Viral Post: ಡ್ರೈವಿಂಗ್ ವೇಳೆ ಸೀರಿಯಲ್ ನೋಡ್ತಿದ್ದ ಚಾಲಕ! ಪ್ರಶ್ನಿಸಿದ್ದಕ್ಕೆ 'ಇಷ್ಟ ಇಲ್ಲದಿದ್ರೆ ಇಳಿದು ಹೋಗಿ' ಅನ್ನಬೇಕಾ ಭೂಪ!

Published : Jun 02, 2026, 01:18 PM IST
Ola Driver Watches Taarak Mehta While Driving Tells Passenger to Get Out

ಸಾರಾಂಶ

ಡ್ರೈವಿಂಗ್ ವೇಳೆ ಮೊಬೈಲ್‌ನಲ್ಲಿ ಸೀರಿಯಲ್ ನೋಡ್ತಿದ್ದ ಚಾಲಕ. ಇದನ್ನ ಪ್ರಶ್ನಿಸಿದ್ದ ಪ್ರಯಾಣಿಕನ ಮೇಲೆ ರೇಗಾಡಿದ ಡ್ರೈವರ್, 'ಇಷ್ಟ ಇಲ್ಲದಿದ್ರೆ ಇಳಿದು ಹೋಗಿ' ಅನ್ನೋ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಚಾಲಕನ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. 

ಇತ್ತೀಚೆಗೆ ಬೆಂಗಳೂರಿನಲ್ಲಿ ಆಟೋ ಚಾಲಕನೋರ್ವ ಚಾಲನೆ ವೇಳೆ ವಿಡಿಯೋ ನೋಡುತ್ತಾ ಮುಂದೆ ಹೋಗುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆಯಿತು. ಚಾಲನೆ ವೇಳೆ ರೀಲ್ಸ್, ವಿಡಿಯೋ, ಸಿನಿಮಾ ನೋಡುವುದು ಗೀಳಾಗಿ ಪರಿಣಮಿಸಿದೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂಥದ್ದೇ ಪ್ರಕರಣ ಇದೀಗ ನೋಯ್ಡಾದಲ್ಲಿ ನಡೆದಿದೆ.

ಪ್ರಯಾಣಿಕರೊಬ್ಬರು ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸಲೆಂದು ಟ್ಯಾಕ್ಸಿ ಬುಕ್ ಮಾಡಿದ್ದರು. ಸಾರ್ವಜನಿಕ ಸಾರಿಗೆಯಲ್ಲಿ ಬೇಗ ತಲುಪಲು ಅಸಾಧ್ಯವೆಂದು ತುಸು ಹೆಚ್ಚು ಹಣ ಕೊಟ್ಟು ಟ್ಯಾಕ್ಸಿಯಲ್ಲಿ ಹೊರಟಿದ್ದರು. ಪ್ರಯಾಣದ ವೇಳೆ ತಮಗಾದ ಅಪಾಯಕಾರಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೈವೇಯಲ್ಲಿ ಫುಲ್ ಸ್ಪೀಡಲ್ಲಿ ಟ್ಯಾಕ್ಸಿ ಓಡಿಸುವಾಗ ಡ್ರೈವರ್ ಎಷ್ಟು ಎಚ್ಚರಿಕೆ ಇದ್ರೂ ಸಾಲದು. ಆದರೆ ಈ ಕ್ಯಾಬ್ ಡ್ರೈವರ್ ಮೊಬೈಲ್ ಫೋನ್‌ನಲ್ಲಿ ಟಿವಿ ಸೀರಿಯಲ್ ನೋಡ್ತಾ ಇದ್ದನಂತೆ! ಈ ಘಟನೆಯನ್ನ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳ ಸುರಕ್ಷತೆ ಮತ್ತು ಚಾಲಕರ ಬೇಜವಾಬ್ದಾರಿ ಬಗ್ಗೆ ಜನ ಪ್ರಶ್ನಿಸಿದ್ದಾರೆ.

