‘ತಿಂಗಳಿಗೆ 70,000 ರೂ.’: ಋಷಿಕೇಶದಲ್ಲಿ ದಿನಕ್ಕೆ 3 ಗಂಟೆ ಈ ಕೆಲಸ ಮಾಡಿ ಯುವಕ ಗಳಿಸಿದ್ದೆಷ್ಟು?

Published : Jun 24, 2026, 03:52 PM IST
Rishikesh

ಸಾರಾಂಶ

ಯುವಕನೊಬ್ಬ ಧಾರ್ಮಿಕ ಕ್ಷೇತ್ರವಾದ ಋಷಿಕೇಶದಲ್ಲಿ ದಿನಕ್ಕೆ ಮೂರು ಗಂಟೆ ಈ ಒಂದು ಕೆಲಸ ಮಾಡಿ, 2,350 ರೂ. ಗಳಿಸಿದ್ದಾರೆ. ಅಂದ್ರೆ ತಿಂಗಳಿಗೆ ಈ ವ್ಯಕ್ತಿ ಇದನ್ನೆ ಮಾಡಿ ಸುಲಭವಾಗಿ 70,000 ರೂಪಾಯಿ ಗಳಿಸಬಹುದು. ಅಷ್ಟಕ್ಕೂ ಆ ಯುವಕ ಮಾಡಿದ ಕೆಲಸ ಏನು ಗೊತ್ತಾ? 

ಋಷಿಕೇಶದಲ್ಲಿ ಈ ಕೆಲಸ ಮಾಡಿದ್ರೆ ತಿಂಗಳಿಗೆ 70,000 ರೂ ಗ್ಯಾರಂಟಿ

ದಿನಕ್ಕೆ 9 ರಿಂದ 10 ಗಂಟೆಗಳ ಕಾಲ ಕೆಲಸ ಮಾಡಿ ಕೇವಲ 1000 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಸಂಪಾದಿಸುವ ಜನರು ನಮ್ಮ ನಿಮ್ಮ ನಡುವೆ ತುಂಬಾ ಜನ ಇದ್ದಾರೆ. ದಿನವಿಡಿ ದುಡಿದರೂ ತಿಂಗಳಿಗೆ 30 ಸಾವಿರ ಸ್ಯಾಲರಿ ಆದ್ರೆ, ಅದು ಹಾಗೇ ಬಂದು, ಹೀಗೆ ಹೋಗಿ ಬಿಡುತ್ತೆ. ದುಡ್ಡು ಉಳಿಸೋದೆ ಕಷ್ಟವಾಗುತ್ತಿದೆ. ಆದರೆ ಋಷಿಕೇಶದ ಈ ಯುವಕ ಮಾತ್ರ ದಿನಕ್ಕೆ ಕೇವಲ 3 ಗಂಟೆ ಕೆಲಸ ಮಾಡಿ ಒಂದೇ ದಿನದಲ್ಲಿ 2000ಕ್ಕೂ ಅಧಿಕ ಹಣ ಗಳಿಸಿದ್ದಾರೆ. ಅಂದ್ರೆ ತಿಂಗಳಿಗೆ ಸುಮಾರು 70,000 ರೂಪಾಯಿ ಗ್ಯಾರಂಟಿ. ಅಷ್ಟಕ್ಕೂ ಆ ವ್ಯಕ್ತಿ ಮಾಡುತ್ತಿರುವ ಕೆಲಸ ಏನು ಗೊತ್ತಾ? ಸಾಮಾಜಿಕ ಮಾಧ್ಯಮದಲ್ಲಿ ಆ ವ್ಯಕ್ತಿಯ ವಿಡೀಯೋ ವೈರಲ್ ಆಗುತ್ತಿದ್ದು, ಆ ವ್ಯಕ್ತಿಯು ಉತ್ತರಾಖಂಡದ ಋಷಿಕೇಶದಲ್ಲಿ ಗಂಗಾ ನದಿಯ ಬಳಿ ಭಕ್ತರಿಗೆ 'ತಿಲಕ' ಹಚ್ಚುವ ಮೂಲಕ ಹೇಗೆ ತಿಂಗಳಿಗೆ ಸುಲಭವಾಗಿ ಬರೋಬ್ಬರಿ 70,000 ಗಳಿಸಬಹುದು ಎನ್ನುವ ಬಗ್ಗೆ ತಿಳಿಸಿದ್ದಾರೆ.

ಈ ವ್ಯಕ್ತಿ ‘ತಿಲಕ’ ಹಚ್ಚಲು ಶುರು ಮಾಡಿದಾಗ ಅಂದರೆ ದಿನದ ಆರಂಭದಲ್ಲಿ ಹೆಚ್ಚಿನ ಜನರು ತಿಲಕ ಹಚ್ಚಿಸಿಕೊಳ್ಳಲು ಬರುತ್ತಿರಲಿಲ್ಲವಂತೆ. ಆದರೆ ಬಹಳ ಪ್ರಸಿದ್ಧವಾದ ಗಂಗಾ ಆರತಿ ಪ್ರಾರಂಭವಾದ ಕೂಡಲೇ, ಭಕ್ತರು 'ತಿಲಕ'ಕ್ಕಾಗಿ ಅವರನ್ನು ಸಂಪರ್ಕಿಸಲು ಪ್ರಾರಂಭಿಸಿದ್ದರಂತೆ, ಕೆಲವರು 20 ರೂ. ನೀಡಿದ್ರೆ, ಇನ್ನೂ ಕೆಲವರು 100 ರೂ.ಗಳನ್ನು ಸಹ ನೀಡಿದ್ದರಂತೆ. ದಿನದ ಅಂತ್ಯದ ವೇಳೆಗೆ ನೋಡಿದ್ರೆ ಆತನ ಕೈಯಲ್ಲಿ ಸುಮಾರು 2,350 ರೂ.ಗಳು ಇದ್ದವು. ಹಣ ಹೆಚ್ಚು ಗಳಿಸುವಂತಾದುದು ದಿನದ ಕೊನೆಯ ಗಳಿಯಲ್ಲಿ. ಪ್ರತಿದಿನ ಹೀಗೆ ಮುಂದುವರೆದರೆ, ಒಂದು ತಿಂಗಳಲ್ಲಿ ಬರೋಬ್ಬರಿ 70,000 ರೂ. ಗಳಿಸಬಹುದು.

