
ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಇದರಲ್ಲಿ ವ್ಯಕ್ತಿಯೊಬ್ಬರು ರಾತ್ರಿ ಸಂಚರಿಸುವ ರೈಲಿನಲ್ಲಿ ಗಡದ್ದಾಗಿ ಮಲಗಿದ್ದಾರೆ. ಅವರ ಪತ್ನಿ ಕೆಳಗೆ ಮಲಗಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಆದರೆ ಸಹಜವಾಗಿ ಪ್ರತಿದಿನ ಪತ್ನಿ ಪಕ್ಕದಲ್ಲಿಯೇ ಇರುವ ಕಾರಣ, ಆಕೆಯನ್ನು ಪ್ರೀತಿಯಿಂದ ಹಿಡಿದು ಮಲಗುವುದು, ಈ ಪತಿಗೆ ಅಭ್ಯಾಸವಾದಂತಿದೆ. ಆದ್ದರಿಂದ, ಆತ ಪಕ್ಕದಲ್ಲಿ ಕೈಹಾಕಿದಾಗ ಆತನಿಗೆ ಅಲ್ಲಿಯೇ ರೈಲಿನ ಚೈನು ಕೈಗೆಟುಕಿದೆ. ಈ ಚೈನು ಇರುವುದು ರೈಲನ್ನು ನಿಲ್ಲಿಸುವುದಕ್ಕಾಗಿ. ಏನಾದರೂ ಡೇಂಜರ್ ಘಟನೆಗಳು ರೈಲಿನಲ್ಲಿ ನಡೆದರೆ, ಈ ಚೈನನ್ನು ಜಗ್ಗಿದಾಗ ಅದು ನಿಲ್ಲುತ್ತದೆ.
ಆದರೆ ಈ ವ್ಯಕ್ತಿ ಪಕ್ಕದಲ್ಲಿ ಇರೋದು ಪತ್ನಿ ಎಂದು ತಿಳಿದಿದ್ದಾನೆ. ಪತ್ನಿಯ ಬದಲು ಚೈನ್ ಹಿಡಿದುಕೊಂಡಿದ್ದಾನೆ. ಚೈನನ್ನು ಎಳೆದ ಕಾರಣ, ಟ್ರೈನ್ ನಿಂತುಹೋಗಿದೆ. ಕೊನೆಗೆ ಚೆಕಿಂಗ್ ಮಾಡುವವರು ಬಂದು ಏನಾಯಿತೆಂದು ಕೇಳಿದಾಗ, ನಿದ್ದೆಯ ಮಂಪರಿನಿಂದ ಎದ್ದ ಆಸಾಮಿಗೆ ತಾನೇನು ಮಾಡಿದ್ದೇನೆ ಎನ್ನೋದೇ ಗೊತ್ತಿಲ್ಲ. ಚೈನನ್ನು ಏಕೆ ಎಳೆದಿ ಎಂದು ಕೇಳಿದಾಗ ಅಕ್ಕಪಕ್ಕ ನೋಡಿದ್ದಾನೆ. ಆಗಲೇ ಅವನಿಗೆ ತಿಳಿದದ್ದು, ತಾನು ರೈಲಿನಲ್ಲಿ ಇದ್ದೇನೆ ಎನ್ನೋದು.
ಕೊನೆಗೆ ವಿಷಯ ಅರಿತು ಚೈನನ್ನು ಸರಿ ಮಾಡಿದ್ದಾರೆ. ಹೀಗೆ ಅನವಶ್ಯಕವಾಗಿ ಚೈನನ್ನು ಎಳೆದರೆ ಭಾರತೀಯ ರೈಲಿನಲ್ಲಿ ಭಾರಿ ದಂಡ ವಿಧಿಸಲಾಗುತ್ತದೆ. ಆದರೆ ಈ ಘಟನೆ ಎಲ್ಲಿ ಏನು ಎತ್ತ ಎಂದು ತಿಳಿದಿಲ್ಲ. ಆತ ಅಕ್ಕ-ಪಕ್ಕ ಕಕ್ಕಾಬಿಕ್ಕಿಯಾಗಿ ನೋಡಿದ್ದರಿಂದಲೇ ತಿಳಿದಿದೆ, ಪಕ್ಕದಲ್ಲಿದ್ದ ಪತ್ನಿ ಎಲ್ಲಿ ಹೋದಳು ಎಂದು ಗಾಬರಿಯಾದಂತಿತ್ತು ಆತನ ಮುಖ. ಕೊನೆಗೆ ವಾಸ್ತವಕ್ಕೆ ಬಂದು ತಾನು ರೈಲಿನಲ್ಲಿ ಇರೋದು ಎಂದು ತಿಳಿದಿದೆ.
According to the train passenger, he thought he was sleeping while holding his wife and he grabbed the stop handle and pulled it, stopping the train 😂😂😂🤣🤣🤣 https://t.co/Q9LVKi2i9x
— Virendra Maurya (@VEERA_SIPF) May 26, 2026