ಭಾರತದಲ್ಲಿ 60 ರೂ ಪಾನಿಪೂರಿಗೆ ದುಬಾರಿ ಎಂದ ರಷ್ಯಾ ಲೇಡಿ ದುಬೈನಲ್ಲಿ ಬೆಲೆ ನೋಡಿ ಕಂಗಾಲು

Published : Aug 19, 2026, 12:39 PM IST
Russian Model Shocked by Dubai Pani Puri Price

ಸಾರಾಂಶ

ಭಾರತ ಪ್ರವಾಸದ ವೇಳೆ 60 ರೂಪಾಯಿ ಪಾನಿ ಪೂರಿಗೆ ದುಬಾರಿ ಎಂದು ವಿಡಿಯೋ ಮಾಡಿದ್ದ ರಷ್ಯಾ ಯುವತಿ ಇದೀಗ ದುಬೈನಲ್ಲಿ ಇದೇ ಪಾನಿಪೂರಿ ಬೆಲೆ ನೋಡಿ ಕಂಗಾಲಾಗಿದ್ದಾರೆ. ನಾನು ಭಾರತವನ್ನು ತಪ್ಪಾಗಿ ಅರ್ಥೈಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರಷ್ಯಾದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಇರಿನಾ ರುಡಕೋವಾ ಭಾರತ ಪ್ರವಾಸದಲ್ಲಿ ಹಲವು ಕಡೆ ತಿರುಗಾಡಿದ್ದಾರೆ. ಈ ವೇಳೆ ಮುಂಬೈನಲ್ಲಿ ಪಾನಿ ಪೂರಿ ತಿಂದು ಬೆಲೆ ಕುರಿತು ಟ್ರೋಲ್ ಮಾಡಿ ವಿಡಿಯೋ ಮಾಡಿದ್ದರು. ಭಾರತದ ಅಭಿವೃದ್ಧಿ ಹೊಂದುತ್ತಿರುವ ದೇಶ. ಆದರೆ ಇಲ್ಲಿ ನೀರೇ ಹೆಚ್ಚಿರುವ ಪಾನಿಪೂರಿಗೆ 60 ರೂಪಾಯಿ ಎಂದು ವಿಡಿಯೋ ಮಾಡಿದ್ದರು. ಬಳಿಕ ದುಬೈಗೆ ತೆರಳಿದ ಇನ್‌ಫ್ಲುಯೆನ್ಸರ್ ಅಲ್ಲಿ ಪಾನಿಪೂರಿ ಆರ್ಡರ್ ಮಾಡಿದ್ದಾರೆ. ಆದರೆ ದುಬೈನಲ್ಲಿ ಬೆಲೆ ನೋಡಿ ರಷ್ಯಾ ಲೇಡಿ ಕಂಗಾಲಾದ ಘಟನೆ ನಡೆದಿದೆ.

ಭಾರತ ದುಬಾರಿ ಎಂದಿದ್ದ ಇರಿನಾ

ಇರಿನಾ ರುಡಕೋವಾ ಭಾರತದ ಟಿವಿ ಶೋಗಳಲ್ಲೂ ಕಾಣಿಸಿಕೊಂಡ ರಷ್ಯನ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಮಾಡೆಲ್. ಬಿಗ್ ಬಾಸ್ ಮರಾಠಿಯಲ್ಲಿ ಕಾಣಿಸಿಕೊಂಡಿದ್ದ ಇರಿನಾ ರುಡಕೋವಾ ಬಳಿಕ ಭಾರತದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಇರಿನಾ ರುಡಕೋವಾ ಲೊಖಂಡವಾಲ ಮಾರುಕಟ್ಟೆಗೆ ತೆರಳಿದ್ದರು. ಇಲ್ಲಿ ಪಾನಿಪೂರಿ ತಿಂದು ಬೆಲೆ ಕೇಳಿದಾಗ 60 ರೂಪಾಯಿ. ನಾಲ್ಕು ಬಾರಿ 60 ರೂಪಾಯಿನಾ ಎಂದು ಕೇಳಿದ ಇರಿನಾ ಬಲು ದುಬಾರಿ ಎಂದು ವಿಡಿಯೋ ಮೂಲಕ ಹೇಳಿದ್ದರು. ಬೀದಿ ಬದಿಯಲ್ಲಿ ಸಿಗುವ ಈ ಪಾನಿಪೂರಿಗೆ 60 ರೂಪಾಯಿ ಎಂದು ಹೇಳುವ ಮೂಲಕ ಭಾರತ ದುಬಾರಿ ಎಂದಿದ್ದರು.

