
ಬಾಡಿಗೆ ಪಡೆದವೆಂದರೂ ನೀರಿನ ಸಮಸ್ಯೆ, ಈ ರೀತಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜೀವನ ನಡೆಸುವುದು ದುಸ್ತರವಾಗಿದೆ. ನಗರದಲ್ಲಿ ಇಷ್ಟೆಲ್ಲ ಸವಾಲುಗಳಿದ್ದರೂ ಲಕ್ಷಾಂತರ ಮಂದಿ ಬೆಂಗಳೂರನ್ನು ಏಕೆ ಬಿಡಲು ತಯಾರಿಲ್ಲ? ಎಂಬ ಪ್ರಶ್ನೆಗೆ ನಗರದ ಟೆಕ್ಕಿಯೊಬ್ಬರು ನೀಡಿದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಹೊಸದೊಂದು ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರಿನ ನಿವಾಸಿ ಅಂಕಿತ್ ಎಂಬ ಟೆಕ್ಕಿ Instagram ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, 'ಬೆಂಗಳೂರು ಅನೇಕರಿಗೆ ಕೇವಲ ವಾಸದ ನಗರವಲ್ಲ. ಅದು ಅವರ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ನೀಡಿದ ಮಹತ್ವದ ಸ್ಥಳ ಎಂದು ಹೇಳಿದ್ದಾರೆ.
ಅಂಕಿತ್ ಹೇಳುವಂತೆ, ದುಡಿಯಲು ಬೆಂಗಳೂರಿಗೆ ಬಂದ ಹಲವರಿಗೆ ಮೊದಲ ಬಾರಿಗೆ ಉತ್ತಮ ಸಂಬಳದ ಉದ್ಯೋಗ ಸಿಕ್ಕಿದ್ದು ಇದೇ ನಗರದಲ್ಲಿ. ಇನ್ನು ಕೆಲವರು ಬೆಂಗಳೂರಿಗೆ ಬಂದು ಇಲ್ಲೇ ಸ್ಟಾರ್ಟ್‌ಅಪ್ ಆರಂಭಿಸಿದ್ದಾರೆ. ಮತ್ತೊಂದಿಷ್ಟು ಜನರು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನಕ್ಕೆ ದಾರಿ ತೋರಿದ ಮಾರ್ಗದರ್ಶಕರನ್ನೂ ಇದೇ ನಗರದಲ್ಲಿ ಭೇಟಿಯಾಗಿದ್ದಾರೆ. ಹೀಗಾಗಿ ನಗರದ ಸಮಸ್ಯೆಳೇನೇ ಇದ್ದರೂ ಜನರು ಬೆಂಗಳೂರನ್ನು ಬಿಡಲು ಮನಸ್ಸು ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಈ ವಿಡಿಯೋಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಅದರಲ್ಲೂ ಪ್ರತಿಕ್ರಿಯಿಸಿದವರು ಬೆಂಗಳೂರಿನ ನಗರ ನಿವಾಸಿಗಳು, ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡವರು ಹೆಚ್ಚು. ಅವರ ವಿಡಿಯೋದೊಂದಿಗೆ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.
ಪ್ರತಿದಿನ ಬೆಂಗಳೂರಿನ ಟ್ರಾಫಿಕ್, ದುಬಾರಿ ಮನೆ ಬಾಡಿಗೆ ಬಗ್ಗೆ ದೂರು ಹೇಳುತ್ತಲೇ ಇರುತ್ತೇವೆ. ಆದರೆ ಈ ನಗರವನ್ನು ಬಿಡಲು ನಮಗೆ ಸಾಧ್ಯವಾಗುವುದಿಲ್ಲ, ಹಲವರು ಸಮಸ್ಯೆಗಳಿದ್ದರೂ ಇಲ್ಲಿನ ಅವಕಾಶಗಳು ಜೀವನವನ್ನೇ ಬದಲಿಸುತ್ತವೆ' ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು ನಗರದ ಹವಾಮಾನ, ಉದ್ಯೋಗಾವಕಾಶ ಮತ್ತು ಸ್ಟಾರ್ಟ್‌ಅಪ್ ಸಂಸ್ಕೃತಿಯೇ ಬೆಂಗಳೂರಿನ ದೊಡ್ಡ ಆಕರ್ಷಣೆ ಎಂದು ಹೇಳಿದ್ದಾರೆ.