ಮಧ್ಯರಾತ್ರಿ ಸ್ಮಶಾನದೊಳಗಿಂದ ಬಿರಿಯಾನಿ ಆರ್ಡರ್ ಮಾಡಿದ ಲೇಡಿ! ಸ್ಮಶಾನದ ಬಳಿ ಡೆಲಿವರಿ ಬಾಯ್ ಬಂದಾಗ, ಆಗಿದ್ದೇನು? ನೀವೇ ನೋಡಿ

Published : Feb 02, 2026, 08:22 PM IST
Food Delivery Graveyard

ಸಾರಾಂಶ

ಮಧ್ಯರಾತ್ರಿ ಸ್ಮಶಾನದಿಂದ ಬಂದ ಬಿರಿಯಾನಿ ಆರ್ಡರ್ ಸ್ವೀಕರಿಸಿದ ಡೆಲಿವರಿ ಬಾಯ್‌ಗೆ ವಿಚಿತ್ರ ಅನುಭವವಾಗಿದೆ. ಆರ್ಡರ್ ಮಾಡಿದ ಮಹಿಳೆ ಸ್ಮಶಾನದೊಳಗೆ ಬರುವಂತೆ ಕರೆದಾಗ, ಭಯಗೊಂಡ ಡೆಲಿವರಿ ಪಾರ್ಟ್ನರ್ ಆರ್ಡರ್ ಕ್ಯಾನ್ಸಲ್ ಮಾಡುವಂತೆ ಕೇಳಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು: ಸುಡುವ ಬಿಸಿಲೇ ಇರಲಿ, ಕೊರೆವ ಚಳಿಯೇ ಇರಲಿ. ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೂ ಹಸಿವಾದಾಗ ನಮಗೆ ಸಮಯವನ್ನೂ ಲೆಕ್ಕಿಸದೇ ಫುಡ್ ಡೆಲಿವರಿ ಮಾಡುವವರು ಮನೆ ಬಾಗಿಲಿಗೆ ತಂದು ತಲುಪಿಸುವ ಮೂಲಕ ನಮ್ಮಗಳ ಹಸಿವು ನೀಗಿಸುವ ಕೆಲಸ ಮಾಡುತ್ತಾರೆ. ಅವರು ಕೆಲಸ ಮಾಡುವ ಕಂಪನಿ ಅದಕ್ಕಾಗಿ ಸರ್ವೀಸ್ ಚಾರ್ಜ್ ತೆಗೆದುಕೊಂಡರೂ ಸರಿಯಾದ ಸಮಯಕ್ಕೆ ನಮ್ಮ ಹೊಟ್ಟೆ ತುಂಬಿಸುವ ಕೆಲಸವನ್ನು ಈ ಫುಡ್ ಡೆಲಿವರಿ ಪಾರ್ಟ್ನರ್ಸ್ ನಿಸ್ವಾರ್ಥದಿಂದ ಮಾಡುತ್ತಾ ಬಂದಿದ್ದಾರೆ. ಸಮಯದ ವಿರುದ್ದ ಓಡುತ್ತಾ, ಟ್ರಾಫಿಕ್ ಸಿಗ್ನಲ್‌, ಮಳೆ-ಚಳಿಯ ವಾತಾವರಣವನ್ನು ಲೆಕ್ಕಿಸದೇ ಮನೆ ಬಾಗಿಲಿಗೆ ಬಂದು ಊಟ ತಲುಪಿಸುವ ಅನ್‌ಸಂಗ್ ಹೀರೋಗಳು ಇವರು ಎಂದರೆ ಅತಿಶಯೋಕ್ತಿಯಾಗಲಾರದು.

ಹೀಗಿರುವ ಫುಡ್ ಡೆಲಿವರಿ ಪಾರ್ಟ್ನರ್‌ಗಳಿಗೆ ಒಂದೊಂದು ದಿನ ಒಂದೊಂದು ರೀತಿಯ ಅನುಭವಗಳು ಎದುರಾಗುತ್ತಲೇ ಇರುತ್ತವೆ. ಹೀಗಿರುವಾಗ, ಕಗ್ಗತ್ತಲಲ್ಲಿ ಸ್ಮಶಾನದಿಂದಲೇ ಫುಡ್ ಆರ್ಡರ್ ಬಂದರೆ ಹೇಗಿರುತ್ತದೇ ನೀವೇ ಯೋಚಿಸಿ. ಈ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಇನ್ನಿಲ್ಲದಂತೆ ವೈರಲ್ ಆಗುತ್ತಿದೆ.

ಅಡ್ರೆಸ್ ಕೇಳಿಯೇ ಬೆಚ್ಚಿಬೀಳುತ್ತೀರ:

ಓರ್ವ ಲೇಡಿ, ಫುಡ್‌ ಡೆಲಿವರಿ ಕಂಪನಿಗೆ ಬಿರಿಯಾನಿ ಆರ್ಡರ್ ಮಾಡುತ್ತಾರೆ. ಆ ಬಿರಿಯಾನಿ ಡೆಲಿವರಿ ಬಾಯ್, ಡೆಲಿವರಿ ಲೊಕೇಶನ್ ತಲುಪಿದಾಗ ಆತನಿಗೆ ಅಚ್ಚರಿ ಕಾದಿರುತ್ತದೆ. ಯಾಕೆಂದರೆ ಅದು ಒಂದು ಸ್ಮಶಾನದ ಎಂಟ್ರಿ ಆಗಿರುತ್ತದೆ. ಹೀಗಾಗಿ ಕೊಂಚ ಭಯವಾದರೂ, ಸುಧಾರಿಸಿಕೊಂಡ ಆ ಡೆಲಿವರಿ ಪಾರ್ಟ್ನರ್, ಆರ್ಡರ್ ಮಾಡಿದ ನಂಬರ್‌ಗೆ ಡಯಲ್ ಕಾಲ್ ಮಾಡುತ್ತಾನೆ.

