ಮಳೆ ಬಂತೋ ಇಲ್ವೊ ಗೊತ್ತಿಲ್ಲ.. ಆದ್ರೆ ಕಪ್ಪು ಸೀರೆ ಧರಿಸಿ ಬರ್ಸೋ ರೇ ಹಾಡಿಗೆ ಸ್ಟೆಪ್ಸ್ ಹಾಕಿದ ನಟಿಗೆ ಬಂತು ರಾಶಿ ರಾಶಿ ಲೈಕ್ಸ್

Published : Jul 28, 2026, 02:08 PM IST
Girl in Black Saree Dance

ಸಾರಾಂಶ

Girl in Black Saree Dance: ಮಳೆಗಾಲದ ಈ ಸಮಯದಲ್ಲಿ ಬರ್ಸೋ ರೇ ಹಾಡಿಗೆ ಕಪ್ಪು ಸೀರೆ ತೊಟ್ಟು ನಟಿಯೊಬ್ಬರು ಮಾಡಿದ ಮನಮೋಹಕ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆಯ ಅದ್ಭುತ ಮುಖಭಾವ ಮತ್ತು ನೃತ್ಯಕ್ಕೆ ಲಕ್ಷಾಂತರ ಜನರು ಫಿದಾ ಆಗಿದ್ದು, ಈ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.

ಮ್ಮ ದೇಶದಲ್ಲಿ ಮಳೆಯನ್ನು ಸ್ವಾಗತಿಸಲು ಜನರು ತಮ್ಮದೇ ಆದ ವಿಶಿಷ್ಟ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಕೆಲವರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರೆ, ಇನ್ನು ಕೆಲವರು ಹಾಡು-ನೃತ್ಯಗಳ ಮೂಲಕ ಸಂಭ್ರಮಿಸುತ್ತಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಳೆಗಾಗಿ ಕಾಯುತ್ತಿರುವ ನಟಿಯೊಬ್ಬರ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಹೌದು, ಡಾನ್ಸರ್ ಕಂ ನಟಿಯಾಗಿರುವ ಸಿಮ್ರಾನ್ ಚೌಧರಿ ಮೊದಲು ದೇವರಿಗೆ ಮಳೆಗಾಗಿ ಪ್ರಾರ್ಥಿಸಿ, ನಂತರ 'ಗುರು' ಚಿತ್ರದ ಬರ್ಸೋ ರೇ ಮೇಘ ಮೇಘ.. ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಈ ವೈರಲ್ ವಿಡಿಯೋದ ಆರಂಭ

ಸಿಮ್ರಾನ್ ಮೊದಲು ತನ್ನ ಮನೆಯ ಛಾವಣಿಯ ಮೇಲೆ ನಿಂತಿರುವುದು ಕಂಡುಬರುತ್ತದೆ. ಆಕೆ ಧರಿಸಿರುವ ಕಪ್ಪು ಸೀರೆ, ಬ್ಯಾಕ್‌ ಗ್ರಾಂಡ್‌ನಲ್ಲಿ ಮೋಡ ಕವಿದ ಆಕಾಶದ ವಾತವರಣ ತುಂಬಾ ಸುಂದರವಾಗಿ ಕಾಣುತ್ತಿದೆ. ಆಕಾಶವೆಲ್ಲಾ ಮೋಡ ಕವಿದಿದ್ದರೂ ಮಳೆ ಮಾತ್ರ ಬರುತ್ತಿರುವುದಿಲ್ಲ. ಆಗ ಸಿಮ್ರಾನ್ ಎರಡೂ ಕೈಗಳನ್ನು ಜೋಡಿಸಿ ದೇವರಿಗೆ ಶ್ರದ್ಧೆಯಿಂದ ಪ್ರಾರ್ಥಿಸಿದ್ದಾರೆ. ಬೇಸಿಗೆಯ ಸೆಖೆಯಲ್ಲಿ ಮಳೆಗಾಗಿ ಕಾಯುತ್ತಿರುವ ಪ್ರತಿಯೊಬ್ಬರ ಆಶಯವನ್ನು ಈ ವಿಡಿಯೋ ಪ್ರತಿಬಿಂಬಿಸುತ್ತದೆ.

ಬದಲಾದ ವಾತಾವರಣ ಮತ್ತು ನೃತ್ಯದ ಸಂಭ್ರಮ

ಪ್ರಾರ್ಥನೆ ಮುಗಿದ ಕೆಲವೇ ಕ್ಷಣಗಳಲ್ಲಿ ‘ಬರ್ಸೋ ರೇ’ ಹಾಡು ಶುರುವಾಗುತ್ತದೆ. ಸಂಗೀತಕ್ಕೆ ತಕ್ಕಂತೆ ಸಿಮ್ರಾನ್ ಅದ್ಭುತವಾಗಿ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಸಂಗೀತದ ವೇಗಕ್ಕೆ ತಕ್ಕಂತೆ ಆಕೆಯ ನೃತ್ಯದ ಎನರ್ಜಿ ಕೂಡ ಹೆಚ್ಚಾಗುತ್ತದೆ. ಪ್ರತಿಯೊಂದು ಸ್ಟೆಪ್ ತುಂಬಾ ಸಹಜವಾಗಿದ್ದು, ಎಲ್ಲೂ ಕೃತಕತೆ ಕಾಣಿಸುವುದಿಲ್ಲ. ಮಳೆಯ ಮೇಲಿರುವ ತನ್ನ ಪ್ರೀತಿ ಮತ್ತು ಉತ್ಸಾಹವನ್ನು ಸಿಮ್ರಾನ್ ನೃತ್ಯದ ಮೂಲಕ ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂಬ ಭಾವನೆ ನೋಡುಗರಲ್ಲಿ ಮೂಡುತ್ತದೆ.

