
ಕೆಲ್ಸವನ್ನು ಬಲದಿಂದ ಅಲ್ಲ, ಬುದ್ಧಿವಂತಿಕೆ (Wisdom)ಯಿಂದ ಮಾಡ್ಬೇಕು ಎನ್ನುವ ಮಾತೊಂದಿದೆ. ಯಾವ್ದೆ ಕೆಲ್ಸ ಆಗಿರಲಿ ಅದನ್ನು ಹೇಗೆಲ್ಲ ಮಾಡ್ಬಹುದು ಎಂಬುದನ್ನು ಮೊದಲು ಯೋಚಿಸಿ, ಸುಲಭವಾಗಿ ಮಾಡಿದ್ರೆ ಗೆಲುವು ನಮ್ದೆ. ಈಗಿನ ಪೇರೆಂಟ್ಸ್, ಮಕ್ಕಳ ಮಾರ್ಕ್ಸ್ ಹಿಂದೆ ಬಿದ್ದಿದ್ದಾರೆ. ಸ್ಕೂಲ್ ಗೆ ಹೋಗಿ ಒಂದಿಷ್ಟು ಬುಕ್ಸ್ ಓದಿ, ಅದ್ರಲ್ಲಿರುವ ವಿಷ್ಯವನ್ನು ಬಾಯಿಪಾಠ ಮಾಡಿ ಬಟ್ಟಿ ಇಳಿಸುವ ಮಕ್ಕಳು ಔಟ್ ಆಫ್ ಔಟ್ ಮಾರ್ಕ್ಸ್ ತೆಗಿತಿದ್ದಾರೆ. ಆದ್ರೆ ಅಂಗಡಿಗೆ ಹೋಗಿ ಅರ್ಥ ಲೀಟರ್ ಹಾಲು ಖರೀದಿ ಮಾಡೋಕೆ ಮಕ್ಕಳಿಗೆ ಬರ್ತಿಲ್ಲ. ಕಲಿಕೆ ಅನ್ನೋದು ಪುಸ್ತಕದಿಂದ ಬರೋದಲ್ಲ. ಅದು ಜೀವನದ ಪಾಠ. ನಿತ್ಯ ನಡೆಯುವ ಪ್ರತಿಯೊಂದು ವಿಷ್ಯದಿಂದ ಮನುಷ್ಯ ಕಲಿಯುತ್ತಾನೆ. ಮಕ್ಕಳಿಗೆ ಪುಸ್ತಕ ಮಾತ್ರ ಮುಖ್ಯವಲ್ಲ. ಪಾಠದ ಜೊತೆ ಆಟ, ಬುದ್ಧಿವಂತಿಕೆ, ಸಾಮಾನ್ಯ ಜ್ಞಾನ, ಕ್ರಿಯೇಟಿವಿಟಿ ಕಲಿಸೋದು ಬಹಳ ಮುಖ್ಯ. ಸ್ಕೂಲ್ ನಲ್ಲಿ ಮಾತ್ರವಲ್ಲ ಮನೆಯಲ್ಲಿ ಕೂಡ ಮಕ್ಕಳಿಗೆ ಆಸಕ್ತಿಕರ ವಿಷ್ಯವನ್ನು ಕಲಿಸ್ತಾ ಬಂದಂತೆ ಮಕ್ಕಳು ಬುದ್ಧಿವಂತರಾಗ್ತಾರೆ. ಯಾವುದೇ ಸಮಸ್ಯೆಯಿಲ್ಲದೆ ಜೀವನವನ್ನು ಮುನ್ನಡೆಸ್ತಾರೆ.
ಜಿನ್ ಜೀಗಳಿಗಿಂತ ಜೆನ್ ಅಲ್ಫಾ ಮಕ್ಕಳು ಮತ್ತಷ್ಟು ಬುದ್ಧಿವಂತರು. ಆದ್ರೆ ಸೋಶಿಯಲ್ ಮೀಡಿಯಾ, ಗ್ಯಾಜೆಟ್ ಅವ್ರ ಬುದ್ಧಿವಂತಿಕೆಯನ್ನು ಒಂದ್ಕಡೆ ತಗ್ಗಿಸ್ತಿದೆ. ನೆನಪಿನ ಶಕ್ತಿಯನ್ನು ಕಡಿಮೆ ಮಾಡ್ತಿದೆ. ಇನ್ನೊಂದು ಕಡೆ ಅಚ್ಚರಿ ಹುಟ್ಟಿಸುವ ಕೆಲ್ಸವನ್ನೂ ಈ ಮಕ್ಕಳು ಮಾಡ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಬಾಲಕಿ ವಿಡಿಯೋ ವೈರಲ್ ಆಗಿದೆ. ಆಕೆ ನೀರು ತುಂಬಿದ ಗ್ಲಾಸ್ ನಿಂದ ಸಿಪ್ಪೆ ಸುಲಿದಿರುವ ಕಿತ್ತಳೆ ಹಣ್ಣನ್ನು ಅತ್ಯಂತ ಸರಳವಾಗಿ ಹೊರಗೆ ತೆಗೆಯುತ್ತಾಳೆ.
