ಓರ್ವ ವ್ಯಕ್ತಿಯಿಂದ ಒಂದೇ ಒಂದು ಫೋನ್ ಕಾಲ್.. ಗೇಟ್ ಬಳಿ ನಿಂತಿತು ರೈಲು! ಈ Video ಹಿಂದಿನ ಸತ್ಯವೇನು?

Published : Aug 11, 2026, 02:11 PM IST
Bihar Train Viral Video

ಸಾರಾಂಶ

Man Stops Train: ಬಿಹಾರದಲ್ಲಿ ವ್ಯಕ್ತಿಯೊಬ್ಬ ಕೇವಲ ಒಂದು ಫೋನ್ ಕರೆಯ ಮೂಲಕ ಪ್ಯಾಸಂಜರ್ ರೈಲನ್ನೇ ನಿಲ್ಲಿಸಿದ ವಿಚಿತ್ರ ಘಟನೆ ನಡೆದಿದೆ. ತನ್ನ ಕುಟುಂಬದವರು ರೈಲು ಹತ್ತಲು ಅನುಕೂಲವಾಗಲೆಂದು ರೈಲ್ವೆ ಕ್ರಾಸಿಂಗ್ ಬಳಿಯೇ ರೈಲು ನಿಲ್ಲುವಂತೆ ಮಾಡಿದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ನಿಯಮಬಾಹಿರ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆಯು ಈಗ ತನಿಖೆಗೆ ಆದೇಶಿಸಿದೆ.

ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ನಿಯಮಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕಾನೂನುಗಳಿವೆ. ಆದರೆ, ಬಿಹಾರದಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದು ಈಗ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿದ ತಕ್ಷಣ ಚಲಿಸುತ್ತಿದ್ದ ರೈಲು ರೈಲ್ವೆ ಗೇಟ್ ಬಳಿಯೇ ನಿಂತಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಏನಿದು ಘಟನೆ?

ಈ ವಿಡಿಯೋ ಬಿಹಾರದ ಕುಮಾರ್‌ಬಾಗ್ ರೈಲ್ವೆ ನಿಲ್ದಾಣದ ಸಮೀಪದ ರೈಲ್ವೆ ಗೇಟ್ ಬಳಿ ನಡೆದಿದೆ ಎಂದು ತಿಳಿದುಬಂದಿದೆ. ಲೆವೆಲ್ ಕ್ರಾಸಿಂಗ್ ಗೇಟ್ ಹಾಕಿದ್ದರಿಂದ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಗೇಟ್ ಬಳಿ ನಿಂತಿದ್ದ ವ್ಯಕ್ತಿಯೊಬ್ಬರು ಅತ್ಯಂತ ಆತ್ಮವಿಶ್ವಾಸದಿಂದ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ಕಾರಿನಲ್ಲಿದ್ದವರು, "ಇವರು ಪ್ರಭಾವ ಬಳಸಿ ರೈಲು ನಿಲ್ಲಿಸಿದರೆ, ಈ ವಿಡಿಯೋವನ್ನು ನಾನು ರೈಲ್ವೆ ಸಚಿವಾಲಯಕ್ಕೆ ಕಳುಹಿಸುತ್ತೇನೆ" ಎಂದು ಕಾಮೆಂಟ್ ಮಾಡುತ್ತಾರೆ.

ಆಶ್ಚರ್ಯಕರವಾಗಿ, ಕೆಲವೇ ಕ್ಷಣಗಳಲ್ಲಿ ರೈಲು ಸರಿಯಾಗಿ ಆ ಗೇಟ್ ಮುಂದೆಯೇ ಬಂದು ನಿಲ್ಲುತ್ತದೆ. ತಕ್ಷಣವೇ ಅಲ್ಲಿ ಕಾದು ನಿಂತಿದ್ದ ಒಂದು ಕುಟುಂಬ ರೈಲನ್ನು ಹತ್ತುತ್ತದೆ. ಇದನ್ನು ಕಂಡ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಆಶ್ಚರ್ಯಚಕಿತನಾಗಿ, "ರೈಲು ಎಂಬುದು ಎಲ್ಲಿ ಬೇಕಾದರೂ ನಿಲ್ಲಿಸಲು ಖಾಸಗಿ ಬಸ್ಸೇ?" ಎಂದು ಪ್ರಶ್ನಿಸಿದ್ದಾರೆ.

ಯಾರೋ ಸರಪಳಿ (Chain) ಎಳೆದಿರುವ ಸಾಧ್ಯತೆ

ಈ ವಿಡಿಯೋ 'X' (ಟ್ವಿಟರ್) ಪ್ಲಾಟ್‌ಫಾರ್ಮ್‌ನಲ್ಲಿ ಹರಿದಾಡುತ್ತಿದ್ದಂತೆ, ಸಾವಿರಾರು ಜನರು ಇದನ್ನು ಶೇರ್ ಮಾಡಿ ರೈಲ್ವೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕೋ ಪೈಲಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ರೈಲ್ವೆ ವ್ಯವಸ್ಥೆಯು ಖಾಸಗಿ ಸ್ವತ್ತೇ ಎಂದು ಹಲವರು ಕಿಡಿಕಾರಿದ್ದಾರೆ. ಇನ್ನು ಕೆಲವರು ರೈಲಿನ ಒಳಗಿದ್ದ ಯಾರೋ ಸರಪಳಿ (Chain) ಎಳೆದಿರುವ ಸಾಧ್ಯತೆಯೂ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ರೈಲ್ವೆ ಇಲಾಖೆಯ ಅಧಿಕೃತ ಸಹಾಯವಾಣಿ ಖಾತೆ 'ರೈಲ್ವೆ ಸೇವಾ' ತಕ್ಷಣ ಸ್ಪಂದಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಸ್ತಿಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (DRM) ಸೂಚನೆ ನೀಡಿದೆ. ಯಾವುದೇ ತಾಂತ್ರಿಕ ಅಥವಾ ತುರ್ತು ಕಾರಣವಿಲ್ಲದೆ ಖಾಸಗಿ ವ್ಯಕ್ತಿಗಳಿಗಾಗಿ ರೈಲು ನಿಲ್ಲಿಸುವುದು ನಿಯಮಬಾಹಿರವಾಗಿದ್ದು, ರೈಲ್ವೆ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದೆ. ತನಿಖೆಯ ನಂತರವಷ್ಟೇ ಈ ಫೋನ್ ಕಾಲ್ ಹಿಂದಿನ ಅಸಲಿ ರಹಸ್ಯ ಹೊರಬರಬೇಕಿದೆ.

ಇಲ್ಲಿದೆ ನೋಡಿ ವಿಡಿಯೋ 

PREV
Read more Articles on
click me!

Recommended Stories

ಮದುವೆ ಆಗಲಿರುವ ಹುಡುಗ ವರ್ಜಿನ್‌ ಆಗಿರ್ಬೇಕು ! ಹುಡುಗಿ ಡಿಮ್ಯಾಂಡ್‌ ಕೇಳಿ ನೆಟ್ಟಿಗರು ಶಾಕ್
6 ತಿಂಗಳಲ್ಲಿ ₹45 ಲಕ್ಷ ಸಾಲ ಕ್ಲಿಯರ್, ಮ್ಯಾನ್‌ಹ್ಯಾಟನ್‌ನಲ್ಲಿ ಕೆಲಸ ಮಾಡುತ್ತಿದ್ದ 24ರ ಯುವತಿ ಈಗ ಭಾರತಕ್ಕೆ ವಾಪಸ್