
ಆಕ್ಸಿಡೆಂಟ್ ಆದಾಗ ಜನರು ಮನುಷ್ಯರನ್ನು ಬದುಕಿಸೋ ಬದಲು ಕ್ಯಾಮರಾ ಹಿಡಿದು ವಿಡಿಯೋ ಶೂಟ್ ಮಾಡ್ತಿರುತ್ತಾರೆ. ಇನ್ನು ಸಾಮಾನ್ಯ ವಿಷ್ಯಗಳನ್ನು ಬಿಡ್ತಾರಾ? ಸದ್ಯ ಏನೇ ವಿಷ್ಯ ಇರ್ಲಿ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುತ್ತೆ. ಅರೆ ಕ್ಷಣದಲ್ಲಿ ವ್ಯಕ್ತಿ ಫೇಮಸ್ ಆಗ್ತಾನೆ. ಫೋಟೋ, ವಿಡಿಯೋ ನೋಡಿ ಜನರು ಕಮೆಂಟ್ ಶುರು ಮಾಡ್ತಾರೆ. ಈಗ ಬಿಎಂಟಿಸಿ ಬಸ್ ಕಂಡೆಕ್ಟರ್ ಫೋಟೋ ಎಲ್ಲ ಕಡೆ ಸುದ್ದಿಯಾಗ್ತಿದೆ.
ಬಿಎಂಟಿಸಿ ಕಂಡಕ್ಟರ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಕಂಡಕ್ಟರ್ ಜೇಬಿನಲ್ಲಿ ಐಫೋನ್ ಇದೆ. ಕಂಡಕ್ಟರ್ ಐಫೋನ್ 17 ಪ್ರೊ ಮ್ಯಾಕ್ಸ್ (iPhone 17 Pro Max) ಇರೋದನ್ನು ಸ್ಪಷ್ಟವಾಗಿ ಕಾಣಬಹುದು. ಹಾಗೆಯೇ ಅವರ ಕೈ ಬೆರಳುಗಳನ್ನು ಫೋಟೋದಲ್ಲಿ ನೋಡ್ಬಹುದು. ಎರಡು ಬೆರಳಿಗೆ ಕಂಡಕ್ಟರ್ ಬಂಗಾರದ ರಿಂಗ್ ಹಾಕಿಕೊಂಡಿದ್ದಾರೆ. ಕೈನಲ್ಲಿ ಬ್ರೇಸ್ಲೆಟ್ ಕೂಡ ಹಾಕಿಕೊಂಡಿದ್ದಾರೆ. ಇದನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಯುವತಿ ಡ್ರೆಸ್ಸಲ್ಲೇನಿದೆ ಏನಿದೆ ಎಂದು ಹುಡುಕಿದ ಮರಿ ಕೋತಿ: ಮಗನ ಹಿಡಿದೆಳೆದ ಅಮ್ಮ- ಕ್ಯೂಟ್ ವಿಡಿಯೋ ವೈರಲ್
ಫೋಟೋ ನೋಡಿದ ಇನ್ಸ್ಟಾ ಬಳಕೆದಾರರು ನಾನಾ ಕಮೆಂಟ್ ಶುರು ಮಾಡಿದ್ದಾರೆ. ಇರೋದನ್ನು ಪ್ರದರ್ಶನ ಮಾಡ್ಬೇಕು ಅದನ್ನು ಕಂಡಕ್ಟರ್ ಮಾಡ್ತಿದ್ದಾರೆ ಅಂತ ಒಬ್ಬರು ಹೇಳಿದ್ರೆ , ಕಂಡಕ್ಟರ್ ತಮ್ಮಲ್ಲಿರುವ ವಸ್ತುವನ್ನು ಪ್ರದರ್ಶನ ಮಾಡ್ತಿಲ್ಲ ಅನ್ನೋದು ಮತ್ತೊಂದಿಷ್ಟು ಮಂದಿ ವಾದವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಬರೀ ಕಂಡಕ್ಟರ್ ಹಾಕಿಕೊಂಡಿರುವ ಬಂಗಾರದ ಬಗ್ಗೆ ಮಾತ್ರ ಚರ್ಚೆ ಆಗ್ತಿಲ್ಲ, ಬೆಂಗಳೂರು ಬಿಎಂಟಿಸಿ ಬಸ್ ಕಂಡಕ್ಟರ್ ಸ್ವಭಾವದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಬೆಂಗಳೂರು ಬಿಎಂಟಿಸಿ ಬಸ್ ಕಂಡಕ್ಟರ್ಸ್ ಸರಿಯಾಗಿ ಕೆಲ್ಸ ಮಾಡೋದಿಲ್ಲ, ಪ್ರಯಾಣಿಕರ ಜೊತೆ ಅವರ ವರ್ತನೆ ಸರಿ ಇಲ್ಲ ಅಂತ ಕೆಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Bengaluru Viral Video: ಕೈ ಮುಗಿದು ಕ್ಷಮೆ ಕೇಳಿದ್ರೂ ಬಿಡಲಿಲ್ಲ: ಆಟೋ ಡ್ರೈವರ್‌ಗೆ ಥಳಿಸಿದ ಟ್ರಾಫಿಕ್ ಪೊಲೀಸ್!
ಈಗ ಐಫೋನ್ ಸಾಮಾನ್ಯ. ಅವರು ದುಡಿದು, ಐಫೋನ್ ಖರೀದಿ ಮಾಡಿದ್ರೆ ನಿಮಗೇನು ಸಮಸ್ಯೆ, ಐಟಿ ಉದ್ಯೋಗಿಗಳು ಮಾತ್ರ ಐಫೋನ್, ರಿಂಗ್, ಬ್ರೇಸ್ಲೆಟ್ ಖರೀದಿ ಮಾಡ್ಬೇಕಾ ಅನ್ನೋದು ಮತ್ತೊಂದಿಷ್ಟು ಮಂದಿ ವಾದ. ಇನ್ಸ್ಟಾ ಬಳಕೆದಾರರು ಬಿಎಂಟಿಸಿ ಬಸ್ ಕಂಡಕ್ಟರ್ ಸಂಬಳದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಒಳ್ಳೆ ಸಂಬಳ ಅವರಿಗಿದೆ, ಆ ಹಣದಲ್ಲಿ ಖರೀದಿ ಮಾಡಿದ್ರೆ ನಿಮಗೇನು ಅಂತ ಪ್ರಶ್ನೆ ಮಾಡಿದ್ದಾರೆ. ಕಂಡಕ್ಟರ್ ಬಡವ ಆಗಿದ್ರೂ ಮಗ ಬಡವ ಆಗಿರ್ಬೇಕಾಗಿಲ್ಲ. ದುಡಿಯೋ ಮಕ್ಕಳು ತಂದೆಗೆ ಫೋನ್, ರಿಂಗ್ ನೀಡಿರ್ಬೇಕು ಅನ್ನೋದು ಮತ್ತೊಂದಿಷ್ಟು ಮಂದಿಯ ಕಮೆಂಟ್.
ಒಟ್ಟಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಹಾಕಿಕೊಂಡಿರುವ ರಿಂಗ್ಸ್, ಜೇಬಿನಲ್ಲಿರುವ ಐಫೋನ್ ಚರ್ಚೆಗೆ ಕಾರಣವಾಗಿದೆ. ಜನರು ಸಂಬಳ, ಬಿಎಂಟಿಸಿ ಕಂಡಕ್ಟರ್ ವರ್ತನೆ ಸೇರಿದಂತೆ ಎಲ್ಲ ವಿಷ್ಯವನ್ನು ಚರ್ಚೆಗೆಳೆದಿದ್ದಾರೆ.