Boys Celebrate Snake Birthday: ಹುಡುಗರು ನಾಗರಹಾವಿನ ಬರ್ತಡೇ ಆಚರಿಸಿದ ಶಾಕಿಂಗ್ ವಿಡಿಯೋ ವೈರಲ್!

Published : Sep 27, 2025, 03:57 PM IST
Viral snake birthday video,

ಸಾರಾಂಶ

cobra birthday celebration videoಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಕೆಲವು ಯುವಕರು ನಾಗರಹಾವಿನ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿದ್ದಾರೆಈ ದೃಶ್ಯವು ಜನರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದು, ಕೆಲವರು ಇದನ್ನ ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೈರಲ್ ವಿಡಿಯೋ: ನೀವು ಸಾಮಾನ್ಯ ಜನರು ಹುಟ್ಟುಹಬ್ಬ ಆಚರಿಸುವುದನ್ನು ನೋಡಿರಬಹುದು, ಇದರಲ್ಲಿ ಇದರಲ್ಲೇನು ವಿಶೇಷ ಇದೆ ಅನಿಸಬಹುದು. ಆದರೆ ಇತ್ತೀಚೆಗೆ, ಹುಟ್ಟುಹಬ್ಬದ ಆಚರಣೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಜನರನ್ನು ಅಚ್ಚರಿಗೊಳಿಸುತ್ತಿದೆ. ವೈರಲ್ ವೀಡಿಯೊದಲ್ಲಿ, ಕೆಲವು ಯುವಕರು ಹಾವಿನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಹೌದು, ನೀವು ಓದಿದ್ದು ಸರಿ! ಈ ವಿಶಿಷ್ಟ ಹುಟ್ಟುಹಬ್ಬದ ಆಚರಣೆಯ ವೀಡಿಯೊ ಜನರಲ್ಲಿ ಚರ್ಚೆಯ ವಿಷಯವಾಗಿದೆ.

ವೀಡಿಯೊದಲ್ಲಿ, ಯುವಕರು ಒಂದು ನಾಗರಹಾವನ್ನು ಮಧ್ಯದಲ್ಲಿ ಇರಿಸಿ, ಮುಂದೆ 'ಹಾವು' ಎಂದು ಬರೆಯಲಾದ ಕೇಕ್ ಇರಿಸಿದ್ದಾರೆ. ನಂತರ, 'ಹ್ಯಾಪಿ ಬರ್ತ್‌ಡೇ ಟು ಯೂ' ಎಂದು ಹಾಡುತ್ತಾ ಹಾವಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾರೆ. ಹಾಡು ಮುಗಿದ ತಕ್ಷಣ, ಹಾವು ಎದ್ದು ಕೇಕ್‌ನ ಮೇಲೆ ಗೊಣಗಿ ಕಚ್ಚುವ ದೃಶ್ಯ ತೋರಿಸಿಕೊಂಡಿದ್ದು, ಯುವಕರು ಇದನ್ನು ನೋಡಿ ಸಂತೋಷದಿಂದ ಕೂಗುತ್ತಿರುವುದು ಗಮನಾರ್ಹ. ಈ ವಿಶಿಷ್ಟ ಘಟನೆಯ ವೀಡಿಯೊ ಇದೀಗ ಟಿಕ್‌ಟಾಕ್, ಇನ್ಸ್ಟಾಗ್ರಾಮ್ ಮತ್ತು ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋಗೆ ಜನರು ತಮಾಷೆಯ ಕಾಮೆಂಟ್ಸ್ ಮಾಡಿದ್ದಾರೆ. ಕೆಲವರು ಈ ತಮಾಷೆಯ ಆಚರಣೆಯನ್ನು ಆನಂದಿಸಿ, ಹಾವು ಕೂಡ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿರುವುದು ಚಂದ! ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಇದನ್ನು ಅಪಾಯಕಾರಿ ಎಂದು ಯುವಕರಿಗೆ ಉಗಿದಿದ್ದಾರೆ. ಹಾವು ವಿಷಕಾರಿಯಾಗಿದ್ದು, ಇದು ಜೀವಕ್ಕೆ ಅಪಾಯ ಎಂದು ಎಚ್ಚರಿಕೆ ನೀಡಿದ್ದಾರೆ. ಒಬ್ಬರು ತಮಾಷೆಯಾಗಿ, 'ಹಾವು ರಿಟರ್ನ್ ಗಿಫ್ಟ್ ಕೊಟ್ಟರೆ ಈ ಹುಡುಗರಿಗೆ ಏನಾಗುತ್ತೆ?' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ರೀಲ್‌ಗಳಿಗಾಗಿ ಜನ ಯಾವ ಹಂತಕ್ಕೂ ಹೋಗುತ್ತಾರೆ ನೋಡಿ!' ಟೀಕಿಸಿದ್ದಾರೆ.

 

ವಿಶೇಷಜ್ಞರ ಪ್ರಕಾರ, ಹಾವುಗಳೊಂದಿಗೆ ಇಂತಹ ತಮಾಷೆಯ ಚಟುವಟಿಕೆಗಳು ಅತ್ಯಂತ ಆಪಾಯಕಾರಿ. ನಾಗರಹಾವು ವಿಷಕಾರಿಯಾಗಿದ್ದು, ಕಚ್ಚಿದರೆ ಸಾವು ಸಂಭವಿಸಬಹುದು. ಜನರಲ್ಲಿ ಈ ವೀಡಿಯೊ ಆನಂದ ಮತ್ತು ಆಶ್ಚರ್ಯ ಜತೆಗೆ, ಇಂತಹ ಅಪಾಯಕಾರಿ ವಿಡಿಯೋ ಮಾಡುವವರಿಗೆ ಎಚ್ಚರಿಕೆಯೂ ನೀಡಿದ್ದಾರೆ.

 

PREV
Read more Articles on
click me!

Recommended Stories

ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್
ಸಮಂತಾ ಮದುವೆ ದಿನವೇ 'ಆ' ಪೋಸ್ಟ್ ಹಾಕಿ ನರಕಯಾತನೆಗೆ ತುತ್ತಾದ ಮಾಜಿ ಪ್ರಾಣಸ್ನೇಹಿತೆ ಸಾಧನಾ ಸಿಂಗ್!