ಡ್ಯಾಶ್‌ಬೋರ್ಡ್ ಪಕ್ಕದಲ್ಲಿ ಫೋನ್ ಇಟ್ಕೊಂಡಿದ್ದ ಚಾಲಕ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಅನ್ನೋ ಫೇಮಸ್ ಸೀರಿಯಲ್ ನೋಡ್ತಾ ವೇಗವಾಗಿ ಟ್ಯಾಕ್ಸಿ ಓಡಿಸುತ್ತಿದ್ದ. ಹೊರಗಡೆ ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್ ಸುಡು ಬಿಸಿಲು. ಎದುರುಗಡೆಯಿಂದ ಬುಲೆಟ್‌ನಂತೆ ನುಗ್ಗುತ್ತಿರುವ ವಾಹನಗಳು. ಚಾಲಕನ ನಿರ್ಲಕ್ಷ್ಯದಿಂದ ಏನಾದರೂ ಹೆಚ್ಚುಕಮ್ಮಿಆದರೆ ಅಪಾಘಾತದ ಕಲ್ಪನೆಯೇ ಪ್ರಯಾಣಿಕನಿಗೆ ಭಯಂಕರ ಭಯ ಹುಟ್ಟಿಸುತ್ತಿತ್ತು.. ಈ ವೇಳೆ ಪ್ರಯಾಣಿಕ, ಡ್ರೈವರ್ ಹತ್ತಿರ ಹೋಗಿ, ದಯಮಾಡಿ ಸ್ಕ್ರೀನ್ ಆಫ್ ಮಾಡಿ ಡ್ರೈವಿಂಗ್ ಮೇಲೆ ಗಮನ ಕೊಡಿ ಅಂತ ವಿನಯದಿಂದ ಕೇಳಿದ್ದಾರೆ. ಆದ್ರೆ ಅದಕ್ಕೆ ಚಾಲಕ ಒಪ್ಪಲಿಲ್ಲ. 'ನಿಮಗೆ ಏನಾದ್ರೂ ಸಮಸ್ಯೆ ಇದ್ರೆ, ಕ್ಯಾಬ್‌ ಇಳಿದು ಹೋಗಿ' ಅಂತಾ ಉಡಾಫೆಯಾಗಿ ಉತ್ತರ ಕೊಟ್ಟಿದ್ದಾನೆ. ಎಂಥ ಬೇಜಾವಾಬ್ದಾರಿ ಹೇಳಿಕೆ ಇದು? ಸುಡು ಬಿಸಿಲಲ್ಲಿ, ಕುಟುಂಬದ ಜೊತೆ ಹೈವೇ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ, ಬೇರೆ ದಾರಿ ಇಲ್ಲದೆ ಸುಮ್ಮನೆ ಪ್ರಯಾಣ ಮುಂದುವರಿಸಬೇಕಾಯ್ತು ಅಂತ ಪ್ರಯಾಣಿಕ ಬೇಸರದಿಂದ ಹೇಳಿಕೊಂಡಿದ್ದಾರೆ.

ಭಯ್ಯಾ, ದಯವಿಟ್ಟು ಸ್ಕ್ರೀನ್ ಆಫ್ ಮಾಡು ಡ್ರೈವಿಂಗ್ ಮೇಲೆ ಗಮನ ಕೊಡಿ'

ಭಯ್ಯಾ, ದಯವಿಟ್ಟು ಸ್ಕ್ರೀನ್ ಆಫ್ ಮಾಡಿ ಡ್ರೈವಿಂಗ್ ಮೇಲೆ ಗಮನ ಕೊಡಿ' ಅಂತ ನಾನು ವಿನಯದಿಂದ ಹೇಳಿದೆ. ಅದಕ್ಕೆ, 'ಸಮಸ್ಯೆ ಇದ್ರೆ ಗಾಡಿಯಿಂದ ಇಳಿದು ಹೋಗಿ' ಅನ್ನೋದು ಚಾಲಕನ ಉತ್ತರವಾಗಿತ್ತು. 45 ಡಿಗ್ರಿ ಬಿಸಿಲಲ್ಲಿ ಕುಟುಂಬದ ಜೊತೆ ಹೈವೇ ಮಧ್ಯೆ ನಿಂತು ನಾವೇನು ಮಾಡೋದು? ಹಾಗಾಗಿ ಸುಮ್ಮನಾದೆವು. ಊಬರ್-ಓಲಾ ದಂತಹ ಸೇವೆಗಳಲ್ಲಿ ನಮ್ಮ ಜೀವಕ್ಕೆ ಬೆಲೆ ಇಲ್ವಾ?' ಅಂತ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

 

ಈ ಪೋಸ್ಟ್‌ಗೆ ಸಾವಿರಾರು ಜನ ಟ್ಯಾಕ್ಸಿ ಚಾಲಕನ ವರ್ತನೆಗೆ ಆಕ್ರೋಶಭರಿತರಾಗಿ ಕಾಮೆಂಟ್ ಮಾಡಿದ್ದಾರೆ. ಚಾಲಕನ ಈ ಅಜಾಗರೂಕತೆ ಕೇವಲ ಆ ಪ್ರಯಾಣಿಕರಿಗೆ ಮಾತ್ರವಲ್ಲ, ರಸ್ತೆಯಲ್ಲಿ ಹೋಗೋ ಬೇರೆ ವಾಹನ ಸವಾರರು ಮತ್ತು ಪಾದಚಾರಿಗಳ ಜೀವಕ್ಕೂ ಅಪಾಯ ತರಬಹುದು. ಇಂತಹ ಚಾಲಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತಾ ನೆಟ್ಟಿಗರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

1.92 ಲಕ್ಷದಿಂದ 57.8 ಲಕ್ಷ ರೂ. ಸಂಬಳಕ್ಕೆ ಜಂಪ್: ಸಿಎ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದ ಬೆಂಗಳೂರು ಹುಡುಗನ ಯಶೋಗಾಥೆ!
Viral: ಹಗಲು ಆಫೀಸ್, ರಾತ್ರಿ ಬೈಕ್ ಟ್ಯಾಕ್ಸಿ! ಜೊತೆಗೆ PhD, ಅಡುಗೆ! ‘ಟೈಮೇ ಸಿಗ್ತಿಲ್ಲರೀ..' ಅನ್ನೋರು ಈ ಯುವಕನ ವಿಡಿಯೋ ನೋಡಲೇಬೇಕು!