Foreign Lady Offers: 9 ಸಾವಿರ ಬೇಕೋ, ನಾನು ಬೇಕೊ? ಆಫರ್​ ಕೊಟ್ಟ ಚೆಲುವೆ! ಯುವಕನ ಉತ್ತರಕ್ಕೆ ಶ್ಲಾಘನೆಗಳ ಮಹಾಪೂರ

Published : Jun 09, 2025, 09:37 PM IST
Dating Offer by lady

ಸಾರಾಂಶ

ವಿದೇಶಿ ಯುವತಿಯೊಬ್ಬಳು 9 ಸಾವಿರ ರೂಪಾಯಿ ಅಥ್ವಾ ತನ್ನ ಜೊತೆ ಡೇಟಿಂಗ್​ ಆಫರ್​ ಕೊಟ್ಟಾಗ ಈ ಯುವಕ ಮಾಡಿದ್ದೇನು ನೋಡಿ! ಉತ್ತರ ಕೇಳಿ ಸುಸ್ತಾದ ಬೆಡಗಿ

ದುಡ್ಡು ಬೇಕೋ, ನನ್ನ ಜೊತೆ ಡೇಟಿಂಗ್​ ಮಾಡ್ತಿಯೋ ಎಂದು ಯಾರಾದ್ರೂ ಚೆಲುವೆಯೊಬ್ಬಳು ಪುರುಷರ ಬಳಿ ಬಂದು ಆಫರ್​ ಕೊಟ್ಟರೆ ಅರೆ ಕ್ಷಣ ಬಹುತೇಕ ಮಂದಿ ವಿಚಲಿತರಾಗುವುದು ಸಹಜವೇ. ದುಡ್ಡನ್ನೂ ಬಿಡಲು ಆಗದು, ಇಂಥ ಚೆಲುವಿಯ ಜೊತೆ ಒಂದು ದಿನ ಕಳೆಯುವುದನ್ನೂ ತಪ್ಪಿಸಿಕೊಳ್ಳಲು ಆಗದು... ಆದ್ದರಿಂದ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡುವುದು ಎಂದು ತಿಳಿಯದೇ ಬಹುತೇಕರ ಸ್ಥಿತಿ ಡೋಲಾಯಮಾನವಾಗುತ್ತದೆ. ಮತ್ತೆ ಕೆಲವರು ತರ್ಲೆಗಳು ಎರಡೂ ಆಪ್ಷನ್​ ಬೇಕು ಎನ್ನುವುದು ಇದೆ. ಆದರೆ ಅದು ಸಾಧ್ಯವಿಲ್ಲ, ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕು ಎಂದಾಗ ಕೆಲವರು ಕೆಲವೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನನಗೇ ದುಡ್ಡೇ ಬೇಕು ಎಂದು ಕೆಲವರು ಹೇಳಿದರೆ, ದುಡ್ಡು ಹೇಗಾದರೂ ಸಂಪಾದಿಸಬಹುದು, ಇಂಥ ಚೆಲುವೆಯ ಜೊತೆ ಒಂದು ದಿನ ಡೇಟಿಂಗ್​ ಮಾಡುವ ಛಾನ್ಸ್​ ಇನ್ನು ಸಿಗಲಿಕ್ಕಿಲ್ಲ ಎಂದು ಅದಕ್ಕೇ ಆಯ್ಕೆ ಮಾಡಿಕೊಳ್ಳುವವರು ಹೆಚ್ಚಿನವರೇ ಇರಬಹುದು.

ಅಂಥದ್ದೇ ಒಂದು ಆಫರ್​ ಕೊಟ್ಟ ಚೆಲುವೆಯೊಬ್ಬಳು ಈ ಯುವಕನ ಉತ್ತರಕ್ಕೆ ತತ್ತರಿಸಿ ಹೋಗಿದ್ದಾಳೆ! ಸೋಷಿಯಲ್​ ಮೀಡಿಯಾದಲ್ಲಿ ಇಂದು ಇಂಥ ವಿಡಿಯೋಗಳು ಮಾಮೂಲು. ಇನ್​ಸ್ಟಾಗ್ರಾಮ್​, ಯುಟ್ಯೂಬ್​ ಮಾಡುವವರು ಹೀಗೆ ಮೈಕ್​ ಹಿಡಿದು ಏನಾದರೂ ಪ್ರಶ್ನೆ ಕೇಳುವುದು ಸಹಜವೇ. ಅದು ಇಂಟರೆಸ್ಟಿಂಗ್​ ಆಗಿದ್ದಷ್ಟೂ ವ್ಯೂವ್ಸ್​ ಹೆಚ್ಚು ಬರುತ್ತದೆ. ಅದರಲ್ಲಿ ಇಂಥ ಪ್ರೀತಿ, ಪ್ರೇಮದ ವಿಷಯ ಕೇಳಿದರಂತೂ ಮುಗಿದೇ ಹೋಯ್ತು. ಅದನ್ನು ಅತ್ಯಂತ ಖುಷಿಯಿಂದ ನೋಡುವ ದೊಡ್ಡ ವರ್ಗವೇ ಇದೆ. ಅದೇ ರೀತಿ ಈ ಯುವತಿ ಅಲ್ಲಿ ಬೈಕ್​ನಲ್ಲಿ ನಿಂತಿದ್ದ ಯುವಕನ ಬಳಿ ಇಂಥದ್ದೊಂದು ಪ್ರಶ್ನೆ ಕೇಳಿದ್ದಾಳೆ.

