ಬೆಂಗಳೂರಿಗೆ ಕಾಲಿಡದಂತೆ ಸ್ಪೈಡರ್​ಮ್ಯಾನ್​ಗೆ ಎಚ್ಚರಿಸಿದ ಬಯೋಕಾನ್​ ಮುಖ್ಯಸ್ಥೆ ​ಕಿರಣ್ ಮುಜುಂದಾರ್- ಏನಿದು ವಿಷ್ಯ

Published : Aug 17, 2026, 08:43 PM IST
Kiran Muzumdar

ಸಾರಾಂಶ

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನ ಅವ್ಯವಸ್ಥೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸ್ಪೈಡರ್​ಮ್ಯಾನ್​ ಕೇಬಲ್​ಗಳ ಜಾಲದಲ್ಲಿ ಸಿಲುಕಿರುವ ಫೋಟೋ ಬಳಸಿ, ಬೆಂಗಳೂರಿಗೆ ಬರದಂತೆ ಎಚ್ಚರಿಕೆ ನೀಡಿದ್ದು, ಈ ಪೋಸ್ಟ್ ವೈರಲ್ ಆಗಿದೆ. ಈ ಮೂಲಕ ಅವರು ನಗರದ ಕೇಬಲ್ ವೈಯರ್​ಗಳ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆದಿದ್ದಾರೆ.

ಬೆಂಗಳೂರು : ಸ್ಪೈಡರ್​ಮ್ಯಾನ್​ ಚಿತ್ರ ಈಗ ಸಕತ್​ ಸದ್ದು ಮಾಡುತ್ತಿದೆ. ಹಲವಾರು ದಾಖಲೆಗಳನ್ನು ಈ ಚಿತ್ರ ಮುರಿದಿದೆ. ಇದರ ನಡುವೆಯೇ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ , ಕಿರಣ್ ಮುಜುಂದಾರ್ ಶಾ ಅವರು ಮಾಡಿರುವ ಟ್ವೀಟ್​ ಮಾತ್ರ ಸಕತ್​ ವೈರಲ್​ ಆಗುತ್ತಿದೆ. ಇದು ಭಾರಿ ಚರ್ಚೆಗೂ ಗ್ರಾಸವಾಗಿದೆ. ಬೆಂಗಳೂರಿನ ಅವ್ಯವಸ್ಥೆಯ ಕುರಿತು ಆಗಾಗ್ಗೆ ಟೀಕೆ ಮಾಡುತ್ತಲೇ ಇರುವ ಕಿರಣ್​ ಅವರು, ಇದೀಗ ಟೀಕೆಗೆ ಸ್ಪೈಡರ್​​ಮ್ಯಾನ್​ ಅನ್ನು ಬಳಸಿಕೊಂಡಿದ್ದಾರೆ. Spider-Man was warned not to come to Bengaluru” ಎನ್ನುವ ವಾಕ್ಯದೊಂದಿಗೆ ಬಯೋಕಾನ್ ಮುಖ್ಯಸ್ಥೆ ಕಿರಣ ಮಜುಂದಾರ್ ಶಾ, ಟ್ವೀಟ್ ಮಾಡಿದ್ದಾರೆ. ಇದರ ಅರ್ಥ ಸ್ಪೈಡರ್​ಮ್ಯಾನ್​ಗೆ ಬೆಂಗಳೂರಿಗೆ ಬರದಂತೆ ಅವರು ವಾರ್ನ್​ ಮಾಡಿದ್ದಾರೆ.

ಕೇಬಲ್​ ವೈಯರ್​

ಅಷ್ಟಕ್ಕೂ ಬೆಂಗಳೂರು ಮಾತ್ರವಲ್ಲದೇ ಹಲವು ನಗರಗಳಲ್ಲಿ, ಕೇಬಲ್​ ವೈಯರ್​ಗಳು ಬೇಕಾಬಿಟ್ಟೆ ನೇತಾಡುತ್ತಲೇ ಇರುತ್ತವೆ. ಇದಾಗಲೇ ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ, ಕೆಲವು ಕಡೆಗಳಲ್ಲಿ ಕೇಬಲ್​ ವೈಯರ್​ಗಳು ತುಂಬಾ ತೊಂದರೆ ಉಂಟುಮಾಡುತ್ತಿವೆ. ಹಲವು ವರ್ಷಗಳಿಂದಲೂ ಇದು ದೊಡ್ಡ ಸಮಸ್ಯೆಯಾಗಿದೆ. ಕೆಲವರು ಬಲಿ ಕೂಡ ಆಗಿದ್ದಾರೆ. ಇದಾಗಲೇ, ಕಿರಣ್​ ಅವರು, ಬೆಂಗಳೂರಿನ ಮೂಲಭೂತ ಸೌಕರ್ಯ ಮತ್ತು ಸಾರ್ವಜನಿಕ ಸಾರಿಗೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುತ್ತಲೇ ಬಂದಿದ್ದು, ಇದೀಗ ಈ ಕೇಬಲ್​ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಸ್ಪೈಡರ್​ಮ್ಯಾನ್​ ಚಿತ್ರ ಬಳಸಿಕೊಂಡಿದ್ದಾರೆ.

