Viral Video: ಅಮೆರಿಕಾಗೆ ಮೊದಲ ಬಾರಿ ಹೋದ ಅಪ್ಪ, ಮಗಳ ಸಾಧನೆ ಕಂಡು ಭಾವುಕ ಮಾತು.. ವೈರಲ್

Published : Aug 23, 2026, 01:12 PM IST
Viral Video: ಅಮೆರಿಕಾಗೆ ಮೊದಲ ಬಾರಿ ಹೋದ ಅಪ್ಪ, ಮಗಳ ಸಾಧನೆ ಕಂಡು ಭಾವುಕ ಮಾತು.. ವೈರಲ್

ಸಾರಾಂಶ

ಮಕ್ಕಳನ್ನು ನೋಡಲು ಮೊದಲ ಬಾರಿಗೆ ಅಮೆರಿಕಾಗೆ ಹೋದ ಭಾರತೀಯ ತಂದೆಯೊಬ್ಬರ ವಿಡಿಯೋ ಸಖತ್ ವೈರಲ್ ಆಗಿದೆ. ಅಮೆರಿಕಾದ ಸ್ವಚ್ಛತೆ, ರಸ್ತೆಗಳನ್ನು ಹೊಗಳಿದ ಅವರು, ಊಟ-ತಿಂಡಿ ವಿಚಾರದಲ್ಲಿ ಮಾತ್ರ ಸ್ವಲ್ಪ ಕಷ್ಟ ಆಯ್ತು ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಮಕ್ಕಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ತಂದೆಯೊಬ್ಬರು ಮೊದಲ ಬಾರಿಗೆ ಅಮೆರಿಕ ಪ್ರವಾಸ ಹೋಗಿದ್ದಾರೆ. ಅಲ್ಲಿನ ಅನುಭವದ ಬಗ್ಗೆ ಮಗಳು ಕೇಳಿದಾಗ, ತಂದೆ ಕೊಟ್ಟ ಪ್ರತಿಕ್ರಿಯೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೇಹಾ ನೂಕಾ ಅನ್ನೋರು ತಮ್ಮ ತಂದೆಯ ಜೊತೆಗಿನ ಈ ಸಂಭಾಷಣೆಯನ್ನು ಇನ್‌ಸ್ಟಾಗ್ರಾಂ(Instagram)ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಪ್ಪ-ಮಗಳ ಈ ಮಾತುಕತೆಗೆ ನೆಟಿಜನ್ ಮನಸೋತಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾದ ತಂದೆಗೆ, ಅಮೆರಿಕ ಪ್ರವಾಸ ಕೇವಲ ಒಂದು ದೇಶದ ಪ್ರವಾಸವಾಗಿಲ್ಲ. ತಮ್ಮ ಮಕ್ಕಳು ಓದಿ, ಕೆಲಸ ಹಿಡಿದು ಅಮೆರಿಕಾದಲ್ಲೇ ಸೆಟಲ್ ಆಗಿದ್ದರ ಬಗ್ಗೆ ಅವರು ಹೆಮ್ಮೆಯಿಂದ ಮಾತಾಡಿದ್ದಾರೆ. ತನ್ನ ಮಕ್ಕಳು ಅಮೆರಿಕಾದಲ್ಲಿ ನೆಲೆಸುತ್ತಾರೆ, ತಾನು ಒಂದು ದಿನ ಅಲ್ಲಿಗೆ ಹೋಗ್ತೀನಿ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ ಎಂದು ಅವರು ಭಾವುಕರಾಗಿ ಮಗಳ ಸಾಧನೆ ಬಗ್ಗೆ ಮಾತನಾಡಿದ್ದಾರೆ.

ವೈರಲ್ ವಿಡಿಯೋ ಕೆಳಗಿದೆ, ಕ್ಲಿಕ್ ಮಾಡಿ

ಮೊದಲ ಬಾರಿಗೆ ಅಮೆರಿಕ ಪ್ರವಾಸಕ್ಕೆ ಹೋಗಿರುವ ಬಗ್ಗೆ ಮಾತನಾಡಿದ ತಂದೆ, ಮಕ್ಕಳ ಬಗ್ಗೆ ತುಂಬಾ ಖುಷಿ, ಹೆಮ್ಮೆ ಅನಿಸ್ತಿದೆ ಎಂದಿದ್ದಾರೆ. ಪ್ರವಾಸದ ವೇಳೆ ಸಿಯಾಟಲ್, ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಂತಹ ಹಲವು ಕಡೆಗಳಿಗೆ ಭೇಟಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸುಮಾರು 8000 ಅಡಿ ಎತ್ತರದ ಮೌಂಟ್ ರೈನಿಯರ್‌ ಪರ್ವತಕ್ಕೂ ಹೋಗಿ ಬಂದ ಅನುಭವವನ್ನು ಉತ್ಸಾಹದಿಂದ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಮದುವೆ ನಡುವೆ ಅಸ್ವಸ್ಥಗೊಂಡ ಅಡುಗೆ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ವಧು! ವೈದ್ಯೆಯ ಕರ್ತವ್ಯ ಪ್ರಜ್ಞೆಗೆ ಸಲಾಂ

