
ಕುಡಿತ ಚಟವಾದವರಿಗೆ ಎಣ್ಣೆ ಇಲ್ಲದೇ ಹೋದರೆ ಏನೋ ಕಳೆದುಕೊಂಡಂತಾಗುತ್ತದೆ. ಕುಡಿತಕ್ಕೆ ದಾಸರಾದ ಕೆಲವರು ಮನೆ ಮಠ ಹೆಂಡತಿ ಮಕ್ಕಳನ್ನು ಬೇಕಾದರೂ ಬಿಡಲು ಸಿದ್ಧರಿರುತ್ತಾರೆ. ಆದರೆ ಕುಡಿತವನ್ನು ಮಾತ್ರ ಬಿಡಲಾರರು. ಹೀಗೆ ಚಟಕ್ಕೆ ಬಿದ್ದವರು ಒಂದು ಪೆಗ್ ಎಣ್ಣೆಗಾಗಿ ಏನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಆದರೆ ಇಲ್ಲೊಂದು ಕಡೆ ಕುಡುಕನೋರ್ವ ಮದ್ಯದ ಅಂಗಡಿ ಬಾಗಿಲು ಹಾಕಿದ್ದರು, ಎಣ್ಣೆ ಪಡೆಯುವ ಉದ್ದೇಶದಿಂದ ಬಾರ್‌ನ ಕಬ್ಬಿಣದ ಸರಳುಗಳ ಮಧ್ಯೆ ತಲೆ ಹೊಕ್ಕಿಸಿದ್ದು, ಬಳಿಕ ವಾಪಸ್ ತಲೆಯನ್ನು ಹೊರಗೆ ತೆಗೆಯಲಾಗದೇ ಪರದಾಡಿದಂತಹ ಘಟನೆ ನಡೆದಿದೆ.
ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಜನರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. @jist.news ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಮುಚ್ಚಿದ ಮದ್ಯದ ಅಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿ ವ್ಯಕ್ತಿಯೊಬ್ಬ ಮದ್ಯದ ಬಾಟಲಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ ತಲೆ ಸಿಲುಕಿಕೊಂಡಿದೆ. ಮದ್ಯಕ್ಕಾಗಿ ಆತ ಮಾಡಿದ ಹತಾಶ ಪ್ರಯತ್ನವು ಅವನನ್ನು ಸಂಕಷ್ಟಕ್ಕೆ ಸಿಲುಕಿಸಿತು ಎಂದು ಬರೆಯಲಾಗಿದೆ.
ವೀಡಿಯೋದಲ್ಲಿ ಬಾರ್ ಮುಂದಿನ ಕಬ್ಬಿಣದ ಗ್ರಿಲ್ ಮಧ್ಯೆ ಆತನ ತಲೆ ಸಿಲುಕಿದ್ದು, ಆತ ತಲೆಯನ್ನು ಹೊರತೆಗೆಯಲು ಪ್ರಯತ್ನಿಸುವುದನ್ನು ವೀಡಿಯೋದಲ್ಲಿ ಕಾಣಬಹುದು. ಅಲ್ಲೆ ಇದ್ದ ಇತರರು ಕಬ್ಬಿಣದ ಸರಳನ್ನು ಗಟ್ಟಿಯಾಗಿ ಕೈಲ್ಲಿ ಹಿಡಿದು ಎಳೆದು ಆತನ ತಲೆಯನ್ನು ಆ ಸರಳುಗಳ ಎಡೆಯಿಂದ ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಕಡೆಗೂ ಅಲ್ಲಿದ್ದ ಇತರ ಕೆಲವರ ಸಹಾಯದಿಂದ ಸರಳುಗಳ ಎಡೆ ಸಿಲುಕಿದ್ದ ವ್ಯಕ್ತಿಯ ತಲೆ ಬಂಧಮುಕ್ತವಾಗಿದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಆದರೆ ವೀಡಿಯೋ ಭಾರಿ ವೈರಲ್ ಆಗುತ್ತಿದ್ದು, ಜನ ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದು ಇದು ಸ್ಪಿರೀಟ್ ಅಂದ್ರೆ ಅಂತ ಕಾಮೆಂಟ್ ಮಾಡಿದ್ದಾರೆ. ಕೆಲವರು ಸರಳಿನ ಮಧ್ಯೆ ನುಗ್ಗಿದ ಮೇಲಾದ್ರೂ ಅವರಿಗೆ ಬಾಟಲ್ ಸಿಕ್ತಾ ಇಲ್ವಾ ಎಂದು ಕಾಮೆಂಟ್ ಮಾಡಿದ್ದಾರೆ. ತಲೆ ಸಿಲುಕಿಕೊಂಡಿದ್ದರು ಆತ ಕೈನಲ್ಲಿರುವ ಬಾಟ್ಲ್ ಬಿಡುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಚಟಕ್ಕಿರುವ ಪವರ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬಾಟಲ್ ಒಡೆದು ಹೋಗದೇ ಜಾಗರೂಕವಾಗಿ ಆತನನ್ನು ಹೊರಗೆಳೆಯಿರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.