
ಮಧ್ಯಪ್ರದೇಶ: ಸರ್ಕಾರ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ನಾಯಿ ವೇಷದಲ್ಲಿ ಬಂದು ನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿ ಹಾವಳಿ ನಿಯಂತ್ರಣ, ಸಂತಾನಹರಣ ಯೋಜನೆಯಲ್ಲಿನ ಅವ್ಯವಸಹರಗಳಿಗೆ ಸಂಬಂಧಿಸಿದಂತೆ ಅವರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಘಟನೆ ಮಧ್ಯಪ್ರದೇಶದ ಖಾಂಡ್ಲಾದಲ್ಲಿ ನಡೆದಿದೆ.
ಖಾಂಡ್ಲಾದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಪರಿಹರಿಸುವ ಕಾರ್ಯಕ್ರಮ ನಡೆದಿತ್ತು. ಈ ವೇಲೆ ಖಾಂಡ್ಲಾ ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ್(ಮಲ್ಲು) ರಾಥೋಡ್ ಅವರು ನಾಯಿಯ ಮುಖವಾಡ ಹಾಕಕೊಂಡು ಬಂದು ವಿನೂತನವಾಗಿ ಪ್ರತಿಭಟನಿಸಿದರು.
ಸಂತಾನಹರಣ ಚಿಕಿತ್ಸೆ ಆದ್ರೂ ಆರು ಮರಿಗಳಿಗೆ ಅಪ್ಪನಾದ ನಾಯಿ!
ರಾಥೋಡ್ ಅವರು ನಾಯಿ ಮುಖವಾಡ ಧರಿಸಿದ ವ್ಯಕ್ತಿಯೊಂದಿಗೆ ಸಭೆಗೆ ಬಂದಾಗ, ಮೊದಲು ಪೊಲೀಸರು ಅವರನ್ನು ತಡೆಯಲು ಯತ್ನಿಸಿದರು. ಆದರೆ, ಒಳಗಿದ್ದ ಅಧಿಕಾರಿಗಳು ಅವರನ್ನು ಒಳಗೆ ಬಿಡುವಂತೆ ಸೂಚಿಸಿದರು.
ಸಭೆಯಲ್ಲಿ ರಾಥೋಡ್ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಪಾಲಿಕೆ ಅಧಿಕಾರಿಗಳು ಉತ್ತರಿಸದೇ ಮೌನವಾದರು. ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಮತ್ತು ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಅವರು ಅಂಕಿಅಂಶಗಳ ಸಮೇತ ದೂರು ಸಲ್ಲಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಖಾಂಡ್ವಾದಲ್ಲಿ 13,225 ಜನರಿಗೆ ನಾಯಿಗಳು ಕಚ್ಚಿವೆ ಎಂದು ಅವರು ಹೇಳಿದರು. ಅಲ್ಲದೆ, ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಸಂತಾನಹರಣ ಯೋಜನೆಗೆ 40 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು.
📺ವೀಕ್ಷಿಸಿ | ಮಧ್ಯಪ್ರದೇಶದ ಖಾಂಡ್ವಾದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಮತ್ತು ಅವುಗಳಿಂದಾಗುವ ಸಮಸ್ಯೆಗಳ ವಿರುದ್ಧ ಪ್ರತಿಭಟಿಸಲು ನಾಯಿಯ ವೇಷ ಧರಿಸಿ ಸಾರ್ವಜನಿಕ ಅಹವಾಲು ಸಭೆಗೆ ಹಾಜರಾದ ವ್ಯಕ್ತಿ pic.twitter.com/aLxizQDwa5
— The Tatva (@thetatvaindia) August 19, 2026
ರಾಥೋಡ್ ಅವರು ಮುಖವಾಡ ಧರಿಸಿದ ವ್ಯಕ್ತಿಯನ್ನು 'ನಾಯಿ' ಎಂದೇ ಪರಿಚಯಿಸಿ, ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಈ 'ನಾಯಿ'ಗೆ ಸಂತಾನಹರಣ ಚಿಕಿತ್ಸೆ ನೀಡಲಾಗಿದ್ದರೂ, ಅದು ಆರು ಮರಿಗಳಿಗೆ ತಂದೆಯಾಗಿದೆ ಎಂದು ಅವರು ವ್ಯಂಗ್ಯವಾಗಿ ಹೇಳಿದರು. ಹಾಗಾದರೆ ಈ ಯೋಜನೆ ಸರಿಯಾಗಿ ಜಾರಿಯಾಗಿದೆಯೇ ಎಂದು ಅವರು ಪ್ರಶ್ನಿಸಿದರು.
ಒಂದು ವೇಳೆ ತಮ್ಮ ದೂರನ್ನು ಪರಿಗಣಿಸದಿದ್ದರೆ, ಈ 'ನಾಯಿ' ನಗರ ಪಾಲಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದೆ ಎಂದೂ ಎಚ್ಚರಿಸಿದರು. ಮುಖವಾಡ ಧರಿಸಿದ ಈ 'ನಾಯಿ' ತುಂಬಾ 'ವಿದ್ಯಾವಂತ ಮತ್ತು ಬುದ್ಧಿವಂತ'ನಾಗಿದ್ದು, ಕೈಮುಗಿದು ತನ್ನ ದೂರನ್ನು ಸಭ್ಯವಾಗಿ ಮಂಡಿಸಿದೆ ಎಂದು ರಾಥೋಡ್ ಹೇಳಿದರು.
ಈ ವಿಭಿನ್ನ ಪ್ರತಿಭಟನೆಯಿಂದ ಸಭಾಂಗಣದಲ್ಲಿದ್ದ ಜನರು ಅಚ್ಚರಿಗೊಂಡರು. ಕೆಲವರು ನಕ್ಕರು. ದೂರನ್ನು ವಿವರವಾಗಿ ಆಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕಾಶಿರಾಂ ಬಡೋಲೆ, ಸಮಿತಿಯೊಂದನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಪ್ರತಿಭಟನೆ ಸದ್ಯ ಎಲ್ಲರ ಗಮನ ಸೆಳೆದಿದೆ.