ಇದರಲ್ಲಿ ಅವರು, ಎಲೆಕ್ಟ್ರಿಕ್ ಪೋಲ್, ಅದನ್ನು ಸುತ್ತಿಕೊಂಡಿರುವ ನೂರೆಂಟು ಕೇಬಲ್’ಗಳ ಫೋಟೋವನ್ನು ತಮ್ಮ ಎಕ್ಸ್ ಪೋಸ್ಟಿಗೆ ಬಳಸಿಕೊಂಡಿದ್ದಾರೆ. ಜೊತೆಗೆ, ಸ್ಪೈಡರ್ ಮ್ಯಾನ್, ಆ ಕೇಬಲ್’ಗಳ ಗೊಂಚಲಿನ ಮಧ್ಯೆ ಕೂತು, ಕೇಬಲ್ ಅನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋವನ್ನು ಬಳಸಿಕೊಂಡಿದ್ದಾರೆ. ಅದಕ್ಕೆ ಶೀರ್ಷಿಕೆ ನೀಡಿರುವ ಅವರು, ಬೆಂಗಳೂರಿಗೆ ಬರದಂತೆ ಸ್ಪೈಡರ್ ಮ್ಯಾನ್​ ಅನ್ನು ಎಚ್ಚರಿಸಿದ್ದಾರೆ. ಈಗಾಗಲೇ, ಈ ಪೋಸ್ಟ್​ ಒಂದೂವರೆ ಲಕ್ಷಕ್ಕೂ ಅಧಿಕ ವ್ಯೂವ್ಸ್​ ಕಂಡಿದೆ. ನೂರಾರು ಮಂದಿ ರಿಪೋಸ್ಟ್ ಮಾಡಿದ್ದರು.

ಚಿಕ್ಕ ಎಡವಟ್ಟು

ಆದರೆ ಇಲ್ಲೊಂದು ಚಿಕ್ಕ ಎಡವಟ್ಟಾಗಿದೆ. ಏಕೆಂದರೆ ಇದು ಎಐ ಫೋಟೋ ಆಗಿದ್ದು, ಅಲ್ಲಿ ಕನ್ನಡದ ಬದಲು ಬೇರೆ ಬೋರ್ಡ್​ ಇರುವ ಕಾರಣ, ಹೀಗೆಲ್ಲಾ ಚಿತ್ರ ಬಳಸುವಾಗ ಕನ್ನಡದ ಬೋರ್ಡ್​ ಇರುವ ಎಐ ಮಾಡಿ ಎಂದಿದ್ದಾರೆ ಹಲವರು. ಆದರೆ, ಈ ರೀತಿಯಾಗಿ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತಿರುವುದಕ್ಕೆ ಹಲವರು ಸಂತಸವನ್ನೂ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಗೆಜ್ಜೆ ಸದ್ದು, ಆಕ್ರಂದನ..ಆಶ್ರಮ ವಸತಿ ಶಾಲೆಯಲ್ಲಿ ಭೂತದ ಭೀತಿ: ಸ್ಕೂಲ್‌ ತೊರೆದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು!
ಸರ್ಕಸ್​ ಕಂಪೆನಿ ಸೇರಬೇಕಿದ್ದವ ಡಾಕ್ಟರ್​ ಆದ ರೋಚಕ ಸ್ಟೋರಿ: ವೈದ್ಯಕೀಯ ಮಂಡಳಿ ರಿಜೆಕ್ಟ್​ ಮಾಡಿದ್ರೂ ದಾಖಲೆ ಬರೆದ ಸಾಹಸಿ