Bakrid Special: ಹೆಸರು 'ಸುಲ್ತಾನ್', ತೂಕ 200 ಕೆಜಿ, ಬೆಲೆ 8 ಲಕ್ಷ: ಬಕ್ರೀದ್‌ಗೆ ಬಂದ ಈ ಕಿಂಗ್ ಮೇಕೆ ಕಥೆ ಕೇಳಿ

Published : May 28, 2026, 05:43 PM IST
Sultan Goat

ಸಾರಾಂಶ

ಬಕ್ರೀದ್ ಹಬ್ಬ ಹತ್ರ ಬಂತು ಅಂದ್ರೆ ಸಾಕು, ಮಾರುಕಟ್ಟೆಗಳಲ್ಲಿ ಸಂಭ್ರಮ ಜೋರಾಗಿರುತ್ತೆ. ಗೋಹತ್ಯೆ ನಿಷೇಧ ಮತ್ತು ಗೋರಕ್ಷಕರ ಕಣ್ಗಾವಲಿನಿಂದಾಗಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. 

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಇಂದೋರ್ ಮಾರುಕಟ್ಟೆಯಲ್ಲಿ 'ಸುಲ್ತಾನ್' ಮತ್ತು 'ಗೋಲು ಲಾಲಾ' ಹೆಸರಿನ ಮೇಕೆಗಳು ಸಖತ್ ಸದ್ದು ಮಾಡುತ್ತಿವೆ. ಡ್ರೈ ಫ್ರೂಟ್ಸ್, ಹಾಲು ಕುಡಿದು, ಕೂಲರ್ ಗಾಳಿಗೆ ಮೈಯೊಡ್ಡಿ ರಾಜ ವೈಭೋಗದ ಜೀವನ ನಡೆಸುತ್ತಿವೆ. 200 ಕೆಜಿ ತೂಕದ ಪಂಜಾಬಿ ಬೀಟಲ್ ತಳಿಯ ಸುಲ್ತಾನ್‌ಗೆ ಬರೋಬ್ಬರಿ 8 ಲಕ್ಷ ರೂಪಾಯಿ ಬೆಲೆ ಬಂದಿದೆ.

ಬಕ್ರೀದ್ ಹಬ್ಬ ಹತ್ರ ಬಂತು ಅಂದ್ರೆ ಸಾಕು, ಮಾರುಕಟ್ಟೆಗಳಲ್ಲಿ ಸಂಭ್ರಮ ಜೋರಾಗಿರುತ್ತೆ. ಗೋಹತ್ಯೆ ನಿಷೇಧ ಮತ್ತು ಗೋರಕ್ಷಕರ ಕಣ್ಗಾವಲಿನಿಂದಾಗಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಇಂಥಾ ಟೈಮ್‌ನಲ್ಲೇ ಇಂದೋರ್‌ನಿಂದ ಒಂದು ಮೇಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದರ ಹೆಸರು 'ಸುಲ್ತಾನ್'. ತೂಕ ಬರೋಬ್ಬರಿ 200 ಕೆಜಿ! ಇದರ ಮಾಲೀಕ ಮೊಯಿನ್ ಖಾನ್. ಇದು ಪಂಜಾಬಿ ಬೀಟಲ್ ತಳಿಯ ಮೇಕೆಯಾಗಿದೆ.

'ಸುಲ್ತಾನ್'

'ಸುಲ್ತಾನ್' ಅಂದ್ರೆ ಸುಮ್ನೆ ಮೇಕೆ ಅನ್ಕೋಬೇಡಿ. ಕುಡಿಯೋಕೆ ಹಾಲು, ತಿನ್ನೋಕೆ ಡ್ರೈ ಫ್ರೂಟ್ಸ್, ಇರೋ ಜಾಗದಲ್ಲಿ ಸ್ವಂತ ಕೂಲರ್! ಹೀಗೆ ಫುಲ್ ಲಕ್ಷುರಿ ಲೈಫ್ ಲೀಡ್ ಮಾಡ್ತಿದೆ ಈ ಸುಲ್ತಾನ್. ಈ 'ಲಕ್ಷುರಿ' ಆರೈಕೆಯೇ ಸುಲ್ತಾನ್‌ನನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದೆ. 'ಗೋಲು ಲಾಲಾ' ಅನ್ನೋ ಇನ್ನೊಂದು ಫೇಮಸ್ ಮೇಕೆ ಕೂಡ ತನ್ನ ಐಷಾರಾಮಿ ಜೀವನಶೈಲಿಯಿಂದ ಎಲ್ಲರ ಗಮನ ಸೆಳೆದಿದೆ. ಈ ವರ್ಷ ಬಕ್ರೀದ್‌ಗೆ ಈ ಎರಡೂ ಮೇಕೆಗಳನ್ನು ಬಲಿ ನೀಡುವುದಾಗಿ ಮಾಲೀಕರು ಹೇಳಿದ್ದಾರೆ.

