ಬಫೆಯಲ್ಲಿ ಕಾಡೋ ಕನ್ಫ್ಯೂಸ್ ಗೆ ಎಐ ಪರಿಹಾರ, ಹೊಸ ಟೂಲ್ಸ್ ಪತ್ತೆ ಮಾಡಿದ ಟೆಕ್ಕಿಗೆ ಕಾಡ್ತಿದೆ ಜೀವ ಭಯ

Published : Feb 11, 2026, 03:26 PM IST
Buffett GPT AI Tool

ಸಾರಾಂಶ

Buffett GPT AI Tool : ಬಫೆಯಲ್ಲಿ ಕನ್ಫ್ಯೂಸ್ ಕಾಮನ್. ಯಾವುದು ತಿನ್ಬೇಕು, ಯಾವುದು ಬೇಡ ಅನ್ನೋದನ್ನು ಡಿಸೈಡ್ ಮಾಡಲು ಎಐ ಟೂಲ್ಸ್ ಬರ್ತಿದೆ. ಆದ್ರೆ ಇದನ್ನು ಪತ್ತೆ ಮಾಡಿದ ಟೆಕ್ಕಿಗೆ ಭಯ ಶುರುವಾಗಿದೆ.

ಮದುವೆಗೆ ಹೋದಾಗ ವೆರೈಟಿ ಆಹಾರ ನೋಡಿ ಬಾಯಲ್ಲಿ ನೀರು ಬರುತ್ತೆ. ಯಾವುದನ್ನು ತಿನ್ಬೇಕು, ಯಾವುದನ್ನು ತಿನ್ಬಾರದು ಎನ್ನುವ ಕನ್ಫ್ಯೂಸ್ ಕಾಡೋದಿದೆ. ಇಷ್ಟ ಅಂತ ಕೆಲ ಖಾದ್ಯವನ್ನು ಮಿತಿಮೀರಿ ತಿಂದು, ಒಂದಿಷ್ಟು ಖಾದ್ಯದ ರುಚಿ ನೋಡ್ದೆ ಹಾಗೆ ಬಂದಿರ್ತೇವೆ. ಸಮಾರಂಭ ಮುಗಿಸಿ ಬಂದ್ಮೇಲೆ ಅಯ್ಯೋ ಅದನ್ನು ತಿನ್ಬೇಕಿತ್ತು, ಇದ್ರ ಟೇಸ್ಟ್ ಮಾಡ್ಬೇಕಿತ್ತು ಅಂತ ಮಾತನಾಡಿಕೊಳ್ತೇವೆ. ಬಫೆಯಲ್ಲಿ ಕಾಡುವ ಕನ್ಫ್ಯೂಸ್ ಕಡಿಮೆ ಮಾಡೋಕೆ ಬೆಂಗಳೂರಿನ ಟೆಕ್ಕಿ ಒಬ್ರು ಎಐ ಟೂಲ್ಸ್ ಕಂಡು ಹಿಡಿದಿದ್ದಾರೆ. ತಮಾಷೆಗಾಗಿ ಅವರು ಸಂಶೋಧನೆ ಮಾಡಿದ ಈ ಎಐ ಅನೇಕರ ಕೋಪಕ್ಕೂ ಕಾರಣವಾಗಿದೆ.