ನೃತ್ಯದ ಜೊತೆಗೆ ಸಿಮ್ರಾನ್ ಮುಖಭಾವಗಳು (Expressions) ನೋಡುಗರನ್ನು ಮೋಡಿ ಮಾಡಿವೆ. ಹಾಡಿನ ಪ್ರತಿ ಸಾಲಿಗೂ ತಕ್ಕಂತೆ ಸಿಮ್ರಾನ್ ಮುಖದಲ್ಲಿ ಮೂಡುವ ಮುಗ್ಧ ನಗು ಮತ್ತು ಕಣ್ಣುಗಳ ಮಿಂಚು ವಿಡಿಯೋಗೆ ವಿಶೇಷ ಮೆರುಗು ನೀಡಿದೆ. ಅನೇಕ ನೆಟ್ಟಿಗರು, "ಆಕೆ ಕೇವಲ ನೃತ್ಯ ಮಾಡಿಲ್ಲ, ಬದಲಾಗಿ ಆ ಹಾಡಿನ ಕಥೆಯನ್ನು ತನ್ನ ಭಾವನೆಗಳ ಮೂಲಕ ಜೀವಂತಗೊಳಿಸಿದ್ದಾಳೆ" ಎಂದು ಕಾಮೆಂಟ್ ಮಾಡಿದ್ದಾರೆ.

ಮೋಡ ಕವಿದ ಪರಿಸರದಲ್ಲಿ ಸಿಮ್ರಾನ್ ಸಾಂಪ್ರದಾಯಿಕ ಕಪ್ಪು ಸೀರೆಯ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. @simranchoudhary ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಹಂಚಿಕೊಂಡ ತಕ್ಷಣವೇ ಅತ್ಯಂತ ವೇಗವಾಗಿ ವೈರಲ್ ಆಗಿದೆ. ಈ ಸುದ್ದಿ ಬರೆಯುವ ಹೊತ್ತಿಗೆ ವಿಡಿಯೋವನ್ನ 10 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು 671 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮತ್ತು ಶೇರ್ ಮಾಡಿದ್ದಾರೆ.

ಒಟ್ಟಾರೆಯಾಗಿ ಈ ನಟಿಯ ಸರಳತೆ, ಸೌಂದರ್ಯ ಮತ್ತು ಅದ್ಭುತ ಪ್ರತಿಭೆ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಪ್ರತಿಭೆಗೆ ಸಾಧನಗಳ ಹಂಗಿಲ್ಲ

ಇಂದಿನ ಕಾಲದಲ್ಲಿ ಅದ್ದೂರಿ ಸೆಟ್, ದುಬಾರಿ ಕ್ಯಾಮೆರಾಗಳು ಮತ್ತು ಎಡಿಟಿಂಗ್ ಮೂಲಕ ವಿಡಿಯೋಗಳನ್ನು ವೈರಲ್ ಮಾಡುವ ಪ್ರಯತ್ನ ನಡೆಯುತ್ತಿರುತ್ತದೆ. ಆದರೆ ಈ ನಟಿ ಕೇವಲ ತನ್ನ ಮನೆಯ ಛಾವಣಿಯ ಮೇಲೆ, ನೈಸರ್ಗಿಕ ಬೆಳಕಿನಲ್ಲಿ ತನ್ನ ಪ್ರತಿಭೆಯನ್ನು ತೋರಿದ್ದಾರೆ. ಪ್ರತಿಭೆಗೆ ಸಾಧನಗಳ ಹಂಗಿಲ್ಲ ಎಂಬುದನ್ನು ಈ ವಿಡಿಯೋ ಸಾಬೀತುಪಡಿಸಿದೆ. 

ಇಲ್ಲಿದೆ ನೋಡಿ ವೈರಲ್ ವಿಡಿಯೋ 

PREV
Read more Articles on
click me!

Recommended Stories

ಬಿಎಂಟಿಸಿ ಬಸ್ ಮೇಲಿದ್ದ 'ಕನ್ನಡಿಗ' ಸ್ಟಿಕರ್ ತೆಗೆಸಿದ ಮ್ಯಾನೇಜರ್! ಕನ್ನಡ ನಾಡಲ್ಲೇ ಕನ್ನಡಕ್ಕೆ ಅವಮಾನ
Gen-z: ಭಾರತದ ಪ್ರಧಾನಿ ದ್ರೌಪದಿ ಮುರ್ಮು ಅಂತೆ, ಇನ್ನೊಬ್ಬ 'I have no clue' ಅಂತಾನೆ! ಇವರೇ ನೋಡಿ ಜೆನ್-ಜೀಗಳು