ವರ್ಷ 41 ಆದ್ರೂ ಮನೆಯಲ್ಲಿ ಮದುವೆ ಮಾಡ್ತಿಲ್ಲ, ವರನನ್ನು ಹುಡುಕಿಕೊಡಿ –ಪೊಲೀಸರಿಗೆ ಮಹಿಳೆ ಮನವಿ

Published : May 02, 2026, 11:28 AM IST
Marriage

ಸಾರಾಂಶ

Viral Story : ವರ್ಷ 25 ಆಗ್ತಿದ್ದಂತೆ ಮನೆ ಮಗಳ ಮದುವೆಗೆ ತಯಾರಿ ನಡೆಯುತ್ತೆ. ಆದ್ರೆ ಇಲ್ಲೊಬ್ಬಳಿಗೆ 41 ಆದ್ರೂ ಮನೆಯವರು ಮದುವೆ ಮಾಡಲು ಸಿದ್ಧವಿಲ್ಲ. ಈಗ ಆಕೆ ಏನು ಮಾಡಿದ್ದಾಳೆ ಗೊತ್ತಾ? 

ನನ್ನ ಮದುವೆ ಮಾಡಿಲ್ಲ ಎನ್ನುವ ಕಾರಣಕ್ಕೆ 41 ವರ್ಷದ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ವಯಸ್ಸಾದ್ರೂ ಮದುವೆ ಮಾಡಿಲ್ಲ, ಬಂದ ಎಲ್ಲ ಸಂಬಂಧವನ್ನು ಅಣ್ಣ- ಅತ್ತಿಗೆ ನಿರಾಕರಿಸ್ತಿದ್ದಾರೆ ಅಂತ ಮಹಿಳೆ ದೂರು ನೀಡಿದ್ದಾಳೆ.

ಮದುವೆಗಾಗಿ ಪೊಲೀಸ್ ಠಾಣೆ ಏರಿದ ಮಹಿಳೆ

41 ವರ್ಷದ ಪ್ರಯಾಗ್ ರಾಜ್ ಮಹಿಳೆಯೊಬ್ಬಳು ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ನನಗೆ ಇಷ್ಟು ವಯಸ್ಸಾದ್ರೂ ಮನೆಯವರು ಮದುವೆ ಮಾಡಲು ಮನಸ್ಸು ಮಾಡ್ತಿಲ್ಲ ಅನ್ನೋದೇ ಮಹಿಳೆ ಆರೋಪ. ಮಹಿಳೆ ತನ್ನ ಪೋಷಕರು ಹಾಗೂ ಒಡಹುಟ್ಟಿದವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾಳೆ. ತನ್ನ ಮದುವೆ ಏರ್ಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಲವರ್​ ಜೊತೆ ಓಡಿ ಹೋದೋಳು ವೋಟ್​ ಹಾಕಲು ಬಂದು ಸಿಕ್ಕಿಬಿದ್ಲು: 5 ಗಂಟೆ ಕಾದಿದ್ದ ಗಂಡ ಏನ್ಮಾಡಿದ ನೋಡಿ

ಸಂಪೂರ್ಣ ಕಥೆ ಏನು?

ಮಾಧುರಿ ಪಟೇಲ್ ಗೆ 41 ವರ್ಷ. ಸರೈ ಇನಾಯತ್ ಪೊಲೀಸ್ ಠಾಣೆ ಪ್ರದೇಶದ ಮಣಾಪುರದ ನಿವಾಸಿ. ಮಾಧುರಿ ದೂರಿನ ಪ್ರಕಾರಮ ನಾನು 20 ವರ್ಷಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ಕೌಟುಂಬಿಕ ಕಾರಣಗಳಿಂದಾಗಿ ನನ್ನ ಹೆತ್ತವರು ನನ್ನನ್ನು ಕುಟುಂಬದಿಂದ ದೂರ ಮಾಡಿದ್ದಾರೆ. ನನ್ನ ತಂದೆ ರಾಮರಾಜ್ ಪಟೇಲ್, ತಾಯಿ ಬಿಮ್ಲಾ ದೇವಿ, ಸಹೋದರ ರಾಜೇಂದ್ರ ಪಟೇಲ್, ಅತ್ತಿಗೆ ಪೂನಂ ಪಟೇಲ್ ಮತ್ತು ಸಹೋದರಿ ವಿದ್ಯಾ ಪಟೇಲ್ ನನ್ನನ್ನು ಮೌಖಿಕವಾಗಿ ನಿಂದಿಸುತ್ತಿದ್ದಾರೆ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕುಟುಂಬ ಸದಸ್ಯರು ಕೂಡ ನನ್ನನ್ನು ಹೊಡೆದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾಳೆ.

ನನಗೆ 41 ವರ್ಷ ವಯಸ್ಸಾಯ್ತು. ಆದ್ರೆ ಪೋಷಕರು ಮತ್ತು ಅಣ್ಣ ಮದುವೆ ಮಾಡ್ತಿಲ್ಲ. ನನ್ನ ಮೇಲೇ ಆರೋಪ ಮಾಡ್ತಿದ್ದಾರೆ. ನಾನು ಎಂದಿಗೂ ಮದುವೆ ಆಗೋದನ್ನು ನಿರಾಕರಿಸಿಲ್ಲ ಎಂದು ಮಹಿಳೆ ಪೊಲೀಸರಿಗೆ ಹೇಳಿದ್ದಾಳೆ. ಗೌರವಾನ್ವಿತವಾಗಿ ಜೀವನ ನಡೆಸಲು ಮದುವೆ ಅಗತ್ಯ ಅಂತ ಮಹಿಳೆ ಹೇಳಿದ್ದಾಳೆ.