ಬಫೆಟ್ ಜಿಪಿಟಿ ಎಐ ಟೂಲ್

ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಪಂಕಜ್, ಬಫೆಟ್ ಜಿಪಿಟಿ ಹೆಸರಿನ ಎಐ ಟೂಲ್ ರಚಿಸಿದ್ದಾರೆ. ಕಂಪ್ಯೂಟರ್ ವಿಜನ್ ಟೆಕ್ನಾಲಜಿ ಮೇಲೆ ಇದು ಕೆಲ್ಸ ಮಾಡುತ್ತೆ. AI ಸಂಪೂರ್ಣ ಬಫೆ ಕೌಂಟರ್ ಅನ್ನು ಸ್ಕ್ಯಾನ್ ಮಾಡುತ್ತದೆ. ಪ್ರತಿ ಖಾದ್ಯವನ್ನು ಗುರುತಿಸುತ್ತದೆ. ನಂತರ ಅದು ನಿಮಗಾಗಿ ಒಂದು ಪ್ಲಾನ್ ನೀಡುತ್ತದೆ. ನೀವು ಯಾವ ಖಾದ್ಯವನ್ನು ಎಷ್ಟು ತಿನ್ಬಹುದು ಎಂಬುದನ್ನು ಸೂಚಿಸುತ್ತದೆ. ಖಾದ್ಯ ಹಾಗೂ ಮನುಷ್ಯ ಎಷ್ಟು ತಿನ್ಬಹುದು ಎಂಬುದನ್ನು ಲೆಕ್ಕ ಹಾಕಿ ಎಐ ಲೀಸ್ಟ್ ನೀಡುತ್ತದೆ.

ವಿಮಾನ ನಿಲ್ದಾಣದಲ್ಲಿ 10 ರೂ.ಗೆ ಸಿಗ್ತಿದೆ ಟೀ, Raghav Chadhaಗೆ ಕ್ರೆಡಿಟ್, ಪತಿ ಹೊಗಳಿದ

ಇಂಟರ್ನೆಟ್ ನಲ್ಲಿ ವೈರಲ್

ಪಂಕಜ್ ಅವರ ಈ ಬಫೆಟ್ ಜಿಪಿಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಂಕಜ್ ಎಕ್ಸ್ ಖಾತೆಯಲ್ಲಿ ಇದ್ರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇನ್ನೂ ಇದು ಪ್ರಯೋಗದ ಸ್ಥಿತಿಯಲ್ಲಿದೆ. ಸ್ನೇಹಿತರ ಮದುವೆಯಲ್ಲಿ ಪ್ರಯೋಗ ಮಾಡಲಾಗಿದ್ದು, ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ ಅಂತ ಬರೆದುಕೊಂಡಿದ್ದರು. ಬಳಕೆದಾರರು, ಪಂಕಜ್ ಈ ಕೆಲ್ಸವನ್ನು ಶ್ಲಾಘಿಸಿದ್ದರು. ಆದ್ರೆ ಮತ್ತೆ ಕೆಲವೊಂದಿಷ್ಟು ಮಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದ್ರಿಂದ ಪರಿಸರ ನಾಶವಾಗುತ್ತೆ, ಅತಿ ಹೆಚ್ಚು ವಿದ್ಯುತ್ ಹಾಗೂ ನೀರಿನ ಬಳಕೆ ಅಗತ್ಯವಿರುತ್ತದೆ. ಅನವಶ್ಯಕ ಕೆಲಸಕ್ಕೆ ಎಐ ಟೂಲ್ಸ್ ತಯಾರಿಸಬೇಡಿ ಅಂತ ಕೆಲವರು ಹೇಳಿದ್ರೆ ಮತ್ತೆ ಕೆಲವರು ಕೊಲೆ ಬೆದರಿಕೆ ಹಾಕಿದ್ರು.