ಗುಲ್ಜಾರ್ ಕಾಲೋನಿಯ ಮೊಯಿನ್ ಖಾನ್ ಅವರು ಸುಲ್ತಾನ್‌ನ ಮಾಲೀಕ. ಇದು 200 ಕೆಜಿಗಿಂತ ಹೆಚ್ಚು ತೂಕ ಮತ್ತು ಸುಮಾರು 48 ಇಂಚು ಎತ್ತರವಿದೆ. ಒಂದು ವರ್ಷದ ಹಿಂದೆ ಪಂಜಾಬ್‌ನಿಂದ ಇದನ್ನು ತರಲಾಗಿದೆ. ಇದಕ್ಕಾಗಿ ಎರಡು ದಿನಗಳಲ್ಲಿ 1,000 ಕಿಲೋಮೀಟರ್ ಪ್ರಯಾಣ ಮಾಡಿದ್ದರಂತೆ. ಮನೆಯವರ ಥರಾನೇ ಸುಲ್ತಾನ್‌ನನ್ನು ನೋಡಿಕೊಂಡಿದ್ದಾರೆ ಅಂತ ಮೊಯಿನ್ ಖಾನ್ ಹೇಳ್ತಾರೆ.

ಸುಲ್ತಾನ್‌ನ ದಿನದ ಮೆನು ಕೇಳಿದ್ರೆ ಶಾಕ್ ಆಗ್ತೀರಾ. ದಿನಕ್ಕೆ 2 ಲೀಟರ್ ಹಾಲು, 250 ಗ್ರಾಂ ಡ್ರೈ ಫ್ರೂಟ್ಸ್, ಸುಮಾರು 10 ಕೆಜಿ ಹಸಿರು ಸೊಪ್ಪು ತಿನ್ನುತ್ತೆ. ಬಿಸಿಲಿನಿಂದ ರಕ್ಷಿಸಲು ಅದಕ್ಕೆಂದೇ ಒಂದು ಸ್ಪೆಷಲ್ ಕೂಲರ್ ಕೂಡ ಇದೆ. ಕುಡಿಯೋಕೆ ತಣ್ಣೀರು, ಮಜ್ಜಿಗೆ ಕೊಡ್ತಾರಂತೆ. ಸುಲ್ತಾನ್‌ಗೆ ಅಂತಾನೇ ಒಂದು ರೂಮ್ ಕೂಡ ಇದೆ. ಇದರ ಖ್ಯಾತಿ ಹೆಚ್ಚಾದಂತೆ, ಸುಲ್ತಾನ್‌ಗೆ 8 ಲಕ್ಷ ರೂಪಾಯಿ ಬೆಲೆ ಕಟ್ಟಲಾಗಿದೆ. ದೂರದ ಊರುಗಳಿಂದಲೂ ಜನ ಇದನ್ನು ನೋಡೋಕೆ ಬರ್ತಿದ್ದಾರಂತೆ.
 

 

'ಗೋಲು ಲಾಲಾ'

ಇನ್ನು 'ಗೋಲು ಲಾಲಾ' ಕಥೆನೂ ಇಂಟ್ರೆಸ್ಟಿಂಗ್ ಆಗಿದೆ. ಇಂದೋರ್‌ನ ಬಕ್ರೀದ್ ಮಾರುಕಟ್ಟೆಯಲ್ಲಿ ಈ ಮೇಕೆ ಕೂಡ ಸಖತ್ ಗಮನ ಸೆಳೆದಿದೆ. ಇದರ ಮಾಲೀಕರ ಹೆಸರು ಫಾತಿಮಾ. ಒಂದು ವರ್ಷದ ಹಿಂದೆ ಇದನ್ನು ತಂದು, ಮನೆಯ ಸದಸ್ಯನ ಥರಾನೇ ಸಾಕಿದ್ದಾರೆ. ಗೋಲು ಲಾಲಾಗೆ ಮಲಗೋಕೆ ಸ್ವಂತ ಬೆಡ್ ಇದೆಯಂತೆ. ಬೆಳಗ್ಗೆ ಎದ್ದ ತಕ್ಷಣ ಪಾರ್ಲೆ-ಜಿ ಬಿಸ್ಕೆಟ್ ತಿನ್ನುತ್ತೆ. ಆಮೇಲೆ ಮನೆಯವರು ಏನು ತಿಂತಾರೋ, ಅದರಲ್ಲಿ ಇದಕ್ಕೂ ಒಂದು ಪಾಲು ಸಿಗುತ್ತೆ. ಬಾದಾಮಿ, ಗೋಡಂಬಿ, ಹಾಲು ಕೂಡ ಇದರ ಡಯಟ್‌ನಲ್ಲಿದೆ. ಬಿಸಿಲಿನ ಬೇಗೆ ತಟ್ಟದಿರಲಿ ಅಂತ ಗೋಲು ಲಾಲಾಗೂ ಒಂದು ಕೂಲರ್ ವ್ಯವಸ್ಥೆ ಮಾಡಿದ್ದಾರೆ.

PREV
Read more Articles on
click me!

Recommended Stories

ಡ್ರಿಂಕ್ಸ್, ಸಿಗರೇಟ್‌ಗಿಂತಲೂ ನಿಮ್ಮ ಮಗು ಕೈಲಿರೋ ಮೊಬೈಲ್ ಡೇಂಜರ್! ಪೋಷಕರೇ, ಈ 'ಡಿಜಿಟಲ್ ಡ್ರಗ್' ಬಗ್ಗೆ ಎಚ್ಚರವಿರಲಿ!
ವೈರಲ್ AI ಫೋಟೋಗೆ ಸಿಟ್ಟಾದ ನಟಿ; ಇಂಥ 'ಟಾಕ್ಸಿಕ್' ಯೋಚನೆಯನ್ನೇ ನಿಲ್ಲಿಸಿ ಎಂದ ಉರ್ವಶಿ ರೌಟೇಲಾ