ಒಂದು ನೂರು ಡಾಲರ್​ ಅಂದರೆ ಸುಮಾರು 8.5 ಸಾವಿರ ರೂಪಾಯಿ ಬೇಕೋ ಅಥವಾ ನನ್ನ ಜೊತೆ ಒಂದು ದಿನ ಡೇಟಿಂಗ್​ಗೆ ಬರ್ತಿಯಾ ಎಂದು ಕೇಳಿದ್ದಾಳೆ. ಈ ಫಾರಿನ್​ ಲೇಡಿಯ ನೋಡಿ ಯುವಕನಿಗೆ ಆಸೆಯಾದ್ರೂ ಯಾಕೋ ಒಂದೇ ಸಲಕ್ಕೆ ಯಾವುದನ್ನೂ ತೀರ್ಮಾನ ಮಾಡಲು ಸಾಧ್ಯವಾಗಲಿಲ್ಲ. ಆಕೆಯನ್ನು ಮೇಲಿನಿಂದ ಕೆಳಕ್ಕೆ ನೋಡಿದ್ದಾನೆ. ಆದರೂ ಯಾಕೋ ಏನನ್ನು ಆಯ್ಕೆ ಮಾಡಬೇಕು ಎಂದು ತಿಳಿಯಲಿಲ್ಲ. ಕೊನೆಗೆ ಆತ ನನ್ನ ಅಣ್ಣನಿಗೆ ಕೇಳಿನೋಡುತ್ತೇನೆ ಎಂದಿದ್ದಾನೆ. ಇದನ್ನು ಕೇಳಿ ಯುವತಿಗೆ ಆಶ್ಚರ್ಯ ಆಗಿದೆ. ಓಕೆ ಎಂದಿದ್ದಾಳೆ.ಕೊನೆಗೆ ಆ ಯುವಕ ಅಣ್ಣನಿಗೆ ಕಾಲ್​ ಮಾಡಿ ಇರುವ ವಿಷಯ ಹೇಳಿದ್ದಾನೆ. ಯುವತಿ ಸಕತ್ ಸ್ಮಾರ್ಟ್​ ಆಗಿದ್ದಾಳೆ ಎಂದು ಹಿಂದಿಯಲ್ಲಿ ಹೇಳಿದ್ದಾನೆ. ಅದು ಈ ವಿದೇಶಿ ಬೆಡಗಿಗೆ ಗೊತ್ತಾಗಬಾರದಲ್ಲ ಅದಕ್ಕೇ.

ಅಲ್ಲಿಂದ ಏನು ಉತ್ತರ ಬಂತೋ ಅಥವಾ ಅಣ್ಣ ಅದೇನು ಬುದ್ಧಿ ಹೇಳಿದನೋ ಗೊತ್ತಿಲ್ಲ.ಕೊನೆಗೆ ಈ ಯುವಕ ನನಗೆ ಎರಡೂ ಬೇಡ ಎಂದುಬಿಟ್ಟಿದ್ದಾನೆ. ಅದರಲ್ಲೇನೋ ಮೋಸ ಇದ್ದಿರಬಹುದು ಎಂದು ಅಣ್ಣನಿಗೆ ಬಹುಶಃ ಎನ್ನಿಸಿರಬೇಕು. ಈ ಯುವತಿಯನ್ನು ನೋಡಿದ್ದರೆ, ಆತನ ಮನಸ್ಸು ಏನು ಹೇಳುತ್ತಿತ್ತೋ ಗೊತ್ತಿಲ್ಲ. ಆದರೆ ತಮ್ಮ ಮಾತನಾಡಿದ್ದನ್ನು ಕೇಳಿದ ಮೇಲೆ ಈ ಹೆಣ್ಣುಮಕ್ಕಳ ಸಹವಾಸ ಬೇಡ ಎನ್ನಿಸಿ ಎರಡೂ ಬೇಡ ಎಂದಿದ್ದಾನೆ. ಅದರಂತೆ ಈ ಯುವಕ ಎರಡೂ ಬೇಡ ಎಂದಾಗ ಯುವತಿ ವಾಟ್​ ಎನ್ನುತ್ತಲೇ ಹೀಗೂ ಇರ್ತಾರಾ ಜನರು ಎಂದು ಕಣ್ಣುಕಣ್ಣು ಬಿಟ್ಟಿದ್ದಾಳೆ. ಒಟ್ಟಿನಲ್ಲಿ ನಮ್ಮ ಭಾರತದ ಯುವಕನ ಮರ್ಯಾದೆ ಕಾಪಾಡಿದ್ಯಪ್ಪಾ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.ಮತ್ತೆ ಕೆಲವರು ಸಿಕ್ಕ ಒಳ್ಳೆ ಛಾನ್ಸ್ ಮಿಸ್​ ಮಾಡಿಕೊಂಡೆ ಕಣಪ್ಪ ಎನ್ನುತ್ತಿದ್ದಾರೆ.

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್