
ಇಂದು ನಂಬಿಕೆ ಅನ್ನೋ ಪದಕ್ಕೆ ಅರ್ಥವೇ ಇಲ್ಲವಂತಾಗಿದೆ. ಯಾರು, ಯಾರಿಗೆ ಮತ್ತು ಯಾವಾಗ ಮೋಸ ಮಾಡ್ತಾರೆ ಅನ್ನೋದೇ ಗೊತ್ತಾಗಲ್ಲ. ಕಣ್ಣಿನ ರಪ್ಪೆ ಬಡಿಯೋಷ್ಟರಲ್ಲಿ ಎಲ್ಲವೂ ತಲೆ ಕೆಳಗಾಗಿ ಹೋಗಿರುತ್ತದೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟೊಂದು ವೈರಲ್ ಆಗುತ್ತಿದೆ. ಭೂಮಿ ಎಂಬವರು ಫೋಟೋ ಸಹಿತ ಪೆಟ್ರೋಲ್ ಬಂಕ್ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಬಳಕೆದಾರರು, ದಯವಿಟ್ಟು ಹೀಗೆ ಮಾಡಬೇಡಿ? ಹಸಿವು ಅನ್ನೋದು ತುಂಬಾ ಕ್ರೂರಿ ಎಂದೆಲ್ಲಾ ಕಮೆಂಟ್ಗಳು ಬಂದಿವೆ.
ಇತ್ತೀಚೆಗೆ ನಿರ್ಜನ ಪ್ರದೇಶ ಅಥವಾ ಹೆದ್ದಾರಿ ಬದಿಯಲ್ಲಿರುವ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಹಾಕಿಸಿಕೊಂಡು ಹಣ ನೀಡದೇ ಹೋಗುತ್ತಾರೆ. ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈ ರೀತಿಯಾದ ನಷ್ಟವನ್ನು ಮಾಲೀಕರು, ಆ ಸಮಯದಲ್ಲಿದ್ದ ಸಿಬ್ಬಂದಿ ಸಂಬಳದಿಂದ ಕಡಿತ ಮಾಡಿಕೊಳ್ಳಲಾಗುತ್ತದೆ.
ಪೆಟ್ರೋಲ್ ಪಂಪ್ಗೆ ಹೋಗುತ್ತಿದ್ದಂತೆ ಯುವಕನೋರ್ವ ಬರುತ್ತಾನೆ. ಗ್ರಾಹಕರು ಟ್ಯಾಂಕ್ ಫುಲ್ ಮಾಡುವಂತೆ ಹೇಳುತ್ತಾರೆ. ಓರ್ವ ಸಿಬ್ಬಂದಿ ವಾಹನಕ್ಕೆ ಇಂಧನ ತುಂಬಿಸುತ್ತಿದ್ರೆ, ಮತ್ತೋರ್ವ ಕಾರ್ ಕಿಟಕಿಯೊಳಗೆ ಕೈ ಹಾಕಿ ನಿಲ್ಲುತ್ತಾನೆ. ಕೂಡಲೇ ಗ್ರಾಹಕರು, ಯಾಕೆ ಹೀಗೆ ಮಾಡ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಪೆಟ್ರೋಲ್ ಸಿಬ್ಬಂದಿ ಹೇಳಿದ ಮಾತುಗಳು ವೈರಲ್ ಆಗುತ್ತಿವೆ.
ಕೆಲವರು 200-300 ರೂಪಾಯಿಯಷ್ಟು ಇಂಧನ ಹಾಕಿಸಿಕೊಂಡು ಹೋಗಿಬಿಡುತ್ತಾರೆ, ಇನ್ನು ಕೆಲವರು ಸಾವಿರಾರು ರೂಪಾಯಿಯಷ್ಟು ಇಂಧನ ಹಾಕಿಸಿಕೊಂಡರೂ ಹಣ ನೀಡದೆ ಹೊರಟುಹೋಗುತ್ತಾರೆ. ಕೊನೆಗೆ ಆ ನಷ್ಟಕ್ಕೆ ನಾವೇ ಜವಾಬ್ದಾರರಾಗಬೇಕಾಗುತ್ತದೆ. ಸಣ್ಣ ಮುನ್ನೆಚ್ಚರಿಕೆ ವಹಿಸುವುದರಿಂದ ದೊಡ್ಡ ನಷ್ಟವನ್ನು ತಡೆಯಬಹುದು ಎಂದು ಪೆಟ್ರೋಲ್ ಸಿಬ್ಬಂದಿ ಹೇಳಿದ್ದಾರೆ.
ಈ ಪೋಸ್ಟ್ ನೋಡಿದ ಜನರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಾಲೀಕರು ಕೋಟ್ಯಧಿಪತಿಗಳಾದ್ರೂ ಸಣ್ಣ ಪ್ರಮಾಣ ನಷ್ಟವನ್ನು ಸಹ ಬಡ ಉದ್ಯೋಗಿಗಳ ಮೇಲೆ ಹಾಕುತ್ತಾರೆ. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿ, ಆರ್ಥಿಕವಾಗಿ ಹಿಂದುಳಿದವರು. 1 ಸಾವಿರ ರೂಪಾಯಿ ನಷ್ಟವೂ ಅವರಿಗೆ ದೊಡ್ಡ ಆರ್ಥಿಕ ಹೊಡೆತವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಈ ಘಟನೆ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
Yesterday at a petrol pump, I witnessed something unusual but important.
A customer said, “Brother, fill the tank completely.”
The employee started filling the fuel while standing near the car window.
The customer asked, “Why are you holding the car like that?”
The employee replied, “Sir, some people drive away without paying after getting fuel. So we keep an eye on the vehicle until the payment is completed.”....1/2
— Bhumi Yadav 🇮🇳 (@Bhumi__M026) October 26, 2026