
ಭಾರತೀಯ ರೈಲ್ವೆಯ ಎಸಿ ಕೋಚ್ ಒಳಗೆ ಪ್ರಯಾಣಿಕನೊಬ್ಬ ಎಣ್ಣೆ ದೀಪವನ್ನು ಹಚ್ಚಿಕೊಂಡು ಧಾರ್ಮಿಕ ವಿಧಿವಿಧಾನಗಳನ್ನು ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ 3ಎಸಿ ಕೋಚ್‌ನ ಅಪ್ಪರ್ ಬರ್ತ್‌ನಲ್ಲಿ ಕುಳಿತ ವ್ಯಕ್ತಿಯೊಬ್ಬ ಸಾಂಪ್ರದಾಯಿಕ ಎಣ್ಣೆ ದೀಪ ಮತ್ತು ಅಗರಬತ್ತಿ ಹಚ್ಚಿ ಪ್ರಾರ್ಥನೆ ಮಾಡುತ್ತಿರುವುದನ್ನು ಕಾಣಬಹುದು. ಕಂಪಾರ್ಟ್‌ಮೆಂಟ್‌ನಲ್ಲಿ ಹೊಗೆ ಹರಡಲು ಪ್ರಾರಂಭವಾದಾಗ, ಮತ್ತೊಬ್ಬ ಪ್ರಯಾಣಿಕ ಮಧ್ಯಪ್ರವೇಶಿಸಿ ಬೆಂಕಿಯನ್ನು ಬಳಸುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದರು.
ರೈಲ್ವೆ ಸುರಕ್ಷತಾ ವ್ಯವಸ್ಥೆಗಳನ್ನು ಹೊಗೆಯನ್ನು ಪತ್ತೆಹಚ್ಚುವಂತೆ ವಿನ್ಯಾಸಗೊಳಿಸಲಾಗಿದೆ, ಮತ್ತು ಅಗರಬತ್ತಿಯಿಂದ ಬರುವ ಸಣ್ಣ ಪ್ರಮಾಣದ ಹೊಗೆಯೂ ಸಹ ಅಟೋಮ್ಯಾಟಿಕ್ ಅಲರಾಂ ಅಥವಾ ಎಮರ್ಜೆನ್ಸಿ ರೆಸ್ಪಾನ್ಸ್ ಆಕ್ಟೀವ್ ಮಾಡುತ್ತದೆ. ಇದಲ್ಲದೆ, ಎಸಿ ಬೋಗಿಗಳು ಬೆಡ್ ಶೀಟ್, ಸ್ಕ್ರೀನ್ ಮತ್ತು ಬರ್ತ್‌ಗಳಂತಹ ಸಿಂಥೆಟಿಕ್ ಸಾಮಾಗ್ರಿಗಳನ್ನು ಒಳಗೊಂಡಿರುತ್ತವೆ, ಇವುಗಳಿಗೆ ಕಿಡಿ ಹತ್ತಿದರೆ, ಶೀಘ್ರದಲ್ಲಿ ಬೆಂಕಿ ಹಚ್ಚಿಕೊಳ್ಳುವ ಸಾಧ್ಯತೆ ಇದೆ.
ಯ ವೀಡಿಯೊ ವೈರಲ್ ಆದ ನಂತರ, ರೈಲ್ವೆ ಸಚಿವಾಲಯದ ಅಧಿಕೃತ ಕಂಪ್ಲೇಟ್ ಪೋರ್ಟಲ್, "ರೈಲ್ವೇ ಸೇವಾ" ಪ್ರತಿಕ್ರಿಯಿಸಿ, ಈ ವಿಷಯದ ಬಗ್ಗೆ ತನಿಖೆ ನಡೆಸಲು ರೈಲು ಸಂಖ್ಯೆ, ಪ್ರಯಾಣ ದಿನಾಂಕ ಮತ್ತು PNR ಸೇರಿದಂತೆ ಹಲವಾರು ವಿವರಗಳನ್ನು ಕೋರಿದೆ. ಇಂತಹ ಘಟನೆಗಳ ವಿರುದ್ಧ ತ್ವರಿತ ಕ್ರಮಕ್ಕಾಗಿ "ರೈಲ್‌ಮದದ್" ಪೋರ್ಟಲ್ ಮೂಲಕ ವರದಿ ಮಾಡುವಂತೆ ಸಂಸ್ಥೆ ಪ್ರಯಾಣಿಕರಿಗೆ ಸೂಚಿಸಿದೆ.
ಈ ವೀಡಿಯೊಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಅನೇಕ ಬಳಕೆದಾರರು ಧಾರ್ಮಿಕ ನಂಬಿಕೆಗಳ ಮಹತ್ವವನ್ನು ಒಪ್ಪಿಕೊಂಡರೂ, ಧಾರ್ಮಿಕ ಆಚರಣೆಗಳ ಮೂಲಕ ಸಹ ಪ್ರಯಾಣಿಕರಿಗೆ ಎಂದಿಗೂ ಅಪಾಯವನ್ನುಂಟುಮಾಡಬಾರದು ಎಂದು ಒತ್ತಿ ಹೇಳಿದ್ದಾರೆ.. ರೈಲು ಬೋಗಿಗಳ ಒಳಗೆ ಬೆಂಕಿ ಹಚ್ಚಿದರೆ ಭಾರಿ ದಂಡ ಸೇರಿದಂತೆ ರೈಲ್ವೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಅನೇಕರು ಹೇಳಿದ್ದಾರೆ. ಇತರರು ಪ್ರಯಾಣಿಕರು ಸುರಕ್ಷತಾ ಉಲ್ಲಂಘನೆಗಳನ್ನು ಶೀಘ್ರದಲ್ಲಿ ವರದಿ ಮಾಡಲು ಮತ್ತು ಅಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವಂತೆ ಜನ ಮನವಿ ಮಾಡಿದ್ದಾರೆ.
🚆A video circulating on social media shows a passenger performing prayers on the upper berth of an AC train coach while lighting incense sticks and an oil lamp.
A fellow passenger reportedly intervened, explaining that such acts can be dangerous. Smoke may trigger the train's… pic.twitter.com/79SrmBnAdW— Jharkhand Rail Users (@JharkhandRail) July 26, 2026