ಜೀವ ಬೆದರಿಕೆ

ಎಕ್ಸ್ ನಲ್ಲಿ ಪಂಕಜ್ ಇದ್ರ ಬಗ್ಗೆಯೂ ಪೋಸ್ಟ್ ಹಂಚಿಕೊಂಡಿದ್ದಾರೆ. ತಮಾಷೆಗೆ ತಾವು ಬಫೆಟ್ ಜಿಪಿಟಿ ಸಿದ್ಧಪಡಿಸಿದ್ದು, ಕ್ಯಾನ್ಸರ್ ಗೆ ಔಷಧಿ ಕಂಡುಹಿಡಿಯುತ್ತಿಲ್ಲ. ಆದ್ರೆ ಜನರು ಜೀವ ಬೆದರಿಕೆ ಹಾಕ್ತಿದ್ದಾರೆ. ಒಂದಲ್ಲ ಎರಡಲ್ಲ ಹತ್ತಾರು ಮಂದಿಯಿಂದ ಈ ಬೆದರಿಕೆ ಬಂದಿದೆ. ಜನರು ನನ್ನ ಮೂರ್ಖ ಕೆಲಸಕ್ಕೆ ತಮಾಷೆ ಮಾಡ್ಲಿ ಚಿಂತೆ ಇಲ್ಲ, ಆದ್ರೆ ಜೀವ ಬೆದರಿಕೆ ಹಾಕುವಂತ ಕೆಳಮಟ್ಟಕ್ಕೆ ಇಳಿಯೋದು ಸರಿಯಲ್ಲ ಎಂದು ಪಂಕಜ್ ನೋವು ತೋಡಿಕೊಂಡಿದ್ದಾರೆ. ಅದಕ್ಕೂ ಸೋಶಿಯಲ್ ಮೀಡಿಯಾದಲ್ಲಿ ರಿಯಾಕ್ಷನ್ ಸಿಕ್ಕಿದೆ. ಅನೇಕರು ಪಂಕಜ್ ಬೆನ್ನು ತಟ್ಟುವ ಕೆಲಸ ಮಾಡಿದ್ದಾರೆ. ಧೈರ್ಯ ತುಂಬಿದ್ದಾರೆ. ಒಳ್ಳೆಯ ಕೆಲ್ಸಕ್ಕೆ ನಾನಾ ಅಡೆತಡೆ ಇದ್ದಿದ್ದೇ, ಇದನ್ನು ತಮಾಷೆಯಾಗಿ ತೆಗೆದುಕೊಳ್ಳಿ ಎಂದಿದ್ದಾರೆ.

ತಮನ್ನಾ ಬರ್ತಿದ್ದಂತೆ 22 ವರ್ಷ ಹಿಂದಿನ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ವೈರಲ್

ಹಿಂದೆಯೂ ಟೂಲ್ಸ್ ಕಂಡು ಹಿಡಿದಿದ್ದ ಪಂಕಜ್

ಸಾಫ್ಟ್ವೇರ್ ಇಂಜಿನಿಯರ್ ಪಂಕಜ್ ಈ ಹಿಂದೆಯೂ ಒಂದು ಎಐ ಟೂಲ್ಸ್ ರಚಿಸಿದ್ದರು. ಅದ್ರಲ್ಲಿ ಕಂಪ್ಯೂಟರ್ ಸ್ಕ್ರೀನ್ ತಾನಾಗಿಯೇ ಬದಲಾಗ್ತಿತ್ತು. ಪಂಕಜ್ ಆಫೀಸ್ ನಲ್ಲಿ ನೆಟ್ಫ್ಲಿಕ್ಸ್ ನೋಡ್ತಿದ್ದಾಗ ಬಾಸ್ ಬಂದ್ರು. ಆ ತಕ್ಷಣ ಕಂಪ್ಯೂಟರ್ ಸ್ಕ್ರೀನ್ ಬದಲಾಗಿತ್ತು. ಫೈಲ್ ಇರುವ ಸ್ಕ್ರೀನ್ ಓಪನ್ ಆಗಿತ್ತು. ಅವರ ಈ ಎಐ ಟೂಲ್ಸ್ ಗೂ ಮೆಚ್ಚುಗೆ ವ್ಯಕ್ತವಾಗಿತ್ತು.

PREV
Read more Articles on
click me!

Recommended Stories

River Indie-ರಿವರ್ ಇಂಡಿ ಯಶೋಗಾಥೆ: ಯಮಹಾದೊಂದಿಗೆ ಇ-6 ಹೊಸ ಆವೃತ್ತಿ ಬಿಡುಗಡೆ, ತಿಂಗಳಿಗೆ 8 ಸಾವಿರ ಸ್ಕೂಟರ್ ನಿರ್ಮಾಣ
ಮಹಿಳಾ ಫ್ಯಾನ್ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ Dhurandhar ಸಿಂಗರ್ ಜಾಸ್ಮಿನ್ ಮಾಡಿದ್ದೇನು ನೋಡಿ..