Viral Video: ಮೂಡ್ ಆಫ್ ಆಗಿದೆಯಾ? ಈ ಅಪ್ಪ-ಮಗಳ ವಿಡಿಯೋ ಒಮ್ಮೆ ನೋಡಿ!

Published : Jun 02, 2026, 04:52 PM IST
Viral Video

ಸಾರಾಂಶ

ಬೆಂಗಳೂರಿನ ಅಪ್ಪ-ಮಗಳ ಬಾಂಧವ್ಯದ ಒಂದು ಮುದ್ದಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಜನರ ಮನಗೆದ್ದಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರ ಮುಖದಲ್ಲೂ ನಗು ಮೂಡಿದೆ.

ಬೆಂಗಳೂರಿನ ಅಪ್ಪ-ಮಗಳ ಬಾಂಧವ್ಯದ ಒಂದು ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಕೋಟ್ಯಂತರ ಜನರ ಮುಖದಲ್ಲಿ ನಗು ಮೂಡಿಸಿದೆ. ಅಪ್ಪ ತನ್ನ ಪುಟ್ಟ ಮಗಳ ಜೊತೆ ಡ್ಯಾನ್ಸ್ ಮಾಡಿರೋ ಈ ಇನ್‌ಸ್ಟಾಗ್ರಾಮ್ ವಿಡಿಯೋಗೆ ಈಗಾಗಲೇ 22 ಮಿಲಿಯನ್‌ಗೂ ಹೆಚ್ಚು ವ್ಯೂಸ್ ಬಂದಿದೆ.

ಅಕ್ಷಯ್ ಪಾಲಿವಾಲ್ ಅನ್ನೋರು ತಮ್ಮ little_munchkin28 ಅನ್ನೋ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅಕ್ಷಯ್, ತಮ್ಮ ಮಗಳನ್ನು ಬೇಬಿ ಕ್ಯಾರಿಯರ್‌ನಲ್ಲಿ ಕೂರಿಸಿಕೊಂಡು ಖುಷಿಯಿಂದ ಡ್ಯಾನ್ಸ್ ಮಾಡ್ತಾರೆ. 2001ರಲ್ಲಿ ಬಂದ 'ದಿಲ್ ಚಾಹ್ತಾ ಹೈ' ಸಿನಿಮಾದ ಫೇಮಸ್ ಹಾಡು 'ವೋ ಲಡ್ಕಿ ಹೈ ಕಹಾಂ'ಗೆ ಅವರು ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋ ಇಷ್ಟೊಂದು ಕ್ಯೂಟ್ ಆಗಿ ಕಾಣಲು ಪುಟ್ಟ ಮಗುವಿನ ರಿಯಾಕ್ಷನ್ ಕೂಡ ಕಾರಣ. ಅಪ್ಪ ಹಾಡಿಗೆ ತಕ್ಕಂತೆ ಕುಣಿಯುತ್ತಿದ್ದರೆ, ಆ ಪುಟ್ಟ ಪೋರಿ ಮುಖದಲ್ಲಿ ನಗು ತುಂಬಿಕೊಂಡು, ನಗುತ್ತಾ ಎಂಜಾಯ್ ಮಾಡುತ್ತದೆ. ಈ ಅಪ್ಪ-ಮಗಳ ಖುಷಿಯ ಕ್ಷಣ ಎಲ್ಲರ ಮನಸ್ಸನ್ನು ಗೆದ್ದಿದೆ.
 

 

ಅತ್ಯಂತ ಮುದ್ದಾದ ವಿಡಿಯೋ

ಸೋಷಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಸೆಕ್ಷನ್‌ನಲ್ಲಿ ಈ ಅಪ್ಪ-ಮಗಳ ಜೋಡಿಯನ್ನು ಹಾಡಿ ಹೊಗಳಿದ್ದಾರೆ. ಅವರ ಖುಷಿ ಮತ್ತು ಸುಂದರ ಬಾಂಧವ್ಯವನ್ನು ಮೆಚ್ಚಿಕೊಂಡಿದ್ದಾರೆ. 'ಮೂಡ್ ಸರಿ ಇಲ್ಲದಿದ್ದಾಗ ನೋಡಬೇಕಾದ ವಿಡಿಯೋ ಇದು' ಅಂತ ಕೆಲವರು ಹೇಳಿದ್ರೆ, 'ಇತ್ತೀಚೆಗೆ ನೋಡಿದ ಅತ್ಯಂತ ಮುದ್ದಾದ ವಿಡಿಯೋ' ಅಂತ ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ.

ಈ ವೈರಲ್ ವಿಡಿಯೋದಿಂದ ಬಾಲಿವುಡ್‌ನ ಎವರ್‌ಗ್ರೀನ್ ಹಾಡು 'ವೋ ಲಡ್ಕಿ ಹೈ ಕಹಾಂ' ಮತ್ತೆ ನೆನಪಾಗಿದೆ. ಶಾನ್ ಮತ್ತು ಕವಿತಾ ಕೃಷ್ಣಮೂರ್ತಿ ಹಾಡಿರುವ ಈ ಹಾಡು, ಬಿಡುಗಡೆಯಾಗಿ ಎರಡು ದಶಕಗಳೇ ಕಳೆದರೂ ಇಂದಿಗೂ ಜನರನ್ನು ಸೆಳೆಯುತ್ತಿದೆ.

PREV
Read more Articles on
click me!

Recommended Stories

ಬೀದಿ ನಾಯಿಗಳ ಹಿಂಡಿನಿಂದ ಬಚಾವಾಗಲು 'ಸತ್ತಂತೆ' ನಟಿಸಿದ ಚಾಲಾಕಿ ನಾಯಿ! ಆಸ್ಕರ್ ಲೆವೆಲ್ ನಟನೆಗೆ ನೆಟ್ಟಿಗರು ಫಿದಾ
ಮೊದಲ ಪತ್ನಿಗೆ ಡಿವೋರ್ಸ್ ಬೆನ್ನಲ್ಲೇ ಖ್ಯಾತ ಪತ್ರಕರ್ತೆ ಜೊತೆ ಮದುವೆ; CM ಓಮರ್ ಅಬ್ದುಲ್ಲಾ ಕೈಹಿಡಿದ ನೂತನ ವಧು ಏನು ಓದಿದ್ದಾರೆ?