Viral Video: ಅಮ್ಮನ ಸಾವಿನ ನಂತ್ರ ತಾಯಿಯಾದ ಅಕ್ಕ, 18 ತಿಂಗಳ ತಮ್ಮನ ಜೊತೆ ಕ್ಲಾಸ್‌ ಗೆ ಬಂದ ವಿದ್ಯಾರ್ಥಿನಿ

Published : Jun 01, 2026, 12:45 PM IST
Asmita Tamang

ಸಾರಾಂಶ

viral video : ಸೋಶಿಯಲ್ ಮೀಡಿಯಾದಲ್ಲಿ ಭಾವುಕ ವಿಡಿಯೋ ವೈರಲ್ ಆಗಿದೆ. ಅಮ್ಮನ ಸಾವಿನ ನಂತ್ರ ಅಕ್ಕನೇ ಅಮ್ಮನಾಗಿದ್ದಾಳೆ. ಪುಟಾಣಿ ಕಂದಮ್ಮನನ್ನು ಶಾಲೆಗೆ ಕರೆತಂದಿದ್ದಾಳೆ. ಆಕೆ ಓದಿನ ಛಲ ಎಲ್ಲರ ಗಮನ ಸೆಳೆದಿದೆ.  

ಮಕ್ಕಳ ಬಾಲ್ಯ ಆಟ, ಪಾಠದಲ್ಲಿ ಕಳೆದು ಹೋಗುತ್ತೆ. ತಮ್ಮದೇ ಕನಸಿನ ಲೋಕದಲ್ಲಿ ಮಕ್ಕಳು ಬಾಲ್ಯವನ್ನು ಎಂಜಾಯ್ ಮಾಡ್ತಾರೆ. ಆದ್ರೆ ಎಲ್ಲರ ಬದುಕು ಒಂದೇ ರೀತಿ ಇರಲು ಸಾಧ್ಯವಿಲ್ಲ. ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ಊಹಿಸಲಾಗದ ಕಷ್ಟವನ್ನು ಎದುರಿಸ್ತಾರೆ. ದೊಡ್ಡ ಜವಾಬ್ದಾರಿಗಳನ್ನು ಹೊತ್ತು ಅದನ್ನು ನಿಭಾಯಿಸುವ ಪ್ರಯತ್ನ ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಕಣ್ಣಲ್ಲಿ ನೀರು ತರಿಸ್ತಿದೆ.

ಬಾಲ್ಯದಲ್ಲೇ ಅಮ್ಮನ ಜವಾಬ್ದಾರಿ

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಲೆ ಕ್ಲಾಸ್ ನೋಡ್ಬಹುದು. ಅನೇಕ ಹುಡುಗಿರ ಮಧ್ಯೆ ಒಬ್ಬಳು ಎಲ್ಲರ ಗಮನ ಸೆಳೆದಿದ್ದಾಳೆ. ಆಕೆ ಕೈನಲ್ಲಿ ಪುಟ್ಟ ಮಗುವೊಂದಿದೆ. ಸುಮಾರು ಒಂದುವರೆ ವರ್ಷದ ಮಗು ಜೊತೆ ವಿದ್ಯಾರ್ಥಿನಿ ಶಾಲೆಗೆ ಬಂದಿದ್ದಾಳೆ. ವಿಡಿಯೋ ಮಾಡುವಾಗ ಉಳಿದ ಮಕ್ಕಳು ಆಕೆ ನೋಡಿ ನಗ್ತಿದ್ದರೆ ಆಕೆ ಮಗು ಸಂಭಾಳಿಸೋದ್ರಲ್ಲಿ ಸುಸ್ತಾದಂತೆ ಕಾಣ್ತಿದ್ದಾಳೆ.

ಅಪ್ಪ-ಅಮ್ಮನ ಮದುವೆಯಲ್ಲಿ ಭಾಗಿಯಾಗಿದ್ರು 'ಸಿಎಂ ವಿಜಯ್'.. ಆಗ ಅವರಿಗೆ 6 ವರ್ಷ; ಕಹಾನಿ ಮೆ ಟ್ವಿಸ್ಟ್!

ಯಾರು ವಿದ್ಯಾರ್ಥಿನಿ?

ಸೋಶಿಯಲ್ ಮೀಡಿಯಾ ಮಾಹಿತಿ ಪ್ರಕಾರ ಆಕೆ ಹೆಸರು ಅಸ್ಮಿತಾ ತಮಂಗ್. ಒಂಭತ್ತನೇ ತರಗತಿಯಲ್ಲಿ ಅಸ್ಮಿತಾ ಓದುತ್ತಿದ್ದಾಳೆ. ಆಕೆಗೆ ತಾಯಿ ಇಲ್ಲ. ತಮ್ಮನ ವಯಸ್ಸು ಒಂದುವರೆ ವರ್ಷ. ಅಪ್ಪ ಪ್ರತಿ ದಿನ ಬೆಳಿಗ್ಗೆ ಕೆಲಸಕ್ಕೆ ಹೋಗ್ತಾರೆ. ಮನೆಯಲ್ಲಿ ಅಸ್ಮಿತಾ ಹಾಗೂ ಪುಟ್ಟ ಪಾಪು ಮಾತ್ರ. ಅಮ್ಮನ ಸಾವಿನ ನಂತ್ರ ಅಸ್ಮಿತಾ ಜವಾಬ್ದಾರಿ ದುಪ್ಪಟ್ಟಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಅಸ್ಮಿತಾ ದೊಡ್ಡ ಹೊರೆಯನ್ನು ತಲೆಮೇಲೆ ಹೊತ್ತುಕೊಂಡಿದ್ದಾಳೆ.

ಇಷ್ಟು ಕಠಿಣ ಪರಿಸ್ಥಿತಿಯಲ್ಲೂ ಅಸ್ಮಿತಾಗೆ ಓದು ಬಿಡುವ ಮನಸ್ಸಿಲ್ಲ. ಓದಿ ಸಾಧಿಸುವ ಛಲ ಹೊಂದಿರುವ ಅಸ್ಮಿತಾ, ತಮ್ಮನ ಜೊತೆ ಸ್ಕೂಲಿಗೆ ಬರುವ ನಿರ್ಧಾರ ಮಾಡಿದ್ದಾಳೆ. ಚಿಕ್ಕ ಮಗುವನ್ನು ಶಾಲೆಗೆ ಕರೆ ತಂದ್ರೆ ಸಾಲೋದಿಲ್ಲ. ಮಗುವಿನ ಆಹಾರ, ಆರೈಕೆ ಎಲ್ಲವನ್ನೂ ನೋಡಿಕೊಳ್ಬೇಕು. ಇವೆಲ್ಲಕ್ಕೂ ಅಸ್ಮಿತಾ ಸಿದ್ಧವಿದ್ಧತೆ ಕಾಣ್ತಿದೆ.

ಎಷ್ಟೇ ಒಳ್ಳೆಯವರಾಗಿದ್ದರೂ ಇಂತವರಿಗೆ ಸಹಾಯ ಮಾಡಬೇಡಿ.. ಚಾಣಕ್ಯನ ಪ್ರಮುಖ ಎಚ್ಚರಿಕೆ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಯಾವುದೇ ಮಗುವಿಗೆ ಇಂಥ ಸ್ಥಿತಿ ಬರ್ಬಾರದು ಅಂತ ಕಮೆಂಟ್ ಮಾಡ್ತಿದ್ದಾರೆ. ಅನೇಕರು ಅಸ್ಮಿತಾ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ಸಹಾಯಕ್ಕೆ ಮುಂದಾಗುವ ಮನಸ್ಸು ಮಾಡಿದ್ದಾರೆ. ಸಹೋದರಿ ಮಾತ್ರ ಇನ್ನೊಂದು ಅಮ್ಮನಾಗಲು ಸಾಧ್ಯ, ಅಸ್ಮಿತಾಗೆ ದೇವರು ಶಕ್ತಿ ನೀಡಲಿ ಅಂತ ನೆಟ್ಟಿಗರು ಹರಸಿದ್ದಾರೆ.

 

 

PREV
Read more Articles on
click me!

Recommended Stories

40 ವರ್ಷವಾದ್ರೂ ಮಾಳವ್ವ ಹೋಟೆಲ್‌ನ ರುಚಿ ಕಡಿಮೆಯಾಗಿಲ್ಲ; ಇಲ್ಲಿ ಜನಕ್ಕೆ ಇವ್ರೇ ಅನ್ನಪೂರ್ಣೇಶ್ವರಿ
Beer vs Milk: ಹಾಲಿಗಿಂತಲೂ ಬಿಯರ್ ಹೆಚ್ಚು ಆರೋಗ್ಯಕರ ಅನ್ನೋದು ಸತ್ಯವೇ? ಇಲ್ಲಿದೆ ಅಸಲಿ ಗುಟ್ಟು!