ರೊಟ್ಟಿ ಉಬ್ಬಿಸೋದು ಕಷ್ಟ ಅಲ್ವೇಅಲ್ಲ, ದೇಸಿ ಟ್ರಿಕ್ ಟ್ರೈ ಮಾಡಿ
Enezator ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಒಂದು ನೀರು ತುಂಬಿದ ಗ್ಲಾಸ್ ಒಳಗೆ ಸಿಪ್ಪೆ ತೆಗೆದ ಆರೇಂಜ್ ಇರೋದನ್ನು ನೀವು ನೋಡ್ಬಹುದು. ಗ್ಲಾಸಿನಿಂದ ಹನಿ ನೀರನ್ನೂ ಬೀಳಿಸಿದೆ ಆರೇಂಜ್ ಹೊರಗೆ ತೆಗೆಯಬೇಕು. ಇದು ಮಕ್ಕಳಿಗೆ ಇರುವ ಟಾಸ್ಕ್. ಶಾಲೆಯಲ್ಲಿ ಈ ಟಾಸ್ಕ್ ನಡೆದಿದೆ. ಮಕ್ಕಳು ಒಬ್ಬರಾದ್ಮೇಲೆ ಒಬ್ಬರಂತೆ ಬರ್ತಾರೆ. ಗ್ಲಾಸ್ ಒಳಗೆ ಕೈ ಹಾಕಿ, ಆರೇಂಜ್ ತೆಗೆಯುವ ಪ್ರಯತ್ನ ಮಾಡ್ತಾರೆ. ಆದ್ರೆ ಗ್ಲಾಸ್ ತುಂಬಿದ್ದ ನೀರು ಹೊರಗೆ ಬೀಳುತ್ತೆ. ನಾಲ್ಕೈದು ಮಕ್ಕಳ ನಂತ್ರ ಒಬ್ಬ ಹುಡುಗಿ, ನೀರು ಬೀಳಿಸದೆ ಆರೇಂಜ್ ತೆಗೆಯೋದ್ರಲ್ಲಿ ಸಕ್ಸಸ್ ಆಗ್ತಾಳೆ.
ಗ್ಲಾಸ್ ಕೆಳಗಿದ್ದ ಆರೇಂಜನ್ನು ತೆಗೆಯೋದು ಸುಲಭ ಅಲ್ಲ. ಕೈ ಹಾಕಿದ್ರೆ ನೀರು ಹೊರಗೆ ಬರುತ್ತೆ. ಬುದ್ಧಿವಂತ ಬಾಲಕಿ ಆರೇಂಜ್ ತೆಗೆಯಲು ಎಲ್ಲ ಬೆರಳನ್ನು ನೀರಿನೊಳಗೆ ಹಾಕುವ ಬದಲು ಒಂದು ಬೆರಳನ್ನು ಹಾಕಿ ನೀರನ್ನು ತಿರುಗಿಸ್ತಾಳೆ. ನೀರು ಕೆಳಗೆ ಬೀಳದಂತೆ ಎಚ್ಚರಿಕೆಯಿಂದ ಬೆರಳನ್ನು ತಿರುಗಿಸ್ತಾಳೆ. ಆಕೆ ಬೆರಳು ಆಡಿಸ್ತಿದ್ದಂತೆ ಆರೇಂಜ್ ನಿಧಾನವಾಗಿ ಮೇಲೆ ಬರುತ್ತೆ.
Gen Z Employee ಬರೆದ ಲೀವ್ ಲೆಟರ್ ನೋಡಿ ಕಂಗಾಲಾದ ಬಾಸ್; ತಕ್ಷಣವೇ ಮಿಲಿಯನ್ ವೀಕ್ಷಣೆ
ಸೋಶಿಯಲ್ ಮೀಡಿಯಾ ಕಮೆಂಟ್ :
ಬಾಲಕಿ ಬುದ್ಧಿವಂತಿಕೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಇದು ಬಾಲಕಿ ಬುದ್ಧಿವಂತಿಕೆ ಅಲ್ಲ ಆಥರ್ ಐಡಿಯಾ ಎಂದಿದ್ದಾರೆ. ಇನ್ನು ಕೆಲವರು ವಿಡಿಯೋ ನೋಡಿ ತಮಾಷೆ ಕೂಡ ಮಾಡಿದ್ದಾರೆ. ಕೈ ಹಾಕಿ ಆರೇಂಜ್ ತೆಗೆಯೋ ಬದಲು ಗ್ಲಾಸ್ ನಲ್ಲಿರುವ ನೀರು ಕುಡಿದಿದ್ರೆ ಆಗಿತ್ತು ಅಂತ ತಮ್ಮ ಐಡಿಯಾ ನೀಡಿದ್ದಾರೆ. ಕಮೆಂಟ್ ಸೆಕ್ಷನ್ ನಲ್ಲಿ ನೀವು ಇನ್ನಷ್ಟು ಆಸಕ್ತಿಕರ ವಿಡಿಯೋಗಳನ್ನು ಕೂಡ ನೋಡ್ಬಹುದು. ಮಕ್ಕಳು ಐಕ್ಯೂ ಹೇಗಿರುತ್ತೆ ಎಂಬುದಕ್ಕೆ ಬಳಕೆದಾರರು ಅನೇಕ ವಿಡಿಯೋ ಪೋಸ್ಟ್ ಮಾಡಿದ್ದಾರೆ.