
ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಆಟೋ ಚಾಲಕಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಚಾಲಕಿ, ವೃತ್ತಿಯಿಂದ ಸಿಗ್ತಿರುವ ಸ್ವಾತಂತ್ರ್ಯ ಹಾಗೂ ನೆಮ್ಮದಿ ಬಗ್ಗೆ ಹೇಳಿಕೊಂಡಿದ್ದಾರೆ. ಪಾತ್ರೆ ತೊಳೆಯೋದಕ್ಕಿಂತ ಆಟೋ ಚಾಲನೆ ಬೆಸ್ಟ್ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪುರುಷ- ಮಹಿಳೆ ಎನ್ನುವ ಬೇಧವಿಲ್ಲ. ಎಲ್ಲ ಕೆಲ್ಸವನ್ನೂ ಮಹಿಳೆ ಆರಾಮವಾಗಿ, ಖುಷಿಯಾಗಿ ಮಾಡಬಲ್ಲಳು. ಟ್ರಾಫಿಕ್ ರಸ್ತೆಯಲ್ಲಿ ಕೂಲ್ ಆಗಿ ಆಟೋ ಓಡಿಸುವ ಅನೇಕ ಮಹಿಳೆಯರನ್ನು ನೀವು ಕಾಣ್ಬಹುದು. ಇಡೀ ದಿನ ಆಟೋ ಓಡಿಸೋದು ಕಷ್ಟ ಅಂತ ನೀವು ಭಾವಿಸ್ಬಹುದು ಆದ್ರೆ ಕೆಲವರಿಗೆ ಇದೇ ಖುಷಿ ನೀಡುತ್ತದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿರುವ ಮಹಿಳೆ ಮಾತು ಇದಕ್ಕೆ ಉತ್ತಮ ನಿದರ್ಶನ.
Jahnavi: 'ಅವನೇ ನನ್ನ ಪ್ರಪಂಚ, ಮಿಕ್ಕಂತೆ ಸಮಾಜ ಸೇವೆ+ ರಾಜಕೀಯಕ್ಕೆ ಮೀಸಲು ಎಂದ 'Bigg Boss' ಜಾಹ್ನವಿ!
ಅಮೆಜಾನ್ ಉದ್ಯೋಗಿ ಶ್ರೇಯಾಶಿ ಸಿನ್ಹಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಚಾಲಕಿ ಜೊತೆ ಮಾತು ಹೇಗೆ ಶುರು ಆಯ್ತು, ಆಟೋ ಚಾಲನೆ ಬಗ್ಗೆ ಚಾಲಕಿ ಹೇಳಿದ್ದೇನು ಎಂಬುದನ್ನು ಶ್ರೇಯಾಶಿ ಸಿನ್ಹಾ ಹಂಚಿಕೊಂಡಿದ್ದಾರೆ. ಶ್ರೇಯಾಶಿ ಸಿನ್ಹಾ ಪ್ರಕಾರ, ಅವರು ಬುಕ್ ಮಾಡಿದ್ದ ಆಟೋಕ್ಕೆ ಡ್ರೈವರ್ ಆಗಿ ಬಂದಿದ್ದು ಮಹಿಳೆ. ಚಾಲಕಿ ಫೋನ್ ವರ್ಕ್ ಆಗ್ತಿರಲಿಲ್ಲ. ಹಾಗಾಗಿ ಅವರು, ಶ್ರೇಯಾಶಿ ಸಿನ್ಹಾ ಸಹಾಯ ಕೇಳಿದ್ದಾರೆ. ದಾರಿ ಹೇಳುವಂತೆ ರಿಕ್ವೆಸ್ಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶ್ರೇಯಾಶಿ ಸಿನ್ಹಾ, ಆಟೋ ಚಾಲನೆ ಯಾಕೆ ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರ ನೀಡಿದ ಚಾಲಕಿ, ಪಾತ್ರೆ ತೊಳೆಯೋದಕ್ಕಿಂತ ಆಟೋ ಓಡಿಸೋದು ಉತ್ತಮ. ನನಗೆ ಪ್ರಯಾಣ ಕೂಡ ಇಷ್ಟ. ಇಲ್ಲಿ ಯಾವುದೇ ಸಮಯದ ಮಿತಿ ಇಲ್ಲ. ನನಗೆ ಬೇಕಾದಾಗ, ಬೇಕಾದ ಜಾಗಕ್ಕೆ ನಾನು ಹೋಗ್ಬಹುದು. ಸ್ವಾತಂತ್ರ್ಯ ನೀಡುವ ಕೆಲಸವನ್ನು ಆಯ್ಕೆ ಮಾಡುವ ಮಹಿಳೆಯರನ್ನು ನಾನು ನಿಜವಾಗಿಯೂ ಮೆಚ್ಚುತ್ತೇನೆ ಎಂದಿದ್ದಾರೆ.
