
Honeymoon Funding Ideas: ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರವಾದ ಪೋಸ್ಟ್‌ಗಳು ನೋಡಲು ಸಿಗುತ್ತವೆ. ಇತ್ತೀಚೆಗೆ ಜೋಡಿಯೊಂದು ಹನಿಮೂನ್ ಹಣಕ್ಕಾಗಿ ಮದುವೆಯಲ್ಲಿ ಊಟವನ್ನು ಹರಾಜು ಹಾಕಿದೆ. ಜೋಡಿ ನಿರೀಕ್ಷೆಗಿಂತ ಹೆಚ್ಚಿನ ಹಣ ಬಂದಿದೆ. ಸದ್ಯ ಎಕ್ಸ್ ಖಾತೆಯ ಈ ಫೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆ ಅಂದ್ರೆ ಅಲ್ಲಿ ವಿಶೇಷವಾದ ಊಟವಿರುತ್ತದೆ. ಮದುವೆಯಾಗುತ್ತಿರೋರು ತಮ್ಮ ಆರ್ಥಿಕ ಶಕ್ತಿಗನುಸಾರವಾಗಿ ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಮನೆ ಅಥವಾ ಹೋಟೆಲ್‌ನಲ್ಲಿ ಸೇವಿಸುವ ಆಹಾರಕ್ಕಿಂತ ಮದುವೆ ಊಟದ ರುಚಿ ತುಂಬಾ ಭಿನ್ನವಾಗಿರುತ್ತದೆ ಎಂದು ಬಹುತೇಕರು ಹೇಳುವುದನ್ನು ಕೇಳಿರುತ್ತೇವೆ. ಮದುವೆ ಶಾಸ್ತ್ರಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಿರುತ್ತವೆ. ಹಾಗೆಯೇ ಊಟದ ವ್ಯವಸ್ಥೆಯೂ ಭಿನ್ನವಾಗಿರುತ್ತದೆ.
ಎಲ್ಲಾ ಹನಿಮೂನ್‌ಗಾಗಿ ಎಂದ ಜೋಡಿ
ಇದೀಗ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮದುವೆಯೊಂದರ ಬಗ್ಗೆ ಬರೆದುಕೊಳ್ಳಲಾಗಿದೆ. ಮದುವೆಗೆ ಅಗಮಿಸಿದ್ದ ಅತಿಥಿಗಳು ಹಸಿವನಲ್ಲಿದ್ದಾಗ ಊಟದ ಮೊದಲ ತಟ್ಟೆಯನ್ನು ಹರಾಜು ಹಾಕಲಾಗಿದೆ. ಈ ಹರಾಜಿನಿಂದ ಬಂದ ಹಣವನ್ನು ನವಜೋಡಿ ತಮ್ಮ ಹನಿಮೂನ್‌ಗೆ ಬಳಸಿಕೊಳ್ಳಲಿದೆ ಎಂದು ತಿಳಿಸಲಾಗಿತ್ತು. ಈ ಹರಾಜು ಗೆದ್ದವರಿಗೆ ಮೊದಲ ಊಟ ಸಿಗುತ್ತದೆ.
1,29,281.85 ರೂ.ಗೆ ಹರಾಜು ಆದ ಊಟದ ತಟ್ಟೆ
ಮದುವೆಗಳಲ್ಲಿ ವಧು-ವರನಿಗಾಗಿ ವಿಶೇಷ ಊಟದ ತಟ್ಟೆಯನ್ನು ಸಿದ್ಧಪಡಿಸಲಾಗುತ್ತದೆ. ವೈರಲ್ ಆಗಿರುವ ಪೋಸ್ಟ್ ಪ್ರಕಾರ, ವಧು-ವರನಿಗಾಗಿ ಸಿದ್ಧಪಡಿಸಿದ ಊಟದ ತಟ್ಟೆಯನ್ನು ಹರಾಜು ಹಾಕಲಾಗಿತ್ತು. ಊಟದ ತಟ್ಟೆ ಹರಾಜು ಮಾಡುವ ಮೂಲಕ ಜೋಡಿ, $1500 (1,29,281.85 ರೂ.) ಪಡೆದುಕೊಂಡಿದೆ ಎಂದು ವರದಿಯಾಗಿದೆ.
ವೈರಲ್ ಪೋಸ್ಟ್‌ನಲ್ಲಿ ಏನಿದೆ?
@turbothad ಹೆಸರಿನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿಕೊಳ್ಲಲಾಗಿದೆ. 'ಎಲ್ಲರಿಗೂ ಹಸಿವಾಗಿದೆ ಅಂತ ಗೊತ್ತು, ಮೊದಲ ತಟ್ಟೆ ಊಟವನ್ನು ಹರಾಜು ಹಾಕ್ತಿದ್ದೀವಿ. ಯಾರು ಖರೀದಿಸುತ್ತಾರೋ ಅವರ ಟೇಬಲ್‌ಗೆ ಮೊದಲು ಊಟ ಸಿಗುತ್ತದೆ. ಈ ಹಣ ತಮ್ಮ ಹನಿಮೂನ್‌ಗೆ ಬಳಕೆಯಾಗುತ್ತೆ ಎಂದು ಜೋಡ ಹೇಳಿದೆ. ಈ ಊಟದ ತಟ್ಟೆ $1500 (1,29,281.85 ರೂ.)ಗೆ ಮಾರಾಟವಾಗಿದೆ ಎಂದು ಬರೆದುಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಟೀಕೆ
ಮದುವೆಗೆ ಖರ್ಚು ಜಾಸ್ತಿ ಇರುವಾಗ ಊಟಕ್ಕೂ ಹೀಗೆ ಮಾಡಬೇಕಾ ಅಂತ ಪ್ರಶ್ನಿಸಿದ್ದಾರೆ. ಬಿಡ್ಡಿಂಗ್ ಮಾಡಿ ಊಟಕ್ಕೆ ಕಾಯುವುದು ಸರಿಯಲ್ಲ ಅಂತಲೂ ಹಲವರು ಹೇಳಿದ್ದಾರೆ. ಆದರೆ ಪೋಸ್ಟ್ ಹಾಕಿದವರಿಗೆ ಇದು ತಮಾಷೆ ಎಂದು ಅನ್ನಿಸಿದೆ. ಇಷ್ಟು ಬೆಲೆಯಲ್ಲಿ ನಾವೇ ಪ್ರವಾಸಕ್ಕೆ ಹೋಗಿ ರಜಾದಿನಗಳನ್ನು ಆನಂದಿಸಬಹುದು ಎಂದು ಪ್ರಶ್ನೆ ಮಾಡಿದ್ದಾರೆ.
ಮದುವೆಗೆ ಬರುವಾಗ ಊಟ ತೆಗೆದುಕೊಂಡು ಬನ್ನಿ
ಕೆಲ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗುತ್ತಿದ್ದ ಜೋಡಿ, ಆಹ್ವಾನದ ಪತ್ರಿಕೆಯಲ್ಲಿ ಯಾವುದೇ ಊಟ ಇರಲ್ಲ. ಅತಿಥಿಗಳು ತಮ್ಮ ನೆಚ್ಚಿನ ಊಟ ತೆಗೆದುಕೊಂಡು ಬರಬೇಕು. ಊಟ ಮಾಡಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ತಿಳಿಸಿತ್ತು. ಈ ಮೂಲಕ ತಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಹೇಳಿಕೊಂಡಿತ್ತು. ಈ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಊಟ ಮಾಡಲು ಅಷ್ಟು ದೂರ ಪ್ರಯಾಣಿಸೋದೇಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.