
ಪ್ರೇಯಸಿಯನ್ನು ನೋಡಲು ಏನು ಬೇಕಾದರೂ ಮಾಡುವ ಪ್ರೇಮಿಗಳು ಇದ್ದಾರೆ. ಅದರಲ್ಲಿಯೂ ಶ್ರೀಮಂತೆ ಮತ್ತು ಸುಂದರ ಯುವತಿ ಸಿಕ್ಕಿದರೆ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆಕೆಯನ್ನು ಪಡೆಯಲು ಪ್ರಯತ್ನ ಮಾಡುತ್ತಾರೆ. ಅದೇ ರೀತಿ ತನ್ನ ಪ್ರೇಯಸಿಯನ್ನು ನೋಡಲು ಸುಮಾರು 760 ಕಿ.ಮೀ. ಪ್ರಯಾಣಿಸಿದ ಯುವಕನಿಗೆ ಆದ ಅಚಾತುರ್ಯ ಈಗ ಭಾರೀ ವೈರಲ್ ಸುದ್ದಿಯಾಗಿದೆ.
ಇದೀಗ ಬೆಲ್ಜಿಯಂನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಫ್ರೆಂಚ್ ಮಾಡೆಲ್ ಸೋಫಿ ವೌಸೆಲೋಡ್ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ತಿಂಗಳುಗಟ್ಟಲೆ ಚಾಟಿಂಗ್ ಮಾಡಿದ ಯುವಕ, ಆಕೆಯೊಂದಿಗೆ ಗಂಟೆಗಟ್ಟಲೆ ಫೋನಲ್ಲಿ ಮಾತನಾಡುತ್ತಾ ಎಂಜಾಯ್ ಮಾಡಿದ್ದಾನೆ. ನಂತರ ಒಬ್ಬರೂ ಸೇರಿ ನಾವಿಬ್ಬರೂ ಮದುವೆ ಮಾಡಿಕೊಳ್ಳೋಣ ಎಂದು ತೀರ್ಮಾನ ಮಾಡಿದ್ದಾರೆ. ಆಗ ಯುವತಿ ಯುವಕನ ಬಳಿ ವಿವಿಧ ಕಾರಣಗಳನ್ನು ಹೇಳಿ ಹಂತ ಹಂತವಾಗಿ ಕೆಲವೊಂದಿಷ್ಟು ಹಣವನ್ನೂ ಪಡೆದುಕೊಂಡಿದ್ದಾಳೆ. ಮೀಟ್ ಮಾಡೋಣ ಬಾ ಎಂದರೆ, ನಾನು ಬ್ಯೂಸಿ ಆಗಿದ್ದೇನೆ ಎಂದು ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾಳೆ. ನಿನ್ನನ್ನು ನೋಡಬೇಕು ಎಂದಾಗ ಫೋಟೋ ಕಳಿಸಿ ಸುಮ್ಮನಾಗಿದ್ದಾಳೆ.
ಇದಾದ ತಾನು ಪ್ರೀತಿ ಮಾಡಿದ ಮತ್ತು ಮುಂದಿನ ದಿನಗಳಲ್ಲಿ ಮದುವೆ ಮಾಡಿಕೊಳ್ಳುವ ಭಾತಿ ಪತ್ನಿಯನ್ನು ನೋಡಬೇಕು ಎಂದು ಪ್ರೇಮಿ ಮೈಕೆಲ್ ಫ್ರೆಂಚ್ ಮಾಡೆಲ್ ಸೋಫಿ ವೌಸೆಲೋಡ್ ಅವರನ್ನು ನೋಡಲು 760 ಕಿ.ಮೀ. ಕಾರಿನಲ್ಲಿ ಒಬ್ಬನೇ ಡ್ರೈವ್ ಮಾಡಿಕೊಂಡು ಬಂದಿದ್ದಾನೆ. ಆದರೆ, ಆ ಪ್ರಯಾಣ ಅಷ್ಟು ಚೆನ್ನಾಗಿ ಕೊನೆಗೊಂಡಿಲ್ಲ. ತೀವ್ರ ನಿರಾಶೆಯಲ್ಲಿ ಕೊನೆಗೊಂಡಿದೆ. ಸೋಫಿಯನ್ನು ನೋಡಲು ಆಕೆಯ ಮನೆಗೆ ಹೋದ ಮೈಕೆಲ್‌ಗೆ ಬಾಗಿಲು ತೆರೆದಿದ್ದೇ ಆಕೆಯ ಗಂಡ. ಮನೆ ಬಾಗಿಲಲ್ಲಿ ಸೋಫಿಯ ಗಂಡ 38 ವರ್ಷದ ಫ್ಯಾಬಿಯನ್ ಬೌಟೆಮಿನ್, ಮೇಕೆಲ್‌ನನ್ನು ಎದುರಾಗಿ ನೀವು ಯಾರು ಎಂದು ಕೇಳಿದ್ದಾರೆ. ಆಗ ಮೈಕೆಲ್ ನಾನು ಸೀಫಿ ಅವರ ಭಾವಿ ಪತಿ ಎಂದು ಹೇಳಿದ್ದಾನೆ.