ಆ ಕಗ್ಗತ್ತಲಲ್ಲಿ ವಿಚಿತ್ರ ಡೆಲಿವರಿ ಪಾಯಿಂಟ್ ಹೇಳಿದ ಲೇಡಿ!

ಸ್ಮಶಾನದ ಬಳಿ ಬಂದು ಕಾಲ್ ಮಾಡಿದಾಗ ಮತ್ತೊಂದು ತುದಿಯಲ್ಲಿ ಆ ಲೇಡಿ, ನಿಮಗೆ ಎದುರುಗಡೆ ಸ್ಮಶಾನ ಕಾಣಿಸುತ್ತಿದೆಯಾ ಎಂದು ಕೇಳುತ್ತಾಳೆ. ಆಗ ಡೆಲಿವರಿ ಬಾಯ್ ಹೌದು ಎನ್ನುತ್ತಾರೆ. ಆಗ ಆ ಲೇಡಿ, ಅದರೊಳಗೆ ಬನ್ನಿ ಎಂದು ಹೇಳುತ್ತಾಳೆ. ಆಗ ಆ ಫುಡ್ ಡೆಲಿವರಿ ಪಾರ್ಟರ್ ಸ್ಮಶಾನದೊಳಗೆ ತುಂಬಾ ಕತ್ತಲಿದೆ ಅಲ್ಲಿ ಬರಲು ಸಾಧ್ಯವಿಲ್ಲ ಎನ್ನುತ್ತಾನೆ.

 

ನೀವ್ಯಾಕೆ ಹೆದರುತ್ತೀರಾ? ನಾನು ಒಳಗೇ ಇದ್ದೇನೆ, ಬನ್ನಿ ಎಂದು ಕರೆಯುತ್ತಾಳೆ. ಎದುರುಗಡೆ ಒಂದು ಎಲೆಕ್ಟ್ರಿಕ್‌ ಕಂಬವಿದ್ದು, ಅಲ್ಲಿ ಲೈಟ್ ಇದೆ. ಅಲ್ಲಿಯವರೆಗೆ ಬಂದು ಫುಡ್ ಕಲೆಕ್ಟ್ ಮಾಡಿಕೊಳ್ಳಿ ಎನ್ನುತ್ತಾನೆ. ಆಗ ಆ ಕಡೆಯಿಂದ ನನ್ನ ಕಾರು ಸ್ವಲ್ಪ ಪ್ರಾಬ್ಲಂ ಆಗಿದೆ. ಹೀಗಾಗಿ ಬರಲು ಸಾಧ್ಯವಾಗುತ್ತಿಲ್ಲ. ನೀವೇ ಒಳಗಡೆ ಬನ್ನಿ ಎಂದು ಕರೆಯುತ್ತಾಳೆ.

ಆಗ ಒಂದು ಕ್ಷಣ ವಿಚಲಿತನಾದ ಆ ಫುಡ್ ಡೆಲಿವರಿ ಪಾರ್ಟ್ನರ್, ದಯವಿಟ್ಟು ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಅಲ್ಲಿಂದ ಕಾಲ್ಕೀಳುತ್ತಾನೆ. ಆಗ ಮಧ್ಯರಾತ್ರಿ ಒಂದು ಗಂಟೆ ಸಮಯವಾಗಿರುತ್ತದೆ ಎಂದು ಆ ವೈರಲ್ ವಿಡಿಯೋದಲ್ಲಿ ಕಂಡು ಬಂದಿದೆ.

ದಯವಿಟ್ಟು ಗಮನಿಸಿ: ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವಾಗಿದ್ದು, ಇದರ ಸತ್ಯಾಸತ್ಯತೆ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಸೋಷಿಯಲ್ ಮೀಡಿಯಾ ರೀಲ್ಸ್‌ಗಾಗಿಯೂ ಇದನ್ನು ತಮಾಷೆಯ ರೂಪದಲ್ಲಿಯೂ ಮಾಡಿರುವ ಸಾಧ್ಯತೆಯಿದೆ.

PREV
Read more Articles on
click me!

Recommended Stories

ಡಾನ್ಸ್​ ಮಾಡದೇ ಇದ್ರೂ ಕೆಲವೇ ಗಂಟೆಯಲ್ಲಿ ವಿಡಿಯೋಗೆ 2 ಮಿಲಿಯನ್​ ವ್ಯೂವ್ಸ್​! ಅಂಥದ್ದೇನಿದೆ ನೋಡಿ ಇದರಲ್ಲಿ
11 ವರ್ಷಗಳ ನಂತರದ ಚಮತ್ಕಾರ, ಫೆಬ್ರವರಿ 2026 ಅನ್ನು 'ಪರ್ಫೆಕ್ಟ್ ಮಂತ್' ಅಂತಾ ಹೇಳ್ತಿರೋದೇಕೆ?