Bengaluru Rent: 'ತಮ್ಮ ಬರ್ತಾನೆ' ಅಂತ ಸುಳ್ಳು ಹೇಳಿ ₹4,000 ಬಾಡಿಗೆ ಏರಿಸಿದ ಓನರ್! ಯುವತಿ ವಿಡಿಯೋ ವೈರಲ್

Published : May 15, 2026, 04:38 PM IST
Bengaluru Rent Hike Viral Video

ಸಾರಾಂಶ

Bengaluru Rent Hike Viral Video: ಬೆಂಗಳೂರಿನಲ್ಲಿ ಮನೆ ಮಾಲೀಕರೊಬ್ಬರು ಇದ್ದಕ್ಕಿದ್ದಂತೆ ₹4,000 ಬಾಡಿಗೆ ಏರಿಸಿದ್ದಾರೆ. ಮೊದಲು ತಮ್ಮ ಬರ್ತಾನೆ, ಮನೆ ಖಾಲಿ ಮಾಡು ಅಂದಿದ್ದ ಓನರ್, ನಂತರ ಮಾರುಕಟ್ಟೆ ದರ ಹೆಚ್ಚಾಗಿದ್ದಕ್ಕೆ ಬಾಡಿಗೆ ಏರಿಸಿದ್ದಾಗಿ ಸತ್ಯ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಯುವತಿ ಮಾಡಿದ ವಿಡಿಯೋ ವೈರಲ್ ಆಗಿದೆ.

ಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ಗಗನಕ್ಕೇರುತ್ತಿವೆ. ಸಿಲಿಕಾನ್ ಸಿಟಿಯಲ್ಲಿ ಆಕಾಶ ಮುಟ್ಟಿರುವ ಬಾಡಿಗೆ ಮತ್ತು ಮನೆ ಮಾಲೀಕರು-ಬಾಡಿಗೆದಾರರ ನಡುವಿನ ಕಿರಿಕಿರಿಗಳ ಬಗ್ಗೆ ಆಗಾಗ ಆನ್‌ಲೈನ್‌ನಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ, ದಿಶಾಕಾ ಎಂಬ ಯುವತಿಯೊಬ್ಬರು ತಮ್ಮ ಮನೆ ಮಾಲೀಕರು ತಿಂಗಳಿಗೆ ₹4,000 ಬಾಡಿಗೆ ಏರಿಸಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಮಾಡಿದ ವಿಡಿಯೋ ಒಂದು, ಬೆಂಗಳೂರಿನ ಬಾಡಿಗೆ ಸಮಸ್ಯೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ದಿಶಾಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. ಅವರ ಮಾಲೀಕರು ಮೊದಲು, 'ನನ್ನ ತಮ್ಮ ಊರಿಗೆ ಬರುತ್ತಿದ್ದಾನೆ, ಹಾಗಾಗಿ ನೀವು ಮನೆ ಖಾಲಿ ಮಾಡಬೇಕು' ಎಂದು ಹೇಳಿದ್ದಾರೆ. ಆದರೆ, ಆಸುಪಾಸಿನಲ್ಲಿ ಬಾಡಿಗೆ ದರ ಹೆಚ್ಚಾಗಿದ್ದೇ ಇದಕ್ಕೆ ನಿಜವಾದ ಕಾರಣ ಎಂದು ಯುವತಿಗೆ ನಂತರ ತಿಳಿಯಿತು.

“ನನ್ನ ಓನರ್ ನನಗೆ ಸುಳ್ಳು ಹೇಳಿದರು. ಇದ್ದಕ್ಕಿದ್ದಂತೆ ತಿಂಗಳಿಗೆ 4 ಸಾವಿರ ರೂಪಾಯಿ ಬಾಡಿಗೆ ಜಾಸ್ತಿ ಮಾಡಿದರು. ಕಾರಣ ಕೇಳಿದ್ದಕ್ಕೆ, ತಮ್ಮ ಊರಿಗೆ ಬರುತ್ತಿದ್ದಾನೆ, ಅವನನ್ನು ಈ ಮನೆಯಲ್ಲಿ ಇರಿಸಬೇಕು ಅಂದರು,” ಎಂದು ದಿಶಾಕಾ ವಿಡಿಯೋದಲ್ಲಿ ಹೇಳಿದ್ದಾರೆ.

“ನಾನು ವಾಸವಿರುವ ಇಡೀ ಬಿಲ್ಡಿಂಗ್ ಅವರದ್ದೇ. ಆದರೂ ನನ್ನನ್ನೇ ಯಾಕೆ ಖಾಲಿ ಮಾಡಲು ಹೇಳುತ್ತಿದ್ದಾರೆ ಎಂಬ ಅನುಮಾನ ಬಂತು,” ಎಂದು ಅವರು ವಿವರಿಸಿದ್ದಾರೆ. ನಂತರ ಮಾಲೀಕರ ಬಳಿ ಚರ್ಚಿಸಿದಾಗ, ಆ ಏರಿಯಾದಲ್ಲಿ ಒಂದು ಬೆಡ್‌ರೂಮ್ ಮನೆಗಳಿಗೆ ಈಗ ತಿಂಗಳಿಗೆ ₹26,000 ದಿಂದ ₹28,000 ಬಾಡಿಗೆ ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ.