ಡಿವೋರ್ಸ್ ಮಗಳು ಬೇಕೋ, ಆಕೆ ಹೆಣ ಬೇಕೊ? ಗೋಡೆಗೆ ಗುದ್ದುವವರೆಗೂ ಕಾಯ್ತೀರಾ? ಕೋರ್ಟ್ ಪ್ರಶ್ನೆ
ವೀಡಿಯೊ ಇಲ್ಲಿಯವರೆಗೆ 3 ಮಿಲಿಯನ್ ಗಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಚಾಲಕಿ ಕೆಲಸ ಮತ್ತು ಸ್ವಾತಂತ್ರ್ಯದ ಬಗ್ಗೆ ಆತ್ಮವಿಶ್ವಾಸ, ದೃಷ್ಟಿಕೋನವನ್ನು ಹೊಗಳಿದ್ದಾರೆ. ಇದು ಮಹಿಳೆಯರಿಗೆ ಸ್ಪೂರ್ತಿದಾಯಕ ಎನ್ನುವ ಕಮೆಂಟ್ ಬಂದಿದೆ. ಸ್ವಾತಂತ್ರ್ಯಕ್ಕಿಂತ ಅವಳು ಇಷ್ಟಪಡುವ ಕೆಲಸ ಮಾಡ್ತಿದ್ದಾಳೆ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮಹಿಳೆಯರು ಆಟೋ ಚಲಾಯಿಸೋದು ಸಂತೋಷದ ವಿಷ್ಯ. ಅವರನ್ನು ಆಟೋ ಚಾಲಕರಾಗಿ ನೋಡಿದಾಗ ಆಟೋ ಏರುವ ನಮಗೆ ಭದ್ರತೆ ಭಾವನೆ ಬರುತ್ತದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಮಹಿಳೆ ಯಾವುದೇ ವೃತ್ತಿಯನ್ನು ಅಗೌರವಿಸುತ್ತಿಲ್ಲ. ಅವರ ಜೀವನಕ್ಕೆ ಯಾವುದು ಹೆಚ್ಚು ಸೂಕ್ತವಾಗಿದೆ ಎಂಬುದರ ಕುರಿತು ಮಾತನಾಡುತ್ತಿದ್ದಾರೆ. ನಾವು ಜನರನ್ನು ಪ್ರಶಂಸಿಸಲು ಪ್ರಾರಂಭಿಸಬೇಕು. ಎಲ್ಲ ಕೆಲಸದ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಬೇಕು. ಪಾತ್ರೆ ತೊಳೆಯುವುದಕ್ಕಿಂತ ಆಟೋ ಓಡಿಸುವುದು ಉತ್ತಮ ಎಂದು ಹೇಳುವ ಅಗತ್ಯವಿಲ್ಲ. ಯಾವುದೇ ಕೆಲಸವನ್ನು ಅವಮಾನಿಸಬಾರದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.