ಸದ್ಯ ಈ ವೀಡಿಯೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ದಿನವಿಡಿ 10-12 ಗಂಟೆ ಕಷ್ಟ ಪಟ್ಟು ದುಡಿದರೂ, ವರ್ಷ ಪೂರ್ತಿ ಬೆವರು ಸುರಿಸಿದರೂ ಅಥವಾ ಕಂಪ್ಯೂಟರ್ ಮುಂದೆ ಕುಳಿತರೂ ಸಹ ಇಷ್ಟೊಂದು ದುಡಿಯಲು ಸಾಧ್ಯವಿಲ್ಲ. ನಿತ್ಯ ಮೂರು ಗಂಟೆ ಋಷಿಕೇಶದಲ್ಲಿ ತಿಲಕ ಹಚ್ಚಿದ್ರೆ ಸಾಕು. ಒಂದು ವರ್ಷದಲ್ಲಿ ಕಡಿಮೆ ಅಂದ್ರೂ 8.5 ಲಕ್ಷ ಗಳಿಸೋದಂತೂ ಖಚಿತಾ.

ನೆಟ್ಟಿಗರು ಈ ಬಗ್ಗೆ ಏನು ಹೇಳ್ತಿದ್ದಾರೆ?

ಈ ವಿಡೀಯೋ ವೈರಲ್ ಆಗುತ್ತಿದ್ದಂತೆ ಜನ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. “ಮುಂದಿನ ಬೇಸಿಗೆಯ ಇಂಟರ್ನ್‌ಶಿಪ್ ಯೋಜನೆ,” ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, ಮುಂದೆ ನೀವು ನನ್ನನ್ನು ಋಷಿಕೇಶದಲ್ಲಿ ತಿಲಕ ಹಚ್ಚೋದನ್ನು ನೋಡಿ ಶಾಕ್ ಆಗ್ಬೇಡಿ ಎಂದು ಪ್ರತಿಕ್ರಿಸಿದ್ದಾರೆ. ಮತ್ತೆ ಕೆಲವರು, ನಾವು ಈಗಲೇ ನಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ, ನಾಳೆಯೇ ಬಸ್ ಹಿಡಿದು ಋಷಿಕೇಶಕ್ಕೆ ಬರುತ್ತೇವೆ ಎಂದಿದ್ದಾರೆ.

ಆದರೆ ಇನ್ನೂ ಕೆಲವರು ಕಾಮೆಂಟ್ ಮಾಡಿ ‘ತಿಲಕ ಹಚ್ಚಿದ್ದಕ್ಕೆ ಹಣ ನೀಡುವುದು ಕಡ್ಡಾಯವಲ್ಲ, ಸ್ವಯಂಪ್ರೇರಿತ ಭಾಗವಾಗಿರಬೇಕಿತ್ತು, ಆದರೆ ದುಃಖಕರವೆಂದರೆ ಕೆಲವು ಜನರು / ಮಾನವ ದುರಾಸೆ ಇದನ್ನು ಒಂದು ರೀತಿಯ ವ್ಯವಹಾರವನ್ನಾಗಿ ಮಾಡಿದೆ, ಕೆಲವರಿಗೆ ಇದು ಅವರ ದೈನಂದಿನ ಗಳಿಕೆಯ ಒಂದು ಭಾಗವಾಗಿದೆ, ಕೆಲವರು 10, 20ರೂ ನೀಡಿದರೆ, ಇನ್ನೂ ಕೆಲವರು ದೇವರ ಹೆಸರಿನಲ್ಲಿ ಮತ್ತಷ್ಟು ಹೆಚ್ಚು ಹಣವನ್ನು ನೀಡುತ್ತಾರೆ’ ಎಂದಿದ್ದಾರೆ.

PREV
Read more Articles on
click me!

Recommended Stories

ವಿಜಯನಗರ ಸಾಮ್ರಾಜ್ಯದ ಅಪರೂಪದ ತ್ರಿಭಾಷಾ ಶಾಸನ ಆಂಧ್ರದ ತಿರುಪತಿ ಕಾಡಲ್ಲಿ ಪತ್ತೆ! ಅಪರೂಪದ ದಾಖಲೆ ಉಲ್ಲೇಖ
ಗುಂಡಿಯೆಲ್ಲಾ ಸರಿಯಾಗಿ ಮುಚ್ಬೇಕು.. ಮುಂಬೈ ಮೇಯರ್‌ BMC ಅಧಿಕಾರಿಗೆ ಹೇಳುವಾಗಲೇ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ!