‘ದೇಶವನ್ನೇ ಮಾರಿಬಿಡ್ತೀರಾ! ₹5,000 UPI ನೋಡಿ ಕ್ಯಾಬ್ ಚಾಲಕನಿಗೆ ಪ್ರವಾಸಿಗನ ಸಖತ್ ಕ್ಲಾಸ್! ವಿಡಿಯೋ ವೈರಲ್

Published : Aug 19, 2026, 09:51 PM IST
Driver Scam

ಸಾರಾಂಶ

ವಿದೇಶಿ ಪ್ರವಾಸಿಯೊಬ್ಬರಿಗೆ 2 ಕಿ.ಮೀ.ಗೆ ₹500 ಕೇಳಿ ಕ್ಯಾಬ್ ಚಾಲಕನೊಬ್ಬ ಮೋಸ ಮಾಡಲು ಯತ್ನಿಸುತ್ತಾನೆ. ಆದರೆ, ಆ ಪ್ರವಾಸಿಗ ಚಾಲಕನ ದುರಾಸೆಯನ್ನು ಬಯಲು ಮಾಡಲು UPI ನಲ್ಲಿ ₹5,000 ನಮೂದಿಸಿ, ನಂತರ ನಿರರ್ಗಳ ಹಿಂದಿಯಲ್ಲಿ ಮಾತನಾಡಿ ಚಾಲಕನಿಗೆ ತಕ್ಕ ಪಾಠ ಕಲಿಸುತ್ತಾನೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ನಮ್ಮ ದೇಶದ ಸಂಸ್ಕೃತಿ ಮತ್ತು ಜನಪ್ರಿಯ ಆತಿಥ್ಯ ಸದಾ ಮರೆಯಲಾಗದ ಅನುಭವ ನೀಡುತ್ತದೆ. ಆದರೆ, ಕೆಲವೊಮ್ಮೆ ವಿದೇಶಿಯರನ್ನು ಕಂಡರೆ ಸಾಕು "ಇವರಿಂದ ಹೆಚ್ಚು ಹಣ ಕಸಿಯಬಹುದು" ಎಂದು ಭಾವಿಸುವ ಕೆಲವು ವ್ಯಕ್ತಿಗಳಿಂದ ದೇಶಕ್ಕೆ ಕೆಟ್ಟ ಹೆಸರು ಬರುವುದೂ ಉಂಟು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಒಂದರಲ್ಲಿ, ವಿದೇಶಿ ಪ್ರವಾಸಿಯೊಬ್ಬನಿಗೆ ಕ್ಯಾಬ್ ಚಾಲಕ ಚಾಕಚಕ್ಯತೆಯಿಂದ ಮೋಸ ಮಾಡಲು ಹೋಗಿ, ಉಲ್ಟಾ ಆತನಿಂದಲೇ ಸಖತ್ ದೇಶಿ ಶೈಲಿಯಲ್ಲಿ ಕ್ಲಾಸ್ ತಗೆದುಕೊಂಡ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ.

2 ಕಿಲೋಮೀಟರ್‌ಗೆ ₹500 ಬಾಡಿಗೆ ಕೇಳಿದ ಚಾಲಕ!

ವೈರಲ್ ಆಗಿರುವ ಈ ವೀಡಿಯೊದಲ್ಲಿ ವಿದೇಶಿ ಪ್ರವಾಸಿಯೊಬ್ಬ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಕೇವಲ 2 ಕಿಲೋಮೀಟರ್ ಪ್ರಯಾಣದ ನಂತರ ತನ್ನ ಗಮ್ಯಸ್ಥಾನ ತಲುಪಿದ ಪ್ರವಾಸಿ, ಗಾಡಿ ನಿಲ್ಲಿಸಲು ಹೇಳಿ ಇಂಗ್ಲಿಷ್‌ನಲ್ಲಿ ಪ್ರಯಾಣದ ದರ (Fare) ಎಷ್ಟು ಎಂದು ಕೇಳುತ್ತಾನೆ. ವಿದೇಶಿ ಪ್ರವಾಸಿಯನ್ನು ಕಂಡ ಚಾಲಕ, ಕೇವಲ 2 ಕಿ.ಮೀ.ಗೆ ಬರೋಬ್ಬರಿ ₹500 ನೀಡುವಂತೆ ಬೇಡಿಕೆ ಇಡುತ್ತಾನೆ.

UPI ನಲ್ಲಿ ₹5,000 ನಮೂದಿಸಿ ಟ್ರ್ಯಾಪ್ ಮಾಡಿದ ಪ್ರವಾಸಿ!

ಕ್ಯಾಬ್ ಚಾಲಕ ಹೆಚ್ಚುವರಿ ಹಣ ಕೇಳುತ್ತಿದ್ದಾನೆ ಎಂಬುದನ್ನು ತಕ್ಷಣ ಗ್ರಹಿಸಿದ ವಿದೇಶಿ ಪ್ರವಾಸಿ, ಆತನಿಗೆ ಪಾಠ ಕಲಿಸಲು ನಿರ್ಧರಿಸುತ್ತಾನೆ. ತನ್ನ ಫೋನ್‌ನಲ್ಲಿ UPI ಅಪ್ಲಿಕೇಶನ್ ತೆರೆದು ₹500 ಬದಲಿಗೆ ಜಾಣತನದಿಂದ ₹5,000 ಎಂದು ನಮೂದಿಸುತ್ತಾನೆ. ನಂತರ ಫೋನ್ ಅನ್ನು ಚಾಲಕನಿಗೆ ತೋರಿಸಿ, "ಇಷ್ಟು ಸರಿ ಇದೆಯಾ?" ಎಂದು ಕೇಳುತ್ತಾನೆ. ₹5,000 ಕಂಡ ತಕ್ಷಣ ದುರಾಸೆಗೆ ಬಿದ್ದ ಚಾಲಕ, ತಡಮಾಡದೇ "ಹೌದು, ಸರಿ ಇದೆ... ಪೇಮೆಂಟ್ ಕಂಪ್ಲೀಟ್ ಮಾಡಿ" ಎಂದು ಹೇಳುತ್ತಾನೆ!

ಸಖತ್ ಹಿಂದಿಯಲ್ಲಿ ಕ್ಲಾಸ್ ತೆಗೆದುಕೊಂಡ ಪ್ರವಾಸಿ!

ಚಾಲಕನ ದುರಾಸೆಯನ್ನು ಪರೀಕ್ಷಿಸಿದ ಪ್ರವಾಸಿ, ಕೊಂಚ ರಿಯಾಯಿತಿ ಕೊಡುವಂತೆ ಕೇಳುತ್ತಾನೆ. ಆದರೆ ಚಾಲಕ ₹500 ಕ್ಕಿಂತ ಕಡಿಮೆ ಮಾಡಲು ಒಪ್ಪುವುದಿಲ್ಲ. ಆ ಕ್ಷಣದಲ್ಲಿ ಪ್ರವಾಸಿ ತನ್ನ ನೈಜ 'ದೇಶಿ' ಶೈಲಿಯನ್ನು ಹೊರತಗಿಯುತ್ತಾನೆ! ನಿರರ್ಗಳವಾಗಿ ಹಿಂದಿಯಲ್ಲಿ ಮಾತನಾಡಲು ಶುರುಮಾಡುವ ಆತ, "ನೀನು ಪ್ರಾಮಾಣಿಕ ಅಂದುಕೊಂಡಿದ್ದೆ... ನೀನು ದೇಶವನ್ನೇ ಮಾರಿಬಿಡ್ತೀಯಾ ಮಗನೇ! ಏನು ಮಾಡ್ತಿದ್ದೀಯಾ ನೀನು?" ಎಂದು ಹಾಸ್ಯಸ್ಪದವಾಗಿ ಗದರಿಸುತ್ತಾನೆ. ಅಷ್ಟೇ ಅಲ್ಲದೆ, ಚಾಲಕನ ಹೆಗಲಿಗೆ ತಮಾಷೆಯಾಗಿ ಹೊಡೆಯುತ್ತಾ, "ಕೇವಲ 2 ಕಿಲೋಮೀಟರ್‌ಗೆ ₹5,000 ಪಡೆದು ಆ ಹಣವನ್ನೆಲ್ಲಾ ಎಲ್ಲಿ ಇಟ್ಟುಕೊಳ್ತೀಯ ಸಹೋದರ?" ಎಂದು ಪ್ರವಾಸಿ ಪ್ರಶ್ನಿಸಿದಾಗ ಚಾಲಕನಿಗೆ ತಾನು ಸಿಕ್ಕಿಬಿದ್ದಿರುವುದು ಅರ್ಥವಾಗಿ ಮುಜುಗರಕ್ಕೊಳಗಾಗುತ್ತಾನೆ.

