ಸತ್ತರೆ ಹೆಣ ಸ್ಮಶಾನಕ್ಕೂ ಹೋಗೋದಿಲ್ಲ, ಮನೆ ಬಾಗಿಲಲ್ಲೇ ಹೆಣ ಸುಟ್ಟು ಬೂದಿ ಪ್ಯಾಕ್‌ ಮಾಡಿಕೊಡುತ್ತೆ ಮಶಿನ್‌!

Published : Jul 16, 2025, 08:31 PM IST
Dead Body Burn Machine

ಸಾರಾಂಶ

ಡಿಜಿಟಲ್ ಯುಗದಲ್ಲಿ ಅಂತ್ಯಕ್ರಿಯೆಯ ವಿಧಾನವೂ ಬದಲಾಗುತ್ತಿದೆ. ಮನೆಯಲ್ಲೇ ಅಂತ್ಯಸಂಸ್ಕಾರ ಮಾಡುವ ಹೊಸ ತಂತ್ರಜ್ಞಾನದ ಬಗ್ಗೆ ಈ ಲೇಖನ ತಿಳಿಸುತ್ತದೆ. ಸಾವಿನ ನಂತರದ ವಿಧಿವಿಧಾನಗಳನ್ನು ಸರಳಗೊಳಿಸುವ ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಲಾಗಿದೆ.

ಬೆಂಗಳೂರು (ಜು.16): ಇದು ಡಿಜಿಟಲ್‌ ಯುಗ. ಕೈಯ್ಲಿ ಮೊಬೈಲ್‌ ಒಂದಿದ್ದರೆ ಸಾಕು. ಏನು ಬೇಕಾದರೂ ಮಾಡಬಹುದು. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇನ್ನೂ ಡಿಜಿಟಲ್‌ಗೆ ಅಷ್ಟಾಗಿ ತೆರೆದುಕೊಂಡಿಲ್ಲ. ಅಲ್ಲಿ ಡಿಜಿಟಲ್‌ ಅಂದರೆ, ಮೊಬೈಲ್‌ನಿಂದ ಹಣವನ್ನು ಸ್ಕ್ಯಾನ್‌ ಅಥವಾ ನಂಬರ್‌ ಹಾಕಿ ಕಳಿಸೋದು ಅನ್ನೋದರಲ್ಲೇ ಇದ್ದಾರೆ. ಆದರೆ, ಬೆಂಗಳೂರು ಈ ವಿಚಾರದಲ್ಲಿ ಬಹಳ ಮುಂದೆ ಹೋಗಿದೆ.

ಫುಡ್‌ ಅಂದ್ರೆ ಸ್ವಿಗ್ಗಿ, ಜೋಮೋಟೋ, ಆಟೋ-ಟ್ಯಾಕ್ಸಿ ಅಂದ್ರೆ ಓಲಾ, ಉಬರ್‌, ರಾಪಿಡೋ ಮಾತ್ರವೇ ಕಾಣುತ್ತಿದ್ದವು. ಈಗ ಮನೆಯಲ್ಲಿ ನಾಯಿ ನೋಡಿಕೊಳ್ಳೋಕು ಅಪ್ಲಿಕೇಶನ್‌ಗಳು ಬಂದಿವೆ. ಅದರೊಂದಿಗೆ ಮನೆಯ ದಿನಸಿ, ಲಾಂಡ್ರಿ ಇವಕ್ಕೆಲ್ಲವೂ ಬೇರೆ ಬೇರೆಯಾದ ಅಪ್ಲಿಕೇಶನ್‌ಗಳಿವೆ. ಆದರೆ, ತಂತ್ರಜ್ಞಾನ ಯುಗದಲ್ಲೂ ಕೆಲವೊಂದನ್ನ ಅಪ್ಲಿಕೇಶನ್‌ಗಳಲ್ಲಿ ಬುಕ್‌ ಮಾಡಿ ಮಾಡಲು ಸಾಧ್ಯವೇ ಇಲ್ಲ ಅನ್ನೋ ವಿಚಾರಗಳಿದ್ದವು. ಯಾರಾದರೂ ಸತ್ತಾಗ ಅವರ ಹೆಣವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಮಣ್ಣು ಮಾಡಬೇಕು ಅನ್ನೋದು ಇಲ್ಲಿಯವರೆಗೂ ಯೋಚನೆ ಮಾಡುತ್ತಿದ್ದೆವು.