ಈ ವಿಚಿತ್ರ ಘಟನೆಯ ವಿಡಿಯೋವನ್ನು ಸೋಫಿಯ ಗಂಡ ಬೊಟಮೈನ್ ಸ್ವತಃ ಚಿತ್ರೀಕರಿಸಿದ್ದಾರೆ. 'ಯಾರೋ ಡೋರ್‌ಬೆಲ್ ಒತ್ತಿದರು, ನಾನು ಹೋಗಿ ಬಾಗಿಲು ತೆಗೆದು ಯಾರೆಂದು ವಿಚಾರಿಸಿದರೆ ಆತ ಸೋಫಿ ವಾಸ್ಲೋಡ್ ಅವರ ಭಾವಿ ಗಂಡ ಅಂತ ಹೇಳುತ್ತಿದ್ದಾರೆ, ಬಹುಶಃ ಇಲ್ಲಿ ಒಂದು ಘರ್ಷಣೆ ಆಗಬಹುದು ಎಂದುಕೊಂಡೆ. ಏಕೆಂದರೆ ನಾನು ಸೋಫಿಯ ಈಗಿನ ಗಂಡ' ಅಂತ ಬೊಟಮೈನ್ ಹೇಳಿದ್ದಾರೆ. ಆದರೆ, ನಿಜವಾಗಿ ಏನಾಯ್ತು ಅಂತ ಬೊಟಮೈನ್ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆಗ ಸತ್ಯಾಂಶ ಹೊರ ಬೀಳುತ್ತದೆ.
ಇಲ್ಲಿ ಯಾರೋ ಒಬ್ಬರು ಸೋಫಿ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಮೈಕೆಲ್‌ರನ್ನು ಅವರನ್ನು ಪ್ರೀತಿ ಮಾಡುವುದಾಗಿ ನಂಬಿಸಿ, ಮೋಸ ಮಾಡಿದ್ದಾರೆ. ಆದರೆ, ನಾನು ಪ್ರೀತಿ ಮಾಡಿದ್ದು, ಮಾಡೆಲ್ ಸೋಫಿ ಅವರನ್ನೇ ಎಂದುಕೊಂಡು ಮೈಕೆಲ್ ಸೀದಾ ಇಲ್ಲಿಗೆ ಬಂದಿದ್ದಾನೆ. ಈಗಾಗಲೇ ಸೋಫಿಗೆ ಮದುವೆ ಮಾಗಿದ್ದು, ಗಂಡನಾಗಿ ನಾವಿಬ್ಬರೂ ಚೆನ್ನಾಗಿಯೇ ಇರುವಾಗ ಈ ಘಟನೆ ಹೇಗೆ ತಾನೇ ನಡೆಯಲು ಸಾಧ್ಯ ಎಂದು ಯುವಕ ಮೈಕೆಲ್‌ಗೆ ತಿಳಿಸಿದ್ದಾರೆ. ಜೊತೆಗೆ ಆತನ ಬಗ್ಗೆ ಬೇಸರವಿದೆ ಅಂತ ಬೊಟಮೈನ್ ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ವಿಡಿಯೋವನ್ನು ಮಾಡಿಕೊಂಡಿರುವ ಸೋಫಿಯಾಳ ಗಂಡ ಬೌಟೆಮಿನ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ, ನಕಲಿ ಖಾತೆಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಎಲ್ಲರೂ ಜಾಗರೂಕರಾಗಿರಬೇಕು ಅಂತ ತಿಳಿಸಲು ಈ ವಿಡಿಯೋ ಹಂಚಿಕೊಂಡಿದ್ದೇನೆ ಅಂತ ಬೊಟಮೈನ್ ಹೇಳ್ತಾರೆ.
ಮೈಕೆಲ್ ಮೊದಲು ಸೋಫಿ ತನ್ನನ್ನು ಮೋಸ ಮಾಡಿದ್ದಾಳೆ ಅಂತ ಹೇಳಿದನು. ಅದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಸಾಕ್ಷಿ ಇದ್ದರೆ ಕೊಡಿ ಎಂದು ಕೇಳಿದ್ದಾರೆ. ಆಗ ಮೈಕೆಲ್ ತನ್ನ ಮೊಬೈಲ್‌ನಲ್ಲಿರುವ ಚಾಟಿಂಗ್ ಮತ್ತು ಕರೆ ಮಾಡಿ ಮಾತನಾಡಿದ ಡಿಟೇಲ್ಸ್ ಕೊಟ್ಟಿದ್ದಾನೆ. ಆದರೆ, ಸೋಫಿಯ ಗಂಡ ಅದು ಬೇರೆಯವರ ಸಂಖ್ಯೆಯಾಗಿದೆ. ಇದು ಸೋಫಿ ಹೆಸರಿನಲ್ಲಿ ತೆಗೆದಿರುವ ನಕಲಿ ಖಾತೆ ಅಂತ ಮೈಕೆಲ್‌ಗೆ ಮನವರಿಕೆ ಮಾಡಿದನು. ಆದರೆ, ಇಷ್ಟೇ ಅಲ್ಲ, ಸೋಫಿ ಅಂತ ಪರಿಚಯಿಸಿಕೊಂಡವರು ಹೇಳಿದ ಖಾತೆಗೆ ಮೈಕೆಲ್ $35,000 (30,16,576.50 ರೂಪಾಯಿ) ಕಳುಹಿಸಿದ್ದಾರಂತೆ. ಮೈಕೆಲ್‌ಗೆ ತಾನು ಮೋಸ ಹೋಗಿದ್ದಾಗಿ ಕೊನೆಗೆ ಅರಿವಾಗಿದೆ.