ಅಂಗಡಿ ಬಾಗಿಲು ಮುರಿದಿದ್ದಾರೆ. ಆಗ ಕಳ್ಳತನವಾಗಿರುವುದು ಗೊತ್ತಾಗಿದೆ. ನಗದು ಕೌಂಟರ್ನಿಂದ ಸುಮಾರು ಎರಡು ಸಾವಿರ ರೂಪಾಯಿಗಳು ಕಾಣೆಯಾಗಿರುವುದು ಪತ್ತೆಯಾಗಿದೆ.
ಸಿಸಿಟಿವಿಯಲ್ಲಿ ಸರ್ಚ್ ಮಾಡಿದಾಗ ಕಳ್ಳನ ಕೈಚಳಕ ಪತ್ತೆಯಾಗಿದೆ. 2 ನಿಮಿಷ 48 ಸೆಕೆಂಡಿನಲ್ಲಿ ಕಳ್ಳತನ ನಡೆದಿದೆ. ಅಂಗಡಿ ಮಾಲೀಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ವಿಡಿಯೋ, ಸಿಸಿಟಿವಿ ಆಧಾರದ ಮೇಲೆ ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ. RahulPathak1989 ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಳ್ಳ ಒಳಗೆ ಬರೋದ್ರಿಂದ ಹಿಡಿದು ಹೊರಗೆ ಹೋಗುವವರೆಗೆ ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಅಂಡರ್ವೇರ್ ಒಳಗಿನಿಂದ ಕವರ್ ತೆಗೆದ ವಿಡಿಯೋ ನೋಡಿ ಜನ ದಂಗಾಗಿದ್ದಾರೆ.
ಮತದಾರರ ಹೆಸರು ಪರಿಷ್ಕರಣೆ ನೆಪದಲ್ಲಿ ಬ್ಯಾಂಕ್ ಲೂಟಿ! ಏನಿದು ಹೊಸ ವಂಚನೆ? ನಿಮ್ಮ ರಕ್ಷಣೆ ಹೇಗೆ? ಇಲ್ಲಿದೆ ಉತ್ತರ
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ತಮಾಷೆ ಕಮೆಂಟ್ ಶುರು ಮಾಡಿದ್ದಾರೆ. ಕಳ್ಳ ತುಂಬಾ ಬಡವ ಅನ್ನೋದು ಅವನ ಬಟ್ಟೆಯಿಂದ್ಲೇ ತಿಳಿಯುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ತಾವೆಂದೂ ಇಂಥ ಕಳ್ಳತನ ನೋಡಿಲ್ಲ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ನಿರುದ್ಯೋಗ ಹೆಚ್ಚಾಗಿದೆ. ಹಾಗಾಗಿಯೇ ಇಂಥ ಕಳ್ಳತನ ಹೆಚ್ಚಾಗ್ತಿದೆ ಅಂತ ಮತ್ತೆ ಕೆಲವರು ಬರೆದಿದ್ದಾರೆ. ಮಿರ್ಜಾಪುರ ಕಳ್ಳ ಬೇರೆ ಮಟ್ಟದಲ್ಲಿದ್ದಾನೆ ಅಂತ ಮತ್ತೊಂದಿಷ್ಟು ಮಂದಿ ಬರೆದಿದ್ದಾರೆ.