ಶ್ರೀನಗರದ ಲಾಲ್‌ ಚೌಕ್‌ನಲ್ಲಿ ಮೈತುಂಬಾ ತ್ರಿವರ್ಣ ಬಳಿದುಕೊಂಡು ಸಂಭ್ರಮಿಸಿದ ಪ್ರವಾಸಿಗ! ವೈರಲ್

Published : Aug 15, 2026, 09:18 AM IST
JK ahmedabad tourist paints body in tricolour celebs independence day in srinagar lal chowk

ಸಾರಾಂಶ

ಸ್ವಾತಂತ್ರ್ಯ ದಿನದಂದು ಶ್ರೀನಗರದ ಐತಿಹಾಸಿಕ ಲಾಲ್ ಚೌಕ್‌ನಲ್ಲಿ ಅಹಮದಾಬಾದ್‌ನ ಪ್ರವಾಸಿ ಅರುಣ್ ಹರ್ಯಾನಿ ಮೈತುಂಬಾ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡು ಗಮನ ಸೆಳೆದಿದ್ದಾರೆ. 2022ರಿಂದ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗ ಈ ಬಾರಿ ಬದಲಾವಣೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Independence day 2026: ಸ್ವಾತಂತ್ರ್ಯ ದಿನದಂದು ಶ್ರೀನಗರದ ಐತಿಹಾಸಿಕ ಲಾಲ್ ಚೌಕ್‌ನಲ್ಲಿ ಅಹಮದಾಬಾದ್‌ನ ಪ್ರವಾಸಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಅರುಣ್ ಹರ್ಯಾನಿ(Arun Haryani) ಎಂಬ ಈ ಪ್ರವಾಸಿಗ, ಮೈತುಂಬಾ ಭಾರತದ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡು, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ್ದಾರೆ.

ಪ್ರವಾಸಿಗನ ದೇಶಭಕ್ತಿ

ಅರುಣ್ ಹರ್ಯಾನಿ ಅವರು 2022ರಿಂದ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂತಹ ಪ್ರಮುಖ ರಾಷ್ಟ್ರೀಯ ದಿನಗಳಂದು ಕಣಿವೆಗೆ ಬರುವುದನ್ನು ಅವರು ರೂಢಿಸಿಕೊಂಡಿದ್ದಾರೆ. ಈ ಬಾರಿಯೂ ಸ್ವಾತಂತ್ರ್ಯೋತ್ಸವದ ಸಂಭ್ರಮ ಆಚರಿಸಲು ಲಾಲ್‌ಚೌಕ್‌ಗೆ ಬಂದಿದ್ದಾರೆ. ಈ ವೇಳೆ ಮೈಮೇಲಿನ ತ್ರಿವರ್ಣ ಬಣ್ಣ ಬಳಿದುಕೊಂಡು ಲಾಲ್ ಚೌಕ್‌ನಲ್ಲಿ ಘೋಷಣೆ ಕೂಗುತ್ತಿದ್ದರೆ, ಇದನ್ನು ಕಂಡು ಅಲ್ಲಿನ ಸ್ಥಳೀಯರು, ಮಕ್ಕಳು ನೋಡಿ ಸಂಭ್ರಮಿಸುವಂತೆ ಮಾಡಿದ್ದಾರೆ.

'ಗಲಿ ಗಲಿ ಮೇ ನಾರಾ ಹೈ, ಹಿಂದೂಸ್ತಾನ್ ಹಮಾರಾ ಹೈ' ಎಂದು ಘೋಷಣೆ ಕೂಗಿದ ಹರ್ಯಾನಿ, ಕಾಶ್ಮೀರದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು ಯಾವಾಗಲೂ ನನಗೆ ಹೆಮ್ಮೆ ಎನಿಸುತ್ತೆ' ಎಂದಿದ್ದಾರೆ. 'ನಾನು 2022ರಿಂದ ಇಲ್ಲಿಗೆ ಬರುತ್ತಿದ್ದೇನೆ. ಇದು ನನಗೆ ಹೆಮ್ಮೆಯ ಸಂಗತಿ. ಒಂದು ಕಾಲದಲ್ಲಿ ಲಾಲ್‌ಚೌಕ್‌ನಲ್ಲಿ ಭಾರತದ ಧ್ವಜ ಹಾರಿಸಲು ಹೆದರುತ್ತಿದ್ದರು. ಆದರೆ ಇಂದು ಚಿಕ್ಕ ಮಕ್ಕಳು ನನ್ನ ಜೊತೆ ನಿಲ್ಲುತ್ತಾರೆ. ಇದೊಂದು ಸುಂದರ ಅನುಭವ. ಇಂತಹ ವಾತಾವರಣವನ್ನು ನಾನು ಹಿಂದೆಂದೂ ನೋಡಿರಲಿಲ್ಲ' ಎಂದು ಅವರು ಹೇಳಿದರು.