ಕಳೆದ 20 ವರ್ಷಗಳಿಂದ ಆಕೆ ಒಂಟಿಯಾಗಿ ವಾಸಿಸುತ್ತಿದ್ದಾಳೆ. ಕುಟುಂಬದಿಂದ ಯಾವುದೇ ಆರ್ಥಿಕ ಬೆಂಬಲ ಆಕೆಗೆ ಸಿಕ್ಕಿಲ್ಲವಂತೆ. ಆಕೆಗೆ ಎಂದಿಗೂ ಆಹಾರ ಅಥವಾ ಪಾನೀಯವನ್ನು ಮನೆಯವರು ನೀಡಿಲ್ಲ. ಶಾಲೆಯಲ್ಲಿ ಕಲಿಸೋದು, ಬಟ್ಟೆ ಅಂಗಡಿಯಲ್ಲಿ ಮತ್ತು ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡಿ ಆಕೆ ಜೀವನ ನಡೆಸ್ತಿದ್ದಾಳಂತೆ.

ಆತನಿಂದ 14 ತಿಂಗಳ ನರಕ ಯಾತನೆ: ಸುದೀಪ್​, ಶಿವಣ್ಣ ನಾಯಕಿಯ ಬದುಕಿನ ಕರಾಳ

ಏಪ್ರಿಲ್ 27 ರಂದು ಆಕೆ ಸ್ನಾನ ಮಾಡುವ ಸಮಯದಲ್ಲಿ ಅಪ್ಪ, ಅಪ್ಪ, ಅಣ್ಣ, ಅತ್ತಿಗೆ ಹಾಗೂ ಸಹೋದರಿ ದಾಳಿ ಮಾಡಿದ್ದಾರಂತೆ. ಆಕೆಯನ್ನು ಕೊಲ್ಲುವ ಪ್ರಯತ್ನ ನಡೆಸಿದ್ದಾರಂತೆ. ಆಕೆಗೆ ಒಬ್ಬ ಅಣ್ಣ, ಇಬ್ಬರು ತಂಗಿಯರು. ತಂಗಿಯರ ವಯಸ್ಸು 37, 34 ಆಗಿದೆ. ಆದ್ರೆ ಅವರಿಗೂ ಇನ್ನೂ ಮದುವೆ ಆಗಿಲ್ಲ. ಮಾಧುರಿ ಡಿ.ಎಲ್. ಎಡ್ ಮುಗಿಸಿದ್ದು, ಸಿಟಿಇಟಿ ಮತ್ತು ಟಿಇಟಿ ಪರೀಕ್ಷೆ ಬರೆಯುತ್ತಿದ್ದಾರೆ. ತಂದೆ ರೈತ. ಹಾಗೇ ಟ್ರ್ಯಾಕ್ಟರ್ ಓಡಿಸಿ ಜೀವನ ನಡೆಸುತ್ತಿದ್ದಾರೆ. ಮದುವೆ ವಿಷ್ಯ ಬಂದಾಗ, ಅಣ್ಣ – ಅತ್ತಿಗೆ ಮದುವೆ ನಿರಾಕರಿಸೋದಲ್ಲದೆ, ಮದುವೆಗೆ ಹೆಚ್ಚು ಖರ್ಚಾಗುತ್ತದೆ ಅಂತ ವಾದ ಮಾಡ್ತಾರೆ. ಜೊತೆಗೆ ಆಸ್ತಿ ಬರೆಸಿಕೊಳ್ಳುವ ಪ್ರಯತ್ನ ನಡೆಸ್ತಾರೆ ಅಂತ ಮಾಧುರಿ ದೂರಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ಮಾಧುರಿ ಪಾಲಕರು, ಒಡಹುಟ್ಟಿದವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸೂಕ್ತ ಮಾಹಿತಿ ನಂತ್ರ ಕ್ರಮಕೈಗೊಳ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಆಡಿ ಕಾರಿನಲ್ಲಿ ಬಂದು ಚಪ್ಪಲಿ ಹೊಲಿಯುವ ವ್ಯಕ್ತಿ.. ಈತನ ಸಂಪಾದನೆ ಎಷ್ಟೆಂದು ಗೊತ್ತಾದ್ರೆ ಶಾಕ್ ಆಗ್ತೀರಾ!
Rachita Ram- Sathish Ninasam: ಸತೀಶ್-ರಚಿತಾ ಟಿಪಿಕಲ್ ನಾಟಿ ಸ್ಟೈಲ್ ಅಯೋಗ್ಯ-2; 'ಅಣ್ಣಾ ಬಂದ್ರೆ' ಹಾಡು ಅದೆಷ್ಟು ಸ್ಪೆಷಲ್ ಗೊತ್ತಾ..?