ದುಬೈನಲ್ಲಿ ಪಾನಿಪೂರಿ ಬೆಲೆ 1096 ರೂಪಾಯಿ

ಇರಿನಾ ಲೋಖಂಡವಾಲ ಪಾನಿಪೂರಿ ದುಬಾರಿ ಎಂದು ವಿಡಿಯೋ ಪೋಸ್ಟ್ ಮಾಡಿದ ಬಳಿಕ ಇತ್ತೀಚೆಗೆ ದುಬೈಗೆ ಪ್ರವಾಸ ತೆರಳಿದ್ದಾರೆ. ದುಬೈಗೆ ಬಂದಿಳಿದ ಇರಿನಾ ಭಾರತದ ಅದೇ ಪಾನಿಪೂರಿ ನೋಡಿದ್ದಾರೆ. ದುಬೈನಲ್ಲಿ ಪಾನಿಪೂರಿ ಬೆಲೆ 42 ದಿರ್ಹಾಮ್. ಅಂದರೆ ಭಾರತೀಯ ರೂಪಾಯಿಗಳಲ್ಲಿ 1,096 ರೂಪಾಯಿ. ಈ ಬೆಲೆ ನೋಡಿದ ಬಳಿಕ ನಾನು ಮತ್ತೆ ಮುಂಬೈಗೆ ಓಡಿ ಬರುತ್ತಿದ್ದೇನೆ ಎಂದಿದ್ದಾರೆ.

ಭಾರತದ 60 ರೂಪಾಯಿ ಮಾತು ವಾಪಸ್ ಪಡೆಯುತ್ತಿದ್ದೇನೆ ಎಂದು ಇರಾನಿ ಹೇಳಿದ್ದಾರೆ. ಲೋಖಂಡವಾಲದಲ್ಲಿ 60 ರೂಪಾಯಿ ಪಾನಿಪೂರಿ ದುಬಾರಿ ಎಂದು ಹೇಳಿದ್ದೆ. ಆದರೆ ದುಬೈ ಬೆಲೆ ನೋಡಿದಾಗ ಭಾರತದಲ್ಲೇ ಕಡಿಮೆ ಬೆಲೆಗೆ ಎಲ್ಲಾ ಸೌಲಭ್ಯ ಸಿಗುತ್ತೆ ಅನ್ನೋದು ಅರಿವಾಯಿತು ಎಂದಿದ್ದಾರೆ. ಹಲವು ಇರಾನಿ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ಭಾರತದ ವಿಶೇಷ ತಿಂಡಿಗಳನ್ನು ಭಾರತದಲ್ಲೇ ತಿನ್ನಿ. ಬೆಲೆಯೂ ಕಡಿಮೆ ಜೊತೆಗೆ ಮೂಲ ಸ್ವಾದ ಇರಲಿದೆ. ಭಾರತದಲ್ಲಿ 20 ರೂಪಾಯಿಗೂ ಉತ್ತಮ ಪಾನಿಪೂರಿ ಸಿಗುತ್ತೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

ಲಕ್ಷ ಲಕ್ಷ ಸಂಪಾದನೆ ಇದ್ದರೂ ನೆಮ್ಮದಿ ಇಲ್ಲ, ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಕಳೆದುಕೊಂಡು ಕಣ್ಣೀರಿಟ್ಟ ಯುವತಿ
'ಹುಡುಗಿಯರು ಫಾಲೋ ಮಾಡೋವರ್ಗೂ ಟ್ರ್ಯಾಕ್ ಬಿಡಲ್ಲ!': ಲೈಕ್ಸ್, ಫಾಲೋವರ್ಸ್‌ಗಾಗಿ ಸಾವಿನ ಜೊತೆ ಸರಸ ಆಡಿದ ಯುವಕ!