ಆದರ, ಈಗ ಅದಕ್ಕೂ ಅಪ್ಲಿಕೇಶನ್‌ ಬಂದಿದೆ. ಇದರೊಂದಿಗೆ ಮನೆಯಿಂದ ನೀವು ಯಾವುದಕ್ಕೂ ಆಚೆ ಹೋಗುವ ಪ್ರಮೇಯವೇ ಇಲ್ಲ. ಹಾಗೇನಾದರೂ ನಿಮ್ಮ ಮನೆಯಲ್ಲಿ ಯಾರಾದರೂ ಸಾವು ಕಂಡಿದ್ದರೆ. ಹೆಣ ಸುಟ್ಟು ಬೂದಿ ಮಾಡಿಕೊಡುವ ಅಪ್ಲಿಕೇಶನ್‌ ಬಂದಿದೆ. ತಂತ್ರಜ್ಞಾನ ಎಲ್ಲಿಗೆ ಬಂದು ನಿಂತಿದೆ ಎಂದರೆ ನೀವು ಸತ್ತರೆ ಸ್ಮಶಾನಕ್ಕೂ ಹೋಗಬೇಕಾಗಿಲ್ಲ. ನಿಮ್ಮ ಮನೆ ಬಾಗಿಲಲ್ಲೆ ಹೆಣ ಸುಟ್ಟು ಬೂದಿ ಪ್ಯಾಕ್ ಮಾಡಿಕೊಡುವ ವ್ಯವಸ್ಥೆ ಬಂದಿದೆ.

 

 

ಅಪ್ಲಿಕೇಶನ್‌ ಅಥವಾ ಮೊಬೈಲ್‌ ಮೂಲಕ ಹೆಣ ಸುಡುವವರಿಗೆ ಫೋನ್‌ ಮಾಡಿದರೆ, ಅವರ ಸಣ್ಣ ಲಗೇಜ್‌ ಗಾಡಿಯಲ್ಲಿ ಮಶಿನ್‌ ತೆಗೆದುಕೊಂಡು ಮನೆಗೆ ಬರುತ್ತಾರೆ. ಮನೆಯಲ್ಲಿಯೇ ಮೃತ ದೇಹದ ಅಂತಿಮ ವಿಧಿವಿಧಾನಗಳನ್ನು ಮಾಡುವ ಅವಕಾಶ ಮಾಡಿಕೊಡುತ್ತಾರೆ. ಅವರವರ ಸಂಪ್ರದಾಯದಂತೆ ವಿಧಿ ವಿಧಾನ ಮಾಡಿದ ಬಳಿಕ ಒಂದು ಟ್ರೇಯಲ್ಲಿ ಮೃತದೇಹವನ್ನು ಇಟ್ಟು, ಕ್ಯೂಬ್ ರೀತಿಯಲ್ಲಿ ಇರುವ ಬರ್ನರ್‌ನ ಒಳಗೆ ಹಾಕುತ್ತಾರೆ. ಕೆಲವು ಗಂಟೆಗಳ ದಹನ ಪ್ರಕ್ರಿಯೆ ಬಳಿಕ ಒಂದು ಮಡಿಕೆಯಲ್ಲಿ ಬೂದಿಯನ್ನು ಸಂಗ್ರಹ ಮಾಡಿ ಅದನ್ನು ಮನೆಯವರಿಗೆ ನೀಡುತ್ತಾರೆ.

ಈ ವಿಡಿಯೋವಿಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಕೋವಿಡ್‌-19 ಟೈಮ್‌ನಲ್ಲಿ ಇಂಥ ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯ ಮಾಡಲಾಗಿತ್ತು. ಮನೆಯಲ್ಲೇ ಇರುವ ಸಿಲಿಂಡರ್‌ಗಳನ್ನು ಬಳಸಿ ಮೃತದೇಹವನ್ನು ಮನೆ ಬಾಗಿಲಲ್ಲೇ ಅಂತ್ಯಸಂಸ್ಕಾರ ಮಾಡುವ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ಈಗ ಇದು ಮತ್ತಷ್ಟು ವ್ಯಾಪಕವಾಗುವ ಲಕ್ಷಣ ಕಾಣುತ್ತಿದೆ.

ಈ ವಿಡಿಯೋಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಕಾಮೆಂಟ್‌ಗಳು ಬರುತ್ತಿವೆ. 'ನನಗೆ ಯಾರು ಇಲ್ಲ ನಾನು ಸತ್ತರೆ ಹೆಂಗೆ ಅಂತಿದ್ದೆ. ನಾನು ಸತ್ರೆ ನನ್ ಮನೆನಲ್ಲೇ ಬೂದಿ ಮಾಡಿ ಕೊಡೋ ಮಿಷಿನ್ ಬಂತು' ಎಂದು ಒಬ್ಬ ಯೂಸರ್‌ ಬರೆದಿದ್ದರೆ. 'ಯಪ್ಪಾ ಇನ್ನು ಏನೇನ್ ಬರುತ್ತೋ' 'ಏನು ಕಾಲ ಬಂತು ಗುರು ಲೇ..' ಎಂದು ಕೆಲವು ಯೂಸರ್‌ಗಳು ಅಚ್ಚರಿ ಪಟ್ಟಿದ್ದಾರೆ.

'ಇಂಥ ಮಶಿನ್‌ಗಳು ಒಳ್ಳೆಯದು. ಸ್ಮಶಾನದ ಜಾಗ ಉಳಿಯುತ್ತಿದೆ. ಮೃತ ದೇಹವನ್ನು ಸುಡೋದರಿಂದ ಯಾವುದೇ ಕಾಯಿಲೆ ಕೂಡ ಪ್ರಸಾರವಾಗೋದಿಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ.

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್