ಅಮೆರಿಕದ ಬಗ್ಗೆ ನಿಮ್ಮ ಒಟ್ಟಾರೆ ಅಭಿಪ್ರಾಯ ಏನು ಅಂತ ಮಗಳು ಕೇಳ್ತಾಳೆ. ಆಗ ತಂದೆ, 'ಪ್ರವಾಸಕ್ಕೆ ಇದೊಂದು ಒಳ್ಳೆ ಜಾಗ. ತುಂಬಾ ಸ್ವಚ್ಛವಾಗಿದೆ' ಅಂತಾ ಹೇಳ್ತಾನೆ. ಇದೇ ವೇಳೆ ಭಾರತೀಯ ಪ್ರವಾಸಿಗರಿಗೆ ಕಾಡುವ ಒಂದು ಸಾಮಾನ್ಯ ಸಮಸ್ಯೆಯನ್ನೂ ಅವರು ತಮಾಷೆಯಾಗಿ ಹೇಳಿದ್ದಾರೆ. ಅದೇನೆಂದರೆ ಅಮೆರಿಕದಲ್ಲಿನ ಊಟ-ತಿಂಡಿ, ಪಾನೀಯಗಳು ಸ್ವಲ್ಪ ಕಷ್ಟ ಅಗುತ್ತೆ ಅಂತಾ ಹೇಳಿಕೊಂಡಿದ್ದಾರೆ. ನಂತರ ಮಗಳು ಮತ್ತೆ ಕೇಳ್ತಾಳೆ, 'ಅಮೆರಿಕದಲ್ಲಿ ಏನೇನು ಇಷ್ಟವಾಯ್ತು, ಇಷ್ಟವಾಗಲಿಲ್ಲ? ತಂದೆ ಹೇಳ್ತಾರೆ, ಅಮೆರಿಕದ ರಸ್ತೆಗಳು ಮತ್ತು ಇಲ್ಲಿನ ಜನರನ್ನು ಹೊಗಳ್ತಾರೆ. ಆದರೆ ಊಟದ ವಿಷಯಕ್ಕೆ ಬಂದ್ರೆ ಕಷ್ಟ ಅಂತಾ ಹೇಳ್ತಾರೆ.

ನೇಹಾ ಈ ಇನ್‌ಸ್ಟಾಗ್ರಾಂ ವಿಡಿಯೋಗೆ, 'ಅಪ್ಪನ ಜೊತೆ ನನ್ನ ಮೊದಲ ಕೊಲ್ಯಾಬೊರೇಷನ್' ಅಂತ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ತಮಾಷೆಯ ಸಂಭಾಷಣೆಯ ಹಿಂದೆ, ತಾಯ್ನಾಡಿನಿಂದ ದೂರ ಹೋಗಿ ತಮ್ಮ ಮಕ್ಕಳು ಯಶಸ್ಸು ಸಾಧಿಸಿದ್ದನ್ನು ಕಂಡ ಪೋಷಕರ ಹೆಮ್ಮೆಯ ಭಾವನೆ ತೋರಿಸಿದೆ.

ಇದನ್ನೂ ಓದಿ:Viral: ಅಮೆರಿಕದಲ್ಲಿ ಒಂದು ಕೆಜಿ ಹಸಿ ಮೆಣಸಿನಕಾಯಿ ಬೆಲೆ ಕೇಳಿ ಶಾಕ್! 'ಮೇರಾ ಭಾರತ್ ಮಹಾನ್' ಎಂದಿದ್ದೇಕೆ ನೆಟ್ಟಿಗರು?

ಈ ಪೋಸ್ಟ್‌ಗೆ ನೆಟಿಜನ್ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು'ನಮ್ಮ ಗುರಿ ಇದೇ' ಅಂತ ಕಾಮೆಂಟ್ ಮಾಡಿದ್ರೆ, ಇನ್ನೊಬ್ಬರು 'ಇದು ತುಂಬಾ ಮುದ್ದಾಗಿದೆ' ಎಂದಿದ್ದಾರೆ. ಮತ್ತೊಬ್ಬರು 'ಇದನ್ನೇ ಸಾಧನೆ ಅನ್ನೋದು' ಅಂತ ಬರೆದಿದ್ದಾರೆ.

ತಮಾಷೆ, ಕುಟುಂಬದ ಹೆಮ್ಮೆ ಮತ್ತು ಮೊದಲ ಬಾರಿಯ ಪ್ರವಾಸದ ಸಹಜ ಅನುಭವಗಳನ್ನು ಈ ವಿಡಿಯೋ ಒಳಗೊಂಡಿರೋದ್ರಿಂದ, ಇದು ಜನರಿಗೆ ಬೇಗನೆ ಕನೆಕ್ಟ್ ಆಗಿದೆ. ವಿದೇಶದಲ್ಲಿ ಮಕ್ಕಳು ಯಶಸ್ಸು ಗಳಿಸುವುದನ್ನು ನೋಡಿ ನಂತರ ತಾವೇ ಆ ಜಗತ್ತನ್ನು ಅನುಭವಿಸುವ ಪೋಷಕರ ಮನಸ್ಥಿತಿಗೆ ಈ ತಂದೆಯ ಮಾತುಗಳು ಒಂದು ಸುಂದರ ಉದಾಹರಣೆಯಾಗಿದೆ.

PREV
Read more Articles on
click me!

Recommended Stories

Viral Video: ಮದುವೆ ನಡುವೆ ಅಸ್ವಸ್ಥಗೊಂಡ ಅಡುಗೆ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ವಧು! ವೈದ್ಯೆಯ ಕರ್ತವ್ಯ ಪ್ರಜ್ಞೆಗೆ ಸಲಾಂ
ಟಾಕ್ಸಿಕ್ ಪ್ರಿ-ರಿಲೀಸ್ ಇವೆಂಟ್‌ ವೇಳೆ ದುರಂತ, ಸೌಂಡ್‌ಬಾಕ್ಸ್ ಕುಸಿದು ವಿದ್ಯಾರ್ಥಿಗಳಿಗೆ ಗಾಯ; ಯಶ್ ಫುಲ್ ಗಾಬರಿ!