“ಇದು ನನ್ನೊಬ್ಬಳ ಕಥೆನಾ ಅಥವಾ ಬೆಂಗಳೂರಿನಲ್ಲಿ ಇದು ಸಾಮಾನ್ಯವಾ ಅಂತ ತಿಳಿಬೇಕಿತ್ತು. ಮನೆ ಮಾಲೀಕರು ದುಡ್ಡಿನ ವಿಚಾರದಲ್ಲಿ ಸಿಕ್ಕಾಪಟ್ಟೆ ಕಿರಿಕಿರಿ ಮಾಡ್ತಾರೆ ಅಂತ ಗೊತ್ತು. ಈಗ ನಾನು ತಿಂಗಳಿಗೆ 4 ಸಾವಿರ ರೂಪಾಯಿ ಹೆಚ್ಚಿಗೆ ಕೊಡ್ತಾ ಇದ್ದೀನಿ, ಇದು ನಿಜಕ್ಕೂ ಹುಚ್ಚುತನ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

“ಬೆಂಗಳೂರಿನಲ್ಲಿ ಬಾಡಿಗೆ ಪರಿಸ್ಥಿತಿ ಯಾಕೆ ಇಷ್ಟೊಂದು ಕೆಟ್ಟದಾಗಿದೆ? ನಿಮಗೂ ಇಂಥ ಅನುಭವ ಆಗಿದೆಯಾ?” ಎಂಬ ಶೀರ್ಷಿಕೆಯೊಂದಿಗೆ ದಿಶಾಕಾ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

 

 

ಸೋಶಿಯಲ್ ಮೀಡಿಯಾದಲ್ಲಿ ಜನ ಏನಂದ್ರು?

ಒಬ್ಬ ಬಳಕೆದಾರರು, "ಕೆಲವು ತಿಂಗಳ ಹಿಂದೆ ನನಗೂ ಹೀಗೆಯೇ ಆಗಿತ್ತು! ಈಗ ನಾನು 2 ಸಾವಿರ ಹೆಚ್ಚುವರಿ ಬಾಡಿಗೆ ಪಾವತಿಸುತ್ತಿದ್ದೇನೆ," ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಇದು ನಿಜ. ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಮಾಡುವುದು ಅಗ್ಗದ ಮಾತಲ್ಲ," ಎಂದು ಹೇಳಿದ್ದಾರೆ. ಇನ್ನೊಂದೆಡೆ, ಕೆಲವರು ತಮ್ಮ ಮಾಲೀಕರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. “ನನ್ನ ಓನರ್ ದೇವರು ಕಳುಹಿಸಿದ ವ್ಯಕ್ತಿ. ನಾನು ನೋಡಿದ ಮಾಲೀಕರಲ್ಲಿ ಇವರು ತುಂಬಾ ಕೂಲ್. ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಮನೆ ಸಿಕ್ಕರೆ ಸಾಲದು, ಒಳ್ಳೆಯ ಮಾಲೀಕರೂ ಸಿಗಬೇಕು,” ಎಂದು ಬರೆದಿದ್ದಾರೆ.

ಇನ್ನು ಕೆಲವರು, ಬಾಡಿಗೆದಾರರನ್ನು ಖಾಲಿ ಮಾಡಿಸಲು ಮಾಲೀಕರು ಬೇರೆ ಬೇರೆ ಕಾರಣಗಳನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ. “ಇದು ತುಂಬಾ ಸಾಮಾನ್ಯ. ನಮ್ಮ ಮಾಲೀಕರು ಮನೆ ಮಾರಾಟ ಮಾಡಬೇಕು ಎಂದು ಹೇಳಿ, ಇದ್ದಕ್ಕಿದ್ದಂತೆ ಮನೆ ನೋಡಲು ಜನರನ್ನು ಕರೆತರಲು ಶುರು ಮಾಡಿದರು,” ಎಂದು ಇನ್ನೊಬ್ಬ ಬಳಕೆದಾರರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

PREV
Read more Articles on
click me!

Recommended Stories

Baba Vanga: ಈ ಎರಡೂ ಡೇಂಜರ್ ವೈರಸ್‌ ಬಗ್ಗೆ ಬಾಬಾ ವಂಗಾ ಮೊದಲೇ ಭವಿಷ್ಯ ನುಡಿದಿದ್ರಾ?
ಭಾರೀ ಟ್ವಿಸ್ಟ್.. ವಿಜಯ್ ಸಿಎಂ ಆಗಿದ್ದಕ್ಕೆ ಉದಯನಿಧಿ ಖಡಕ್ ನಿರ್ಧಾರ; ಸೋಲಿನ ಕಾರಣಕ್ಕೆ ಮಾವ-ಅಳಿಯನ ಮಧ್ಯೆ ಜಟಾಪಟಿ?