
ಸಾಮಾನ್ಯವಾಗಿ ಲವ್ನಲ್ಲಿ ಬೀಳೋದು ಎಂದೇ ಹೇಳಲಾಗುತ್ತದೆ. ಅಷ್ಟಕ್ಕೂ ಕಾಮಾತುರಂ ನ ಲಜ್ಜಾ, ನ ಭಯಂ ಎನ್ನುವ ಹಾಗೆ ಕಾಮದಲ್ಲಿ ಮುಳುಗಿರುವವರಿಗೆ ನಾಚಿಕೆಯೂ ಇರಲ್ಲ, ಯಾರಾದ್ರೂ ನೋಡಿಯಾರು ಎನ್ನುವ ಭಯವೂ ಇರಲ್ಲ. ಇದೇ ಕಾರಣಕ್ಕೆ ಎಲ್ಲೆಂದರಲ್ಲಿ ಜೋಡಿ ಶುರುವಿಟ್ಟುಕೊಳ್ಳುತ್ತೆ. ಪಾರ್ಕ್ನ ಸಂದಿಗುಂದಿಗಳಲ್ಲಿ ಮಾತ್ರವಲ್ಲದೇ ಓಪನ್ ಜಾಗದಲ್ಲಿಯೂ ಇವರ ಸರಸ ನಡೆದರೆ, ಇನ್ನು ನಡುರಸ್ತೆಯಲ್ಲಿ, ಶಾಲಾ- ಕಾಲೇಜುಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿಯೂ ನಡೆದೇ ಇರುತ್ತದೆ.
ಆದರೆ ನಿಜವಾಗಿಯೂ ಲವ್ನಲ್ಲಿ ಬೀಳೋದು ಎಂದ್ರೆ ಏನು ಎನ್ನುವವರಿಗೆ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಮದದಲ್ಲಿ ತೇಲಾಡುತ್ತಿರುವ ಈ ಜೋಡಿ ಅಕ್ಷರಶಃ ಆಳವಾಗಿ ಬಿದ್ದೇ ಬಿಟ್ಟಿದೆ. ಕಂಬಿಯ ಮೇಲೆ ಹುಡುಗಿಯನ್ನು ಕುಳ್ಳರಿಸಿದ್ದ ಈ ಪ್ರೇಮಿ ಅಲ್ಲಿಯೇ ಲೊಚಲೊಚ ಮುತ್ತಿಕ್ಕಲು ಶುರುಮಾಡಿದ್ದ. ಅವಳು ಕೂಡ ಎಲ್ಲವನ್ನೂ ಮರೆತು, ತಾನು ಎಲ್ಲಿ ಕುಳಿತಿದ್ದೇನೆ ಎನ್ನೋದನ್ನೂ ಮರೆತುಬಿಟ್ಟಳು.
ಇವರಿಬ್ಬರೂ ಒಂದು ಹಂತ ಮುಂದಕ್ಕೆ ಹೋದಾಗ, ಆಕೆಯನ್ನು ತಬ್ಬಿ ಇನ್ನಷ್ಟು ಆಳವಾಗಿ ಪ್ರೀತಿ ಮಾಡಬೇಕು ಎನ್ನುವಷ್ಟರಲ್ಲಿ ಇಬ್ಬರೂ ಆ ಕಂಬಿಯಿಂದ ಅತ್ತ ಪ್ರಪಾತಕ್ಕೆ ಬಿದಿದ್ದಾರೆ. ಒಟ್ಟಿನಲ್ಲಿ ಪ್ರೀತಿಯಲ್ಲಿ ಆಳವಾಗಿ ಬೀಳೋದು ಹೇಗೆ ಎನ್ನೋದನ್ನು ತೋರಿಸಿದ್ದಾರೆ ಎಂದು ವಿಡಿಯೋದಲ್ಲಿ ಬರೆಯಲಾಗಿದೆ. ಇವರ ಈ ರೊಮಾನ್ಸ್ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಕಮೆಂಟಿಗರು ಅಯ್ಯೋ ಪಾಪ ಎನ್ನುವ ಬದಲು ಬಿದ್ದೂ ಬಿದ್ದೂ ನಗುತ್ತಿದ್ದಾರೆ.
ಅಂದಹಾಗೆ, ಈ ಪ್ರೇಮಿಗಳಿಗೆ ಏನಾಯ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರೀತಿಯಲ್ಲಿ ಬಿದ್ದದ್ದು ಮಾತ್ರ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. nvu_india ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ ನೋಡಿ.