ರೀಲ್ಸ್‌ಗಾಗಿ ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಜಡೆ ಹಿಡಿದು ಜಗಳವಾಡಿದ ಯುವತಿಯರು, ವಿಡಿಯೋ ವೈರಲ್‌!

Published : Aug 17, 2026, 10:09 PM IST
Reels Fight

ಸಾರಾಂಶ

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವ ವಿಚಾರಕ್ಕೆ ಇಬ್ಬರು ಯುವತಿಯರು ಜಗಳವಾಡಿದ್ದಾರೆ. ನಡುರಸ್ತೆಯಲ್ಲೇ ಪರಸ್ಪರ ಜಡೆ ಹಿಡಿದು ಹೊಡೆದಾಡಿಕೊಂಡ ಈ ದೃಶ್ಯ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿನ ಇಂತಹ ವರ್ತನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ಬೆಂಗಳೂರು (ಆ.17): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಹಾಗೂ ಐತಿಹಾಸಿಕ ಕಬ್ಬನ್ ಪಾರ್ಕ್‌ನಲ್ಲಿ (Cubbon Park) ನೂರಾರು ಜನರ ಕಣ್ಣೆದುರೇ ಇಬ್ಬರು ಯುವತಿಯರು ಪರಸ್ಪರ ಜಡೆ ಹಿಡಿದುಕೊಂಡು ರಸ್ತೆಯಲ್ಲೇ ಬಡಿದಾಡಿಕೊಂಡ ಘಟನೆ ನಡೆದಿದೆ. ವಾರಾಂತ್ಯದ ರಜಾ ದಿನದಂದು ಸಾವಿರಾರು ವೀಕ್ಷಕರ ಸಮ್ಮುಖದಲ್ಲೇ ನಡೆದ ಈ ಹೈಡ್ರಾಮಾ ಸಂಪೂರ್ಣವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ವರದಿಗಳ ಪ್ರಕಾರ, ಇನ್‌ಸ್ಟಾಗ್ರಾಮ್ರೀಲ್ಸ್ (Reels) ಚಿತ್ರೀಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರ ನಡುವೆ ಸಣ್ಣ ಮಾತಿನ ಚಕಮಕಿ ಆರಂಭವಾಗಿದೆ. ಕಬ್ಬನ್ ಪಾರ್ಕ್‌ನಲ್ಲಿ ರೀಲ್ಸ್ ಮಾಡಲು ಜಾಗ ಆಯ್ಕೆ ಮಾಡಿಕೊಳ್ಳುವ ಅಥವಾ ವೀಡಿಯೋ ಶೂಟ್ ಮಾಡುವ ವಿಚಾರದಲ್ಲಿ ಶುರುವಾದ ಈ ಕಿರಿಕ್, ಕ್ಷಣಾರ್ಧದಲ್ಲೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇಬ್ಬರೂ ಯುವತಿಯರು ಸಾರ್ವಜನಿಕ ಸ್ಥಳವೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಪರಸ್ಪರ ಜಡೆ ಹಿಡಿದು, ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.

ವಾರಾಂತ್ಯದ ಭಾನುವಾರವಾಗಿದ್ದರಿಂದ ಕಬ್ಬನ್ ಪಾರ್ಕ್‌ಗೆ ಸಾವಿರಾರು ಜನರು ವಾಯುವಿಹಾರ, ವಾಕಿಂಗ್ ಹಾಗೂ ಫೋಟೋಗ್ರಫಿಗಾಗಿ ಬಂದಿದ್ದರು. ಜನರ ಸಮ್ಮುಖದಲ್ಲೇ ನಡೆದ ಈ ಜಗಳವನ್ನು ನೋಡಿ ಸ್ಥಳದಲ್ಲಿದ್ದ ಸಾರ್ವಜನಿಕರು ಆಶ್ಚರ್ಯಚಕಿತರಾಗಿದ್ದಾರೆ. ಕೆಲವರು ಘಟನೆಯನ್ನು ತಡೆಯಲು ಯತ್ನಿಸುವ ಬದಲಾಗಿ ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನೆಟ್ಟಿಗರ ಆಕ್ರೋಶ ಹಾಗೂ ಅಧಿಕಾರಿಗಳಿಗೆ ಆಗ್ರಹ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾರ್ಕ್‌ನಲ್ಲಿ ನೆಲೆಸುವ ಕೆಲವು ವಲಸೆ ಗುಂಪುಗಳು ಹಾಗೂ ಯುವಕರ ಗುಂಪುಗಳು ಪದೇ ಪದೇ ಇಂತಹ ಗಲಾಟೆಗಳನ್ನು ಮಾಡುತ್ತಿದ್ದು, ಪಾರ್ಕ್‌ನ ಶಾಂತಿಯುತ ವಾತಾವರಣವನ್ನು ಹಾಳುಮಾಡುತ್ತಿದ್ದಾರೆ ಎಂದು ನೆಟ್ಟಿಗರು ದೂರಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಕೂಗಾಡುವುದು, ಹೊಡೆದಾಡುವುದು ಮತ್ತು ಅನಗತ್ಯ ತೊಂದರೆ ಸೃಷ್ಟಿಸುವವರ ವಿರುದ್ಧ ಪೊಲೀಸರು ಹಾಗೂ ಕಬ್ಬನ್ ಪಾರ್ಕ್ ಆಡಳಿತ ಮಂಡಳಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮತ್ತು ಪಾರ್ಕ್ ವಾಯುವಿಹಾರಿಗಳು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಮಕ್ಕಳನ್ನಷ್ಟೇ ಕರೆದು ಸೈಲೆಂಟ್ ಮದುವೆ! ಆದ್ರೆ ರೊನಾಲ್ಡೋ ಪತ್ನಿ ಜಾರ್ಜಿನಾ ಕೊರಳಲ್ಲಿದ್ದ 'ಆ' ಒಂದು ವಸ್ತು ಬೆಲೆ ಕೇಳಿ ಫ್ಯಾನ್ಸ್ ಶೇಕ್!
ವ್ಯರ್ಥ ಆಹಾರದಿಂದ ಪರಿಸರ ಹಾನಿ ತಡೆಗೆ ಇರುವೆ ಬಳಕೆ: 18 ವರ್ಷದ ವಿದ್ಯಾರ್ಥಿನಿಯ ಅದ್ಭುತ ಸಂಶೋಧನೆ