ಅಂತಿಮವಾಗಿ ನೀಡಿದ್ದು ಕೇವಲ ₹100!

ವೀಡಿಯೊದ ಕೊನೆಯಲ್ಲಿ, ಪ್ರವಾಸಿ ಮತ್ತೊಮ್ಮೆ ನ್ಯಾಯಯುತ ದರ ಎಷ್ಟು ಎಂದು ಕೇಳುತ್ತಾನೆ. ಚಾಲಕ ಮೂಲ ಬಾಡಿಗೆ ₹500 ಕ್ಕೆ ಅಂಟಿಕೊಂಡರೂ, ಚಾಣಾಕ್ಷ ಪ್ರವಾಸಿಗ ಕೊನೆಗೆ ನ್ಯಾಯಯುತವಾದ ₹100 ಹಣವನ್ನು ಮಾತ್ರ ನೀಡಿ ಅಲ್ಲಿಂದ ಹೊರಡುತ್ತಾನೆ.

ನೆಟ್ಟಿಗರ ಪ್ರತಿಕ್ರಿಯೆ!

ಪ್ರವಾಸಿಗ ಭಾರತದಲ್ಲಿದ್ದುಕೊಂಡು ಹಿಂದಿ ಭಾಷೆಯನ್ನು ಇಷ್ಟು ಸ್ಪಷ್ಟವಾಗಿ ಮಾತನಾಡಿ, ಕ್ಯಾಬ್ ಚಾಲಕನ ದುರಾಸೆಯನ್ನು ಹಸಿಬಿಸಿಯಾಗಿ ಬಯಲಿಗೆಳೆದ ಶೈಲಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿದೇಶಿಯರನ್ನು ಕಂಡ ತಕ್ಷಣ ಮೋಸ ಮಾಡಲು ಯತ್ನಿಸುವ ಜನರಿಗೆ ಈ ವೀಡಿಯೊ ಒಂದು ಉತ್ತಮ ಪಾಠ ಎಂದು ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ.

PREV
Read more Articles on
click me!

Recommended Stories

200 ರೂಪಾಯಿ ಇದ್ರೆ ಸಾಕು, ಭಾರತದ ಈ ಪ್ರದೇಶದಲ್ಲಿ ವಜ್ರದ ಗಣಿ ಲೀಸ್‌ಗೆ ಪಡೆಯಬಹುದು!
Viral: ಪುರಾತನ ಮನುಷ್ಯರ ‘ಡಿನ್ನರ್ ಮೆನು’ ನೋಡಿ ವಿಜ್ಞಾನಿಗಳೇ ಕಂಗಾಲು! '3,000 ಮೂಳೆಗಳು' ಬಯಲು ಮಾಡಿದ ರಹಸ್ಯ!