2022ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿದಾಗಿನಿಂದ ಶ್ರೀನಗರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಾನು 2022ರಿಂದ ಇಲ್ಲಿಗೆ ಬರುತ್ತಿದ್ದೇನೆ, ಈ ಸ್ಥಳವು ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದೆ. ಎಲ್ಲರಿಗೂ ಶಾಂತಿ ಮತ್ತು ಸಂತೋಷ ಸಿಗಲಿ ಎಂದು ಹಾರೈಸುತ್ತೇನೆ. ಕಾಶ್ಮೀರ ಬೆಳೆಯುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಹರ್ಯಾನಿ ಪಾಲಿಗೆ ಈ ಭೇಟಿ ಕೇವಲ ಪ್ರವಾಸವಲ್ಲ. ಕಾಶ್ಮೀರದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು ಅವರಿಗೆ ದೇಶಭಕ್ತಿ ವ್ಯಕ್ತಪಡಿಸಲು ಮತ್ತು ಕಣಿವೆಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಸಾಕ್ಷಿಯಾಗಲು ಒಂದು ಅವಕಾಶವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಐತಿಹಾಸಿಕ ಲಾಲ್ ಚೌಕ್‌ನಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ

ಶ್ರೀನಗರದ ಪ್ರಮುಖ ಸ್ಥಳಗಳಲ್ಲಿ ಒಂದಾದ ಲಾಲ್ ಚೌಕ್, ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಹಾಗೂ ರಾಷ್ಟ್ರೀಯ ಘಟನೆಗಳ ಕೇಂದ್ರಬಿಂದುವಾಗಿದೆ. ಸ್ವಾತಂತ್ರ್ಯ ದಿನದಂದು, ಇಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರು ದೇಶಭಕ್ತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ಹರ್ಯಾನಿ ಅವರ ಈ ವಿಶೇಷ ಗೆಟಪ್ ಆಚರಣೆಗೆ ಹೊಸ ಮೆರುಗು ನೀಡಿತ್ತು. ಅವರು ರಾಷ್ಟ್ರಧ್ವಜ ಮತ್ತು ಸಣ್ಣ ರಾಷ್ಟ್ರೀಯ ಚಿಹ್ನೆಗಳನ್ನು ಹಿಡಿದು ಜನರೊಂದಿಗೆ ಬೆರೆತರು. ಕಾಶ್ಮೀರದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲಿ ಎಂದು ಅವರು ಹಾರೈಸಿದರು. ಈ ಪ್ರದೇಶವು ಪ್ರಗತಿ ಕಾಣುತ್ತಿರುವುದು ತಮಗೆ ಸಂತಸ ತಂದಿದೆ. ಅಲ್ಲದೆ ಇನ್ನಷ್ಟು ಬದಲಾವಣೆಗಳು ಮುಂದುವರಿಯಲಿ ಎಂದು ಆಶಿಸಿದರು.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಹಾಗೂ ಇತರ ಭಾಗಗಳಲ್ಲಿ ದೇಶದ ಉಳಿದ ಭಾಗಗಳಂತೆ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲೇ ಹರ್ಯಾನಿ ಅವರ ಭೇಟಿ ವಿಶೇಷವಾಗಿತ್ತು.

ಬೆಳೆಯುತ್ತಿರುವ ವೈಯಕ್ತಿಕ ನಂಟು

ಹರ್ಯಾನಿ ಅವರಿಗೆ ಈ ಆಚರಣೆ ವೈಯಕ್ತಿಕವಾಗಿಯೂ ಮಹತ್ವದ್ದಾಗಿದೆ. 2022ರಿಂದ ಪದೇ ಪದೇ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಅವರು ಈ ಸ್ಥಳದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಾರೆ ಮತ್ತು ಅದರ ಬೆಳವಣಿಗೆಯನ್ನು ನೋಡಲು ಎದುರು ನೋಡುತ್ತಿದ್ದಾರೆ. ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ನಿಂತಿದ್ದ ಹರ್ಯಾನಿ, ದೇಶಭಕ್ತಿ, ಶಾಂತಿ ಮತ್ತು ಸಮೃದ್ಧ ಕಾಶ್ಮೀರದ ಬಗ್ಗೆ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. (ANI)

(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)

PREV
Read more Articles on
click me!

Recommended Stories

₹30 ಸಾವಿರ ಸಂಬಳಕ್ಕೆ ಸ್ವಂತ ಮನೆ ಸಾಧ್ಯವೇ? 24ರ ಯುವಕನ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು?
Viral News: ಭಾರತದಲ್ಲಿ ದುಡಿದು ವಿದೇಶಕ್ಕೆ ಹಾರಿದ ವ್ಯಕ್ತಿ; ಮುಂದಿನ 3 ವರ್ಷಗಳಲ್ಲಿ ನಡೆದ ಪವಾಡ ಕೇಳಿದ್ರೆ ಶಾಕ್ ಆಗ್ತೀರಾ!