
ವ್ಯಕ್ತಿಯೊಬ್ಬ ಚಪ್ಪಲಿಗಳ ರಾಶಿಯಲ್ಲಿ ಕಳೆದುಹೋದ ತನ್ನ ಪಾದರಕ್ಷೆ ಹುಡುಕಲು ChatGPT ಬಳಸಿದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಚಪ್ಪಲಿ ಕಳೆದರೂ ಚಾಟ್ ಜಿಪಿಟಿ ಬಳಸುವ ಈ ವಿಚಿತ್ರ ಘಟನೆ ಅಚ್ಚರಿ ಮೂಡಿಸಿದ್ದು ನೆಟಿಜನ್ ಚರ್ಚೆಗೆ ಗ್ರಾಸವಾಗಿದೆ.
ಸೊಷಿಯಲ್ ಮೀಡಿಯಾ ಬಳಕೆದಾರರು ಈ ಘಟನೆ ಬಗ್ಗೆ ಬಹುತೇಕರು ತಮಾಷೆಯ ಕಾಮೆಂಟ್ ಮಾಡಿದ್ದಾರೆ. Instagram ನಲ್ಲಿ ಶುಭಾಂಗ್ ಬೋರಕರ್ ಎಂಬಾತ ಈ ವಿಚಿತ್ರ ವಿಡಿಯೋ ಶೇರ್ ಮಾಡಿದ್ದಾನೆ. ವಿಡಿಯೋದಲ್ಲಿ ಚಪ್ಪಲಿಗಳ ರಾಶಿಯೇ ಕಂಡುಬಂದಿದೆ. ಈ ರಾಶಿಯ ನಡುವೆ ಕಳೆದುಕೊಂಡ ವ್ಯಕ್ತಿ ತನ್ನ ಚಪ್ಪಲಿ ಹುಡುಕುತ್ತಿದ್ದಾನೆ. ಒಂದು ವರದಿಯ ಪ್ರಕಾರ ಸುಮಾರು 1,000ಕ್ಕೂ ಹೆಚ್ಚು ಜೋಡಿ ಚಪ್ಪಲಿಗಳು ರಾಶಿ ಬಿದ್ದಿವೆ. ಆ ರಾಶಿಯಲ್ಲಿ ಈ ವ್ಯಕ್ತಿಯ ಒಂದು ಚಪ್ಪಲಿ ಕಳೆದಿದೆ. ಎಷ್ಟೇ ಹುಡುಕಿದ್ರೂ ಸಿಗದಿದ್ದಾಗ ಮಾಡಿದ್ದೇನು ಗೊತ್ತೆ?
ಕೈಯಿಂದ, ಕಾಲುಗಳಿಂದ ರಾಶಿ ಚಪ್ಪಲಿಗಳ ಮಧ್ಯೆ ಹುಡುಕಿ ಸುಸ್ತು ಆಗಿದ್ದಾನೆ. ಕೊನೆಗೆ ಟೆಕ್ನಾಲಜಿಯ ಮೊರೆ ಹೋಗಿದ್ದಾನೆ. ಚಪ್ಪಲಿಗಳ ರಾಶಿಯ ಫೋಟೋ ತೆಗೆದು ಕಳೆದುಕೊಂಡ ಚಪ್ಪಲಿಯನ್ನ ಹುಡುಕಿಕೊಡುವಂತೆ ಚಾಟ್ ಜಿಪಿಟಿ (ChatGPT) ಗೆ ಕೇಳಿಕೊಂಡಿದ್ದಾನೆ. ಆಗ ಕೆಲವೇ ಕ್ಷಣಗಳಲ್ಲಿ ಕಳೆದುಹೋಗಿದ್ದ ಚಪ್ಪಲಿಯನ್ನ ಪತ್ತೆಹಚ್ಚಿದಂತೆ ಕಂಡಿದೆ. ಇದನ್ನು ನೋಡಿದ ಅಕ್ಕಪಕ್ಕದವರು ಅಚ್ಚರಿಯಿಂದ ನಗುತ್ತಿರುವುದು ವಿಡಿಯೋ ಕಾಣಿಸಿದೆ.
ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್ ತಮಾಷೆಯ ಕಾಮೆಂಟ್ ಮಾಡಿದ್ದಾರೆ. 'ChatGPT ಯನ್ನ ಹೀಗೂ ಬಳಸಬಹುದಾ! ಈ ಐಡಿಯಾನೇ ಗೊತ್ತಿರಲಿಲ್ಲ ಎಂದು ತಮಾಷೆ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಹುಡುಕುವ ಬದಲು ಆ ರಾಶಿಯಲ್ಲಿ ಒಂದು ಒಳ್ಳೆ ಜೋಡಿ ಎತ್ತಿಕೊಂಡು ಹೋಗೊ' ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಇದನ್ನು ನೋಡಿ ಎಐ ಕಂಡು ಹಿಡಿದವನು ಒಂದು ಮೂಲೆಯಲ್ಲಿ ಕುಳಿತು ಅಳುತ್ತಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಮಗದೊಬ್ಬ, 'ವಾವ್, ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳು, 'ಇದಕ್ಕೆ ನೀವು ಜೆಮಿನಿ ಲೈವ್ ಬಳಸಬಹುದಿತ್ತು' ಎಂದು ಮತ್ತೊಬ್ಬ ಹೊಸ ಐಡಿಯಾ ಕೊಟ್ಟಿದ್ದಾನೆ. ಒಟ್ಟಾರೆ ಚಪ್ಪಲಿ ಕಳೆದುಕೊಂಡ ವ್ಯಕ್ತಿಯ ಜಾಣ್ಮೆಯನ್ನು ಹಲವು ಜನ ಹೊಗಳಿದ್ದಾರೆ. ಆದರೆ ವೈರಲ್ ಆಗಿರುವ ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಖಚಿತವಾಗಿಲ್ಲ.